‘ರಾಮಾಯಣ’ ಸಿನಿಮಾಗೆ ಅಮೆರಿಕದಲ್ಲಿ ‘ಪಿಜಿ 13’ ಪ್ರಮಾಣಪತ್ರ: ಚಿತ್ರದ ಅವಧಿ 3 ಗಂಟೆ 15 ನಿಮಿಷ

ಯಶ್, ರಣಬೀರ್ ಕಪೂರ್, ಸಾಯಿ ಪಲ್ಲವಿ ಮುಂತಾದವರು ನಟಿಸಿರುವ ‘ರಾಮಾಯಣ’ ಸಿನಿಮಾದ ಪ್ರಚಾರ ಕಾರ್ಯಕ್ಕೆ ಚುರುಕು ಮುಟ್ಟಿಸಲಾಗಿದೆ. ಈ ಸಿನಿಮಾವನ್ನು ವಿದೇಶದಲ್ಲಿಯೂ ಅದ್ದೂರಿಯಾಗಿ ರಿಲೀಸ್ ಮಾಡಲಾಗುತ್ತದೆ. ಅದಕ್ಕಾಗಿ ಅಮೆರಿಕದಲ್ಲಿ ಈಗಾಗಲೇ ಸೆನ್ಸಾರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಸಿನಿಮಾದ ಅವಧಿ ಎಷ್ಟು ಎಂಬ ಬಗ್ಗೆಯೂ ಈಗ ಮಾಹಿತಿ ಸಿಕ್ಕಿದೆ.

‘ರಾಮಾಯಣ’ ಸಿನಿಮಾಗೆ ಅಮೆರಿಕದಲ್ಲಿ ‘ಪಿಜಿ 13’ ಪ್ರಮಾಣಪತ್ರ: ಚಿತ್ರದ ಅವಧಿ 3 ಗಂಟೆ 15 ನಿಮಿಷ
Ramayana Poster

Updated on: Oct 15, 2026 | 5:45 PM

ನಿತೇಶ್ ತಿವಾರಿ ನಿರ್ದೇಶನದ ಬಿಗ್ ಬಜೆಟ್ ಸಿನಿಮಾ ‘ರಾಮಾಯಣ: ರೈಸ್ ಆಫ್ ಎ ಲೆಜೆಂಡ್’ ಜಾಗತಿಕ ಮಟ್ಟದಲ್ಲಿ ಬಿಡುಗಡೆಯಾಗಲು ಸಜ್ಜಾಗುತ್ತಿದೆ. ಅಕ್ಟೋಬರ್ 15ರಂದು ಬೆಂಗಳೂರಿನಲ್ಲಿ ಈ ಚಿತ್ರದ ಅಂತಾರಾಷ್ಟ್ರೀಯ ಟ್ರೇಲರ್ ಅನಾವರಣಗೊಳ್ಳುತ್ತಿದೆ. ರಣಬೀರ್ ಕಪೂರ್, ಸಾಯಿ ಪಲ್ಲವಿ ಹಾಗೂ ಯಶ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಈ ಬಹುನಿರೀಕ್ಷಿತ ಪೌರಾಣಿಕ ಚಿತ್ರವು ಚಿತ್ರಮಂದಿರಗಳಿಗೆ ಬರುವ ಮುನ್ನವೇ ಹಲವು ವಿಚಾರಗಳಿಂದ ಸುದ್ದಿಯಲ್ಲಿದೆ. ಇದೀಗ ವಿದೇಶದಲ್ಲಿ ಲಭಿಸಿರುವ ಸೆನ್ಸಾರ್ ಪ್ರಮಾಣಪತ್ರದ ಮೂಲಕ ಸಿನಿಮಾದ ಅವಧಿ ಹಾಗೂ ವಯಸ್ಸಿನ ಮಿತಿಯ ರೇಟಿಂಗ್‌ ಮಾಹಿತಿ ಹೊರಬಿದ್ದಿದೆ.

ಅಮೆರಿಕದ ‘ಮೋಷನ್ ಪಿಕ್ಚರ್ ಅಸೋಸಿಯೇಷನ್’ ಸಂಸ್ಥೆಯು ‘ರಾಮಾಯಣ: ರೈಸ್ ಆಫ್ ಎ ಲೆಜೆಂಡ್’ ಚಿತ್ರಕ್ಕೆ ಪಿಜಿ-13 ರೇಟಿಂಗ್ ನೀಡಿದೆ. ಅಂದರೆ 13 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಈ ಸಿನಿಮಾವನ್ನು ಪೋಷಕರ ಮಾರ್ಗದರ್ಶನದೊಂದಿಗೆ ವೀಕ್ಷಿಸುವುದು ಸೂಕ್ತ ಎಂದರ್ಥ. ಭಾರತದ ‘U/A’ ಪ್ರಮಾಣಪತ್ರವನ್ನು ಇದಕ್ಕೆ ಹೋಲಿಸಬಹುದಾಗಿದೆ.

ಚಿತ್ರದಲ್ಲಿರುವ ತೀವ್ರ ಸ್ವರೂಪದ ಆ್ಯಕ್ಷನ್ ದೃಶ್ಯಗಳು, ಯುದ್ಧದ ಸನ್ನಿವೇಶಗಳು ಹಾಗೂ ರಕ್ತಸಿಕ್ತವಾದ ಕೆಲವು ಭೀಕರ ದೃಶ್ಯಗಳ ಕಾರಣದಿಂದ ‘ಮೋಷನ್ ಪಿಕ್ಚರ್ ಅಸೋಸಿಯೇಷನ್’ ಸಂಸ್ಥೆಯು ಈ ರೇಟಿಂಗ್ ನೀಡಿದೆ. ಈ ಮೂಲಕ ಮಹಾಕಾವ್ಯದ ಯುದ್ಧ ದೃಶ್ಯಗಳು ಎಷ್ಟರ ಮಟ್ಟಿಗೆ ಅದ್ಧೂರಿಯಾಗಿ ಮತ್ತು ಗಂಭೀರವಾಗಿ ಮೂಡಿಬಂದಿರಲಿವೆ ಎಂಬುದರ ಮುನ್ಸೂಚನೆ ಸಿಕ್ಕಂತಾಗಿದೆ.

ಚಿತ್ರದ ಅವಧಿಯ ಬಗ್ಗೆಯೂ ಸಿನಿರಂಗದಲ್ಲಿ ದೊಡ್ಡ ಮಟ್ಟದ ಚರ್ಚೆ ನಡೆಯುತ್ತಿದೆ. ‘ಐಮ್ಯಾಕ್ಸ್’ ವೆಬ್‌ಸೈಟ್‌ನಲ್ಲಿ ನೀಡಿರುವ ಮಾಹಿತಿಯ ಪ್ರಕಾರ, ಈ ಸಿನಿಮಾದ ಒಟ್ಟು ಅವಧಿ 3 ಗಂಟೆ 15 ನಿಮಿಷಗಳು. ಆದರೆ ಇಂಗ್ಲಿಷ್ ಭಾಷೆಯ ಆವೃತ್ತಿಯು ಕೊಂಚ ಚಿಕ್ಕದಾಗಿದ್ದು, ಸುಮಾರು 2 ಗಂಟೆ 45 ನಿಮಿಷಗಳ ಕಾಲ ಇರಲಿದೆ ಎಂದು ಟ್ರೇಡ್ ಮೂಲಗಳು ತಿಳಿಸಿವೆ. ಚಿತ್ರತಂಡದಿಂದ ಈ ಅವಧಿಯ ಬಗ್ಗೆ ಇನ್ನಷ್ಟೇ ಅಧಿಕೃತ ಮಾಹಿತಿ ಹೊರಬೀಳಬೇಕಿದೆ.

ಇದನ್ನೂ ಓದಿ: ‘ರಾಮಾಯಣ’ ಚಿತ್ರದ ಜಟಾಯು ಪಾತ್ರದಲ್ಲಿ ಅನುಪಮ್ ಖೇರ್; ಪೋಸ್ಟರ್ ಬಿಡುಗಡೆ

ಒಂದು ವೇಳೆ ಈ 3 ಗಂಟೆ 15 ನಿಮಿಷಗಳ ಅವಧಿ ಖಚಿತವಾದರೆ, ಇದು ರಣಬೀರ್ ಕಪೂರ್ ಅವರ ವೃತ್ತಿಜೀವನದಲ್ಲಿ 3 ಗಂಟೆಗೂ ಹೆಚ್ಚು ಅವಧಿಯ ಎರಡನೇ ಸಿನಿಮಾವಾಗಲಿದೆ. ಈ ಹಿಂದೆ ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ‘ಅನಿಮಲ್’ ಸಿನಿಮಾ 3 ಗಂಟೆ 21 ನಿಮಿಷಗಳ ಸುದೀರ್ಘ ಅವಧಿಯನ್ನು ಹೊಂದಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us