AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲಿ ‘ರಾಮಾಯಣ’ ಈವೆಂಟ್; ‘ಟಾಕ್ಸಿಕ್’ ಬಗ್ಗೆ ಮೌನ ಮುರಿಯುತ್ತಾರಾ ಯಶ್?

ಬೆಂಗಳೂರಿನ ಮಾಲ್ ಒಂದರಲ್ಲಿ ಇಂದು ಬಹುನಿರೀಕ್ಷಿತ ‘ರಾಮಾಯಣ’ ಸಿನಿಮಾದ ವಿಶೇಷ ಕಾರ್ಯಕ್ರಮ ಆಯೋಜನೆಗೊಂಡಿದೆ. ರಣಬೀರ್ ಕಪೂರ್, ಸಾಯಿ ಪಲ್ಲವಿ ಹಾಗೂ ರಾಕಿಂಗ್ ಸ್ಟಾರ್ ಯಶ್ ಭಾಗಿಯಾಗಲಿದ್ದಾರೆ. ‘ಟಾಕ್ಸಿಕ್’ ಚಿತ್ರದ ಬಾಕ್ಸ್ ಆಫೀಸ್ ಹಿನ್ನಡೆ ಮತ್ತು ಸೋಶಿಯಲ್ ಮೀಡಿಯಾ ನೆಗೆಟಿವಿಟಿ ಬಳಿಕ ಯಶ್ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿದ್ದು, ಈ ವೇದಿಕೆಯಲ್ಲಿ ಮೌನ ಮುರಿಯಲಿದ್ದಾರಾ ಎಂಬ ಕುತೂಹಲ ಮೂಡಿದೆ.

ಬೆಂಗಳೂರಿನಲ್ಲಿ ‘ರಾಮಾಯಣ’ ಈವೆಂಟ್; ‘ಟಾಕ್ಸಿಕ್’ ಬಗ್ಗೆ ಮೌನ ಮುರಿಯುತ್ತಾರಾ ಯಶ್?
ಯಶ್
ರಾಜೇಶ್ ದುಗ್ಗುಮನೆ
|

Updated on: Oct 15, 2026 | 6:57 AM

Share

ಮುಖ್ಯಾಂಶಗಳು

  • ಬೆಂಗಳೂರಿನಲ್ಲಿ‘ರಾಮಾಯಣ’ ಈವೆಂಟ್
  • ಒಂದೇ ವೇದಿಕೆಯಲ್ಲಿ ರಣಬೀರ್, ಸಾಯಿ ಪಲ್ಲವಿ ಹಾಗೂ ಯಶ್
  • ಮೌನ ಮುರಿಯಲಿದ್ದಾರಾ ರಾಕಿಂಗ್ ಸ್ಟಾರ್?

ಬೆಂಗಳೂರಿನ ಮಾಲ್ ಒಂದರಲ್ಲಿ ಇಂದು ನಿರೀಕ್ಷಿತ ‘ರಾಮಾಯಣ’ ಚಿತ್ರದ ವಿಶೇಷ ಕಾರ್ಯಕ್ರಮವೊಂದನ್ನು ಆಯೋಜನೆ ಮಾಡಲಾಗಿದೆ. ಬಹುನಿರೀಕ್ಷಿತ ಈ ಪ್ಯಾನ್ ಇಂಡಿಯಾ ಪೌರಾಣಿಕ ಸಿನಿಮಾದ ಪ್ರಚಾರಕ್ಕಾಗಿ ಇಡೀ ಚಿತ್ರತಂಡ ಬೆಂಗಳೂರಿಗೆ ಆಗಮಿಸುತ್ತಿದೆ. ಕರುನಾಡಿನ ನೆಚ್ಚಿನ ನಟ ‘ರಾಕಿಂಗ್ ಸ್ಟಾರ್’ ಯಶ್ ಸೇರಿದಂತೆ ಬಾಲಿವುಡ್ ನಟ ರಣಬೀರ್ ಕಪೂರ್ ಹಾಗೂ ಜನಪ್ರಿಯ ನಟಿ ಸಾಯಿ ಪಲ್ಲವಿ ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಈ ವೇದಿಕೆ ಮೇಲೆ ಯಶ್ ‘ಟಾಕ್ಸಿಕ್’ ಬಗ್ಗೆ ಮೌನ ಮುರಿಯುತ್ತಾರಾ ಎನ್ನುವ ಕುತೂಹಲ ಮೂಡಿದೆ.

ಯಶ್ ಅಭಿನಯದ ಬಹುಕೋಟಿ ವೆಚ್ಚದ ‘ಟಾಕ್ಸಿಕ್’ ಸಿನಿಮಾ ಇತ್ತೀಚೆಗಷ್ಟೇ ತೆರೆಕಂಡು ನಿರೀಕ್ಷಿತ ಮಟ್ಟದಲ್ಲಿ ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡುವಲ್ಲಿ ವಿಫಲವಾಯಿತು. ಚಿತ್ರದ ಫಲಿತಾಂಶ ಹಾಗೂ ಬಾಕ್ಸ್ ಆಫೀಸ್ ಹಿನ್ನಡೆಯ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಸೃಷ್ಟಿಯಾಗಿರುವ ನೆಗೆಟಿವಿಟಿ ಬಗ್ಗೆ ಯಶ್ ಇದುವರೆಗೆ ಯಾವುದೇ ಅಧಿಕೃತ ಪೋಸ್ಟ್ ಮಾಡಿಲ್ಲ ಅಥವಾ ಈ ಬಗ್ಗೆ ಬಹಿರಂಗವಾಗಿ ಮಾತನಾಡಿಲ್ಲ. ಸಿನಿಮಾ ಬಿಡುಗಡೆಯಾದ ಬಳಿಕ ಯಶ್ ಯಾವುದೇ ಸಾರ್ವಜನಿಕ ವೇದಿಕೆಗಳಲ್ಲಿ ಕಾಣಿಸಿಕೊಂಡಿರಲಿಲ್ಲ.

ಇಂದಿನ ಈವೆಂಟ್ ಮೇಲೆ ಎಲ್ಲರ ಕಣ್ಣು

ಈಗ ‘ರಾಮಾಯಣ’ ಚಿತ್ರದಲ್ಲಿ ಪ್ರಮುಖವಾದ ರಾವಣ ಪಾತ್ರದಲ್ಲಿ ನಟಿಸಿರುವ ಯಶ್, ಈ ಕಾರ್ಯಕ್ರಮದಲ್ಲಿ ಭಾಗವಹಿಸುವುದರಿಂದ ‘ಟಾಕ್ಸಿಕ್’ ಸಿನಿಮಾದ ಸೋಲು ಹಾಗೂ ಒಟ್ಟಾರೆ ಬೆಳವಣಿಗೆಗಳ ಬಗ್ಗೆ ಮೌನ ಮುರಿಯಲಿದ್ದಾರಾ ಎಂಬುದು ಯಶ್ ಅಭಿಮಾನಿಗಳಲ್ಲಿ ಮತ್ತು ಸಿನಿಪ್ರಿಯರಲ್ಲಿ ಮೂಡಿರುವ ದೊಡ್ಡ ಪ್ರಶ್ನೆಯಾಗಿದೆ. ಇಷ್ಟು ದಿನಗಳ ಬಳಿಕ ತಮ್ಮದೇ ಸ್ವಂತೂರಿನಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿರುವುದರಿಂದ, ಅವರು ಮಾಧ್ಯಮಗಳ ಅಥವಾ ಅಭಿಮಾನಿಗಳ ಪ್ರಶ್ನೆಗಳಿಗೆ ಏನಾದರೂ ಪ್ರತಿಕ್ರಿಯೆ ನೀಡುತ್ತಾರಾ ಎಂಬ ಕಾತರ ಗರಿಗೆದರಿದೆ.

ಇದನ್ನೂ ಓದಿ: ‘ಕೆಜಿಎಫ್‌ ಸ್ಟೈಲ್ ರಿಪೀಟ್ ಆಗಿದೆ’; ರಾಮಾಯಣದ ಯಶ್ ಗೆಟಪ್ ಬಗ್ಗೆ ಬಾಲಿವುಡ್ ನಟನ ಟೀಕೆ

ನಿತೇಶ್ ತಿವಾರಿ ನಿರ್ದೇಶನದ ‘ರಾಮಾಯಣ’ ಚಿತ್ರದ ಪ್ರಚಾರ ಕಾರ್ಯಗಳು ಈಗ ಗರಿಕೇರಿದ್ದು, ಇಂದಿನ ಈವೆಂಟ್ ಯಶ್ ಅಭಿಮಾನಿಗಳಿಗೆ ಮಾತ್ರವಲ್ಲದೆ ಇಡೀ ಸ್ಯಾಂಡ್‌ವುಡ್‌ಗೆ ಅತ್ಯಂತ ಕುತೂಹಲದ ಕ್ಷಣವಾಗಿ ಬದಲಾಗಿದೆ. ಇನ್ನು, ‘ರಾಮಾಯಣ’ ಈವೆಂಟ್​​ನಲ್ಲಿ ವಿಶೇಷ ವಿಡಿಯೋ ಒಂದನ್ನು ಪ್ರದರ್ಶನ ಮಾಡಲು ತಂಡ ನಿರ್ಧರಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
ಮಂಡ್ಯ ಎಳನೀರು ವ್ಯಾಪಾರಿಗಳಿಗೆ ಮಹಾ ದೋಖಾ: 25 ಲಕ್ಷಕ್ಕೂ ಹೆಚ್ಚು ಹಣ ವಂಚನೆ
ಮಂಡ್ಯ ಎಳನೀರು ವ್ಯಾಪಾರಿಗಳಿಗೆ ಮಹಾ ದೋಖಾ: 25 ಲಕ್ಷಕ್ಕೂ ಹೆಚ್ಚು ಹಣ ವಂಚನೆ
ಸಂಧಾನ ಸಭೆ ಯಶಸ್ವಿ: ಮುನಿಸು ಮರೆತು ಪರಸ್ಪರ ಕೈಲುಕಿದ ಹಾಸನ ಡಿಸಿ-ಎಸ್ಪಿ
ಸಂಧಾನ ಸಭೆ ಯಶಸ್ವಿ: ಮುನಿಸು ಮರೆತು ಪರಸ್ಪರ ಕೈಲುಕಿದ ಹಾಸನ ಡಿಸಿ-ಎಸ್ಪಿ
ನಮ್ಮ ಮೆಟ್ರೋದಲ್ಲಿ ಮತ್ತೊಂದು ಜೀವಂತ ಹೃದಯ ಸಾಗಣೆ: ವಿಡಿಯೋ ನೋಡಿ
ನಮ್ಮ ಮೆಟ್ರೋದಲ್ಲಿ ಮತ್ತೊಂದು ಜೀವಂತ ಹೃದಯ ಸಾಗಣೆ: ವಿಡಿಯೋ ನೋಡಿ
ಯಲಹಂಕ ಬಳಿ ನಿಂತಿದ್ದ ರೈಲು ಬೋಗಿಗಳು ಬೆಂಕಿಗೆ ಆಹುತಿ
ಯಲಹಂಕ ಬಳಿ ನಿಂತಿದ್ದ ರೈಲು ಬೋಗಿಗಳು ಬೆಂಕಿಗೆ ಆಹುತಿ
ಈ ಬಾರಿ ಬಿಗ್​​ಬಾಸ್ ಫಿನಾಲೆಗೆ ಬರುವವರು ಯಾರು? ಮಂಜನ ಉತ್ತರ ಹೀಗಿತ್ತು
ಈ ಬಾರಿ ಬಿಗ್​​ಬಾಸ್ ಫಿನಾಲೆಗೆ ಬರುವವರು ಯಾರು? ಮಂಜನ ಉತ್ತರ ಹೀಗಿತ್ತು
ಅಂಬಾರಿ ಹೊರುವ ಆನೆಯ ಆಯ್ಕೆ ಹೇಗೆ ನಡೆಯುತ್ತದೆ?
ಅಂಬಾರಿ ಹೊರುವ ಆನೆಯ ಆಯ್ಕೆ ಹೇಗೆ ನಡೆಯುತ್ತದೆ?
ರಮೇಶ್​​ ಜಾರಕಿಹೊಳಿ ಭೇಟಿ ರಹಸ್ಯ ಬಿಚ್ಚಿಟ್ಟ ಸಿದ್ದರಾಮಯ್ಯ
ರಮೇಶ್​​ ಜಾರಕಿಹೊಳಿ ಭೇಟಿ ರಹಸ್ಯ ಬಿಚ್ಚಿಟ್ಟ ಸಿದ್ದರಾಮಯ್ಯ
ಪರಿಣಾಮ ನೆಟ್ಟಗೆ ಇರಲ್ಲ: ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಉಗ್ರಪ್ಪ ಎಚ್ಚರಿಕೆ
ಪರಿಣಾಮ ನೆಟ್ಟಗೆ ಇರಲ್ಲ: ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಉಗ್ರಪ್ಪ ಎಚ್ಚರಿಕೆ
ಕುಟುಂಬದ ಹಿನ್ನೆಲೆ ಬಗ್ಗೆ ಮಾತನಾಡಿದ ‘ಬಿಗ್ ಬಾಸ್ ಕನ್ನಡ 13’ ಸ್ಪರ್ಧಿ ಮಂಜ
ಕುಟುಂಬದ ಹಿನ್ನೆಲೆ ಬಗ್ಗೆ ಮಾತನಾಡಿದ ‘ಬಿಗ್ ಬಾಸ್ ಕನ್ನಡ 13’ ಸ್ಪರ್ಧಿ ಮಂಜ
ಇಸ್ರೋ ರೋಬೋಟಿಕ್ಸ್ ಚಾಲೆಂಜ್‌ನಲ್ಲಿ ಐಐಐಟಿ ಧಾರವಾಡ ವಿದ್ಯಾರ್ಥಿಗಳ ಸಾಧನೆ
ಇಸ್ರೋ ರೋಬೋಟಿಕ್ಸ್ ಚಾಲೆಂಜ್‌ನಲ್ಲಿ ಐಐಐಟಿ ಧಾರವಾಡ ವಿದ್ಯಾರ್ಥಿಗಳ ಸಾಧನೆ