ರಣದೀಪ್ ಹೂಡಾ ತನಗೆ ಮೋಸ ಮಾಡಿದ್ದಾರೆಂದು 10 ಕೋಟಿ ದಾವೆ ಹೂಡಿದ ಯುವತಿ; ಪ್ರಕರಣವೇನು?

| Updated By: shivaprasad.hs

Updated on: Aug 20, 2021 | 5:16 PM

Randeep Hooda: ಬಾಲಿವುಡ್ ನಟ ರಣದೀಪ್ ಹೂಡಾ ವಿರುದ್ಧ ಪ್ರಿಯಾಂಕಾ ಶರ್ಮ ಎಂಬ ಯುವತಿಯೊಬ್ಬರು 10 ಕೋಟಿ ರೂಗಳ ದಾವೆ ಹೂಡಿದ್ದಾರೆ. ಈ ಕುರಿತು ಇನ್ನೂ ರಣದೀಪ್ ಹೂಡಾ ಪ್ರತಿಕ್ರಿಯೆ ನೀಡಿಲ್ಲ.

ರಣದೀಪ್ ಹೂಡಾ ತನಗೆ ಮೋಸ ಮಾಡಿದ್ದಾರೆಂದು 10 ಕೋಟಿ ದಾವೆ ಹೂಡಿದ ಯುವತಿ; ಪ್ರಕರಣವೇನು?
ರಣದೀಪ್ ಹೂಡಾ
Follow us on

ಬಾಲಿವುಡ್​ ನಟ ರಣದೀಪ್ ಹೂಡಾ ವಿರುದ್ಧ ಪ್ರಿಯಾಂಕಾ ಶರ್ಮಾ ಎಂಬ ಯುವತಿ 10 ಕೋಟಿ ರೂ ದಾವೆ ಹೂಡಿದ್ದಾರೆ. ಸಿನಿಮಾ ಬರಹಗಾರ್ತಿ ಹಾಗೂ ಸಾಹಿತಿ ಆಗಿರುವ ಪ್ರಿಯಾಂಕಾ ಶರ್ಮ, ತಮ್ಮ ವಕೀಲರಾದ ರಜತ್ ಕಲ್ಸನ್ ಮುಖಾಂತರ ನೋಟಿಸ್ ಕಳುಹಿಸಿದ್ದಾರೆ. ಈ ಕುರಿತಂತೆ ಪ್ರಿಯಾ ಹರ್ಯಾಣದ ಫರೀದಾಬಾದ್ ಡಿಜಿಪಿಗೆ ಮೈಲ್ ಮುಖಾಂತರ ಕಂಪ್ಲೇಂಟ್ ದಾಖಲಿಸಿದ್ದಾರೆ. ವಕೀಲ ರಜತ್ ಕಲ್ಸನ್ ತಿಳಿಸಿರುವ ಪ್ರಕಾರ ಪ್ರಿಯಾಂಕಾ ಪ್ರಸ್ತುತ ಸಿನಿಮಾ ಬರಹಗಾರ್ತಿಯಾಗಿದ್ದು, ಸೂರತ್​ನಲ್ಲಿ ವಾಸವಿದ್ದುಕೊಂಡು ಕತೆ, ಚಿತ್ರಕತೆ ಹಾಗೂ ಹಾಡುಗಳಿಗೆ ಸಾಹಿತ್ಯವನ್ನು ಬರೆಯುತ್ತಿದ್ದಾರೆ.

ಪ್ರಕರಣವೇನು?

ರಣದೀಪ್ ಹೂಡಾ ಅವರಿಗೆ ಕಳುಹಿಸಲಾಗಿರುವ ನೋಟೀಸ್​ನಲ್ಲಿ ಉಲ್ಲೇಖಿಸಲಾಗಿರುವಂತೆ, ಪ್ರಿಯಾಂಕಾ ಶರ್ಮ ರಣದೀಪ್ ಹೂಡಾರನ್ನು ಸಾಮಾಜಿಕ ಜಾಲತಾಣದ ಮೂಲಕ ಸಂಪರ್ಕಿಸಿದ್ದಾರೆ. ಆ ಸಂದರ್ಭದಲ್ಲಿ ರಣದೀಪ್ ಮತ್ತು ಪ್ರಿಯಾಂಕಾ ನಡುವೆ ಮಾತುಕತೆ ನಡೆದಿದ್ದು, ರಣದೀಪ್ ಪ್ರಿಯಾಂಕಾರ ಸ್ಕ್ರಿಪ್ಟ್ ಕುರಿತು ಕೆಲಸ ಮಾಡುವುದಾಗಿ ಭರವಸೆ ನೀಡಿದ್ದರೆಂದು ತಿಳಿಸಲಾಗಿದೆ. ಈ ಕಾರಣದಿಂದ ಪ್ರಿಯಾಂಕಾ ಸುಮಾರು 1,200ಕ್ಕೂ ಅಧಿಕ ಹಾಡುಗಳನ್ನು ಹಾಗೂ 40ಕ್ಕೂ ಹೆಚ್ಚು ಕತೆಗಳನ್ನು ರಣದೀಪ್ ಹೂಡಾ ಮತ್ತು ಅವರ ಸ್ನೇಹಿತರಿಗೆ ಕಳುಹಿಸಿದ್ದರಂತೆ. ಅವರಲ್ಲಿ ಆಶಾ ಹೂಡಾ, ಮಂದೀಪ್ ಹೂಡಾ, ಅಜ್ಲಿ ಹೂಡಾ, ಮನೀಷ್, ರಣದೀಪ್ ಮ್ಯಾನೇಜರ್ ಆದ ಪಾಂಚಾಲಿ ಚೌಧರಿ, ಮೇಕಪ್ ಆರ್ಟಿಸ್ ರೇಣುಕಾ ಪಿಳ್ಳೈ ಮೊದಲಾದವರೂ ಸೇರಿದ್ದು, ಇವರೆಲ್ಲರಿಗೂ ಪ್ರಿಯಾಂಕಾ ಇಮೈಲ್ ಹಾಗೂ ವಾಟ್ಸಾಪ್ ಮುಖಾಂತರ ಹಾಡು ಹಾಗೂ ಕತೆಗಳನ್ನು ಕಳಿಸಿದ್ದರು ಎಂದು ತಿಳಿಸಲಾಗಿದೆ.

ಪ್ರಿಯಾಂಕಾ ಆರೋಪ ಮಾಡಿರುವ ಪ್ರಕಾರ, ಈ ಹಾಡುಗಳು ಹಾಗೂ ಕತೆಗಳ ಕುರಿತು ವರ್ಷಗಳು ಕಳೆದರೂ ಕೆಲಸ ಪ್ರಾರಂಭ ಮಾಡಿಲ್ಲ. ಜೊತೆಗೆ ಅವನ್ನು ಹಿಂದಿರುಗಿಸಿಯೂ ಇಲ್ಲ. ಪ್ರಿಯಾಂಕ ಅವುಗಳನ್ನು ಮರಳಿ ಕೇಳಿದಾಗ ಕೊಲೆ ಬೆದರಿಕೆ ಹಾಕಿದ್ದಾರೆಂದು ಆರೋಪಿಸಲಾಗಿದೆ. ಇದು ಸುಮಾರು ಕಳೆದ ಎಂಟು ವರ್ಷಗಳಿಂದ ನಡೆಯುತ್ತಿದೆ ಎಂದು ಹೇಳಲಾಗಿದ್ದು, ಪ್ರಿಯಾಂಕಾ ಅವರ ಮೇಲಿನ ದೌರ್ಜನ್ಯಕ್ಕಾಗಿ ವಕೀಲರ ಮೂಲಕ ಪರಿಹಾರ ಮೊತ್ತಕ್ಕೆ ಬೇಡಿಕೆ ಇಡಲಾಗಿದೆ. ಈ ಪ್ರಕರಣದ ಕುರಿತು ಇನ್ನೂ ರಣದೀಪ್ ಹೂಡಾ ಹಾಗೂ ಅವರ ಸ್ನೇಹಿತರು ಪ್ರತಿಕ್ರಿಯೆ ನೀಡಿಲ್ಲ.

ಇದನ್ನೂ ಓದಿ:

‘ನೀನು ಡೈಪರ್​ ಹಾಕ್ಕೋ’; ಪುರುಷ ಸ್ಪರ್ಧಿಗೆ ಖಡಕ್​ ಆದೇಶ ನೀಡಿದ ಶಮಿತಾ ಶೆಟ್ಟಿ

‘ನಾಲ್ಕಲ್ಲ ನಲವತ್ತು ಬಾರಿ ಮದುವೆ ಆಗುತ್ತೇನೆ’; ಬಿಗ್​ ಬಾಸ್​ ಸ್ಪರ್ಧಿಯ ಖಡಕ್​ ಮಾತು

(Randeep Hooda accused of false promise and gets 10Cr legal notice by Priyanka Sharma)