ಬಾಲಿವುಡ್ನಲ್ಲಿ ಗುರುತಿಸಿಕೊಂಡ ನಂತರದಲ್ಲಿ ಸಾಕಷ್ಟು ನಟ-ನಟಿಯರು ಮನೆ ಕೊಂಡುಕೊಳ್ಳೋಕೆ ಆಸಕ್ತಿ ತೋರುತ್ತಾರೆ. ಅದೇ ರೀತಿ ಅನೇಕ ಸ್ಟಾರ್ಗಳು ಮುಂಬೈನ ದುಬಾರಿ ಏರಿಯಾದಲ್ಲಿ ಮನೆ ಖರೀದಿ ಮಾಡಿದ್ದಾರೆ. ಈಗ ನಟಿ ರಾಣಿ ಮುಖರ್ಜಿ ಸರದಿ. ಅವರು ಮುಂಬೈನಲ್ಲಿ ಮನೆಯೊಂದನ್ನು ಖರೀದಿ ಮಾಡಿದ್ದಾರೆ.
ರಾಣಿ ಮುಖರ್ಜಿ ಬಾಲಿವುಡ್ನಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. 90ರ ದಶಕದಲ್ಲಿ ಸಿನಿಪ್ರಿಯರ ಹೃದಯ ಕದ್ದವರು ರಾಣಿ ಮುಖರ್ಜಿ. ಈಗಲೂ ಅವರಿಗೆ ಬಾಲಿವುಡ್ನಲ್ಲಿ ಬೇಡಿಕೆ ಇದೆ. ನೋ ಒನ್ ಕಿಲ್ಲಡ್ ಜಸ್ಸಿಕಾ ಚಿತ್ರದಲ್ಲಿ ಜರ್ನಲಿಸ್ಟ್ ಪಾತ್ರದಲ್ಲಿ ಅವರು ಮಿಂಚಿದ್ದರು. ಈಗ ರಾಣಿ ಮುಖರ್ಜಿ ಹಾಗೂ ಟೈಗರ್ ಶ್ರಾಫ್ ನೆರೆ ಹೊರೆಯವರಾಗಿದ್ದಾರೆ.
ಖಾರ್ ಪ್ರದೇಶದಲ್ಲಿ ರಾಣಿ ಮುಖರ್ಜಿ ಫ್ಲಾಟ್ ಖರೀದಿ ಮಾಡಿದ್ದಾರೆ. 22ನೇ ಅಂತಸ್ತಿನಲ್ಲಿ ಈ ಫ್ಲಾಟ್ ಇದೆ. 4+3 ಬಿಎಚ್ಕೆ ಮನೆ ಇದಾಗಿದ್ದು, ಈ ಫ್ಲಾಟ್ನಿಂದ ಅರಬ್ಬೀ ಸಮುದ್ರ ಕಾಣುತ್ತದೆ. ಇದಕ್ಕೆ ಅವರು ಬರೋಬ್ಬರಿ 7.12 ಕೋಟಿ ರೂಪಾಯಿ ನೀಡಿದ್ದಾರೆ. ಇದೇ ಅಪಾರ್ಟ್ಮೆಂಟ್ನಲ್ಲಿ ಟೈಗರ್ ಶ್ರಾಫ್ ಫ್ಲ್ಯಾಟ್ ಕೂಡ ಇದೆ ಎಂದು ತಿಳಿದು ಬಂದಿದೆ.
‘ಮರ್ದಾನಿ 2’ ಸಿನಿಮಾದಲ್ಲಿ ರಾಣಿ ಮುಖರ್ಜಿ ಕೊನೆಯದಾಗಿ ಕಾಣಿಸಿಕೊಂಡಿದ್ದರು. ಈ ಸಿನಿಮಾ 2019ರ ಡಿಸೆಂಬರ್ ತಿಂಗಳಲ್ಲಿ ತೆರೆಗೆ ಬಂದಿತ್ತು. ಈ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಉತ್ತಮ ಗಳಿಕೆ ಮಾಡಿತ್ತು. ಸದ್ಯ ಅವರು ‘ಬಂಟಿ ಔರ್ ಬಬ್ಲಿ 2’ ಹಾಗೂ Mrs.ಚಟರ್ಜಿ vs ನಾರ್ವೆ ಫಿಲ್ಮ್ಸ್ ಚಿತ್ರದಲ್ಲಿ ರಾಣಿ ಮುಖರ್ಜಿ ನಟಿಸುತ್ತಿದ್ದಾರೆ.
ಇತ್ತೀಚೆಗೆ ಅಮಿತಾಭ್ ಬಚ್ಚನ್, ಅರ್ಜುನ್ ಕಪೂರ್ ಹಾಗೂ ಅಜಯ್ ದೇವಗನ್-ಕಾಜೊಲ್ ಮುಂಬೈನಲ್ಲಿ ಹೊಸ ಮನೆ ಖರೀದಿ ಮಾಡಿ ಸುದ್ದಿಯಾಗಿದ್ದರು. ಈಗ ರಾಣಿ ಮುಖರ್ಜಿ ಕೂಡ ಈ ಸಾಲಿಗೆ ಸೇರ್ಪಡೆ ಆಗಿದ್ದಾರೆ.
ಇದನ್ನೂ ಓದಿ:
ಟೋಕಿಯೋ ಒಲಂಪಿಕ್ಸ್ನಲ್ಲಿ ಮೊಳಗಿತು ಬಾಲಿವುಡ್ ಹಾಡು; ಅಚ್ಚರಿಗೊಂಡ ಭಾರತೀಯರು
ಸೆಟ್ನಲ್ಲೇ ತಲೆತಿರುಗಿ ಬಿದ್ದ ಬಾಲಿವುಡ್ ನಟಿ; ಸಮಸ್ಯೆಗೆ ಕಾರಣ ಬಿಚ್ಚಿಟ್ಟ ವೈದ್ಯರು