ಬಾಲಿವುಡ್ ಕಲಾವಿದ ರಣವೀರ್ ಸಿಂಗ್ (Ranveer Singh) ಅವರು ಕೆಲವು ದಿನಗಳ ಹಿಂದೆ ಅಡಲ್ಟ್ ಸಿನಿಮಾ ನಟ ಜಾನಿ ಸಿನ್ಸ್ ಜೊತೆ ತೆರೆ ಹಂಚಿಕೊಳ್ಳುವ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿದ್ದರು. ಈಗ ಅವರು ಮತ್ತೊಮ್ಮೆ ಜಾನಿ ಸಿನ್ಸ್ ಜೊತೆ ನಟಿಸಿದ್ದಾರೆ. ಪುರುಷರ ಲೈಂಗಿಕ ಸಮಸ್ಯೆಗಳಿಗೆ ಪರಿಹಾರ ನೀಡುವಂತಹ ಉತ್ಪನ್ನಗಳ ಬ್ರ್ಯಾಂಡ್ಗೆ ರಣವೀರ್ ಸಿಂಗ್ ರಾಯಭಾರಿ ಆಗಿದ್ದಾರೆ. ಅದರ ಜಾಹೀರಾತಿನಲ್ಲಿ ಜಾನಿ ಸಿನ್ಸ್ (Johnny Sins) ಮತ್ತು ರಣವೀರ್ ಸಿಂಗ್ ಅಭಿನಯಿಸಿದ್ದಾರೆ. ಈ ಮೊದಲು ಬಂದಿದ್ದ ಜಾಹೀರಾತಿನ ರೀತಿಯೇ ಈ ಹೊಸ ಜಾಹೀರಾತು ಕೂಡ ಕಾಮಿಡಿ ಶೈಲಿಯಲ್ಲಿದೆ.
ಶೀಘ್ರ ಸ್ಖಲನಕ್ಕೆ ಸಂಬಂಧಿಸಿದ ಜಾಹೀರಾತು ಇದಾಗಿದ್ದು, ಜಾನಿ ಸಿನ್ಸ್ ಅವರು ಇಂಥ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ಜಾಹೀರಾತಿನ ಆರಂಭದಲ್ಲಿ ತೋರಿಸಲಾಗುತ್ತದೆ. ನಂತರ ಅವರು ಈ ಸ್ಪ್ರೇ ಬಳಸಿದ ಬಳಿಕ ಅವರ ಸಮಸ್ಯೆ ಪರಿಹಾರ ಆಯಿತು ಎಂದು ರಣವೀರ್ ಸಿಂಗ್ ಹೇಳುತ್ತಾರೆ. ಅಲ್ಲದೇ ಜಾನಿ ಸಿನ್ಸ್ ಅವರನ್ನು ‘ನಮ್ಮ ಸಂತೃಪ್ತ ಗ್ರಾಹಕ’ ಎಂದು ರಣವೀರ್ ಸಿಂಗ್ ಪರಿಚಯಿಸುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಜಾಹೀರಾತು ವೈರಲ್ ಆಗಿದೆ.
ಇದನ್ನೂ ಓದಿ: ದೀಪಿಕಾ ಪಡುಕೋಣೆ ಪ್ರೆಗ್ನೆಂಟ್; ಡಿಫರೆಂಟ್ ಆಗಿ ಸಿಹಿ ಸುದ್ದಿ ನೀಡಿದ ರಣವೀರ್ ಸಿಂಗ್
ಸದ್ಯ ವೈರಲ್ ಆಗಿರುವ ಈ ಜಾಹೀರಾತನ್ನು ಕಂಡು ನೆಟ್ಟಿಗರು ಸಖತ್ ಎಂಜಾಯ್ ಮಾಡಿದ್ದಾರೆ. ಈ ಜಾಹೀರಾತು ತುಂಬ ಕ್ರಿಯೇಟಿವ್ ಆಗಿದೆ ಎಂದು ಅನೇಕರು ಕಮೆಂಟ್ ಮಾಡಿದ್ದಾರೆ. ರಣವೀರ್ ಸಿಂಗ್ ಅವರು ಯಾವುದೇ ಪಾತ್ರ ಕೊಟ್ಟರೂ ಚೆನ್ನಾಗಿ ನಿಭಾಯಿಸುತ್ತಾರೆ ಎಂದು ಅನೇಕರು ಮತ್ತೊಮ್ಮೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಬೋಲ್ಡ್ ಆದಂತಹ ವಿಚಾರಗಳನ್ನು ಮಾತನಾಡಿದ್ದಕ್ಕೆ ಅನೇಕರು ಭೇಷ್ ಎಂದಿದ್ದಾರೆ.
ರಣವೀರ್ ಸಿಂಗ್ ಅವರು ಈ ಮೊದಲು ಬೆತ್ತಲೆ ಫೋಟೋಶೂಟ್ ಮಾಡಿ ಅಚ್ಚರಿ ಮೂಡಿಸಿದ್ದರು. ಈಗ ಅವರ ಜಾನಿ ಸಿನ್ಸ್ ಜೊತೆ ಅಭಿನಯಿಸುವ ಮೂಲಕ ಮತ್ತೆ ಸುದ್ದಿ ಆಗಿದ್ದಾರೆ. ಸಿನಿಮಾ ವಿಚಾರಕ್ಕೆ ಬರುವುದಾದರೆ, ‘ಸಿಂಗಂ ಅಗೇನ್’ ಹಾಗೂ ‘ಡಾನ್ 3’ ಸಿನಿಮಾಗಳಲ್ಲಿ ಅವರು ನಟಿಸುತ್ತಿದ್ದಾರೆ. ರೋಹಿತ್ ಶೆಟ್ಟಿ ನಿರ್ದೇಶನದಲ್ಲಿ ‘ಸಿಂಗಂ ಅಗೇನ್’ ಹಾಗೂ ಫರ್ಹಾನ್ ಅಖ್ತರ್ ನಿರ್ದೇಶದಲ್ಲಿ ‘ಡಾನ್ 3’ ಸಿನಿಮಾ ಮೂಡಿಬರುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.