50 ಕೋಟಿ ರೂ. ದಾಟಲಿಲ್ಲ ‘83’ ಕಲೆಕ್ಷನ್​; ವಿಮರ್ಶೆಯಲ್ಲಿ ಗೆದ್ದರೂ ಚಿತ್ರಕ್ಕೆ ಹಿನ್ನಡೆ ಆಗಿದ್ದೇಕೆ?

| Updated By: ರಾಜೇಶ್ ದುಗ್ಗುಮನೆ

Updated on: Dec 28, 2021 | 1:49 PM

ಈ ಚಿತ್ರವನ್ನು ಚಿತ್ರಮಂದಿರದಲ್ಲೇ ರಿಲೀಸ್​ ಮಾಡಬೇಕು ಎಂದು ಇಷ್ಟೊಂದು ತಾಳ್ಮೆಯಿಂದ ಕಾದ ಚಿತ್ರತಂಡಕ್ಕೆ ಇದು ಬೇಸರ ತರಿಸಿದೆ. ಈ ಮೊದಲು ಒಟಿಟಿಯಿಂದ ಚಿತ್ರಕ್ಕೆ ಬೇಡಿಕೆ ಬಂದಿತ್ತು. ಆದರೆ, ಇದಕ್ಕೆ ಚಿತ್ರತಂಡ ನಿರಾಕರಿಸಿತ್ತು.

50 ಕೋಟಿ ರೂ. ದಾಟಲಿಲ್ಲ ‘83’ ಕಲೆಕ್ಷನ್​; ವಿಮರ್ಶೆಯಲ್ಲಿ ಗೆದ್ದರೂ ಚಿತ್ರಕ್ಕೆ ಹಿನ್ನಡೆ ಆಗಿದ್ದೇಕೆ?
ರಣವೀರ್​ ಸಿಂಗ್​
Follow us on

ಕೊವಿಡ್​ ಕಾಣಿಸಿಕೊಂಡ ನಂತರ ಬಾಕ್ಸ್​ ಆಫೀಸ್​ ಗಳಿಕೆಯಲ್ಲಿ ಸಿನಿಮಾಗಳು ಹಿಂದೆ ಬೀಳುತ್ತಿವೆ. ಎಲ್ಲಾ ಚಿತ್ರಗಳು ಅಂದುಕೊಂಡ ಮಟ್ಟಿಗೆ ಗಳಿಕೆ ಮಾಡುತ್ತಿಲ್ಲ. ಮುಂಬೈನಲ್ಲಿ ಶೇ. 50 ಆಸನ ವ್ಯವಸ್ಥೆಗೆ ಮಾತ್ರ ಅವಕಾಶ ಇದೆ. ಬಾಲಿವುಡ್​ ಸಿನಿಮಾಗಳ ತವರಿನಲ್ಲೇ ಈ ರೀತಿ ಆಗಿರುವುದಕ್ಕೆ ಸಹಜವಾಗಿಯೇ ಹಿಂದಿ ಸಿನಿಮಾಗಳ ಬಾಕ್ಸ್​ ಆಫೀಸ್​ ಕಲೆಕ್ಷನ್​ಗೆ ಹೊಡೆತ ಬಿದ್ದಿದೆ. ಈಗ ರಣವೀರ್​ ಸಿಂಗ್​ ನಟನೆಯ ‘83’ ಚಿತ್ರಕ್ಕೂ (83 Movie)  ಹಿನ್ನಡೆ ಆಗಿದೆ. ಕೊರೊನಾ ವೈರಸ್​ ಸೇರಿದಂತೆ ನಾನಾ ಕಾರಣಗಳಿಂದ ಸಿನಿಮಾ ಅಂದುಕೊಂಡ ಮಟ್ಟಿಗೆ ಗಳಿಕೆ ಮಾಡುತ್ತಿಲ್ಲ. ಇದು ಸಹಜವಾಗಿಯೇ ಚಿತ್ರತಂಡಕ್ಕೆ ಬೇಸರ ಮೂಡಿಸಿದೆ.

ಹಾಲಿವುಡ್​ ಸಿನಿಮಾ ‘ಸ್ಪೈಡರ್​ ಮ್ಯಾನ್​: ನೋ ವೇ ಹೋಮ್​’ ಹಾಗೂ ಅಕ್ಷಯ್​ ಕುಮಾರ್​ ನಟನೆಯ ‘ಸೂರ್ಯವಂಶಿ’ ಚಿತ್ರಗಳು ಬಾಕ್ಸ್​ ಆಫೀಸ್​ನಲ್ಲಿ ಮೊದಲ ದಿನ ಒಳ್ಳೆಯ ಗಳಿಕೆ ಮಾಡಿದ್ದವು. ‘ಸ್ಪೈಡರ್​ ಮ್ಯಾನ್​’ ಸಿನಿಮಾ ಮೊದಲ ದಿನವೇ 32 ಕೋಟಿ ರೂಪಾಯಿ ಬಾಚಿಕೊಂಡರೆ, ‘ಸೂರ್ಯವಂಶಿ’ 25 ಕೋಟಿ ಗಳಿಕೆ ಮಾಡಿತ್ತು. ಈ ಸಿನಿಮಾಗಳ ಸಮೀಪವೂ ಬರೋಕೆ ‘83’ ಸಿನಿಮಾಗೆ ಸಾಧ್ಯವಾಗಿಲ್ಲ. ಮೊದಲ ದಿನ ಈ ಚಿತ್ರ ಕೇವಲ 12. 64 ಕೋಟಿ ಗಳಿಸಿತ್ತು. ನಂತರ ಶನಿವಾರ (ಡಿಸೆಂಬರ್​ 25) ಈ ಚಿತ್ರ 16.95 ಕೋಟಿ ರೂಪಾಯಿ ಹಾಗೂ ಭಾನುವಾರ (ಡಿಸೆಂಬರ್ 26) 17.41 ಕೋಟಿ ರೂ. ಗಳಿಸಿದೆ. ಈ ಮೂಲಕ ಮೊದಲ ವಾರಾಂತ್ಯಕ್ಕೆ ಚಿತ್ರದ ಕಲೆಕ್ಷನ್​ ಕೇವಲ 47 ಕೋಟಿ ರೂಪಾಯಿ ಆಗಿದೆ.

ಸ್ಟಾರ್​ ನಟರ ಸಿನಿಮಾ ಮೊದಲ ವಾರದಲ್ಲೇ ನೂರು ಕೋಟಿ ರೂಪಾಯಿ ದಾಟಿದ ಸಾಕಷ್ಟು ಉದಾಹರಣೆ ಇದೆ. ಆದರೆ, ‘83’ ಚಿತ್ರದ ಕಲೆಕ್ಷನ್​ ಮಾತ್ರ 50 ಕೋಟಿ ರೂಪಾಯಿ ದಾಟಲೂ ಇಲ್ಲ. ಈ ಚಿತ್ರವನ್ನು ಚಿತ್ರಮಂದಿರದಲ್ಲೇ ರಿಲೀಸ್​ ಮಾಡಬೇಕು ಎಂದು ಇಷ್ಟೊಂದು ತಾಳ್ಮೆಯಿಂದ ಕಾದ ಚಿತ್ರತಂಡಕ್ಕೆ ಇದು ಬೇಸರ ತರಿಸಿದೆ. ಈ ಮೊದಲು ಒಟಿಟಿಯಿಂದ ಚಿತ್ರಕ್ಕೆ ಬೇಡಿಕೆ ಬಂದಿತ್ತು. ಆದರೆ, ಇದಕ್ಕೆ ಚಿತ್ರತಂಡ ನಿರಾಕರಿಸಿತ್ತು. ಈಗ ಸಿನಿಮಾದ ಕಲೆಕ್ಷನ್​ ಕುಗ್ಗಿರುವ ಕಾರಣ, ಶೀಘ್ರವೇ ಸಿನಿಮಾ ಒಟಿಟಿಗೆ ಎಂಟ್ರಿ ಇಡುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.

‘83’ ಕಲೆಕ್ಷನ್​ ಕುಗ್ಗಲು ಹಲವು ಕಾರಣ ಇದೆ. ‘ಪುಷ್ಪ’ ಸಿನಿಮಾದ ಹವಾ ಕಡಿಮೆ ಆಗುವ ಮೊದಲೇ ಈ ಚಿತ್ರ ರಿಲೀಸ್​ ಆಗಿತ್ತು. ‘ಸ್ಪೈಡರ್​ ಮ್ಯಾನ್​’ ಸಿನಿಮಾದಿಂದಲೂ ಈ ಚಿತ್ರ ದೊಡ್ಡ ಮಟ್ಟದಲ್ಲಿ ಸ್ಪರ್ಧೆ ಎದುರಿಸುತ್ತಿದೆ. ಇನ್ನು, ಕೊವಿಡ್​ ಕಾರಣದಿಂದ ಹಲವು ಕಡೆಗಳಲ್ಲಿ ರಾತ್ರಿ ಕರ್ಫ್ಯೂ ಹೇರಲಾಗಿದೆ. ಇದರಿಂದ ಸಿನಿಮಾ ಕಲೆಕ್ಷನ್​ ಕುಗ್ಗಿದೆ.

ಇದನ್ನೂ ಓದಿ: Samantha: ಗರ್ಲ್ಸ್​ ಗ್ಯಾಂಗ್​ ಜತೆ ಸಮಂತಾ ಗೋವಾ ಟ್ರಿಪ್​; ವೈರಲ್​ ಆಯ್ತು ಫೋಟೋ

ಏರಲೇ ಇಲ್ಲ ರಣವೀರ್​ ಸಿಂಗ್​ ನಟನೆಯ ‘83’ ಸಿನಿಮಾ ಕಲೆಕ್ಷನ್​; ಇದಕ್ಕೆ ಕಾರಣಗಳೇನು?