ಹಲವು ಸಿನಿಮಾ ಕೈಬಿಟ್ಟ ಬಳಿಕ ಹೊಸ ಪ್ರಾಜೆಕ್ಟ್ ಒಪ್ಪಿಕೊಂಡ ರಣವೀರ್​ ಸಿಂಗ್​

|

Updated on: Jul 27, 2024 | 6:29 PM

ಹಲವು ತಂಡಗಳ ಜೊತೆ ಮಾತುಕಥೆ ಮಾಡಿದರೂ ರಣವೀರ್​ ಸಿಂಗ್​ ಅವರಿಗೆ ಸೂಕ್ತವಾದ ಸಿನಿಮಾ ಸಿಕ್ಕಿರಲಿಲ್ಲ. ದೊಡ್ಡ ದೊಡ್ಡ ನಿರ್ದೇಶಕರ ಜೊತೆಗಿನ ಸಿನಿಮಾಗಳು ಕೈತಪ್ಪಿದ್ದವು. ಆದರೆ ಈಗ ಅವರು ‘ಉರಿ’ ಖ್ಯಾತಿಯ ನಿರ್ದೇಶಕ ಆದಿತ್ಯ ಧಾರ್​ ಜೊತೆ ಸಿನಿಮಾ ಮಾಡುವುದಾಗಿ ಘೋಷಿಸಿದ್ದಾರೆ. ರಣವೀರ್​ ಸಿಂಗ್​ ನಟಿಸಲಿರುವ ಈ ಚಿತ್ರದಲ್ಲಿ ಬಹುತಾರಾಗಣ ಇರಲಿದೆ ಎಂಬುದು ವಿಶೇಷ.

ಹಲವು ಸಿನಿಮಾ ಕೈಬಿಟ್ಟ ಬಳಿಕ ಹೊಸ ಪ್ರಾಜೆಕ್ಟ್ ಒಪ್ಪಿಕೊಂಡ ರಣವೀರ್​ ಸಿಂಗ್​
ರಣವೀರ್​ ಸಿಂಗ್​
Follow us on

ನಟ ರಣವೀರ್​ ಸಿಂಗ್ ಅವರು ವೃತ್ತಿ ಜೀವನದಲ್ಲಿ ಸಾಕಷ್ಟು ಏಳು-ಬೀಳುಗಳನ್ನು ಕಾಣುತ್ತಿದ್ದಾರೆ. ಅವರು ನಟಿಸಿದ ಕೆಲವು ಸಿನಿಮಾಗಳು ಸೋತಿವೆ. ಕಳೆದ ವರ್ಷ ‘ರಾಕಿ ಔರ್​ ರಾಣಿ ಕಿ ಪ್ರೇಮ್​ ಕಹಾನಿ’ ಸಿನಿಮಾದಿಂದ ಯಶಸ್ಸು ಸಿಕ್ಕಿತ್ತು. ಆ ಬಳಿಕ ಅವರು ಸಿನಿಮಾಗಳ ಆಯ್ಕೆಯಲ್ಲಿ ತುಂಬ ಕನ್ಫ್ಯೂಸ್​ ಆಗಿದ್ದಾರೆ. ಇತ್ತೀಚೆಗೆ ಮಾತುಕಥೆಯ ಹಂತದಲ್ಲಿ ಇದ್ದ ಒಂದಷ್ಟು ಸಿನಿಮಾಗಳಿಂದ ಹೊರಬಂದರು. ಕಡೆಗೂ ಅವರೊಂದು ಸಿನಿಮಾವನ್ನು ಈಗ ಒಪ್ಪಿಕೊಂಡಿದ್ದಾರೆ. ನಿರ್ದೇಶಕ ಅದಿತ್ಯ ಧಾರ್​ ಜೊತೆ ರಣವೀರ್​ ಸಿಂಗ್​ ಕೈ ಜೋಡಿಸಿದ್ದಾರೆ.

ಸೂಪರ್​ ಹಿಟ್​ ‘ಉರಿ’ ಸಿನಿಮಾಗೆ ಆ್ಯಕ್ಷನ್​-ಕಟ್​ ಹೇಳುವ ಮೂಲಕ ನಿರ್ದೇಶಕ ಆದಿತ್ಯ ಧಾರ್​ ಅವರು ಫೇಮಸ್​ ಆದರು. ಅವರಿಗೆ ಬಾಲಿವುಡ್​ನಲ್ಲಿ ಡಿಮ್ಯಾಂಡ್​ ಇದೆ. ಈಗ ಅವರ ಹೊಸ ಸಿನಿಮಾಗೆ ರಣವೀರ್​ ಸಿಂಗ್​ ಹೀರೋ ಆಗಿದ್ದಾರೆ. ಆ ಬಗ್ಗೆ ಮಾಹಿತಿ ನೀಡಲು ರಣವೀರ್​ ಸಿಂಗ್​ ಅವರು ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಮೂಲಕ ಅಭಿಮಾನಿಗಳಿಗೆ ಗುಡ್​ ನ್ಯೂಸ್​ ನೀಡಿದ್ದಾರೆ.

ರಣವೀರ್​ ಸಿಂಗ್​ಗೆ ಕಿಸ್ ಮಾಡಿದ್ರಾ ಕರಣ್ ಜೋಹರ್? ವೈರಲ್ ಆಗಿದೆ ವಿಡಿಯೋ

ಈ ಸಿನಿಮಾದಲ್ಲಿ ರಣವೀರ್​ ಸಿಂಗ್​ ಜೊತೆ ಖ್ಯಾತ ನಟರಾದ ಸಂಜಯ್​ ದತ್​, ಆರ್​. ಮಾಧವನ್​, ಅಕ್ಷಯ್​ ಖನ್ನಾ, ಅರ್ಜುನ್​ ರಾಮ್​ಪಾಲ್​ ಮುಂತಾದವರು ಅಭಿನಯಿಸಲಿದ್ದಾರೆ. ಎಲ್ಲರ ಬ್ಲ್ಯಾಕ್​ ಆ್ಯಂಡ್ ವೈಟ್​ ಫೋಟೋಗಳನ್ನು ರಣವೀರ್​ ಸಿಂಗ್​ ಹಂಚಿಕೊಂಡಿದ್ದಾರೆ. ಅದನ್ನು ಹೊರತುಪಡಿಸಿ ಅವರು ಹೆಚ್ಚಿನ ಮಾಹಿತಿ ನೀಡಿಲ್ಲ. ರಿಲೀಸ್​ ದಿನಾಂಕವನ್ನೂ ತಿಳಿಸಿಲ್ಲ.

ಈ ಮೊದಲು ‘ಹನುಮಾನ್​’ ಚಿತ್ರದ ನಿರ್ದೇಶಕನ ಜೊತೆ ರಣವೀರ್​ ಸಿಂಗ್​ ಸಿನಿಮಾ ಮಾಡುತ್ತಾರೆ ಎನ್ನಲಾಗಿತ್ತು. ಆದರೆ ಆ ಪ್ರಾಜೆಕ್ಟ್​ ಶುರುವಾಗಲೇ ಇಲ್ಲ. ಎಸ್​. ಶಂಕರ್​ ನಿರ್ದೇಶನ ಮಾಡಲಿರುವ ‘ಅನ್ನಿಯನ್​’ ರಿಮೇಕ್​ನಲ್ಲಿ ರಣವೀರ್​ ಸಿಂಗ್ ನಟಿಸುತ್ತಾರೆ ಎಂಬ ಮಾಹಿತಿ ಕೇಳಿಬಂದಿತ್ತು. ಅದು ಕೂಡ ಜಾರಿಗೆ ಬರಲಿಲ್ಲ. ‘ಶಕ್ತಿಮಾನ್​’ ಚಿತ್ರಕ್ಕೆ ರಣವೀರ್​ ಸಿಂಗ್​ ಹೀರೋ ಆಗುತ್ತಾರೆ ಎಂಬ ಸುದ್ದಿ ಹರಡಿತ್ತು. ಆ ಪ್ರಾಜೆಕ್ಟ್​ ಕೂಡ ಅವರಿಗೆ ಸಿಗಲಿಲ್ಲ. ಇದಲ್ಲದೇ, ಕರಣ್​ ಜೋಹರ್​ ಅವರ ‘ತಕ್ತ್​’, ಸಂಜಯ್​ ಲೀಲಾ ಬನ್ಸಾಲಿ ಅವರ ‘ಬೈಜು ಬವ್ರಾ’ ಸಿನಿಮಾಗಳು ಕೂಡ ಕೈತಪ್ಪಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.