ರಣವೀರ್ ಸಿಂಗ್ ಜೊತೆ ಶ್ರೀಲೀಲಾ; ಶೀಘ್ರದಲ್ಲೇ ಸಿಗಲಿದೆ ಗುಡ್ ನ್ಯೂಸ್

ರಣವೀರ್ ಸಿಂಗ್, ಬಾಬಿ ಡಿಯೋಲ್, ಶ್ರೀಲೀಲಾ ಅವರು ಒಟ್ಟಿಗೆ ಸಿನಿಮಾ ಮಾಡಲಿದ್ದಾರೆ. ಈ ಸಿನಿಮಾದ ಫಸ್ಟ್ ಲುಕ್ ಮತ್ತು ಟೈಟಲ್ ಶೀಘ್ರದಲ್ಲೇ ಅನಾವರಣ ಆಗಲಿದೆ. ಚಿತ್ರತಂಡದಿಂದ ಗುಡ್ ನ್ಯೂಸ್ ಸಿಗಲಿದೆ. ನಟಿ ಶ್ರೀಲೀಲಾ ಅವರಿಗೆ ಬಾಲಿವುಡ್​ನಲ್ಲಿ ಈ ರೀತಿ ಬಿಗ್ ಆಫರ್​ಗಳು ಸಿಗುತ್ತಿವೆ.

ರಣವೀರ್ ಸಿಂಗ್ ಜೊತೆ ಶ್ರೀಲೀಲಾ; ಶೀಘ್ರದಲ್ಲೇ ಸಿಗಲಿದೆ ಗುಡ್ ನ್ಯೂಸ್
Ranveer Singh, Sreeleela

Updated on: Jul 25, 2025 | 9:17 PM

ಕನ್ನಡತಿ ಶ್ರೀಲೀಲಾ (Sreeleela) ಅವರು ಬಹುಭಾಷಾ ನಟಿಯಾಗಿ ಮಿಂಚುತ್ತಿದ್ದಾರೆ. ಸ್ಯಾಂಡಲ್​ವುಡ್​ನಲ್ಲಿ ಹೆಸರು ಗಳಿಸಿದ ಅವರು ಬಳಿಕ ತೆಲುಗು ಚಿತ್ರರಂಗದಲ್ಲಿ ಕೂಡ ಬೇಡಿಕೆ ಸೃಷ್ಟಿಕೊಂಡರು. ಈಗ ಬಾಲಿವುಡ್ (Bollywood) ಮಂದಿ ಕೂಡ ಅವರಿಗೆ ದೊಡ್ಡ ದೊಡ್ಡ ಆಫರ್​ಗಳನ್ನು ನೀಡುತ್ತಿದ್ದಾರೆ. ಈಗಾಗಲೇ ಶ್ರೀಲೀಲಾ ಅವರು ಕಾರ್ತಿಕ್ ಆರ್ಯನ್ ಜೊತೆ ಸಿನಿಮಾ ಮಾಡುತ್ತಿದ್ದಾರೆ. ಆ ಸಿನಿಮಾ ಸಾಕಷ್ಟು ಹೈಪ್ ಕ್ರಿಯೇಟ್ ಮಾಡಿದೆ. ಅಷ್ಟರಲ್ಲಾಗಲೇ ಮತ್ತೊಂದು ಬಿಗ್ ಆಫರ್ ಅವರಿಗೆ ಸಿಗುತ್ತಿದೆ. ರಣವೀರ್ ಸಿಂಗ್ (Ranveer Singh) ಜೊತೆ ಶ್ರೀಲೀಲಾ ಸಿನಿಮಾ ಮಾಡುತ್ತಾರೆ ಎನ್ನಲಾಗುತ್ತಿದೆ.

ಈ ಬಗ್ಗೆ ಚಿತ್ರತಂಡದ ಕಡೆಯಿಂದ ಶೀಘ್ರದಲ್ಲೇ ಅಧಿಕೃತ ಮಾಹಿತಿ ಹೊರಬೀಳಲಿದೆ. ವಿಶೇಷ ಏನೆಂದರೆ, ಈ ಸಿನಿಮಾದಲ್ಲಿ ರಣವೀರ್ ಸಿಂಗ್, ಶ್ರೀಲೀಲಾ ಮಾತ್ರವಲ್ಲದೇ ಬಾಬಿ ಡಿಯೋಲ್ ಕೂಡ ನಟಿಸಲಿದ್ದಾರೆ. ಈ ಮೂವರ ಕಾಂಬಿನೇಷನ್ ಕಾರಣದಿಂದ ಅಭಿಮಾನಿಗಳಿಗೆ ನಿರೀಕ್ಷೆ ಹೆಚ್ಚುವುದು ಸಹಜ. ಸದ್ಯದಲ್ಲೇ ಈ ಸಿನಿಮಾದ ಟೈಟಲ್ ಮತ್ತು ಫಸ್ಟ್ ಲುಕ್ ಬಿಡುಗಡೆ ಆಗಲಿದೆ.

ಶ್ರೀಲೀಲಾ ಅವರು ಭರ್ಜರಿಯಾಗಿ ಡ್ಯಾನ್ಸ್ ಮಾಡುತ್ತಾರೆ. ಗ್ಲಾಮರ್ ಮತ್ತು ನಟನೆ ಎರಡರಲ್ಲೂ ಅವರು ಅಭಿಮಾನಿಗಳನ್ನು ರಂಜಿಸುತ್ತಾರೆ. ಈಗಾಗಲೇ ‘ಪುಷ್ಪ 2’ ಸಿನಿಮಾದ ಹಾಡಿನಲ್ಲಿ ಮಸ್ತ್ ಆಗಿ ಡ್ಯಾನ್ಸ್ ಮಾಡುವ ಮೂಲಕ ಅವರು ಉತ್ತರ ಭಾರತದಲ್ಲೂ ಹವಾ ಸೃಷ್ಟಿಸಿದರು. ದಿನದಿಂದ ದಿನಕ್ಕೆ ಅವರ ಜನಪ್ರಿಯತೆ ಹೆಚ್ಚುತ್ತಿದ್ದು, ಅದಕ್ಕೆ ತಕ್ಕಂತೆ ಆಫರ್​ಗಳು ಬರುತ್ತಿವೆ.

ಇದನ್ನೂ ಓದಿ
ಡ್ಯಾನ್ಸರ್ ಎಂದ ನಿರೂಪಕಿಗೆ ಜಾಡಿಸಿದ ನಟಿ ಶ್ರೀಲೀಲಾ
ಶ್ರೀಲೀಲಾ ಬಗ್ಗೆ ತೆಲುಗು ನಿರ್ಮಾಪಕರ ಬೇಸರ, ಸಂಘಕ್ಕೆ ದೂರು ಸಾಧ್ಯತೆ
ಇಬ್ಬರು ಮಕ್ಕಳ ದತ್ತು ಪಡೆದಿದ್ದಾರೆ ಶ್ರೀಲೀಲಾ: ಈ ವಿಚಾರ ಗೊತ್ತೇ?
‘ಪುಷ್ಪ 2’ ತಂಡಕ್ಕೆ ಏಳು ಕೋಟಿ ಹಣ ಉಳಿಸಿದ ನಟಿ ಶ್ರೀಲೀಲಾ

ರಣವೀರ್ ಸಿಂಗ್, ಬಾಬಿ ಡಿಯೋಲ್, ಶ್ರೀಲೀಲಾ ನಟಿಸಲಿರುವ ಸಿನಿಮಾ ಪಕ್ಕಾ ಕಮರ್ಷಿಯಲ್ ಎಂಟರ್​ಟೇನರ್ ಆಗಿರಲಿದೆ. ಇದರಲ್ಲಿ ಆ್ಯಕ್ಷನ್, ಡ್ರಾಮಾ ಭರಪೂರವಾಗಿ ಇರಲಿದೆ ಎಂದು ಸುದ್ದಿ ಹಬ್ಬಿದೆ. ಬಹುಬೇಡಿಕೆ ಇರುವ ಮೂವರು ಸ್ಟಾರ್ ಕಲಾವಿದರು ಈ ಚಿತ್ರದಲ್ಲಿ ಇರುವುದರಿಂದ ಟೈಟಲ್ ಘೋಷಣೆಗೂ ಮುನ್ನವೇ ಸಿನಿಮಾದ ಮೇಲಿನ ಹೈಪ್ ಹೆಚ್ಚಿದೆ.

ಇದನ್ನೂ ಓದಿ: ಬಾಲಿವುಡ್​ನ ಹೊಸ ಯುವ ಜೋಡಿ, ಕಾರ್ತಿಕ್ ಜೊತೆಗೆ ಕನ್ನಡತಿ ಶ್ರೀಲೀಲಾ ಡೇಟಿಂಗ್

ರಣವೀರ್ ಸಿಂಗ್ ಅವರು ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗೆ ‘ದುರಂದರ್’ ಸಿನಿಮಾದ ಫಸ್ಟ್ ಲುಕ್ ಟೀಸರ್ ಬಿಡುಗಡೆಯಾಗಿ ಸಖತ್ ಸದ್ದು ಮಾಡಿದೆ. ‘ಡಾನ್ 3’ ಸಿನಿಮಾದಲ್ಲಿ ಕೂಡ ರಣವೀರ್ ಸಿಂಗ್ ಅವರು ಅಭಿನಯಿಸುತ್ತಿದ್ದಾರೆ. ಇದರೊಂದಿಗೆ ಶ್ರೀಲೀಲಾ ಜೊತೆಗಿನ ಹೊಸ ಸಿನಿಮಾದ ಸುದ್ದಿ ಕೇಳಿ ಫ್ಯಾನ್ಸ್ ಖುಷಿಯಾಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.