ವಿರೋಧದ ನಡುವೆಯೂ ಗೆದ್ದ ರಣವೀರ್ ಸಿಂಗ್: ‘ಧುರಂಧರ್’ ಕಲೆಕ್ಷನ್ ಸೂಪರ್

ರಣವೀರ್ ಸಿಂಗ್ ಅವರ ವೃತ್ತಿಜೀವನದ ಸೂಪರ್ ಹಿಟ್ ಸಿನಿಮಾಗಳ ಸಾಲಿಗೆ ಧುರಂಧರ್ ಸಹ ಸೇರ್ಪಡೆ ಆಗಿದೆ. 2 ದಿನದಲ್ಲಿ ಈ ಸಿನಿಮಾದ ಕಲೆಕ್ಷನ್ 60 ಕೋಟಿ ರೂಪಾಯಿ ಸಮೀಪಿಸಿದೆ. 3ನೇ ದಿನ ಕೂಡ ಉತ್ತಮ ಕಲೆಕ್ಷನ್ ಆಗಲಿದೆ. ರಣವೀರ್ ಸಿಂಗ್ ಜತೆ ಅಕ್ಷಯ್ ಖನ್ನಾ, ಆರ್. ಮಾಧವನ್, ಸಂಜಯ್ ದತ್ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.

ವಿರೋಧದ ನಡುವೆಯೂ ಗೆದ್ದ ರಣವೀರ್ ಸಿಂಗ್: ‘ಧುರಂಧರ್’ ಕಲೆಕ್ಷನ್ ಸೂಪರ್
Ranveer Singh

Updated on: Dec 07, 2025 | 7:22 AM

ನಟ ರಣವೀರ್ ಸಿಂಗ್ (Ranveer Singh) ಅವರು ತಮ್ಮ ಮಾತಿನ ಕಾರಣದಿಂದಲೇ ಅನೇಕ ಬಾರಿ ವಿವಾದ ಮಾಡಿಕೊಳ್ಳುತ್ತಾರೆ. ಇತ್ತೀಚೆಗೆ ಅವರು ‘ಕಾಂತಾರ: ಚಾಪ್ಟರ್ 1’ ಸಿನಿಮಾದಲ್ಲಿನ ರಿಷಬ್ ಶೆಟ್ಟಿಯ ಅಭಿನಯವನ್ನು ಹೊಗಳುವ ಭರದಲ್ಲಿ ದೈವಕ್ಕೆ ಅವಮಾನ ಮಾಡಿದ್ದರು. ಅದರಿಂದ ವಿವಾದ ಶುರುವಾಗಿತ್ತು. ಅದು ಕೂಡ ‘ಧುರಂಧರ್’ ಬಿಡುಗಡೆ ಹೊಸ್ತಿಲಲ್ಲೇ ಅವರು ಈ ರೀತಿ ಮಾಡಿದ್ದರಿಂದ ಈ ಸಿನಿಮಾದ ಕಲೆಕ್ಷನ್ ಮೇಲೆ ಪರಿಣಾಮ ಬೀರಬಹುದು ಎಂದೇ ಊಹಿಸಲಾಗಿತ್ತು. ಆದರೆ ಆ ರೀತಿ ಆಗಿಲ್ಲ. ‘ಧುರಂಧರ್’ (Dhurandhar) ಸಿನಿಮಾ ಅತ್ಯುತ್ತಮವಾಗಿಯೇ ಕಲೆಕ್ಷನ್ ಮಾಡುತ್ತಿದೆ. ಮೊದಲ ದಿನಕ್ಕಿಂತಲೂ ಎರಡನೇ ದಿನದ ಕಲೆಕ್ಷನ್ ಜಾಸ್ತಿ ಆಗಿದೆ.

ಬಿಡುಗಡೆಗೂ ಮುನ್ನ ‘ಧುರಂಧರ್’ ಬಗ್ಗೆ ಕೆಲವು ಅನುಮಾನಗಳು ಇದ್ದವು. ಈ ಸಿನಿಮಾಗೆ ಅಷ್ಟೇನೂ ಹೈಪ್ ಇರಲಿಲ್ಲ. ಹಾಗಾಗಿ ಕಳಪೆ ಕಲೆಕ್ಷನ್ ಆಗಬಹುದು ಎಂದು ಅನೇಕರು ಊಹಿಸಿದ್ದರು. ಆದರೆ ಬಾಕ್ಸ್ ಆಫೀಸ್​​ನಲ್ಲಿ ಈ ಸಿನಿಮಾಗೆ ಭರ್ಜರಿ ಓಪನಿಂಗ್ ಸಿಕ್ಕಿತು. ಮೊದಲ ದಿನವಾದ ಶುಕ್ರವಾರ (ಡಿಸೆಂಬರ್ 5) ‘ಧುರಂಧರ್’ ಸಿನಿಮಾ 27 ರೂಪಾಯಿ ಕಲೆಕ್ಷನ್ ಮಾಡಿತು. 2ನೇ ದಿನ ಇನ್ನಷ್ಟು ಹೆಚ್ಚಾಯಿತು.

ಎರಡನೇ ದಿನವಾರ ಶನಿವಾರ (ಡಿಸೆಂಬರ್ 6) ‘ಧುರಂಧರ್’ ಸಿನಿಮಾದ ಕಲೆಕ್ಷನ್​​ನಲ್ಲಿ ಏರಿಕೆ ಕಂಡಿದೆ. ಶನಿವಾರ ರಾತ್ರಿ 10 ಗಂಟೆ ವೇಳೆಗೆ ಈ ಸಿನಿಮಾಗೆ 31 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ ಎಂದು Sacnilk ವರದಿ ಮಾಡಿದೆ. ಅಂದರೆ, 2 ದಿನಕ್ಕೆ ಈ ಸಿನಿಮಾದ ಒಟ್ಟು ಗಳಿಕೆ 58 ಕೋಟಿ ರೂಪಾಯಿ ಆಗಿದೆ. ಇದರಿಂದ ರಣವೀರ್ ಸಿಂಗ್ ಅವರು ಗೆದ್ದು ಬೀಗಿದ್ದಾರೆ.

‘ಧುರಂಧರ್’ ಸಿನಿಮಾಗೆ ಜನರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಹಾಗಾಗಿ ಮೂರನೇ ದಿನ ಕೂಡ ಕಲೆಕ್ಷನ್ ಹೆಚ್ಚುವುದು ಖಚಿತ. ಭಾನುವಾರ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರು ಸಿನಿಮಾ ವೀಕ್ಷಿಸಲಿದ್ದಾರೆ. ಇದರಿಂದಾಗಿ ‘ಧುರಂಧರ್’ ಸಿನಿಮಾದ ಒಟ್ಟು ಕಲೆಕ್ಷನ್ 100 ಕೋಟಿ ರೂಪಾಯಿ ಸಮೀಪಿಸಲಿದೆ. ರಣವೀರ್ ಸಿಂಗ್ ಅವರ ವೃತ್ತಿ ಜೀವನದ ಸೂಪರ್ ಹಿಟ್ ಸಿನಿಮಾಗಳ ಸಾಲಿಗೆ ಧುರಂಧರ್ ಕೂಡ ಸೇರ್ಪಡೆ ಆಗಿದೆ.

ಇದನ್ನೂ ಓದಿ: ‘ಧುರಂಧರ್’ ನೋಡಿದ ಪ್ರೇಕ್ಷಕ ಹೇಳಿದ್ದೇನು? ಇಲ್ಲಿದೆ ವಿಮರ್ಶೆ

ನೈಜ ಘಟನೆಗಳನ್ನು ಆಧರಿಸಿ ‘ಧುರಂಧರ್’ ಸಿನಿಮಾ ಸಿದ್ಧವಾಗಿದೆ. ‘ಉರಿ’ ಸಿನಿಮಾ ಖ್ಯಾತಿ ಆದಿತ್ಯ ಧಾರ್ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ದೇಶಭಕ್ತಿ ಕಹಾನಿಯನ್ನು ಈ ಸಿನಿಮಾ ಹೊಂದಿದೆ. ರಣವೀರ್ ಸಿಂಗ್ ಜೊತೆ ಅಕ್ಷಯ್ ಖನ್ನಾ, ಆರ್. ಮಾಧವನ್, ಸಂಜಯ್ ದತ್, ಅರ್ಜುನ್ ರಾಮ್​ಪಾಲ್, ಸಾರಾ ಅರ್ಜುನ್ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.