ರಣವೀರ್ ಸಿಂಗ್ ಅವರು ‘ಡಾನ್ 3’ ಸಿನಿಮಾ ಕೆಲಸಗಳಲ್ಲಿ ನಟಿಸುತ್ತಿದ್ದಾರೆ ಎಂದು ಈ ಮೊದಲೇ ಘೋಷಣೆ ಆಗಿತ್ತು. ಇದಕ್ಕೆ ಸಾಕಷ್ಟು ವಿರೋಧಗಳು ಕೂಡ ಎದುರಾಗಿದ್ದು ಗೊತ್ತೇ ಇದೆ. ಈ ಸಿನಿಮಾ 2025ರಲ್ಲಿ ರಿಲೀಸ್ ಆಗೋ ನಿರೀಕ್ಷೆ ಇತ್ತು. ಆದರೆ, ಅದು ಸುಳ್ಳಾಗಿದೆ. ಏಕೆಂದರೆ ಈ ಸಿನಿಮಾದ ಕೆಲಸ ಆರಂಭ ಆಗೋಕೆ ಇನ್ನೂ ಏಳೆಂಟು ತಿಂಗಳಂತೂ ಬೇಕು ಎನ್ನಲಾಗಿದೆ. ಈ ವಿಚಾರ ಕೇಳಿ ಫ್ಯಾನ್ಸ್ ಬೇಸರ ಮಾಡಿಕೊಂಡಿದ್ದಾರಂತೆ.
ಎಲ್ಲವೂ ಲೆಕ್ಕಾಚಾರದ ಪ್ರಕಾರ ನಡೆದಿದ್ದರೆ ‘ಡಾನ್ 3’ ಸಿನಿಮಾ 2025ರ ಜನವರಿಯಿಂದ ಆರಂಭ ಆಗಬೇಕಿತ್ತು. ಈ ಸಿನಿಮಾದಲ್ಲಿ ರಣವೀರ್ ಸಿಂಗ್ ಹಾಗೂ ಕಿಯಾರಾ ಅಡ್ವಾಣಿ ನಟಿಸುತ್ತಿದ್ದಾರೆ. ಆದರೆ, ಈ ಸಿನಿಮಾದ ಶೂಟಿಂಗ್ ಮೇ ತಿಂಗಳಿಗೆ ಮುಂದೂಲ್ಪಟ್ಟಿದೆಯಂತೆ. ಇದಕ್ಕೆ ಕಾರಣ ಹಲವಾರು ಇದೆ ಎಂದು ಹೇಳಲಾಗುತ್ತಿದೆ. ಫರ್ಹಾನ್ ಅಖ್ತರ್ ಸದ್ಯ ‘120 ಬಹದ್ದೂರ್’ ಹೆಸರಿನ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರದ ಕೆಲಸ ಪೂರ್ಣಗೊಂಡ ಬಳಿಕ ಅವರು ‘ಡಾನ್ 3’ ಸಿನಿಮಾ ಕೆಲಸಗಳಲ್ಲಿ ಭಾಗಿ ಆಗಲಿದ್ದಾರೆ.
ಇದಕ್ಕೆ ರಣವೀರ್ ಸಿಂಗ್ ಕೂಡ ಕಾರಣ ಎನ್ನಲಾಗುತ್ತಿದೆ. ರಣವೀರ್ ಸಿಂಗ್ ಅವರು ಸದ್ಯ ಮಗು ಜನಿಸಿದ ಖುಷಿಯಲ್ಲಿ ಇದ್ದಾರೆ. ದೀಪಿಕಾ ಇತ್ತೀಚೆಗೆ ಮುಗುವಿಗೆ ಜನ್ಮ ನೀಡಿದ್ದಾರೆ. ಈ ಕಾರಣಕ್ಕೆ ಅವರು ಒಂದು ದೀರ್ಘ ಬ್ರೇಕ್ ಪಡೆದಿದ್ದಾರೆ. ಈ ಕಾರಣದಿಂದ ಉಳಿದ ಸಿನಿಮಾಗಳ ಕೆಲಸಗಳು ವಿಳಂಬ ಆಗಿವೆ. ಇದು ಕೂಡ ಅವರ ಮುಂದಿನ ಸಿನಿಮಾ ಮೇಲೆ ನೇರ ಎಫ್ಟೆಕ್ಟ್ ಕೊಟ್ಟಿದೆ.
ಇದನ್ನೂ ಓದಿ:Ranveer Singh: ಮಿತಿ ಮೀರಿತು ‘ಡಾನ್ 3’ ಸಿನಿಮಾ ಬಜೆಟ್; ಇಲ್ಲಿದೆ ವಿವರ
‘ಡಾನ್ 3’ ಸಿನಿಮಾ ಘೋಷಣೆ ಆಗಿ ಸಾಕಷ್ಟು ಸಮಯ ಕಳೆದಿದೆ. ಈ ಚಿತ್ರದ ಪ್ರೀ-ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಈ ಸಿನಿಮಾಗಾಗಿ ಫ್ಯಾನ್ಸ್ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈಗಾಗಲೇ ‘ಡಾನ್’ ಹಾಗೂ ‘ಡಾನ್ 2’ ಸಿನಿಮಾಗಳಲ್ಲಿ ಶಾರುಖ್ ಖಾನ್ ನಟಿಸಿದ್ದಾರೆ. ಅದನ್ನು ಮೀರಿಸುವ ರೀತಿಯಲ್ಲಿ ಅವರು ಸಿನಿಮಾ ಮಾಡಬೇಕಿದೆ.
ದೀಪಿಕಾಗೆ ಹೆಣ್ಣು ಮಗು ಹುಟ್ಟಿದೆ. ಸೆಪ್ಟೆಂಬರ್ 8ರಂದು ಈ ಸಿಹಿ ಸುದ್ದಿಯನ್ನು ಅವರು ಹಂಚಿಕೊಂಡಿದ್ದಾರೆ. ಅವರು ತಾವು ಒಪ್ಪಿಕೊಂಡ ಇಸನಿಮಾ ಕೆಲಸಗಳನ್ನು ಮಾಡಿದ್ದಾರೆ. ಮುಂದಿನ ವರ್ಷ ಮಾರ್ಚ್ವರೆಗೆ ಬ್ರೇಕ್ ಪಡೆಯಲಿರುವ ಅವರು ನಂತರ ‘ಕಲ್ಕಿ 2898 ಎಡಿ’ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಳ್ಳಲಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:56 pm, Fri, 20 September 24