‘ಅಂಥ ಗಂಡಸರನ್ನು ನಂಬೋಕೆ ಭಯ ಆಗತ್ತೆ’: ರಶ್ಮಿಕಾ ಮಂದಣ್ಣ ಶಾಕಿಂಗ್ ಹೇಳಿಕೆ
ಕನ್ನಡ ಚಿತ್ರರಂಗದಿಂದ ಸಿನಿ ಜರ್ನಿ ಶುರು ಮಾಡಿದ ನಟಿ ರಶ್ಮಿಕಾ ಮಂದಣ್ಣ ಅವರು ಈಗ ಬಾಲಿವುಡ್ನಲ್ಲಿ ಮಿಂಚುತ್ತಿದ್ದಾರೆ. ಸ್ಟಾರ್ ನಟರಿಗೆ ಜೋಡಿಯಾಗಿ ಅವರು ನಟಿಸುತ್ತಿದ್ದಾರೆ. ಗಂಡಸರ ಬಗ್ಗೆ ಅವರು ಹಂಚಿಕೊಂಡ ಅಭಿಪ್ರಾಯ ಈಗ ಎಲ್ಲರ ಗಮನ ಸೆಳೆಯುತ್ತಿದೆ. ಅಭಿಮಾನಿಯೊಬ್ಬರ ಪೋಸ್ಟ್ಗೆ ರಶ್ಮಿಕಾ ಅವರು ತಮ್ಮದೇ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ನಟಿ ರಶ್ಮಿಕಾ ಮಂದಣ್ಣ ಅವರಿಗೆ ‘ಅನಿಮಲ್’ (Animal) ಸಿನಿಮಾದಿಂದ ಸಿಕ್ಕ ಖ್ಯಾತಿ ಸಣ್ಣದೇನಲ್ಲ. ಬಾಕ್ಸ್ ಆಫೀಸ್ನಲ್ಲಿ ಈ ಸಿನಿಮಾ ಧೂಳೆಬ್ಬಿಸಿತು. ಬಾಲಿವುಡ್ನಲ್ಲಿ ರಶ್ಮಿಕಾ ಮಂದಣ್ಣ (Rashmika Mandanna) ಭದ್ರವಾಗಿ ನೆಲೆ ಕಂಡುಕೊಳ್ಳಲು ಈ ಸಿನಿಮಾ ಸಹಕಾರಿ ಆಯಿತು. ಆದರೆ ಒಂದು ವರ್ಗದ ಜನರು ‘ಅನಿಮಲ್’ ಸಿನಿಮಾವನ್ನು ಕಟುವಾಗಿ ಟೀಕಿಸಿದ್ದಾರೆ. ರಣಬೀರ್ ಕಪೂರ್ (Ranbir Kapoor) ಮಾಡಿದ ರಣ್ವಿಜಯ್ ಸಿಂಗ್ ಎಂಬ ಪಾತ್ರಕ್ಕೆ ತುಂಬ ಟೀಕೆ ವ್ಯಕ್ತವಾಯಿತು. ಅದೇ ವಿಚಾರವಾಗಿ ಸೋಶಿಯಲ್ ಮೀಡಿಯಾದಲ್ಲಿ ಮತ್ತೆ ಚರ್ಚೆ ಆರಂಭ ಆಗಿದೆ. ಅದಕ್ಕೆ ರಶ್ಮಿಕಾ ಮಂದಣ್ಣ ಕೂಡ ತಮ್ಮ ಅನಿಸಿಕೆ ತಿಳಿಸಿದ್ದಾರೆ.
‘ಅನಿಮಲ್’ ಸಿನಿಮಾದ ಕಥೆಯಲ್ಲಿ ರಣ್ವಿಜಯ್ ಸಿಂಗ್ ಹಾಗೂ ಗೀತಾಂಜಲಿ ಪ್ರೀತಿಸಿ ಮದುವೆ ಆಗಿರುತ್ತಾರೆ. ಎಂದಿಗೂ ನಿನಗೆ ಮೋಸ ಮಾಡಲ್ಲ ಅಂತ ರಣ್ವಿಜಯ್ ಸಿಂಗ್ ಪ್ರಮಾಣ ಮಾಡಿರುತ್ತಾನೆ. ಹಾಗಿದ್ದರೂ ಕೂಡ ಆತ ಪರಸ್ತ್ರೀ ಸಹವಾಸ ಮಾಡಿ, ಗೀತಾಂಜಲಿಗೆ ಮೋಸ ಮಾಡುತ್ತಾನೆ. ಆ ವಿಡಿಯೋ ತುಣುಕನ್ನು ಅಭಿಮಾನಿಯೊಬ್ಬರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
Remember nothing is scarier than trusting a man..#RanbirKapoor #RashmikaMandanna #TriptiDimri#Animal pic.twitter.com/DEAw6Dxhlf
— Falena🦋 (@_ivsfa8) June 13, 2024
‘ಒಬ್ಬ ಗಂಡಸನ್ನು ನಂಬುವುದಕ್ಕಿಂತ ಭಯಾನಕವಾದ ವಿಷಯ ಬೇರೇನೂ ಇಲ್ಲ’ ಎಂದು ಈ ವಿಡಿಯೋಗೆ ಅಭಿಮಾನಿಯೊಬ್ಬರು ಕ್ಯಾಪ್ಷನ್ ನೀಡಿದ್ದಾರೆ. ಅದು ರಶ್ಮಿಕಾ ಮಂದಣ್ಣ ಅವರ ಗಮನಕ್ಕೆ ಬಂದಿದೆ. ಆ ಪೋಸ್ಟ್ಗೆ ಪ್ರತಿಕ್ರಿಯಿಸಿರುವ ರಶ್ಮಿಕಾ ಅವರು, ‘ತಿದ್ದುಪಡಿ: ಮೂರ್ಖನಾದ ಗಂಡಸನ್ನು ನಂಬುವುದು ಭಯಾನಕ. ತುಂಬ ಒಳ್ಳೆಯ ಗಂಡಸರು ಇದ್ದಾರೆ. ಅಂಥವರನ್ನು ನಂಬುವುದು ವಿಶೇಷ’ ಎಂದು ಕಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: ರಶ್ಮಿಕಾ ಮಂದಣ್ಣಗೆ ಮತ್ತೆ ಡೀಪ್ಫೇಕ್ ಕಾಟ; ಅರೆಸ್ಟ್ ಆದರೂ ಬುದ್ಧಿ ಕಲಿಯದ ಕಿಡಿಗೇಡಿಗಳು
ಸಂದೀಪ್ ರೆಡ್ಡಿ ವಂಗಾ ನಿರ್ದೇಶನದಲ್ಲಿ ಮೂಡಿಬಂದ ‘ಅನಿಮಲ್’ ಸಿನಿಮಾದಲ್ಲಿ ಅನೇಕ ದೃಶ್ಯಗಳು ಸ್ತ್ರೀ ವಿರೋಧಿ ಆಗಿವೆ ಎಂದು ಹಲವರು ತಕರಾರು ತೆಗೆದಿದ್ದರು. ಹಲವು ವಿಮರ್ಶಕರು ಕೂಡ ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಸಿನಿಮಾದಲ್ಲಿ ಕ್ರೌರ್ಯ ಅತಿಯಾಗಿದೆ ಎಂಬ ಟೀಕೆ ಕೂಡ ಕೇಳಿಬಂತು. ಹಾಗಿದ್ದರೂ ಕೂಡ ಸಿನಿಮಾ ಯಶಸ್ಸು ಕಂಡಿತು. ಬಾಬಿ ಡಿಯೋಲ್ ಅವರಿಗೆ ಈ ಸಿನಿಮಾದಿಂದ ಭರ್ಜರಿ ಗೆಲುವು ಸಿಕ್ಕಿತು. ತೃಪ್ತಿ ದಿಮ್ರಿ ಕೂಡ ಜನಪ್ರಿಯತೆ ಹೆಚ್ಚಿಸಿಕೊಂಡರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.