AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಶ್ಮಿಕಾ ಮಂದಣ್ಣಗೆ ಮತ್ತೆ ಡೀಪ್​ಫೇಕ್​ ಕಾಟ; ಅರೆಸ್ಟ್​ ಆದರೂ ಬುದ್ಧಿ ಕಲಿಯದ ಕಿಡಿಗೇಡಿಗಳು

ಕೆಲವೇ ತಿಂಗಳ ಹಿಂದೆ ರಶ್ಮಿಕಾ ಮಂದಣ್ಣ ಅವರು ಡೀಪ್​ಫೇಕ್​ನಿಂದ ತೊಂದರೆ ಅನುಭವಿಸಿದ್ದರು. ಈಗ ಮತ್ತೆ ಅವರಿಗೆ ಡೀಪ್​ಫೇಕ್​ ಕಾಟ ಆರಂಭ ಆಗಿದೆ. ಬಿಕಿನಿ ಧರಿಸಿ ಜಲಪಾತದಲ್ಲಿ ಹಾಟ್​ ಆಗಿ ಕಾಣಿಸಿಕೊಂಡ ರೀತಿಯಲ್ಲಿ ರಶ್ಮಿಕಾ ಮಂದಣ್ಣ ಅವರ ಡೀಪ್​ಫೇಕ್​ ವಿಡಿಯೋ ಹರಿಬಿಡಲಾಗಿದೆ. ರಶ್ಮಿಕಾ ಮಾತ್ರವಲ್ಲದೇ ಅನೇಕ ನಟಿಯರಿಗೆ ಡೀಪ್​ಫೇಕ್​ನಿಂದ ತೊಂದರೆ ಆಗಿದೆ.

ರಶ್ಮಿಕಾ ಮಂದಣ್ಣಗೆ ಮತ್ತೆ ಡೀಪ್​ಫೇಕ್​ ಕಾಟ; ಅರೆಸ್ಟ್​ ಆದರೂ ಬುದ್ಧಿ ಕಲಿಯದ ಕಿಡಿಗೇಡಿಗಳು
ಡೀಪ್​ಫೇಕ್​, ರಶ್ಮಿಕಾ ಮಂದಣ್ಣ
ಮದನ್​ ಕುಮಾರ್​
|

Updated on: May 28, 2024 | 10:43 PM

Share

ಒಂದೆಡೆ ರಶ್ಮಿಕಾ ಮಂದಣ್ಣ (Rashmika Mandanna) ಅವರು ಯಶಸ್ಸಿನ ಉತ್ತುಂಗಕ್ಕೆ ಏರುತ್ತಿದ್ದಾರೆ. ಇನ್ನೊಂದೆಡೆ ಅವರನ್ನು ತುಳಿಯುವ ಪ್ರಯತ್ನ ನಡೆಯುತ್ತಿದೆ. ಒಂದಷ್ಟು ತಿಂಗಳ ಹಿಂದೆ ರಶ್ಮಿಕಾ ಮಂದಣ್ಣ ಅವರ ಡೀಪ್​ಫೇಕ್ (Deepfake)​ ವಿಡಿಯೋ ಮಾಡಲಾಗಿತ್ತು. ಆ ಮೂಲಕ ಅವರ ಹೆಸರಿಗೆ ಮಸಿ ಬಳಿಯುವ ಯತ್ನ ನಡೆದಿತ್ತು. ಈಗ ಮತ್ತೆ ಅವರ ಡೀಪ್​ಫೇಕ್​ ವಿಡಿಯೋ ವೈರಲ್​ ಆಗಿದೆ. ರಶ್ಮಿಕಾ ಮಂದಣ್ಣ ಅವರು ಕೆಂಪು ಬಣ್ಣದ ಬಿಕಿನಿ ಧರಿಸಿ ಜಲಪಾತದ ಎದುರು ಹಾಟ್​ ಆಗಿ ಕಾಣಿಸಿಕೊಂಡ ರೀತಿಯಲ್ಲಿ ಡೀಪ್​ಫೇಕ್ (Rashmika Mandanna Deepfake Video)​​ ಮಾಡಲಾಗಿದೆ. ಇದನ್ನು ನೋಡಿ ಅವರ ಫ್ಯಾನ್ಸ್​ ಗರಂ ಆಗಿದ್ದಾರೆ.

ಸೋಶಿಯಲ್​ ಮೀಡಿಯಾ ಜಮಾನಾ ಇದು. ಕ್ಷಣಾರ್ಧದಲ್ಲಿ ಎಲ್ಲವೂ ವೈರಲ್​ ಆಗುತ್ತವೆ. ಗಾಳಿಸುದ್ದಿಗಳು ಬಹಳ ಬೇಗ ಹರಡುತ್ತವೆ. ಫೇಕ್​ ನ್ಯೂಸ್​ಗಳು, ನಕಲಿ ವಿಡಿಯೋ ಮತ್ತು ಫೋಟೋಗಳು ವೈರಲ್​ ಆಗುತ್ತವೆ. ಅವುಗಳ ಸತ್ಯಾಸತ್ಯತೆ ತಿಳಿಯುವುದಕ್ಕೂ ಮುನ್ನವೇ ಜನರು ಒಂದು ನಿರ್ಧಾರಕ್ಕೆ ಬಂದಿರುತ್ತಾರೆ. ಕಮೆಂಟ್​ ಮೂಲಕ ಟ್ರೋಲ್ ಮಾಡಲು ಆರಂಭಿಸುತ್ತಾರೆ. ಇದರಿಂದ ನಟಿಯರಿಗೆ ತೊಂದರೆ ಆಗುತ್ತಿದೆ.

ಇದನ್ನೂ ಓದಿ: ಡೀಪ್​ಫೇಕ್ ವಿಡಿಯೋ ಬಗ್ಗೆ ರಶ್ಮಿಕಾ ಮಂದಣ್ಣ ಧ್ವನಿ ಎತ್ತಿದ್ದೇಕೆ? ನಟಿಯೇ ಕೊಟ್ಟರು ಉತ್ತರ

ಬಿಕಿನಿ ಧರಿಸಿದ ರೂಪದರ್ಶಿಯೊಬ್ಬರು ಜಲಪಾತದ ಎದುರು ನಿಂತು ಹಾಟ್​ ಆಗಿ ವಿಡಿಯೋ ಮಾಡಿದ್ದಾರೆ. ಆ ವಿಡಿಯೋಗೆ ರಶ್ಮಿಕಾ ಮಂದಣ್ಣ ಅವರ ಮುಖವನ್ನು ಮಾರ್ಫ್​ ಮಾಡಿ ಹರಿಬಿಡಲಾಗಿದೆ. ಇದು ಡೀಪ್​ಫೇಕ್​ ಹೌದೋ ಅಲ್ಲವೋ ಎಂಬುದು ಪರಿಶೀಲಿಸುವುದಕ್ಕೂ ಮುನ್ನವೇ ಈ ವಿಡಿಯೋ ವೈರಲ್​ ಆಗಿದೆ. ರಶ್ಮಿಕಾ ಮಂದಣ್ಣ ಅವರ ತೇಜೋವಧೆ ಮಾಡುವ ಉದ್ದೇಶದಿಂದ ಇಂಥ ವಿಡಿಯೋಗಳನ್ನು ಕಿಡಿಗೇಡಿಗಳು ಮಾಡುತ್ತಿದ್ದಾರೆ.

ಈ ಮೊದಲು ಡೀಪ್​ಫೇಕ್​ ಸಮಸ್ಯೆ ಎದುರಾದಾಗ ರಶ್ಮಿಕಾ ಮಂದಣ್ಣ ಅವರು ಆತಂಕ ವ್ಯಕ್ತಪಡಿಸಿದ್ದರು. ಅಲ್ಲದೇ ಪ್ರಕರಣ ಕೂಡ ದಾಖಲಾಗಿತ್ತು. ಇಂಥ ಕೃತ್ಯ ಎಸಗಿದ ಕಿಡಿಗೇಡಿಯನ್ನು ಪೊಲೀಸರು ಅರೆಸ್ಟ್​ ಮಾಡಿದ್ದರು. ಆ ಮೂಲಕ ಎಚ್ಚರಿಕೆ ಸಂದೇಶ ನೀಡಲಾಗಿತ್ತು. ಹಾಗಿದ್ದರೂ ಕೂಡ ಕಿಡಿಗೇಡಿಗಳು ಡೀಪ್​ಫೇಕ್​ ಮಾಡುವುದನ್ನು ನಿಲ್ಲಿಸಿಲ್ಲ. ಈಗ ಮತ್ತೆ ಈ ಕೃತ್ಯ ಮಾಡಿದರು ಯಾರು ಎಂಬುದನ್ನು ಪತ್ತೆಹಚ್ಚಬೇಕಿದೆ.

ಒರಿಜಿನಲ್​ ವಿಡಿಯೋ:

ಸಿನಿಮಾ ವಿಚಾರಕ್ಕೆ ಬರುವುದಾದರೆ, ರಶ್ಮಿಕಾ ಮಂದಣ್ಣ ಅವರಿಗೆ ಈಗ ಕೈ ತುಂಬ ಆಫರ್​ಗಳಿವೆ. ‘ಅನಿಮಲ್​’ ಸಿನಿಮಾ ಸೂಪರ್​ ಹಿಟ್​ ಆದ ನಂತರ ಅವರ ಡಿಮ್ಯಾಂಡ್​ ಹೆಚ್ಚಾಗಿದೆ. ‘ಪುಷ್ಪ 2’ ಸಿನಿಮಾ ಆಗಸ್ಟ್ 15ರಂದು ತೆರೆಕಾಣಲಿದೆ. ಆ ಚಿತ್ರದಲ್ಲಿ ಅವರು ಅಲ್ಲು ಅರ್ಜುನ್​ ಜೊತೆ ನಟಿಸಿದ್ದಾರೆ. ‘ಸಿಕಂದರ್​’ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಅವರು ಸಲ್ಮಾನ್​ ಖಾನ್​ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್