Aishwarya Rai: ಹಿಂದಿ ಚಿತ್ರರಂಗದಲ್ಲಿ 20 ವರ್ಷ ಪೂರೈಸಿದ ಐಶ್ವರ್ಯಾ ರೈ; ಸುಂದರ ಪತ್ರದ ಮೂಲಕ ಶುಭ ಕೋರಿದ ರೇಖಾ

Aishwarya Rai Bachchan: ಬಾಲಿವುಡ್​ನ ಸೂಪರ್ ಹಿಟ್ ನಟಿ ಐಶ್ವರ್ಯಾ ರೈ ಬಚ್ಚನ್, ಚಿತ್ರರಂಗದಲ್ಲಿ 20 ವರ್ಷಗಳನ್ನು ಪೂರೈಸಿದ್ದಾರೆ. ಈ ಸಂದರ್ಭದಲ್ಲಿ ಹಿರಿಯ ನಟಿ ರೇಖಾ ಬರೆದಿರುವ ಪತ್ರ ಎಲ್ಲರ ಗಮನ ಸೆಳೆದಿದೆ.

Aishwarya Rai: ಹಿಂದಿ ಚಿತ್ರರಂಗದಲ್ಲಿ 20 ವರ್ಷ ಪೂರೈಸಿದ ಐಶ್ವರ್ಯಾ ರೈ; ಸುಂದರ ಪತ್ರದ ಮೂಲಕ ಶುಭ ಕೋರಿದ ರೇಖಾ
ರೇಖಾ, ಐಶ್ವರ್ಯಾ ರೈ (ಸಂಗ್ರಹ ಚಿತ್ರ)
Follow us
TV9 Web
| Updated By: shivaprasad.hs

Updated on:Sep 28, 2021 | 1:39 PM

ಬಾಲಿವುಡ್​ನ ಖ್ಯಾತ ನಟಿಯರಾದ ಐಶ್ವರ್ಯ ರೈ ಬಚ್ಚನ್ ಮತ್ತು ರೇಖಾ ಆತ್ಮೀಯ ಬಾಂಧವ್ಯವನ್ನು ಹೊಂದಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿಲ್ಲ. ಇಬ್ಬರು ನಟಿಯರು ಪರಸ್ಪರ ಗೌರವ ಸಂಬಂಧವನ್ನು ಹೊಂದಿರುವುದಲ್ಲದೇ, ಐಶ್ವರ್ಯ ಅವರು ರೇಖಾರನ್ನು ‘ರೇಖಾ ಮಾ’ ಎಂದು ಸಂಬೋಧಿಸುತ್ತಾರೆ. ಇತ್ತೀಚೆಗಷ್ಟೇ ಐಶ್ವರ್ಯಾ ಹಿಂದಿ ಚಿತ್ರರಂಗದಲ್ಲಿ 20 ವರ್ಷಗಳನ್ನು ಪೂರೈಸಿದರು. ಈ ಸಂದರ್ಭದಲ್ಲಿ ರೇಖಾ ಸುಂದರವಾದ ಪತ್ರವನ್ನು ಬರೆದಿದ್ದು, ಅದರಲ್ಲಿ ಚಿತ್ರರಂಗದಲ್ಲಿ ಪಡೆದ ಘನತೆ ಮತ್ತು ಮಾಡಿದ ಸಾಧನೆಗಾಗಿ ಐಶ್ವರ್ಯರನ್ನು ಅಭಿನಂದಿಸಿದ್ದಾರೆ. ಜೊತೆಗೆ ಐಶ್ವರ್ಯಾರ ಯಾವ ಪಾತ್ರ ಇಷ್ಟ ಎಂಬುದರ ಕುರಿತು ಕುತೂಹಲಕರ ಸಂಗತಿಯನ್ನು ಹಂಚಿಕೊಂಡಿದ್ದಾರೆ.

ರೇಖಾರಿಗೆ ಐಶ್ವರ್ಯಾರ ‘ಆರಾಧ್ಯಾಳ ತಾಯಿಯ ಪಾತ್ರ’ ಬಹಳ ಇಷ್ಟವಂತೆ.  ರೇಖಾ ಬರೆದ ಪತ್ರ ‘ಫೆಮಿನಾ’ದಲ್ಲಿ ಪ್ರಕಟವಾಗಿದ್ದು, ಅದರಲ್ಲಿ ಅವರು ತಮ್ಮ ಮನದಾಳದ ಭಾವನೆಗಳನ್ನು ಹಂಚಿಕೊಂಡಿದ್ದಾರೆ. ‘ಪ್ರೀತಿಯ ಆಶ್’  ಎಂದು ಅವರು ಪತ್ರವನ್ನು ಆರಂಭಿಸಿದ್ದಾರೆ. ಆ ಪತ್ರದ ಭಾವಾನುವಾದ ಇಲ್ಲಿದೆ.

‘ನಿಮ್ಮಂತಹ ಚೈತನ್ಯಯುತ ಮಹಿಳೆ ಹರಿಯುವ ನದಿಯಂತೆ, ಎಂದಿಗೂ ನಿಲ್ಲುವುದಿಲ್ಲ. ಅವಳು ಬಯಸಿದ ಸ್ಥಳಕ್ಕೆ ಹೋಗುತ್ತಾಳೆ; ಮತ್ತು ತನ್ನ ಗಮ್ಯಸ್ಥಾನವನ್ನು ತಲುಪುತ್ತಾಳೆ. ಜನರು ನೀವು ಹೇಳಿದ್ದನ್ನು ಮರೆತುಬಿಡಬಹುದು, ನೀವು ಮಾಡಿದ್ದನ್ನು ಸಹ ಅವರು ಮರೆತುಬಿಡಬಹುದು ಆದರೆ ನೀವು ಅವರಿಗೆ ನೀಡಿದ ಭಾವಗಳು(ಪಾತ್ರಗಳ ಮುಖಾಂತರ) ಎಂದಿಗೂ ಮರೆಯುವುದಿಲ್ಲ. ಧೈರ್ಯವಿಲ್ಲದೆಯೇ ಬೇರೆ ಯಾವುದೇ ಸದ್ಗುಣವನ್ನು ನಿರಂತರವಾಗಿ ಅಭ್ಯಾಸ ಮಾಡಲು ಸಾಧ್ಯವಿಲ್ಲದ ಕಾರಣ ಎಲ್ಲಾ ಸದ್ಗುಣಗಳಲ್ಲಿ ಧೈರ್ಯವು ಅತ್ಯಂತ ಪ್ರಮುಖವಾದುದು ಎಂಬುದಕ್ಕೆ ನೀವು (ಐಶ್ವರ್ಯಾ) ಜೀವಂತ ಉದಾಹರಣೆ! ಮಾತನಾಡುವ ಮುನ್ನವೇ ನಿಮ್ಮ ಆಳವಾದ ಶಕ್ತಿ ಮತ್ತು ಶುದ್ಧ ಮನವು ನಿಮ್ಮನ್ನು ಎಲ್ಲರಿಗೂ ಪರಿಚಯಿಸುತ್ತದೆ!’

‘ನಿಮ್ಮಲ್ಲಿರುವ ಉತ್ತಮ ದೃಷ್ಟಿಕೋನವೆಂದರೆ, ‘ಪ್ರಸ್ತುತ’ದೊಂದಿಗೆ ಕೃತಜ್ಞತೆಯಿಂದ ಇರುವುದು. ನೀವು ಇಷ್ಟಪಡುವ ಕೆಲಸಗಳನ್ನು ಮುಂದುವರಿಸಿದ್ದೀರಿ. ಜೊತೆಗೆ ಜನರು ಅದನ್ನು ಮರೆಯಲು ಸಾಧ್ಯವಾಗದಂತೆ ಅದನ್ನು ಪ್ರಸ್ತುತಪಡಿಸಿದ್ದೀರಿ. ನೀವು ಬಹಳ ದೂರ ಬಂದು, ಫೀನಿಕ್ಸ್​​ನಂತೆ ಅನೇಕ ಅಡೆತಡೆಗಳನ್ನು ಸಹಿಸಿಕೊಂಡು ಮತ್ತೆ ಮೇಲೇರಿದ್ದೀರಿ. ‘ತಂಪಾದ’ ಚಂದ್ರನಂತಿರುವ ಹುಡುಗಿಯ ಬಗ್ಗೆ ನಾನು ಎಷ್ಟು ಹೆಮ್ಮೆಪಡುತ್ತೇನೆ ಎಂದು ನಾನು ಪದಗಳಲ್ಲಿ ಬರೆಯಲು ಸಾಧ್ಯವಿಲ್ಲ.’

‘ನೀವು ನಿರ್ವಹಿಸಿರುವ ಎಲ್ಲಾ ಪಾತ್ರಗಳಲ್ಲೂ ಅತ್ಯುತ್ತಮವಾದದ್ದನ್ನೇ ನೀಡಿದ್ದೀರಿ. ಆದರೆ ‘ಆರಾಧ್ಯಾ’ಳ ತಾಯಾಗಿ ನೀವು ನಿರ್ವಹಿಸಿದ ಪಾತ್ರ ಅದ್ಭುತವಾದದ್ದು. ಎರಡು ದಶಕಗಳ ಐಶ್ವರ್ಯ ರೈ ಬಚ್ಚನ್- ವಾಹ್! ಆಶೀರ್ವಾದಗಳು ಮತ್ತು ಶುಭ ಹಾರೈಕೆಗಳು. ನಿಮ್ಮ ಹೃದಯವು ಹೊಂದಿರುವುದಕ್ಕಿಂತ ಹೆಚ್ಚು ಪ್ರೀತಿ, ಸಂತೋಷ ನಿಮಗೆ ಲಭಿಸಲಿ ಎಂದು ಹಾರೈಸುತ್ತೇನೆ’ ಎಂದು ರೇಖಾ ಬರೆದಿದ್ದಾರೆ. ಐಶ್ವರ್ಯಾರ ಬೆಳವಣಿಗೆಯನ್ನು ಸಂಪೂರ್ಣವಾಗಿ ಗಮನಿಸಿರುವ ರೇಖಾ, ಅದನ್ನೆಲ್ಲವನ್ನೂ ನೆನಪು ಮಾಡಿಕೊಂಡು, ಐಶ್ವರ್ಯಾರಿಗೆ ಹಾರೈಸುವ ಭಾವುಕ ಪತ್ರ ಎಲ್ಲರಿಂದ ಮೆಚ್ಚುಗೆ ಗಳಿಸಿದ್ದು, ಈರ್ವರು ಖ್ಯಾತ ನಟಿಯರಿಗೂ ಅಭಿಮಾನಿಗಳು ಶುಭ ಹಾರೈಸಿದ್ದಾರೆ.

ಇದನ್ನೂ ಓದಿ:

ರಣಬೀರ್​ ಕಪೂರ್​ ಹುಟ್ಟುಹಬ್ಬ: ಆಲಿಯಾ ಭಟ್​ ಜೊತೆ ಮದುವೆಗೆ ಜೋರಾಗಿದೆ ತಯಾರಿ

Prabhas: ಪ್ರಭಾಸ್ ಅಭಿಮಾನಿಗಳಿಗೆ ಮುಂದಿನ ವರ್ಷ ಭರ್ಜರಿ ಹಬ್ಬ; ಕಾರಣ ಏನು ಗೊತ್ತಾ?

(Rekha writes a heart felt note to Aishwarya Rai when she completes 20 years in industry)

Published On - 1:34 pm, Tue, 28 September 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ