ಸುಶಾಂತ್​ಗೆ ಡ್ರಗ್ಸ್ ನೀಡಿದ್ದರೆ? ಮಾಟ ಮಾಡಿಸಿದ್ದರೆ? ಉತ್ತರ ನೀಡಿದ ಮಾಜಿ ಗೆಳತಿ ರಿಯಾ

|

Updated on: Oct 07, 2023 | 8:56 PM

Rhea Chakraborty: ಸುಶಾಂತ್ ಸಿಂಗ್ ಸಾವಿನ ಬಳಿಕ ಮಾಧ್ಯಮಗಳಿಂದ, ಸಾರ್ವಜನಿಕರಿಂದ ತೀವ್ರ ಮೂದಲಿಕೆ, ಮಾನಸಿಕ ಹಿಂಸೆಗೆ ಗುರಿಯಾಗಿದ್ದ ನಟಿ ರಿಯಾ ಚಕ್ರವರ್ತಿ ಮೊದಲ ಬಾರಿಗೆ ಸುಶಾಂತ್ ಸಾವಿನ ಬಗ್ಗೆ ಮಾಧ್ಯಮಗಳ ಮುಂದೆ ಮಾತನಾಡಿದ್ದಾರೆ.

ಸುಶಾಂತ್​ಗೆ ಡ್ರಗ್ಸ್ ನೀಡಿದ್ದರೆ? ಮಾಟ ಮಾಡಿಸಿದ್ದರೆ? ಉತ್ತರ ನೀಡಿದ ಮಾಜಿ ಗೆಳತಿ ರಿಯಾ
ಸುಶಾಂತ್ ಸಿಂಗ್
Follow us on

ಸುಶಾಂತ್ ಸಿಂಗ್ (Sushant Singh) ನಿಧನ ಹೊಂದಿ ಮೂರು ವರ್ಷಗಳಾಗಿವೆ. ಸುಶಾಂತ್ ಸಿಂಗ್ ಸಾವಿನ ಬಳಿಕ ಬಾಲಿವುಡ್​ನ ಹಲವು ಹುಳುಕುಗಳು ಹೊರಬಂದವು. ನೆಪೊಟಿಸಂ, ಡ್ರಗ್ಸ್ ಪ್ರಕರಣ ಇನ್ನೂ ಹಲವು ವಿಷಯಗಳು ಹೊರಬಿದ್ದವು, ಖ್ಯಾತ ನಾಮ ನಟ-ನಟಿಯರು ಡ್ರಗ್ಸ್ ಪ್ರಕರಣದಲ್ಲಿ ವಿಚಾರಣೆ ಎದುರಿಸಬೇಕಾಯ್ತು. ಹಲವರು ಜೈಲು ಸೇರಿದರು ಸಹ. ಅದರಲ್ಲಿ ಸುಶಾಂತ್ ಸಿಂಗ್​ರ ಮಾಜಿ ಗೆಳತಿ ರಿಯಾ ಚಕ್ರವರ್ತಿ ಸಹ ಒಬ್ಬರು. ಸುಶಾಂತ್ ಪ್ರಕರಣದಲ್ಲಿ ರಿಯಾ ಚಕ್ರವರ್ತಿ ಸಾರ್ವಜನಿಕರಿಂದ, ಮಾಧ್ಯಮಗಳಿಂದ, ತನಿಖಾ ಸಂಸ್ಥೆಗಳಿಂದ ತೀವ್ರ ಮೂದಲಿಕೆ, ಮಾನಸಿಕ ಹಿಂಸೆಯನ್ನು ಅನುಭವಿಸಬೇಕಾಯ್ತು. ಇಷ್ಟು ವರ್ಷ ಎಲ್ಲಿಯೂ ಸುಶಾಂತ್ ಸಾವಿನ ಬಗ್ಗೆ ಮಾತನಾಡದಿದ್ದ ರಿಯಾ ಇದೀಗ ಮೊದಲ ಬಾರಿಗೆ ಟಿವಿ ಚಾನೆಲ್ ಒಂದಕ್ಕೆ ಸಂದರ್ಶನ ನೀಡಿದ್ದಾರೆ. ಹಲವು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.

ರಿಯಾ, ಸುಶಾಂತ್​ಗೆ ಡ್ರಗ್ಸ್ ಸರಬರಾಜು ಮಾಡಿದ್ದರೆಂದು, ಸುಶಾಂತ್ ಮೇಲೆ ಮಾಟ ಮಾಡಿಸಿದ್ದರೆಂದು, ಸುಶಾಂತ್​ಗೆ ತಪ್ಪು ಔಷಧಗಳನ್ನು ನೀಡಿದ್ದರೆಂದು, ಬೇರೆಯವರೊಟ್ಟಿಗೆ ಆತ್ಮೀಯ ಸಂಬಂಧ ಹೊಂದಿ ಸುಶಾಂತ್​ಗೆ ಮೋಸ ಮಾಡಿದರು ಎಂದು ಹೀಗೆ ಹಲವು ಆರೋಪಗಳನ್ನು ರಿಯಾ ಮೇಲೆ ಮಾಡಲಾಗಿತ್ತು. ವಿಷಕನ್ಯೆ, ಮಾಟಗಾತಿ ಎಂದೆಲ್ಲ ಹೆಡ್​ಲೈನ್​ಗಳನ್ನು ನೀಡಿ ರಿಯಾ ವಿರುದ್ಧ ಕಾರ್ಯಕ್ರಮ ಪ್ರಸಾರ ಮಾಡಲಾಗಿತ್ತು. ಬಹುತೇಕ ಆರೋಪಗಳಿಗೆ ರಿಯಾ ಇದೀಗ ಉತ್ತರ ನೀಡಿದ್ದಾರೆ.

ಸುಶಾಂತ್ ಮೇಲೆ ಮಾಟ ಮಾಡಿಸಿದ್ದರಂತೆ ಹೌದೆ, ಎಂಬ ಪ್ರಶ್ನೆಗೆ ಪ್ರಪಂಚದಲ್ಲಿ ಮಾಟ ಅಥವಾ ಬ್ಲಾಕ್ ಮ್ಯಾಜಿಕ್ ಎಂಬ ವಿಷಯ ಯಾವುದೂ ಇಲ್ಲ. ಇನ್ನು ಡ್ರಗ್ಸ್ ವಿಷಯಕ್ಕೆ ಸಂಬಂಧಿಸಿದಂತೆ ನಾನು ಮಾತನಾಡುವುದಿಲ್ಲ. ಆ ಪ್ರಕರಣ ಇನ್ನೂ ನ್ಯಾಯಾಲಯದಲ್ಲಿದೆ. ಎನ್​ಸಿಬಿ, ಸಿಬಿಐ ವಿಷಯವಾಗಿಯೂ ನಾನು ಈಗ ಏನೂ ಮಾತನಾಡುವುದಿಲ್ಲ ಎಂದಿದ್ದಾರೆ ರಿಯಾ ಚಕ್ರವರ್ತಿ.

ಇದನ್ನೂ ಓದಿ:ದಿವಂಗತ ಸುಶಾಂತ್ ಸಿಂಗ್ ಮಾಜಿ ಗೆಳತಿಯ ಗ್ಲಾಮರಸ್ ಅವತಾರ

ಸುಶಾಂತ್ ಸಿಂಗ್ ಬಗ್ಗೆ ಮಾತನಾಡಿರುವ ರಿಯಾ, ”ಸುಶಾಂತ್ ಸಿಂಗ್ ಮಾನಸಿಕ ಆರೋಗ್ಯ ಸರಿಯಿಲ್ಲ ಎಂಬ ವಿಷಯ ನನಗೆ ಮೊದಲೇ ಗೊತ್ತಿತ್ತು. ಆದರೆ ಸುಶಾಂತ್ ಆತ್ಮಹತ್ಯೆ ಮಾಡಿಕೊಳ್ಳಲು ಏನು ಕಾರಣ ಎಂಬುದು ನನಗೆ ತಿಳಿದಿಲ್ಲ. ಅವನ ಮನಸ್ಸಿನಲ್ಲಿ ಏನು ನಡೆಯುತ್ತಿತ್ತು ಎಂಬುದನ್ನು ನಾನು ಹೇಗೆ ಊಹಿಸಬಲ್ಲೆ. ಈ ದೇಶದಲ್ಲಿ ಮಾನಸಿಕ ಆರೋಗ್ಯವನ್ನು ಗಂಭೀರವಾಗಿ ಪರಿಗಣಿಸಿಲ್ಲ. ಇತ್ತೀಚೆಗೆ ಕೆಲವು ಯುವಕರು ಆ ಬಗ್ಗೆ ಗಂಭೀರವಾಗಿ ಮಾತನಾಡುತ್ತಿದ್ದಾರೆ” ಎಂದಿದ್ದಾರೆ.

”ಅವಳು ಅವನ ಜೀವನದಲ್ಲಿ ಬಂದ ಮೇಲೆ ಅವನು ಹಾಳಾದ, ಅವಳು ಅವನನ್ನು ವಶಕ್ಕೆ ತೆಗೆದುಕೊಂಡಳು” ಎಂದು ಸುಶಾಂತ್ ಕುಟುಂಬದವರು ಆರೋಪಿಸುತ್ತಾರೆ. ನಾನು ಸುಶಾಂತ್ ಜೀವನಕ್ಕೆ ಬರುವ ಮುಂಚೆಯೇ ಅವನು ಸ್ಟಾರ್. ಸಣ್ಣ ನಗರದಿಂದ ಬಂದು ಬಾಲಿವುಡ್​ನಲ್ಲಿ ಸ್ಟಾರ್ ಆಗೆ ಬೆಳೆದು ಇತಿಹಾಸ ಬರೆದವನು. ಅವನದ್ದು ಕಂಟ್ರೋಲ್ ಮಾಡಬಹುದಾಂಥಹಾ ಮೆದುಳು ಅಥವಾ ವ್ಯಕ್ತಿತ್ವ ಆಗಿರಲಿಲ್ಲ” ಎಂದಿದ್ದಾರೆ ರಿಯಾ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ