AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಟಿಕ್​ಟಾಕ್ ಬ್ಯಾನ್ ಆದಾಗ ಇದ್ದ ಒಂದು ಕೆಲಸವೂ ಹೋಯ್ತು’- ಕಷ್ಟದ ಕತೆ ತೆರೆದಿಟ್ಟ ಖ್ಯಾತ ನಟ; ಮುಂದೇನಾಯ್ತು? 

Riteish Deshmukh | Genelia Deshmukh: ಬಾಲಿವುಡ್​​ ನಟ ರಿತೇಶ್ ದೇಶಮುಖ್ ಟಿಕ್ ಟಾಕ್ ಬ್ಯಾನ್ ಆದಾಗ ನಿರುದ್ಯೋಗಿಯಾಗಿದ್ದರಂತೆ. ಇದನ್ನು ಸ್ವತಃ ಅವರೇ ಹೇಳಿಕೊಂಡಿದ್ದಾರೆ. ಏನಿದು ಸಮಾಚಾರ? ಮುಂದೆ ಓದಿ.

‘ಟಿಕ್​ಟಾಕ್ ಬ್ಯಾನ್ ಆದಾಗ ಇದ್ದ ಒಂದು ಕೆಲಸವೂ ಹೋಯ್ತು’- ಕಷ್ಟದ ಕತೆ ತೆರೆದಿಟ್ಟ ಖ್ಯಾತ ನಟ; ಮುಂದೇನಾಯ್ತು? 
ರಿತೇಶ್ ದೇಶಮುಖ್
TV9 Web
| Edited By: |

Updated on: Oct 20, 2021 | 8:10 AM

Share

ಬಾಲಿವುಡ್​​ ನಟ ರಿತೇಶ್ ದೇಶ​ಮುಖ್ ಟಿಕ್​ಟ್ಯಾಕ್ ಬ್ಯಾನ್ ಆದಾಗ ತಾತ್ಕಾಲಿಕವಾಗಿ ನಿರುದ್ಯೋಗಿಯಾಗಿದ್ದರಂತೆ. ಇದರ ಕುರಿತು ಅವರೇ ಸ್ವತಃ ಹೇಳಿಕೊಂಡಿದ್ದಾರೆ. ಲಾಕ್​ಡೌನ್ ಸಮಯದಲ್ಲಿ ಪತ್ನಿ ಜೆನಿಲಿಯಾ ದೇಶಮುಖ್ ಜೊತೆ ರಿತೇಶ್ ಟಿಕ್ಟಾಕ್ ವಿಡಿಯೋಗಳನ್ನು ಮಾಡಿ ಹರಿಬಬಿಡುತ್ತಿದ್ದರು. ಇದಕ್ಕೆ ನೆಟ್ಟಿಗರಿಂದ ಅಪಾರ ಬೆಂಬಲವೂ ಸಿಕ್ಕಿತ್ತು. ಲಾಖ್​​ಡೌನ್ ಸಮಯದಲ್ಲಿ ಎಲ್ಲರೂ ಕಷ್ಟಪಡುತ್ತಾ ಮನೆಯಲ್ಲಿರುವಾಗ, ಅವರ ಮುಖದಲ್ಲಿ ನಗು ಮೂಡಿಸುವುದು ತೃಪ್ತಿದಾಯಕ ಕೆಲಸ ಎಂದು ರಿತೇಶ್ ಹಾಗೂ ಜೆನಿಲಿಯಾ ಕಾಮಿಡಿ ವಿಡಿಯೋಗಳನ್ನು ಮಾಡಿ ಹರಿಬಿಡುತ್ತಿದ್ದರು. ಆದರೆ ಇದ್ದಕ್ಕಿದ್ದಂತೆ ಟಿಕ್​ಟಾಕ್ ಬ್ಯಾನ್ ಆದಾಗ ರಿತೇಶ್ ತಾತ್ಕಾಲಿಕವಾಗಿ ನಿರುದ್ಯೋಗಿಯಾದರಂತೆ. ಮುಂದೇನು ಎನ್ನುವುದು ಬಹುದೊಡ್ಡ ಪ್ರಶ್ನೆಯಾಗಿ ಉಳಿಯಿತಂತೆ. ನಂತರ ಏನಾಯಿತು? ಅದನ್ನೂ ರಿತೇಶ್ ಹಂಚಿಕೊಂಡಿದ್ದಾರೆ.

ಖಾಸಗಿ ಮಾಧ್ಯಮವೊಂದರೊಂದಿಗೆ ಮಾತನಾಡುತ್ತಾ ರಿತೇಶ್, ಲಾಕ್​ಡೌನ್ ಸಂದರ್ಭ ಹಾಗೂ ಟಿಕ್​ಟಾಕ್ ಮಾಡುತ್ತಿದ್ದ ಸಂದರ್ಭಗಳನ್ನು ನೆನಪಿಸಿಕೊಂಡಿದ್ದಾರೆ. ‘‘ಟಿಕ್​ಟಾಕ್ ವಿಡಿಯೋಗಳನ್ನು ಮಾಡಲು ಲಾಕ್​ಡೌನ್ ಸಂದರ್ಭದಲ್ಲಿ ಪ್ರಾರಂಭಿಸಿದೆವು. ಎಲ್ಲರೂ ಕಷ್ಟದ ಸಂದರ್ಭವನ್ನು ಎದುರಿಸುತ್ತಿರುವಾಗ, ಅವರು ನಗಲು ಸಣ್ಣದೊಂದು ಕಾರಣವಾಗಲಿ ಎಂಬ ಉದ್ದೇಶದಿಂದ, ನಮ್ಮ ಕುರಿತೇ ತಮಾಷೆ ಮಾಡಿಕೊಂಡು ವಿಡಿಯೋಗಳನ್ನು ಹರಿಬಿಡಲು ಪ್ರಾರಂಭಿಸಿದೆವು. ಇದನ್ನು ಜನರೂ ಆನಂದಿಸಲು ಆರಂಭಿಸಿದರು.’’ ಎಂದು ರಿತೇಶ್ ಹೇಳಿಕೊಂಡಿದ್ದಾರೆ.

ಆದರೆ ಅವರಿಗೆ ಕಷ್ಟ ಆರಂಭವಾಗಿದ್ದು ಇದರ ನಂತರ. ಅದನ್ನೂ ಅವರ ಮಾತುಗಳಲ್ಲೇ ಕೇಳಿ. ‘‘ಟಿಕ್​ಟಾಕ್​ನಲ್ಲಿ ನಾವು ವಿಡಿಯೋ ಮಾಡಲು ಆರಂಭಿಸಿದೆವು. ಆದರೆ ಸರ್ಕಾರ ಟಿಕ್​ಟಾಕನ್ನು ಬ್ಯಾನ್ ಮಾಡಿತು. ತಕ್ಷಣ ನಾನು ನಿರುದ್ಯೋಗಿಯಾದೆ. ಅಯ್ಯೋ ದೇವರೇ, ಮುಂದೇನು ಮಾಡುವುದು? ಇರುವ ಒಂದು ಕೆಲಸವೂ ಹೋಯಿತು.. ಎಂದು ಬೇಸರದಲ್ಲಿದ್ದೆ’’ ಎಂದು ರಿತೇಶ್ ಟಿಕ್​ಟಾಕ್ ಬ್ಯಾನ್ ಆದಾಗ ಎದುರಾದ ಫಜೀತಿ ತೆರೆದಿಟ್ಟಿದ್ದಾರೆ.

ನಂತರ ಏನಾಯಿತು ಎಂದೂ ರಿತೇಶ್ ವಿವರಿಸಿದ್ದಾರೆ. ‘‘ಟಿಕ್​ಟಾಕ್ ಬ್ಯಾನ್ ಆದಾಗ ಏನು ಮಾಡುವುದು ಎಂದು ಯೋಚಿಸುತ್ತಿರುವಾಗ ಇನ್ಸ್ಟಾಗ್ರಾಂನಲ್ಲಿ ‘ರೀಲ್ಸ್’ ಆರಂಭವಾಯಿತು. ನನಗೆ ಬಹಳ ಸಂತೋಷವಾಯಿತು. ನಡೆಯಿರಿ, ಅಲ್ಲಿ ರೀಲ್ಸ್ ಮಾಡೋಣ ಎಂದು ರೀಲ್ಸ್ ಪ್ರಾರಂಭಿಸಿದೆವು’’ ಎಂದಿದ್ದಾರೆ ರಿತೇಶ್. ಪ್ರಸ್ತುತ ರಿತೇಶ್ ಹಾಗೂ ಜೆನಿಲಿಯಾ ಇನ್ಸ್ಟಾಗ್ರಾಂ ರೀಲ್ಸ್​ ಮುಖಾಂತರ ಅಭಿಮಾನಿಗಳನ್ನು ಸೆಳೆಯುತ್ತಲೇ ಇರುತ್ತಾರೆ. ಅಂತಹ ಕೆಲವು ರೀಲ್ಸ್ ಇಲ್ಲಿವೆ.

View this post on Instagram

A post shared by Riteish Deshmukh (@riteishd)

View this post on Instagram

A post shared by Riteish Deshmukh (@riteishd)

View this post on Instagram

A post shared by Riteish Deshmukh (@riteishd)

ಪ್ರಸ್ತುತ ರಿತೇಶ್ ದೇಶಮುಖ್ ಹಾಗೂ ಜೆನಿಲಿಯಾ ಫ್ಲಿಪ್​ಕಾರ್ಟ್ ವಿಡಿಯೋ ನಡೆಸಿಕೊಡುವ ‘ಲೇಡೀಸ್ ವರ್ಸಸ್ ಜೆಂಟಲ್​ಮೆನ್’ ಶೋವನ್ನು ನಡೆಸಿಕೊಡುತ್ತಿದ್ದಾರೆ. ಕಾಮಿಡಿ ಚಿತ್ರಗಳಿಂದ ಗಮನ ಸೆಳೆದಿರುವ ರಿತೇಶ್ ಬತ್ತಳಿಕೆಯಲ್ಲಿ, ‘ಪ್ಲಾನ್ ಎ ಪ್ಲಾನ್ ಬಿ’ ಸೇರಿದಂತೆ ಕೆಲವು ಚಿತ್ರಗಳಿವೆ.

ಇದನ್ನೂ ಓದಿ:

Genelia Deshmukh: ಮತ್ತೆ ಕಂಬ್ಯಾಕ್​ ಮಾಡೋಕೆ ಜೆನಿಲಿಯಾ ರೆಡಿ; ಪತಿ ರಿತೇಶ್​​​ ಏನಂದ್ರು?

ಅಮಿತಾಭ್ ಬಚ್ಚನ್ ಇನ್ನು ನಿವೃತ್ತಿ ಹೊಂದಬೇಕು: ಸಲೀಂ ಖಾನ್ ಅಭಿಪ್ರಾಯ

Viral Video: ರಾನು ಮಂಡಲ್ ಕಂಠದಲ್ಲಿ ‘ಬಚ್ಪನ್​ ಕಾ ಪ್ಯಾರ್’ ಹಾಡು; ವಿಡಿಯೋ ಫುಲ್​ ವೈರಲ್​