ಸೈಫ್ ಅಲಿ ಖಾನ್ ಅವರು ಸದ್ಯ ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಾಕುವಿನಿಂದ ಇರಿತಕ್ಕೆ ಒಳಗಾದ ಅವರು ಸಾಕಷ್ಟು ತೊಂದರೆ ಅನುಭವಿಸಿದ್ದಾರೆ. ಕಳ್ಳ ಮಾಡಿದ ಅವಾಂತರದಿಂದ ಸೈಫ್ ಕುಟುಂಬ ಇಷ್ಟೆಲ್ಲ ಸಮಸ್ಯೆ ಎದುರಿಸಬೇಕಾಯಿತು. ಅವರಿಗೆ ಏನಾಗಿದೆ ಎಂಬುದನ್ನು ತಿಳಿದುಕೊಳ್ಳುವ ಕುತೂಹಲ ಎಲ್ಲರಿಗೂ ಇದೆ. ಅವರ ಆರೋಗ್ಯದ ಬಗ್ಗೆ ಪದೇ ಪದೇ ಅಪ್ಡೇಟ್ ಕೇಳಲಾಗುತ್ತಿದೆ. ಇದನ್ನು ಕೊಡಲು ಪಾಪರಾಜಿಗಳು ಕೂಡ ಪ್ರಯತ್ನಿಸುತ್ತಿದ್ದಾರೆ. ಇದಕ್ಕೆ ಕರೀನಾ ಕಪೂರ್ ಸಿಟ್ಟಾಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಬರೆದುಕೊಂಡಿದ್ದಾರೆ.
ಕರೀನಾ ಕಪೂರ್ ಅವರು ಸದ್ಯ ಟೆನ್ಷನ್ನಲ್ಲಿ ಇದ್ದಾರೆ. ಕುಟುಂಬಕ್ಕೆ ಈ ಪರಿಸ್ಥಿತಿ ಬಂದಿರುವುದರಿಂದ ಅವರು ಸಾಕಷ್ಟು ಆಘಾತದಲ್ಲಿ ಇದ್ದಾರೆ. ಅವರ ಕುಟುಂಬ ಕಷ್ಟದಲ್ಲಿ ಇದೆ. ಈ ಕಷ್ಟದ ಪರಿಸ್ಥಿತಿಯಲ್ಲಿ ಖಾಸಗಿತನಕ್ಕೆ ಗೌರವ ನೀಡಿ ಎಂದು ಕೋರಿದ್ದಾರೆ. ಆದರೆ, ಇದನ್ನು ಯಾರೂ ಪಾಲಿಸುತ್ತಿಲ್ಲ.
ಕರೀನಾ ಮನೆಗೆ ಆಟಿಕೆ ತರುತ್ತಿರುವುದು ವಿಡಿಯೋ ವೈರಲ್ ಆಗಿದೆ. ಈ ವಿಡಿಯೋನ ಪಾಪರಾಜಿಗಳು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ‘ತೈಮೂರ್ ಹಾಗೂ ಜೇ ಅಲಿಗೆ ಹೊಸ ಆಟಿಕೆ’ ಎಂದು ವಿಡಿಯೋಗೆ ಕ್ಯಾಪ್ಶನ್ ನೀಡಲಾಗಿತ್ತು. ಇದು ಕರೀನಾ ಗಮನಕ್ಕೆ ಬಂದಿದೆ. ‘ಇದನ್ನು ಈಗಲೇ ನಿಲ್ಲಿಸಿ. ನಿಮಗೆ ಹೃದಯ ಇದೆಯೇ? ನಮ್ಮನ್ನು ಒಂಟಿಯಾಗಿ ಇರಲು ಬಿಡಿ’ ಎಂದು ಕರೀನಾ ಸಿಟ್ಟಲ್ಲಿ ಬರೆದುಕೊಂಡಿದ್ದರು. ಇದಕ್ಕೆ ನಮಸ್ಕರಿಸುತ್ತಿರುವ ಎಮೋಜಿ ಕೂಡ ಹಾಕಿದ್ದಾರೆ. ಆ ಬಳಿಕ ಏನನ್ನಿಸಿತೋ ಏನೋ ನಂತರ ಅದನ್ನು ಡಿಲೀಟ್ ಮಾಡಿದ್ದಾರೆ.
ಕರೀನಾ ಕಪೂರ್ ಹಾಗೂ ಸೈಫ್ ಅಲಿ ಖಾನ್ ಮಕ್ಕಳಾದ ತೈಮೂರ್ ಹಾಗೂ ಜೇ ಅಲಿ ಖಾನ್ ಇತ್ತೀಚೆಗೆ ಆಸ್ಪತ್ರೆಗೆ ಬಂದು ತಂದೆಯ ಆರೋಗ್ಯ ವಿಚಾರಿಸಿದ್ದರು. ಇವರ ಜೊತೆ ಸೈಫ್ ಸಹೋದರಿ ಸೋಹಾ ಅಲಿ ಖಾನ್ ಕೂಡ ಆಗಮಿಸಿದ್ದರು. ಸೈಫ್ ತಾಯಿ ಶರ್ಮಿಳಾ ಟಾಗೋರ್ ಕೂಡ ಇತ್ತೀಚೆಗೆ ಆಗಮಿಸಿ ಮಗನ ಆರೋಗ್ಯ ವಿಚಾರಿಸಿದ್ದರು.
ಇದನ್ನೂ ಓದಿ: ಚಾಕು ಇರಿತದಿಂದ ಸೈಫ್ ಅಲಿ ಖಾನ್ ಸ್ಥಿತಿ ಗಂಭೀರ; ನಟಿ ಕರೀನಾ ಕಪೂರ್ ಬಚಾವ್ ಆಗಿದ್ದು ಹೇಗೆ?
ಮೊಹಮದ್ ಶೈಫುಲ್ಲಾ ಇಸ್ಲಾಮ್ ಶಹಜಾದ್ ಎಂಬಾತ ಸೈಫ್ ಮೇಲೆ ದಾಳಿ ಮಾಡಿದವನು. ಅವನನ್ನು ಬಂಧಿಸಿ ಕೋರ್ಟ್ ಮುಂದೆ ಹಾಜರುಪಡಿಸಲಾಗಿದ್ದು, ಐದು ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಆತ ದಾಳಿ ಮಾಡಿದ್ದನ್ನು ಒಪ್ಪಿಕೊಡಿದ್ದಾನೆ.
ಸೈಫ್ ಅಲಿ ಖಾನ್ ಅವರು ಚೇತರಿಕೆಯ ಹಂತದಲ್ಲಿ ಇದ್ದಾರೆ. ಶೀಘ್ರವೇ ಅವರು ನಟನೆಗೆ ಮರಳಲಿ ಎಂದು ಫ್ಯಾನ್ಸ್ ಬಯಸುತ್ತಿದ್ದಾರೆ. ಈಗಾಗಲೇ ಒಂದು ಆಪರೇಷನ್ ನಡೆಸಿದ್ದು, 35 ಲಕ್ಷ ರೂಪಾಯಿ ಬಿಲ್ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.