ಸೈಫ್ ಅಲಿ ಖಾನ್ ಅವರ ಮೇಲೆ ನಡೆದ ದಾಳಿ ಸಾಕಷ್ಟು ಸಂಚಲನ ಸೃಷ್ಟಿಸಿದೆ. ಅವರು ಬೇಗ ಚೇತರಿಕೆ ಕಾಣಬೇಕು ಎಂದು ದಕ್ಷಿಣದ ಹಾಗೂ ಬಾಲಿವುಡ್ನ ಸೆಲೆಬ್ರಿಟಿಗಳು ಕೋರಿಕೊಳ್ಳುತ್ತಿದ್ದಾರೆ. ಈ ಕುರಿತು ಟ್ವೀಟ್ಗಳನ್ನು ಕೂಡ ಮಾಡಲಾಗುತ್ತಿದೆ. ಸೈಫ್ ಅಲಿ ಖಾನ್ ಮನೆಗೆ ಕಳ್ಳತನ ಮಾಡಲು ಬಂದವನು ನಟನ ಮೇಲೆ ಹಲ್ಲೆ ಮಾಡಿ ಪರಾರಿ ಆಗಿದ್ದಾನೆ. ಸೈಫ್ ಅಲಿ ಖಾನ್ ಅವರು ಸಾವಿರಾರು ಕೋಟಿ ರೂಪಾಯಿ ಒಡೆಯ.
ಸೈಫ್ ಅವರು ‘ಸದ್ಗುರು ಬಿಲ್ಡರ್ಸ್’ ನಿರ್ಮಾಣದ ‘ಸದ್ಗುರು ಶರಣ್’ ಅಪಾರ್ಟ್ಮೆಂಟ್ನಲ್ಲಿ ಇದ್ದಾರೆ. ಐದು ಬೆಡ್ರೂಂ ಮನೆ ಇದಾಗಿದೆ. ನಾಲ್ಕು ಫ್ಲೋರ್ನಲ್ಲಿ ಸೈಫ್ ವಾಸಿಸುತ್ತಿದ್ದಾರೆ ಎನ್ನಲಾಗಿದೆ. ಇದರ ಬೆಲೆ 100 ಕೋಟಿ ರೂಪಾಯಿಗೂ ಅಧಿಕವಾಗಿದೆ. ಸ್ವಿಮ್ಮಿಂಗ್ ಪೂಲ್, ಥಿಯೇಟರ್ ಮೊದಲಾದ ವ್ಯವಸ್ಥೆ ಈ ಮನೆಯಲ್ಲಿ ಇದೆ. ಶಾಕಿಂಗ್ ವಿಚಾರ ಎಂದರೆ ಕಳ್ಳ ಪೈಪ್ ಮೂಲಕ ಸೈಫ್ ಮನೆ ಪ್ರವೇಶಿಸಿದ್ದಾ ಎನ್ನಲಾಗಿದೆ. ನಂತರ ಮೆಟ್ಟಿಲ ಮೂಲಕ ಇಳಿದು ಹೋಗಿದ್ದಾನೆ.
#WATCH | Over attack on Actor Saif Ali Khan,
Dixit Gedam, DCP Zone 9, Mumbai Police says, “Last night, “The accused used a fire escape staircase to enter Saif Ali Khan’s house. It appears to be a robbery attempt. We working to arrest the accused. 10 Detection teams are working… pic.twitter.com/g6oLZH9w7f— ANI (@ANI) January 16, 2025
ಸೈಫ್ ಅಲಿ ಖಾನ್ ಆಸ್ತಿ 1200 ಕೋಟಿ ರೂಪಾಯಿಗೂ ಅಧಿಕವಾಗಿದೆ. ಕರೀನಾ ಕಪೂರ್ ಆಸ್ತಿ 485 ಕೋಟಿ ರೂಪಾಯಿ. ಅಂದರೆ ಇಬ್ಬರ ಆಸ್ತಿ ಸೇರಿದರೆ 1685 ಕೋಟಿ ರೂಪಾಯಿ ಆಗಲಿದೆ. ಇಬ್ಬರೂ ಹಲವು ಉದ್ಯಮಗಳಲ್ಲಿ ತೊಡಗಿಕೊಂಡಿದ್ದು, ಸಾಕಷ್ಟು ಹಣ ಸಂಪಾದನೆ ಮಾಡುತ್ತಾರೆ.
ಸೈಫ್ ಅಲಿ ಖಾನ್ ಅವರ ಹೆಸರಲ್ಲಿ ಪಟೌಡಿ ಪ್ಯಾಲೇಸ್ ಇದೆ. ಇದನ್ನು 1935ರಲ್ಲಿ ನಿರ್ಮಿಸಲಾಯಿತು. ಸೈಫ್ ಅಲಿ ಖಾನ್ ತಂದೆ ಮನ್ಸೂರ್ ಅಲಿ ಖಾನ್ ಪಟೌಡಿ ಸಾವಿನ ಬಳಿಕ ಇದು ಸೈಫ್ ಹೆಸರಿಗೆ ಬಂತು. 10 ಎಕರೆಯಲ್ಲಿ ಇರುವ ಈ ಕಟ್ಟಡ 150 ರೂಂಗಳನ್ನು ಹೊಂದಿದೆ. ಇದರಲ್ಲಿ ಸಿನಿಮಾ ಶೂಟ್ ಕೂಡ ನಡೆಯುತ್ತದೆ. ಇದರ ಬೆಲೆ ನೂರಾರು ಕೋಟಿ ರೂಪಾಯಿ.
ಸೈಫ್ ಅಲಿ ಖಾನ್ ಅವರು ಎರಡು ನಿರ್ಮಾಣ ಸಂಸ್ಥೆ ಹೊಂದಿದ್ದಾರೆ. ‘ಇಲ್ಲುಮಿನಾಟಿ ಫಿಲ್ಮ್ಸ್’ ಹಾಗೂ ‘ಬ್ಲಾಕ್ ನೈಟ್’ ಎಂದು ಹೆಸರನ್ನು ಇಡಲಾಗಿದೆ. ಇದರ ಅಡಿಯಲ್ಲಿ ಹಲವು ಸಿನಿಮಾ ನಿರ್ಮಾಣ ಆಗುತ್ತದೆ. ಇವರು ಮಿಂತ್ರಾ ಜೊತೆ ಕೈ ಜೋಡಿಸಿ ‘ಹೌಸ್ ಆಫ್ ಪಟೌಡಿ’ ಎಂಬ ಬಟ್ಟೆ ಬ್ರ್ಯಾಂಡ್ ಆರಂಭಿಸಿದ್ದಾರೆ.
ಸೈಫ್ ಅವರು ಇಂಡಿಯನ್ ಸ್ಟ್ರೀಟ್ ಪ್ರೀಮಿಯರ್ ಲೀಗ್ನಲ್ಲಿ ‘ಟೈಗರ್ಸ್ ಆಫ್ ಕೊಲ್ಕತ್ತ’ ತಂಡದವನ್ನು ಹೊಂದಿದ್ದಾರೆ. ಸೈಫ್ ಬಳಿ ಮರ್ಸೀಡಿಸ್ ಬೆಂಜ್ ಎಸ್ ಕ್ಲಾಸ್ ಎಸ್ 350ಡಿ (1.71 ಕೋಟಿ ರೂಪಾಯಿ), ಲ್ಯಾಂಡ್ ರೋವರ್ ಡಿಫೆಂಡರ್ 110 (2.30 ಕೋಟಿ ರೂಪಾಯಿ), ಆಡಿ ಕ್ಯೂ 7 (95 ಲಕ್ಷ) ಹೀಗೆ ಹಲವು ಕಾರುಗಳು ಇವೆ.
ಇದನ್ನೂ ಓದಿ: ಸೈಫ್ ಅಲಿ ಖಾನ್ನ ನೋಡಲು ಆಸ್ಪತ್ರೆಗೆ ಓಡೋಡಿ ಬಂದ ಶಾರುಖ್; ಧೈರ್ಯ ತುಂಬಿದ ದಕ್ಷಿಣದ ನಟರು
ಸೈಫ್ ಅಲಿ ಖಾನ್ ಶ್ರೀಮಂತ ಕುಟುಂಬದವರು. ಅವರ ತಂದೆ ಮನ್ಸೂರ್ ಅಲಿ ಖಾನ್ ಕ್ರಿಕೆಟರ್. ಅವರ ತಾಯಿ ಶರ್ಮಿಳಾ ಟಾಗೋರ್ ನಟಿ. ಹೀಗಾಗಿ, ಅಮೆರಿಕದಲ್ಲಿ ಸೈಫ್ ಉನ್ನತ ಶಿಕ್ಷಣ ಪಡೆದರು. ಸದ್ಯ ಅವರು ಕರೀನಾನ ಮದುವೆ ಆಗಿ ಹಾಯಾಗಿ ಜೀವನ ನಡೆಸುತ್ತಿದ್ದಾರೆ. ಈ ದಂಪತಿಗೆ ಇಬ್ಬರು ಮಕ್ಕಳು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 1:09 pm, Thu, 16 January 25