ಸೈಫ್ ಅಲಿ ಖಾನ್​ನ ನೋಡಲು ಆಸ್ಪತ್ರೆಗೆ ಓಡೋಡಿ ಬಂದ ಶಾರುಖ್; ಧೈರ್ಯ ತುಂಬಿದ ದಕ್ಷಿಣದ ನಟರು

ಸೈಫ್ ಅಲಿ ಖಾನ್ ಅವರು ಮುಂಬೈನ ತಮ್ಮ ಮನೆಯಲ್ಲಿ ಕಳ್ಳನ ದಾಳಿಗೆ ಒಳಗಾಗಿ ಚಾಕು ಇರಿತಕ್ಕೆ ಗುರಿಯಾಗಿದ್ದಾರೆ. ಗಾಯಗೊಂಡ ಅವರನ್ನು ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಶಾರುಖ್ ಖಾನ್ ಸೇರಿದಂತೆ ಬಾಲಿವುಡ್ ಮತ್ತು ಟಾಲಿವುಡ್ ನಟರು ಸೈಫ್ ಅವರ ಬೇಗನೆ ಚೇತರಿಕೆಗೆ ಹಾರೈಸಿದ್ದಾರೆ. ಶಾರುಖ್ ಆಸ್ಪತ್ರೆಗೆ ಭೇಟಿ ನೀಡಿ ಕುಟುಂಬಕ್ಕೆ ಧೈರ್ಯ ಹೇಳಿದ್ದಾರೆ.

ಸೈಫ್ ಅಲಿ ಖಾನ್​ನ ನೋಡಲು ಆಸ್ಪತ್ರೆಗೆ ಓಡೋಡಿ ಬಂದ ಶಾರುಖ್; ಧೈರ್ಯ ತುಂಬಿದ ದಕ್ಷಿಣದ ನಟರು
ಶಾರುಖ್-ಸೈಫ್
Follow us
ರಾಜೇಶ್ ದುಗ್ಗುಮನೆ
|

Updated on: Jan 16, 2025 | 12:42 PM

ಸೈಫ್ ಅಲಿ ಖಾನ್ ಅವರು ಕಳ್ಳರಿಂದ ಚಾಕು ಇರಿತಕ್ಕೆ ಒಳಗಾಗಿ ತೊಂದರೆ ಅನುಭವಿಸಿದ್ದಾರೆ. ತೀವ್ರವಾಗಿ ಗಾಯಗೊಂಡ ಅವರನ್ನು ಮುಂಬೈನ ಪ್ರತಿಷ್ಠಿತ ಲೀಲಾವತಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅವರ ಮೇಲೆ ಹಲ್ಲೆ ಆದ ವಿಚಾರ ತಿಳಿಯುತ್ತಿದ್ದಂತೆ ಶಾರುಖ್ ಖಾನ್ ಅವರು ಆಸ್ಪತ್ರೆಗೆ ಓಡೋಡಿ ಬಂದಿದ್ದಾರೆ. ತಮ್ಮ ಕೆಲಸಗಳನ್ನು ಅರ್ಧಕ್ಕೆ ಬಿಟ್ಟು ಆಸ್ಪತ್ರೆಗೆ ಬಂದು ಗೆಳೆಯನ ಆರೋಗ್ಯ ವಿಚಾರಿಸಿದ್ದಾರೆ. ಅದೇ ರೀತಿ ದಕ್ಷಿಣದ ಹೀರೋಗಳು ಕೂಡ ಸೈಫ್ ಚೇತರಿಕೆ ಕಾಣಲಿ ಎಂದು ಹಾರೈಸಿದ್ದಾರೆ.

ಶಾರುಖ್ ಖಾನ್ ಅವರು ತಮ್ಮ ರೋಲ್ಸ್ ರಾಯ್ಸ್​ನಲ್ಲಿ ಮುಂಬೈನ ಲೀಲಾವತಿ ಆಸ್ಪತ್ರೆಗೆ ತೆರಳಿದ್ದಾರೆ. ಅಲ್ಲಿ ಅವರು ಶಸ್ತ್ರಚಿಕಿತ್ಸೆಯ ಅಪ್​ಡೇಟ್ ಪಡೆದಿದ್ದಾರೆ. ಅವರು ಕರೀನಾ ಹಾಗೂ ಕುಟುಂಬದವರಿಗೆ ಧೈರ್ಯ ತುಂಬಿದ್ದಾರೆ. ಶಾರುಖ್ ಖಾನ್ ಹಾಗೂ ಸೈಫ್ ಅಲಿ ಖಾನ್ ‘ಕಲ್ ಹೋ ನ ಹೋ’ ಚಿತ್ರದಲ್ಲಿ ನಟಿಸಿದ್ದರು. ‘ಕಭಿ ಖುಷಿ ಕಭಿ ಗಮ್’ ಹಾಗೂ ‘ಅಶೋಕ’ ಸಿನಿಮಾದಲ್ಲಿ ಶಾರುಖ್ ಅವರು ಕರೀನಾ ಜೊತೆ ತೆರೆ ಹಂಚಿಕೊಂಡಿದ್ದರು. ಹೀಗಾಗಿ, ಈ ಕುಟುಂಬದ ಜೊತೆ ಶಾರುಖ್​ಗೆ ಒಳ್ಳೆಯ ಒಡನಾಟ ಇದೆ.

‘ದೇವರ’ ಸಿನಿಮಾದಲ್ಲಿ ಜೂನಿಯರ್​ ಎನ್​ಟಿಆರ್ ಜೊತೆ ಸೈಫ್ ತೆರೆ ಹಂಚಿಕೊಂಡಿದ್ದರು. ಇವರ ಮಧ್ಯೆ ಒಳ್ಳೆಯ ಬಾಂಡಿಂಗ್ ಬೇಳೆದಿದೆ. ಹೀಗಾಗಿ, ಜೂನಿಯರ್​ ಎನ್​ಟಿಆರ್​ ಅವರು ಟ್ವೀಟ್ ಮಾಡಿ ಸೈಫ್ ಬೇಗ ಚೇತರಿಕೆ ಕಾಣಲಿ ಎಂದು ಕೋರಿದ್ದಾರೆ. ಹಿರಿಯ ನಟ ಚಿರಂಜೀವಿ ಕೂಡ ಈ ಬಗ್ಗೆ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ನೈಟ್​ ಕ್ಲಬ್​ನಲ್ಲೂ ಸೈಫ್ ಮೇಲೆ ನಡೆದಿತ್ತು ದಾಳಿ; ತಲೆಯಿಂದ ಸುರಿದಿತ್ತು ರಕ್ತ

ನಡೆದಿದ್ದೇನು?

ಸೈಫ್ ಅಲಿ ಖಾನ್ ಅವರು ಮುಂಬೈನ ಬಾಂದ್ರಾ ನಿವಾಸದಲ್ಲಿ ವಾಸವಾಗಿದ್ದಾರೆ. ಈ ಮನೆಗೆ ನಸುಕಿನಲ್ಲಿ ನುಗ್ಗಿದ ಕಳ್ಳ ಸೈಫ್ ಮೇಲೆ ದಾಳಿ ಮಾಡಿದ್ದಾನೆ. ಬೆನ್ನು, ಕತ್ತಿನ ಭಾಗಕ್ಕೆ ಗಾಯವಾಗಿದೆ. ಸೈಫ್ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಪಾಯದಿಂದ ಪಾರಾಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.