ನೈಟ್​ ಕ್ಲಬ್​ನಲ್ಲೂ ಸೈಫ್ ಮೇಲೆ ನಡೆದಿತ್ತು ದಾಳಿ; ತಲೆಯಿಂದ ಸುರಿದಿತ್ತು ರಕ್ತ

ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರ ಮನೆಯಲ್ಲಿ ಚಾಕುವಿನಿಂದ ಹಲ್ಲೆ ನಡೆದಿದೆ. ಅಪರಿಚಿತ ವ್ಯಕ್ತಿಯೊಬ್ಬ 6 ಬಾರಿ ಇರಿದಿದ್ದಾನೆ. ಸೈಫ್ ಅವರು ಲೀಲಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದು ಅವರ ಮೇಲೆ ನಡೆದ ಎರಡನೇ ದಾಳಿ ಎಂದು ವರದಿಯಾಗಿದೆ. ಹಿಂದೆ ದೆಹಲಿಯ ನೈಟ್ ಕ್ಲಬ್ ನಲ್ಲಿಯೂ ಅವರ ಮೇಲೆ ಹಲ್ಲೆ ನಡೆದಿತ್ತು ಎಂದು ಸ್ವತಃ ಸೈಫ್ ಹೇಳಿಕೊಂಡಿದ್ದರು.

ನೈಟ್​ ಕ್ಲಬ್​ನಲ್ಲೂ ಸೈಫ್ ಮೇಲೆ ನಡೆದಿತ್ತು ದಾಳಿ; ತಲೆಯಿಂದ ಸುರಿದಿತ್ತು ರಕ್ತ
ಸೈಫ್ ಅಲಿ ಖಾನ್
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Jan 16, 2025 | 11:41 AM

ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರ ನಿವಾಸದಲ್ಲಿ ಇಂದು (ಜನವರಿ 16) ಬೆಳಗಿನ ಜಾವ 2.30ರ ಸುಮಾರಿಗೆ ಅಪರಿಚಿತ ವ್ಯಕ್ತಿಯೊಬ್ಬ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಮನೆಗೆ ನುಗ್ಗಿದ ವ್ಯಕ್ತಿಯೊಬ್ಬ ಸೈಫ್ ಅಲಿ ಖಾನ್​ಗೆ 6 ಬಾರಿ ಇರಿದಿದ್ದಾನೆ. ಸದ್ಯ ಸೈಫ್ ಲೀಲಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶಸ್ತ್ರ ಚಿಕಿತ್ಸೆ ಪೂರ್ಣಗೊಂಡಿದೆ. ಈ ಹಿಂದೆ ಒಂದೇ ಕಡೆ ಎರಡು ಬಾರಿ ಅವರ ಮೇಲೆ ಹಲ್ಲೆ ನಡೆದಿತ್ತು. ಈ ಬಗ್ಗೆ ಸ್ವತಃ ಸೈಫ್ ಹೇಳಿದ್ದರು.

ಸೈಫ್ ಅಲಿ ಖಾನ್ ಅವರ ಗಾಯಗಳು ಗಂಭೀರವಾಗಿದೆ ಎಂದು ಹೇಳಲಾಗಿದೆ. ದಾಳಿಯಲ್ಲಿ ಅವರ ಕುತ್ತಿಗೆ, ಎಡ ಮಣಿಕಟ್ಟು, ಎದೆಗೆ ಗಾಯಗಳಾಗಿದ್ದು, ಬೆನ್ನಿನಿಂದ ಚಾಕುವಿನ ಸಣ್ಣ ಭಾಗವನ್ನು ತೆಗೆಯಲಾಗಿದೆ. ಬೆನ್ನುಹುರಿಗೆ ಪೆಟ್ಟಾದ ಕಾರಣ ತುರ್ತು ಆಪರೇಷನ್ ಮಾಡಬೇಕಾಯಿತು ಎಂಬ ಮಾಹಿತಿ ಇದೆ. ಸೈಫ್ ಮೇಲೆ ಚಾಕುವಿನ ಇರಿತ ಪ್ರಕರಣ ಅವರ ಹಳೆಯ ಕಥೆಯನ್ನು ಮತ್ತೆ ಮುನ್ನೆಲೆಗೆ ಬರುವಂತೆ ಮಾಡಿದೆ. ಸೈಫ್ ಮೇಲೆ ನೈಟ್ ಕ್ಲಬ್ ನಲ್ಲಿಯೂ ದಾಳಿ ನಡೆಸಲಾಗಿತ್ತು. ದೆಹಲಿಯ ನೈಟ್ ಕ್ಲಬ್ ಒಂದರಲ್ಲಿ ಈ ಘಟನೆ ನಡೆದಿತ್ತು.

ದೆಹಲಿಯ ನೈಟ್ ಕ್ಲಬ್ ಒಂದರಲ್ಲಿ ಸೈಫ್ ಮೇಲೆ ದಾಳಿ ನಡೆದಿತ್ತು. ನೇಹಾ ಧೂಪಿಯಾ ಅವರ ಪಾಡ್‌ಕಾಸ್ಟ್ ಶೋ ‘ನೋ ಫಿಲ್ಟರ್ ನೇಹಾ’ದಲ್ಲಿ ಸೈಫ್ ಸ್ವತಃ ವಿಚಾರ ಹಂಚಿಕೊಂಡಿದ್ದರು. ‘ನಾನು ದೆಹಲಿಯ ನೈಟ್ ಕ್ಲಬ್‌ನಲ್ಲಿ ಕುಳಿತಿದ್ದೆ ಮತ್ತು ನಂತರ ಒಬ್ಬ ಹುಡುಗ ನನ್ನ ಬಳಿಗೆ ಬಂದನು. ದಯವಿಟ್ಟು ನನ್ನ ಗೆಳತಿಯೊಂದಿಗೆ ನೃತ್ಯ ಮಾಡಿ ಎಂದು ಕೋರಿದ. ನಾನು ನಿರಾಕರಿಸಿದೆ. ನಾನು ಇದೆಲ್ಲವನ್ನೂ ಮಾಡುತ್ತಿಲ್ಲ ಎಂದು ಆತನಿಗೆ ಹೇಳಿದೆ’ ಎಂದಿದ್ದರು ಸೈಫ್ ಅಲಿ ಖಾನ್.

ಇದನ್ನೂ ಓದಿ:  ಸೈಫ್ ಅಲಿ ಖಾನ್​ಗೆ ಹಲವು ಗಂಟೆ ಸರ್ಜರಿ; ಆಪರಷೇನ್ ವೇಳೆ ನಟನ ದೇಹದಲ್ಲಿ ಸಿಕ್ಕಿದ್ದೇನು?

‘ಆ ಬಳಿಕ ಆತ ನನ್ನನ್ನು ನಿಂದಿಸಲು ಆರಂಭಿಸಿದ. ಅಷ್ಟೇ ಅಲ್ಲ ವಿಸ್ಕಿ ಬಾಟಲಿಯಿಂದ ನನ್ನ ತಲೆಗೆ ಹೊಡೆದ. ನನ್ನ ತಲೆಯಿಂದ ರಕ್ತ ಬರಲಾರಂಭಿಸಿತು. ಹಾಗಾಗಿ ನಾನು ವಾಶ್ ರೂಂಗೆ ಹೋದೆ. ಅವನು ನನ್ನನ್ನು ವಾಶ್ ರೂಮಿಗೆ ಹಿಂಬಾಲಿಸಿದನು. ನನ್ನ ತಲೆಯಲ್ಲಿ ವಿಪರೀತ ರಕ್ತಸ್ರಾವವಾಗುತ್ತಿತ್ತು. ಆದ್ದರಿಂದ ನಾನು ನನ್ನ ತಲೆಯ ಮೇಲೆ ನೀರನ್ನು ಸುರಿಯಲು ಪ್ರಾರಂಭಿಸಿದೆ ಮತ್ತು ನೀರು ಸುರಿಯುವಾಗ ನಾನು ಆ ವ್ಯಕ್ತಿಗೆ ಹೇಳಿದೆ, ನೀವು ಏನು ಮಾಡಿದ್ದೀರಿ ಎಂದು ನೋಡಿ. ಅವರು ತುಂಬಾ ಕೋಪಗೊಂಡರು. ಆತ ಮತ್ತೆ ನನ್ನ ಮೇಲೆ ಹಲ್ಲೆ ಮಾಡಿದ. ಅವನು ಹುಚ್ಚನಾಗಿದ್ದನು. ಅವನು ನನ್ನನ್ನು ಕೊಲ್ಲುತ್ತಿದ್ದನು’ ಎಂದು ಘಟನೆ ವಿವರಿಸಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ನಾನ್ಯಾಕೆ ಸಿಎಂ ಆಗ್ಬಾರ್ದು ಎಂದಿದ್ದ ಸಚಿವ ತಿಮ್ಮಾಪುರ ವರಸೆ ಬದಲು
ನಾನ್ಯಾಕೆ ಸಿಎಂ ಆಗ್ಬಾರ್ದು ಎಂದಿದ್ದ ಸಚಿವ ತಿಮ್ಮಾಪುರ ವರಸೆ ಬದಲು
ಏ ಪಾಂಚಾಲಿ! ಬೀಮನ ಪಾತ್ರದ ಡೈಲಾಗ್ ಹೇಳಿದ ಮಿಂಚಿದ ಶಾಸಕ ಶಿವಲಿಂಗೇಗೌಡ
ಏ ಪಾಂಚಾಲಿ! ಬೀಮನ ಪಾತ್ರದ ಡೈಲಾಗ್ ಹೇಳಿದ ಮಿಂಚಿದ ಶಾಸಕ ಶಿವಲಿಂಗೇಗೌಡ
Video: ಮುಳ್ಳುಗಳ ಮೇಲೆ ಮಲಗುವ ಬಾಬಾ
Video: ಮುಳ್ಳುಗಳ ಮೇಲೆ ಮಲಗುವ ಬಾಬಾ
BBL 2025: ಬೌಲ್ಡ್ ಆಗುವುದನ್ನು ತಪ್ಪಿಸಿ ಅರ್ಧಶತಕ ಸಿಡಿಸಿದ ಸ್ಟೀವ್ ಸ್ಮಿತ್
BBL 2025: ಬೌಲ್ಡ್ ಆಗುವುದನ್ನು ತಪ್ಪಿಸಿ ಅರ್ಧಶತಕ ಸಿಡಿಸಿದ ಸ್ಟೀವ್ ಸ್ಮಿತ್
ಬಿಗ್ ಬಾಸ್​ನಲ್ಲಿ ಧನರಾಜ್ ಮೋಸದಾಟಕ್ಕೆ ಎಲಿಮಿನೇಷನ್ ಶಿಕ್ಷೆ?
ಬಿಗ್ ಬಾಸ್​ನಲ್ಲಿ ಧನರಾಜ್ ಮೋಸದಾಟಕ್ಕೆ ಎಲಿಮಿನೇಷನ್ ಶಿಕ್ಷೆ?
ಐಶ್ವರ್ಯ ವೃದ್ಧಿಯಲ್ಲಿ ಉಪ್ಪಿಗಿದೆ ಬಹಳ ಮಹತ್ವ! ಏನದು? ಇಲ್ಲಿದೆ ನೋಡಿ
ಐಶ್ವರ್ಯ ವೃದ್ಧಿಯಲ್ಲಿ ಉಪ್ಪಿಗಿದೆ ಬಹಳ ಮಹತ್ವ! ಏನದು? ಇಲ್ಲಿದೆ ನೋಡಿ
ದಿನ ಭವಿಷ್ಯ: ಜನವರಿ 16ರಂದು ಹೇಗಿದೆ ದ್ವಾದಶ ರಾಶಿಗಳ ಫಲಾಫಲ? ಇಲ್ಲಿದೆ ನೋಡಿ
ದಿನ ಭವಿಷ್ಯ: ಜನವರಿ 16ರಂದು ಹೇಗಿದೆ ದ್ವಾದಶ ರಾಶಿಗಳ ಫಲಾಫಲ? ಇಲ್ಲಿದೆ ನೋಡಿ
ಬೈಕ್​ನ್ನ 60 ಮೀಟರ್ ಎಳೆದೊಯ್ದ ಕಾರು: ಎದೆ ಝಲ್​ ಎನಿಸುವ ವಿಡಿಯೋ
ಬೈಕ್​ನ್ನ 60 ಮೀಟರ್ ಎಳೆದೊಯ್ದ ಕಾರು: ಎದೆ ಝಲ್​ ಎನಿಸುವ ವಿಡಿಯೋ
ಕೊಪ್ಪಳ ಗವಿಸಿದ್ದೇಶ್ವರನ ರಥ ಎಳೆದು ಪುನೀತರಾದ ಭಕ್ತ ಸಾಗರ: ವಿಡಿಯೋ ನೋಡಿ
ಕೊಪ್ಪಳ ಗವಿಸಿದ್ದೇಶ್ವರನ ರಥ ಎಳೆದು ಪುನೀತರಾದ ಭಕ್ತ ಸಾಗರ: ವಿಡಿಯೋ ನೋಡಿ
ತಂದೆಯ ರೀತಿ ಆಶೀರ್ವಾದ ಮಾಡಿದ್ದರು: ಸರಿಗಮ ವಿಜಿ ನಿಧನಕ್ಕೆ ತರುಣ್ ಸಂತಾಪ
ತಂದೆಯ ರೀತಿ ಆಶೀರ್ವಾದ ಮಾಡಿದ್ದರು: ಸರಿಗಮ ವಿಜಿ ನಿಧನಕ್ಕೆ ತರುಣ್ ಸಂತಾಪ