AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೈಫ್ ಆಸ್ಪತ್ರೆ ಸೇರಿಸಿದ ಆಟೋ ಚಾಲಕನಿ​ಗೆ ಸಿಕ್ತು ದೊಡ್ಡ ರಿವಾರ್ಡ್​

ಸೈಫ್ ಅಲಿ ಖಾನ್ ಮೇಲೆ ನಡೆದ ಹಲ್ಲೆ ಪ್ರಕರಣದಲ್ಲಿ ಆಟೋ ಚಾಲಕನ ಮಹತ್ವದ ಪಾತ್ರವಿದೆ. ಆತ ಸೈಫ್ ಅಲಿ ಖಾನ್ ಅವರನ್ನು ಆಸ್ಪತ್ರೆಗೆ ಸೇರಿಸಲು ಸಹಾಯ ಮಾಡಿದ್ದರಿಂದ ಸೈಫ್ ಕುಟುಂಬ ಬಹುಮಾನ ನೀಡಿದೆ. ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಸೈಫ್ ಆಸ್ಪತ್ರೆ ಸೇರಿಸಿದ ಆಟೋ ಚಾಲಕನಿ​ಗೆ ಸಿಕ್ತು ದೊಡ್ಡ ರಿವಾರ್ಡ್​
ಸೈಫ್​- ಆಟೋ ಡ್ರೈವರ್
ರಾಜೇಶ್ ದುಗ್ಗುಮನೆ
|

Updated on: Jan 21, 2025 | 8:48 AM

Share

ನಟ ಸೈಫ್ ಅಲಿ ಖಾನ್ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ವಾರ ಆಗುತ್ತಾ ಬಂದಿದೆ. ಈ ಘಟನೆಯ ಆರೋಪಿಯನ್ನು ಪೊಲೀಸರು ವಶಕಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಸೈಫ್ ಅಲಿ ಖಾನ್ ಬಳಿ ಈ ವ್ಯಕ್ತಿ ಕೋಟಿ ರೂಪಾಯಿಗೆ ಬೇಡಿಕೆ ಇಟ್ಟಿದ್ದರು ಎನ್ನುವ ವಿಚಾರವೂ ರಿವೀಲ್ ಆಗಿದೆ. ಸೈಫ್ ಅಲಿ ಖಾನ್ ಅವರನ್ನು ಆಸ್ಪತ್ರೆಗೆ ಸೇರಿಸಲು ಸಹಾಯ ಮಾಡಿದ್ದು ಓರ್ವ ಆಟೋ ಡ್ರೈವರ್. ಸರಿಯಾದ ಸಮಯಕ್ಕೆ ಸೈಫ್​ಗೆ ಸಹಾಯ ಮಾಡಿದ ಆಟೋ ಡ್ರೈವರ್​ಗೆ ರಿವಾರ್ಡ್ ನೀಡಲಾಗಿದೆ.

ಸೈಫ್ ಅಲಿ ಖಾನ್ ಮೇಲೆ ಆರು ಬಾರಿ ಕಳ್ಳ ಹಲ್ಲೆ ಮಾಡಿದ್ದ. ಈ ವೇಳೆ ಸೈಫ್ ಮಗ ಇಬ್ರಾಹಿಮ್ ತಂದೆಯನ್ನು ಆಸ್ಪತ್ರೆಗೆ ಸೇರಿಸಲು ಮುಂದಾದರು. ಆದರೆ, ಯಾವ ಕಾರು ಕೂಡ ಸಿದ್ಧ ಇರಲಿಲ್ಲ. ಹೀಗಾಗಿ, ಆಟೋ ಡ್ರೈವರ್​ನ ಕರೆಯಲಾಯಿತು. ಅವರ ಹೆಸರು ಭಜನ್ ಸಿಂಗ್. ಸಹಾಯಕ್ಕೆ ಕರೆದಾಗ ಅವರು ತಕ್ಷಣಕ್ಕೆ ಬಂದರು. ಹೀಗಾಗಿ ಆ ವ್ಯಕ್ತಿಗೆ 11 ಸಾವಿರ ರೂಪಾಯಿ ರಿವಾರ್ಡ್ ನೀಡಲಾಗಿದೆ. ಸೈಫ್ ಕುಟುಂಬದಿಂದ ರಿವಾರ್ಡ್ ಕೊಡಲಾಗಿದೆ ಎನ್ನಲಾಗಿದೆ.

ಈ ಮೊದಲು ಆಟೋ ಡ್ರೈವರ್ ಸೈಫ್ ಅಲಿ ಖಾನ್ ಅವರ ಕುಟುಂಬದಿಂದ ಬಾಡಿಗೆ ಪಡೆದಿರಲಿಲ್ಲ. ಸೈಫ್ ಅಲಿ ಖಾನ್ ಅವರನ್ನು ಆಸ್ಪತ್ರೆಗೆ ಸೇರಿಸಿದ್ದಕ್ಕೆ ಆಟೋ ಡ್ರೈವರ್​ನ ಪೊಲೀಸರು ಕರೆಸಿ ವಿಚಾರಣೆ ನಡೆಸಿದ್ದರು. ಈ ವೇಳೆ ಅವರು ನಡೆದ ಘಟನೆ ವಿವರಿಸಿದ್ದರು. ಇದು ಸೇವೆ ಎನ್ನುವ ಕಾರಣಕ್ಕೆ ರಿಕ್ಷಾ ಚಾಲಕ ಹಣ ಪಡೆದಿರಲಿಲ್ಲ ಎನ್ನಲಾಗಿದೆ.

‘ಆ ವ್ಯಕ್ತಿಯ ಬೆನ್ನಿನ ಭಾಗ ಸಾಕಷ್ಟು ರಕ್ತಸಿಕ್ತವಾಗಿತ್ತು. ನನಗೆ ಅದು ಸೈಫ್ ಅಲಿ ಖಾನ್ ಅನ್ನೋದು ಕೂಡ ಗೊತ್ತಿರಲಿಲ್ಲ. ಯಾವುದೋ ವ್ಯಕ್ತಿಗೆ ಗಾಯವಾಗಿದೆ ಎಂದುಕೊಂಡಿದ್ದೆ. ರಿಕ್ಷಾದಿಂದ ಇಳಿದು ಅವರು ಲೀಲಾವತಿ ಆಸ್ಪತ್ರೆಗೆ ತೆರಳುವಾಗ ಮುಖ ಕಂಡಿತು. ಆಗ ಅದು ಸೈಫ್ ಎನ್ನುವ ವಿಚಾರ ಗೊತ್ತಾಯಿತು’ ಎಂದಿದ್ದಾರೆ ಅವರು.

ಇದನ್ನೂ ಓದಿ: ಇವರೇ ನೋಡಿ ಸೈಫ್ ಅಲಿ ಖಾನ್ ಜೀವ ಉಳಿಸಿದ ಆಟೋ ಡ್ರೈವರ್

ಕಳ್ಳತನ ಮಾಡಲು ಬಂದ ವ್ಯಕ್ತಿ ಸೈಫ್ ಅಲಿ ಖಾನ್​ಗೆ ಆರು ಬಾರಿ ಚುಚ್ಚಿದ್ದ. ಜನವರಿ 16ರಂದು ಈ ಘಟನೆ ನಡೆದಿದೆ. ಬೆಳಿಗ್ಗೆ 2.30ಕ್ಕೆ ಕಳ್ಳ ಈ ಕೆಲಸ ಮಾಡಿದ್ದ. ಭದ್ರತೆಯನ್ನು ಮೀರಿ ಈ ವ್ಯಕ್ತಿ ಬಂದಿದ್ದ. ಸದ್ಯ ಆತನ ವಿಚಾರಣೆ ನಡೆಸಲಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
Rajesh Duggumane
Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More