
ವೀಕೆಂಡ್ ಬಂತೆಂದರೆ ಥಿಯೇಟರ್ ಮಾತ್ರವಲ್ಲ ಒಟಿಟಿಯಲ್ಲೂ ದೊಡ್ಡ ಸಂಖ್ಯೆಯಲ್ಲಿ ಸಿನಿಮಾಗಳು ರಿಲೀಸ್ ಆಗುತ್ತವೆ. ಕೆಲವು ಸಿನಿಮಾಗಳು ಥಿಯೇಟರ್ನಲ್ಲಿ ಹಿಟ್ ಆಗಿ ಒಟಿಟಿಗೆ ಬಂದರೆ, ಇನ್ನೂ ಕೆಲವು ವೆಬ್ ಸೀರಿಸ್ಗಳು ಹಾಗೂ ಸಿನಿಮಾಗಳು ನೇರವಾಗಿ ಒಟಿಟಿಗೆ ಕಾಲಿಡುತ್ತವೆ. ಬಾಕ್ಸ್ ಆಫೀಸ್‌ನಲ್ಲಿ 500 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ ಸೂಪರ್ ಹಿಟ್ ಚಿತ್ರವೊಂದು ಈಗ ಒಟಿಟಿಗೆ ಕಾಲಿಟ್ಟಿದೆ. ಇದು ಸಖತ್ ರೊಮ್ಯಾಂಟಿಕ್ ಸಿನಿಮಾ. ಅದುವೇ ‘ಸೈಯಾರ’ (Saiyaara).
‘ಸೈಯಾರ’ ಸಿನಿಮಾದಲ್ಲಿ ಅಹಾನ್ ಪಾಂಡೆ ಹಾಗೂ ಅನೀತ್ ಪಡ್ಡಾ ಅವರು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರ ಪ್ರೇಕ್ಷಕರಿಂದ ಅದರಲ್ಲೂ ಹೊಸ ಜನರೇಶನ್ ಮಂದಿ ಈ ಚಿತ್ರವನ್ನು ಸಾಕಷ್ಟು ಮೆಚ್ಚಿಕೊಂಡಿದ್ದಾರೆ. ಈ ಸಿನಿಮಾ ಸೂಪರ್ ಹಿಟ್ ಆಗಿದೆ. ಈಗ ಚಿತ್ರವು ಒಟಿಟಿಯಲ್ಲಿ ರಿಲೀಸ್ ಆಗಿದೆ. ನೆಟ್ಫ್ಲಿಕ್ಸ್ನಲ್ಲಿ ಸಿನಿಮಾ ವೀಕ್ಷಣೆಗೆ ಲಭ್ಯವಿದೆ.
ಕ್ರಿಶ್ ಕಪೂರ್ (ಅಹಾನ್ ಪಾಂಡೆ) ಒಳ್ಳೆಯ ಸಿಂಗರ್ ಆಗಬೇಕು, ಸಾಕಷ್ಟು ಹೆಸರು ಮಾಡಬೇಕು ಎಂದು ಕನಸು ಕಂಡವನು. ಆಗ ವಾಣಿ ಬಾತ್ರಾ (ಅನೀತ್ ಪಡ್ಡಾ) ಸಿಗುತ್ತಾಳೆ. ಆಕೆಯ ಜೀವನದಲ್ಲೂ ಒಂದು ಪಾಸ್ಟ್ ಇರುತ್ತದೆ, ಕ್ರಿಶ್ ಜೀವನದಲ್ಲೂ ಒಂದು ಪಾಸ್ಟ್ ಇರುತ್ತದೆ. ಇವರಿಬ್ಬರ ಮಧ್ಯೆ ಪ್ರೀತಿ ಆಗುತ್ತದೆ. ವಾಣಿ ಹಾಡುಗಳಿಗೆ ಸಾಲುಗಳನ್ನು ಬರೆದರೆ, ಕ್ರಿಶ್ ಹಾಡುತ್ತಾನೆ. ಆದರೆ, ವಿಧಿಯಾಟ ಬೇರೆಯದೇ ಇರುತ್ತದೆ. ನಂತರ ಏನಾಗುತ್ತದೆ ಎಂಬುದೇ ಸಿನಿಮಾದ ಕಥೆ.
ಇದನ್ನೂ ಓದಿ: ‘ಸೈಯಾರ’ ಹೀರೋ-ಹೀರೋಯಿನ್ ಮಧ್ಯೆ ನಿಜ ಜೀವನದಲ್ಲಿ ಮೂಡಿತು ಪ್ರೀತಿ?
‘ಸೈಯಾರ’ ಸಿನಿಮಾ ಸಖತ್ ಎಮೋಷನಲ್ ಆಗಿದೆ ಎಂದು ಅನೇಕರು ಹೇಳಿದ್ದಾರೆ. ಈ ಚಿತ್ರದಲ್ಲಿ ಪ್ರೀತಿ ಇದೆ, ಪ್ರೀತಿಯನ್ನು ಕಳೆದುಕೊಳ್ಳೋ ನೋವಿದೆ. ಈ ಚಿತ್ರವನ್ನು ಅನೇಕರು ಇಷ್ಟಪಟ್ಟಿದ್ದಾರೆ. ಭಾವುಕರಾಗಿದ್ದಾರೆ. ಈ ಸಿನಿಮಾ ವಿಶ್ವ ಬಾಕ್ಸ್ ಆಫೀಸ್‌ನಲ್ಲಿ 500 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ.
Just realised this is when a songwriter found her Dhun 🥹#SaiyaaraOnNetflix pic.twitter.com/7wpMmODpx7
— Netflix India (@NetflixIndia) September 12, 2025
ಸಿನಿಮಾ ಥಿಯೇಟರ್ನಲ್ಲಿ ಹಿಟ್ ಆದ ಮಾತ್ರಕ್ಕೆ ಒಟಿಟಿಯಲ್ಲಿ ಯಶಸ್ಸು ಕಾಣಬೇಕು ಎಂಬ ಯಾವ ನಿಯಮವೂ ಇಲ್ಲ. ಈ ಮೊದಲು ಕೂಡ ಈ ರೀತಿ ಆದ ಸಾಕಷ್ಟು ಉದಾಹರಣೆ ಇದೆ. ‘ಸೈಯಾರ’ ಸಿನಿಮಾನ ಜನರು ಒಟಿಟಿಯಲ್ಲಿ ಯಾವ ರೀತಿಯಲ್ಲಿ ಸ್ವೀಕರಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.