ಯಶ್​ ಜತೆ ನಟಿಸ್ತೀರಾ ಅಂತ ಕೇಳಿದ್ದಕ್ಕೆ ಅಸಲಿ ವಿಚಾರ ಬಾಯ್ಬಿಟ್ಟ ಸಾಕ್ಷಿ ತನ್ವರ್​

ಸಾಕ್ಷಿ ತನ್ವರ್​ ಅವರು ಹಿಂದಿ ಕಿರುತೆರೆಯಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಅನೇಕ ಸೀರಿಯಲ್​ಗಳಲ್ಲಿ ಅಭಿನಯಿಸಿ ಅವರು ಖ್ಯಾತಿ ಪಡೆದಿದ್ದಾರೆ. 2016ರಲ್ಲಿ ತೆರೆಕಂಡ ‘ದಂಗಲ್​’ ಚಿತ್ರದಲ್ಲಿ ಅವರು ಆಮಿರ್​ ಖಾನ್​ಗೆ ಜೋಡಿಯಾಗಿದ್ದರು. ಈಗ ಯಶ್​ಗೆ ಜೋಡಿ ಆಗಲಿದ್ದಾರೆ ಎಂದು ಇತ್ತೀಚೆಗೆ ಗಾಸಿಪ್​ ಹಬ್ಬಿಸಿತ್ತು. ಅದಕ್ಕೆ ಸ್ವತಃ ಸಾಕ್ಷಿ ತನ್ವರ್​ ಅವರು ಈಗ ಪ್ರತಿಕ್ರಿಯೆ ನೀಡಿದ್ದಾರೆ.

ಯಶ್​ ಜತೆ ನಟಿಸ್ತೀರಾ ಅಂತ ಕೇಳಿದ್ದಕ್ಕೆ ಅಸಲಿ ವಿಚಾರ ಬಾಯ್ಬಿಟ್ಟ ಸಾಕ್ಷಿ ತನ್ವರ್​
ಸಾಕ್ಷಿ ತನ್ವರ್​, ಯಶ್​

Updated on: Mar 29, 2024 | 6:33 PM

ನಟಿ ಸಾಕ್ಷಿ ತನ್ವರ್​ (Sakshi Tanwar) ಅವರ ಬಗ್ಗೆ ಇತ್ತೀಚಿನ ದಿನಗಳಲ್ಲಿ ಕೆಲವು ಗಾಸಿಪ್​ಗಳು (Gossip) ಹರಿದಾಡಿದ್ದವು. ಅವರಿಗೆ ಒಂದು ಬಂಪರ್​ ಆಫರ್​ ಸಿಕ್ಕಿದೆ ಎಂದು ಹೇಳಲಾಗಿತ್ತು. ಪ್ಯಾನ್​ ಇಂಡಿಯಾ ಸ್ಟಾರ್​ ಆಗಿ ಮಿಂಚುತ್ತಿರುವ ‘ರಾಕಿಂಗ್​ ಸ್ಟಾರ್​’ ಯಶ್​ ಜೊತೆ ಅವರು ನಟಿಸಲಿದ್ದಾರೆ ಎಂಬ ಗಾಳಿಸುದ್ದಿ ಹಬ್ಬಿತ್ತು. ಈ ವಿಚಾರ ಕೇಳಿದ ಬಳಿಕ ಯಶ್​ ಅಭಿಮಾನಿಗಳ ವಲಯದಲ್ಲಿ ಚರ್ಚೆ ಜೋರಾಗಿತ್ತು. ಯಶ್​ (Yash) ಅವರಿಗೆ ಈಗ 38 ವರ್ಷ ವಯಸ್ಸು. ಅವರಿಗೆ ಜೋಡಿಯಾಗಿ ನಟಿಸುತ್ತಾರೆ ಎಂದು ಹೇಳಲಾಗುತ್ತಿರುವ ನಟಿ ಸಾಕ್ಷಿ ತನ್ವರ್​ ಅವರಿಗೆ ಈಗ 52 ವರ್ಷ ವಯಸ್ಸು. ಹಾಗಾಗಿ ಇಬ್ಬರ ಜೋಡಿ ಚೆನ್ನಾಗಿ ಇರುವುದಿಲ್ಲ ಎಂದು ಸೋಶಿಯಲ್​ ಮೀಡಿಯಾದಲ್ಲಿ ಚರ್ಚೆ ಶುರುವಾಗಿತ್ತು.

ಅಷ್ಟಕ್ಕೂ ಯಶ್​ ಮತ್ತು ಸಾಕ್ಷಿ ತನ್ವರ್​ ಅವರನ್ನು ಜೋಡಿಯಾಗಿಸಲು ಪ್ರಯತ್ನಿಸಿದ್ದು ಯಾರು? ವರದಿಗಳ ಪ್ರಕಾರ ಬಾಲಿವುಡ್​ನ ‘ರಾಮಾಯಣ’ ಸಿನಿಮಾದಲ್ಲಿ ಇಂಥದ್ದೊಂದು ಕಾಂಬಿನೇಷನ್​ ಇರಲಿದೆ ಎಂದು ಹೇಳಲಾಗಿತ್ತು. ಯಶ್​ ಅವರು ಈ ಸಿನಿಮಾದಲ್ಲಿ ರಾವಣನ ಪಾತ್ರ ಮಾಡುತ್ತಾರೆ ಎಂಬ ಗುಸುಗುಸು ಮೊದಲಿನಿಂದಲೂ ಕೇಳಿಬರುತ್ತಲೇ ಇದೆ. ರಾವಣನ ಪತ್ನಿ ಮಂಡೋದರಿ ಪಾತ್ರಕ್ಕೆ ಸಾಕ್ಷಿ ತನ್ವರ್​ ಅವರಿಗೆ ಅಫರ್​ ನೀಡಲಾಗಿದೆ ಎಂದು ಕೆಲವರು ಗಾಸಿಪ್​ ಹಬ್ಬಿಸಿದ್ದರು. ಅದಕ್ಕೆ ಈಗ ಸ್ವತಃ ಸಾಕ್ಷಿ ತನ್ವರ್​ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ: ಪದೇ ಪದೇ ಪ್ರಶ್ನೆ ಕೇಳಿದವರಿಗೆ ಯಶ್​ ಉತ್ತರ; ಝಲಕ್ ತೋರಿಸಿದ ರಾಕಿ ಭಾಯ್​

ಹಿಂದಿ ಕಿರುತೆರೆಯಲ್ಲಿ ಸಾಕ್ಷಿ ತನ್ವರ್​ ಅವರು ತಮ್ಮದೇ ಛಾಪು ಮೂಡಿಸಿದ್ದಾರೆ. ಹಲವು ಸೀರಿಯಲ್​ಗಳಲ್ಲಿ ನಟಿಸಿ ಅವರು ಫೇಮಸ್​ ಆಗಿದ್ದಾರೆ. 2016ರಲ್ಲಿ ಬಂದ ‘ದಂಗಲ್​’ ಸಿನಿಮಾದಲ್ಲಿ ಅವರು ಆಮಿರ್​ ಖಾನ್​ಗೆ ಜೋಡಿಯಾಗಿದ್ದರು. ಆ ಸಿನಿಮಾಗೆ ನಿರ್ದೇಶನ ಮಾಡಿದ್ದ ನಿತೇಶ್​ ತಿವಾರಿ ಅವರೇ ಈಗ ರಾಮಾಯಣ ಚಿತ್ರಕ್ಕೆ ನಿರ್ದೇಶನ ಮಾಡಲು ಸಜ್ಜಾಗಿದ್ದಾರೆ. ಹಾಗಾಗಿ ನಿತೇಶ್​ ತಿವಾರಿ ಅವರು ಸಾಕ್ಷಿ ತನ್ವರ್​ಗೆ ಆಫರ್​ ನೀಡಿರಬಹುದು ಎನ್ನಲಾಗಿತ್ತು. ಆದರೆ ಆ ಗಾಸಿಪ್​ ಅನ್ನು ಸಾಕ್ಷಿ ತನ್ವರ್​ ಅವರು ತಳ್ಳಿ ಹಾಕಿದ್ದಾರೆ.

ಇದನ್ನೂ ಓದಿ: ಯಶ್​ ಸಹೋದರಿ ಪಾತ್ರದಲ್ಲಿ ಕರೀನಾ ಕಪೂರ್​? ‘ಟಾಕ್ಸಿಕ್​’ ಚಿತ್ರದ ಬಗ್ಗೆ ಬಿಗ್ ನ್ಯೂಸ್​

‘ಮಂಡೋದರಿಯ ಪಾತ್ರಕ್ಕೆ ಯಾರೂ ಕೂಡ ನನ್ನನ್ನು ಬಂದು ಕೇಳಿಲ್ಲ’ ಎಂದು ಸಾಕ್ಷಿ ತನ್ವರ್​ ಹೇಳಿದ್ದಾರೆ ಎಂದು ‘ಬಾಲಿವುಡ್​ ಹಂಗಾಮಾ’ ವರದಿ ಮಾಡಿದೆ. ಆ ಮೂಲಕ ಅವರು ಎಲ್ಲ ಗಾಸಿಪ್​ಗಳಿಗೆ ಪೂರ್ಣವಿರಾಮ ಹಾಕಿದ್ದಾರೆ. ರಾಮಾಯಣ ಸಿನಿಮಾದಲ್ಲಿ ಶ್ರೀರಾಮನಾಗಿ ರಣಬೀರ್​ ಕಪೂರ್​ ನಟಿಸಲಿದ್ದಾರೆ. ಸೀತೆಯಾಗಿ ಸಾಯಿ ಪಲ್ಲವಿ ಅಭಿನಯಿಸುತ್ತಾರೆ ಎನ್ನಲಾಗಿದೆ. ಆದರೆ ಪಾತ್ರವರ್ಗದ ಬಗ್ಗೆ ಚಿತ್ರತಂಡದವರು ಏನನ್ನೂ ಅಧಿಕೃತಗೊಳಿಸಿಲ್ಲ. ಆದಷ್ಟು ಬೇಗ ಈ ಬಗ್ಗೆ ಘೋಷಣೆ ಆಗಲಿ ಎಂದು ಫ್ಯಾನ್ಸ್​ ಕಾಯುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us