
ನಟ ಸಲ್ಮಾನ್ ಖಾನ್ (Salman Khan) ಅವರು ಬಾಲಿವುಡ್ ಸಿನಿಮಾಗಳ ಮೂಲಕ ವಿಶ್ವಾದ್ಯಂತ ಅಭಿಮಾನಿಗಳನ್ನು ಹೊಂದಿದ್ದಾರೆ. ಪ್ರತಿ ವರ್ಷ ಅವರು ‘ದಬಂಗ್ ಟೂರ್’ (Dabang Tour) ಮೂಲಕ ವಿದೇಶದಲ್ಲಿ ಇರುವ ಅಭಿಮಾನಿಗಳನ್ನು ರಂಜಿಸುತ್ತಾರೆ. ತಮ್ಮ ಬಳಗದಲ್ಲಿ ಗುರುತಿಸಿಕೊಂಡಿರುವ ಅನೇಕ ಸೆಲೆಬ್ರಿಟಿಗಳನ್ನು ಸೇರಿಸಿಕೊಂಡು, ಒಂದಷ್ಟು ಹಾಡುಗಳಿಗೆ ಡ್ಯಾನ್ಸ್ ರಿಹರ್ಸಲ್ ಮಾಡಿ, ನಂತರ ವಿದೇಶದ ವೇದಿಕೆಯಲ್ಲಿ ಸಲ್ಲು ಪರ್ಫಾರ್ಮ್ ಮಾಡುತ್ತಾರೆ. ಜನರು ಹಣ ಕೊಟ್ಟು ಟಿಕೆಟ್ ಖರೀದಿಸಿ ಈ ಕಾರ್ಯಕ್ರಮಕ್ಕೆ ಬರುತ್ತಾರೆ. ಸಲ್ಮಾನ್ ಖಾನ್ ಜೊತೆ ನಟಿ ಪೂಜಾ ಹೆಗ್ಡೆ (Pooja Hegde) ಕೂಡ ದಬಂಗ್ ಟೂರ್ನಲ್ಲಿ ಭಾಗಿ ಆಗಿದ್ದರು. ಈ ವೇಳೆ ನಡೆದ ಪ್ರಸಂಗವೊಂದು ಸಲ್ಲುಗೆ ತೀವ್ರ ಮುಜುಗರ ಉಂಟು ಮಾಡುವಂತಾಗಿದೆ. ಆ ಕ್ಷಣದ ವಿಡಿಯೋ ಮತ್ತು ಸ್ಕ್ರೀನ್ ಶಾಟ್ಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಅದನ್ನು ಕಂಡು ಸಲ್ಮಾನ್ ಖಾನ್ ಅವರನ್ನು ಹಿಗ್ಗಾಮುಗ್ಗಾ ಟ್ರೋಲ್ ಮಾಡಲಾಗುತ್ತಿದೆ. ವೇದಿಕೆ ಮೇಲೆ ಮುಜುಗರ ಅನುಭವಿಸಿದ ಸಲ್ಲು ಬಗ್ಗೆ ಜನರು ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಅಷ್ಟಕ್ಕೂ ಅಲ್ಲಿ ಆಗಿದ್ದು ಏನು? ಈ ಕುರಿತು ಪೂರ್ಣ ವಿವರ ಇಲ್ಲಿದೆ.
ಸಲ್ಮಾನ್ ಖಾನ್ ಅವರು ‘ಕಿಕ್’ ಸಿನಿಮಾದ ‘ಜುಮ್ಮೆ ಕೆ ರಾತ್ ಮೇ..’ ಹಾಡಿಗೆ ಪೂಜಾ ಹೆಗ್ಡೆ ಜೊತೆ ಡ್ಯಾನ್ಸ್ ಮಾಡುತ್ತಿದ್ದರು. ಆ ಸಿನಿಮಾದ ಮೂಲ ಹಾಡಿನಲ್ಲಿ ಸಲ್ಲು ಜೊತೆ ಜಾಕ್ವೆಲಿನ್ ಫರ್ನಾಂಡಿಸ್ ನರ್ತಿಸಿದ್ದರು. ಅದರಲ್ಲಿ ಒಂದು ಸ್ಟೆಪ್ ಇದೆ. ಜಾಕ್ವೆಲಿನ್ ಫರ್ನಾಂಡಿಸ್ ಅವರ ಸ್ಕರ್ಟ್ ತುದಿಯನ್ನು ಸಲ್ಲು ಖಾನ್ ಅವರು ಬಾಯಲ್ಲಿ ಕಚ್ಚಿಕೊಂಡು ಡ್ಯಾನ್ಸ್ ಮಾಡಿದ್ದರು. ಈಗ ಅದೇ ಸ್ಟೆಪ್ ಅನ್ನು ಪೂಜಾ ಹೆಗ್ಡೆ ಜೊತೆ ಮಾಡಲು ಹೋಗಿ ಸಲ್ಲು ಟ್ರೋಲ್ ಆಗಿದ್ದಾರೆ.
ದಬಂಗ್ ಟೂರ್ ವೇದಿಕೆಯಲ್ಲಿ ಸಲ್ಲು ಮತ್ತು ಪೂಜಾ ಹೆಗ್ಡೆ ಡ್ಯಾನ್ ಮಾಡುತ್ತಿದ್ದರು. ಮೂಲ ಹಾಡಿನ ಸ್ಟೆಪ್ ರೀತಿಯೇ ಪೂಜಾ ಹೆಗ್ಡೆ ಅವರ ಸ್ಕರ್ಟ್ ಅನ್ನು ಕಚ್ಚಿಕೊಂಡು ಡ್ಯಾನ್ಸ್ ಮಾಡಲು ಸಲ್ಮಾನ್ ಖಾನ್ ಪ್ರಯತ್ನಿಸಿದರು. ಆದರೆ ಪೂಜಾ ಧರಿಸಿದ್ದು ಬಾಡಿಕಾನ್ ಡ್ರೆಸ್ ಆದ್ದರಿಂದ ಅದನ್ನು ಕಚ್ಚಿಕೊಳ್ಳಲು ಸಲ್ಲುಗೆ ಸಾಧ್ಯವಾಗಲಿಲ್ಲ. ಸಲ್ಮಾನ್ ಖಾನ್ ಪ್ರಯತ್ನಿಸುತ್ತಿರುವಾಗಲೇ ಪೂಜಾ ಹೆಗ್ಡೆ ಅವರು ತಪ್ಪಿಸಿಕೊಂಡು ಮುಂದೆ ಮುಂದೆ ಸಾಗಿದರು. ಇದರಿಂದ ಸಲ್ಲುಗೆ ತೀವ್ರ ಮುಜುಗರ ಆಯಿತು. ಈಗ ಇದೇ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ಇದೇ ಕಾರ್ಯಕ್ರಮದಲ್ಲಿ ಸಲ್ಮಾನ್ ಖಾನ್ ಜೊತೆ ಬಾಲಿವುಡ್ ನಟಿ ದಿಶಾ ಪಟಾನಿ ಕೂಡ ಭಾಗವಹಿಸಿದ್ದರು. ಅವರು ಸಲ್ಲು ಜೊತೆ ‘ಸೀಟಿ ಮಾರ್..’ ಹಾಡಿಗೆ ಸ್ಟೆಪ್ ಹಾಕಿದರು. ಆ ವಿಡಿಯೋ ಕೂಡ ವೈರಲ್ ಆಗಿದ್ದು, ಜನರು ಮೆಚ್ಚಿಕೊಂಡಿದ್ದಾರೆ. ಆದರೆ ಪೂಜಾ ಹೆಗ್ಡೆ ಜೊತೆ ಅಸಾಧಾರಣ ಡ್ಯಾನ್ಸ್ ಮಾಡಲು ಹೋಗಿ ಸಲ್ಮಾನ್ ಖಾನ್ ಟ್ರೋಲ್ಗೆ ಒಳಗಾಗಿದ್ದಾರೆ.
ಸದ್ಯ ಪೂಜಾ ಹೆಗ್ಡೆ ಅಭಿನಯದ ‘ರಾಧೆ ಶ್ಯಾಮ್’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಪ್ರಭಾಸ್ ಮತ್ತು ಪೂಜಾ ಈ ಚಿತ್ರದಲ್ಲಿ ಜೋಡಿಯಾಗಿ ನಟಿಸಿದ್ದು ಮಾ.11ರಂದು ವಿಶ್ವಾದ್ಯಂತ ಬಿಡುಗಡೆ ಆಗಲಿದೆ. ಕೆಲವು ಬಾಲಿವುಡ್ ಸಿನಿಮಾಗಳಲ್ಲಿ ನಟಿಸಿರುವ ಪೂಜಾಗೆ ಹಿಂದಿಯಲ್ಲಿ ದೊಡ್ಡ ಅಭಿಮಾನಿ ಬಳಗ ಇದೆ.
ಇದನ್ನೂ ಓದಿ:
‘ನನ್ನ ಹೆಸರು ಸಲ್ಮಾನ್ ಖಾನ್’: ವಿದೇಶದಲ್ಲಿ ವಿನಯದಿಂದ ಪರಿಚಯ ಹೇಳಿಕೊಂಡ ಸಲ್ಲು; ವಿಡಿಯೋ ವೈರಲ್
ಸಲ್ಮಾನ್ ಖಾನ್ ಜತೆ ಕೆಲಸ ಮಾಡಿದ್ರೆ ಆಗುವ ಲಾಭ-ನಷ್ಟದ ಬಗ್ಗೆ ಬಾಯ್ಬಿಟ್ಟ ಪ್ರೇಯಸಿ ಯೂಲಿಯಾ
Published On - 8:50 am, Mon, 28 February 22