‘ಸಲ್ಮಾನ್ ಜಿರಳೆಯನ್ನೇ ಕೊಂದವನಲ್ಲ, ಇನ್ನು ಕೃಷ್ಣಮೃಗ ಕೊಲ್ತಾನಾ’; ಸಲೀಮ್ ಖಾನ್ ಪ್ರಶ್ನೆ

| Updated By: ರಾಜೇಶ್ ದುಗ್ಗುಮನೆ

Updated on: Oct 19, 2024 | 11:09 AM

ಕೃಷ್ಣ ಮೃಗವನ್ನು ಬಿಷ್ಣೋಯಿ ಸಮುದಾಯದವರು ದೇವರು ಎಂದು ಪರಿಗಣಿಸುತ್ತಾರೆ. ಸಲ್ಮಾನ್ ಆ ಪ್ರಾಣಿಯನ್ನು ಹತ್ಯೆ ಮಾಡಿದ ವಿಚಾರದಲ್ಲಿ ಲಾರೆನ್ಸ್​ ಗ್ಯಾಂಗ್​ಗೆ ಸಾಕಷ್ಟು ಸಿಟ್ಟು ಇದೆ. ಆದರೆ, ಯಾವುದೇ ಪ್ರಾಣಿಗೆ ಹಾನಿ ಮಾಡಿಲ್ಲ ಎಂದು ಸಲೀಮ್ ಖಾನ್ ಹೇಳಿದ್ದಾರೆ.  

‘ಸಲ್ಮಾನ್ ಜಿರಳೆಯನ್ನೇ ಕೊಂದವನಲ್ಲ, ಇನ್ನು ಕೃಷ್ಣಮೃಗ ಕೊಲ್ತಾನಾ’; ಸಲೀಮ್ ಖಾನ್ ಪ್ರಶ್ನೆ
ಸಲ್ಮಾನ್-ಸಲೀಮ್
Follow us on

ಸಲ್ಮಾನ್ ಖಾನ್ ಅವರು ಇತ್ತೀಚೆಗೆ ಹೆಚ್ಚು ಸುದ್ದಿಯಲ್ಲಿ ಇದ್ದಾರೆ. ಇದಕ್ಕೆ ಕಾರಣ ಆಗಿದ್ದು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್​ನಿಂದ ಅವರಿಗೆ ಇರುವ ಬೆದರಿಕೆ. ಜೈಲಿನಲ್ಲೇ ಇದ್ದುಕೊಂಡು ಗ್ಯಾಂಗ್​ಸ್ಟರ್ ಲಾರೆನ್ಸ್ ಬೆದರಿಕೆ ಹಾಕುತ್ತಿದ್ದಾನೆ. ಕೃಷ್ಣ ಮೃಗ ಕೊಂದ ಪ್ರಕರಣದಲ್ಲಿ ಸಲ್ಮಾನ್ ಖಾನ್ ಅವರು ಈ ರೀತಿ ಬೆದರಿಕೆ ಎದುರಿಸಬೇಕಾಗಿದೆ. ಅವರು ಕ್ಷಮೆ ಕೇಳಬೇಕು ಎನ್ನುವ ಆಗ್ರಹವನ್ನು ಬಿಷ್ಣೋಯ್ ಗ್ಯಾಂಗ್ ಮಾಡುತ್ತಿದೆ. ಸಲ್ಮಾನ್ ಖಾನ್ ಕೃಷ್ಣಮೃಗವನ್ನು ಕೊಂದೇ ಇಲ್ಲ ಎಂಬುದು ಸಲೀಮ್ ಖಾನ್ ಮಾತು.

ಕೃಷ್ಣ ಮೃಗವನ್ನು ಬಿಷ್ಣೋಯಿ ಸಮುದಾಯದವರು ದೇವರು ಎಂದು ಪರಿಗಣಿಸುತ್ತಾರೆ. ಸಲ್ಮಾನ್ ಆ ಪ್ರಾಣಿಯನ್ನು ಹತ್ಯೆ ಮಾಡಿದ ವಿಚಾರದಲ್ಲಿ ಲಾರೆನ್ಸ್​ ಗ್ಯಾಂಗ್​ಗೆ ಸಾಕಷ್ಟು ಸಿಟ್ಟು ಇದೆ. ಹೀಗಾಗಿ, ಸಲ್ಲುನ ಕೊಲ್ಲುವ ಮೂಲಕ ಈ ಗ್ಯಾಂಗ್ ಹಗೆ ತೀರಿಸಿಕೊಳ್ಳುವ ಉದ್ದೇಶ ಇಟ್ಟುಕೊಂಡಿದೆ. ಸಲ್ಮಾನ್ ಖಾನ್ ಅವರು ಬಂದು ಅವರ ದೇವಸ್ಥಾನದಲ್ಲಿ ಕ್ಷಮೆ ಕೇಳಬೇಕು ಎಂದು ಲಾರೆನ್ಸ್ ಕೇಳುತ್ತಿದ್ದಾನೆ. ಆದರೆ, ಯಾವುದೇ ಪ್ರಾಣಿಗೆ ಹಾನಿ ಮಾಡಿಲ್ಲ ಎಂದು ಸಲೀಮ್ ಖಾನ್ ಹೇಳಿದ್ದಾರೆ.

‘ಅವನು (ಸಲ್ಮಾನ್ ಖಾನ್) ನನ್ನ ಬಳಿ ಸುಳ್ಳು ಹೇಳಲ್ಲ. ಸಲ್ಮಾನ್​ಗೆ ಪ್ರಾಣಿಗಳ ಬೇಟೆ ಆಡೋದು ಇಷ್ಟ ಆಗಲ್ಲ. ಅವನಿಗೆ ಪ್ರಾಣಿಗಳು ಎಂದರೆ ಇಷ್ಟ’ ಎಂದಿದ್ದಾರೆ ಸಲೀಮ್ ಖಾನ್. ಈ ಮೂಲಕ ಮಗ ತಪ್ಪನ್ನೇ ಮಾಡಿಲ್ಲ ಎಂಬುದನ್ನು ಸಲೀಮ್ ಖಾನ್ ಹೇಳಿದ್ದಾರೆ.

ಸಲ್ಮಾನ್ ಖಾನ್ ಕ್ಷಮೆ ಕೇಳಬೇಕು ಬಿಷ್ಣೋಯ್ ಗ್ಯಾಂಗ್ ಹೇಳಿದೆ. ಈ ಬಗ್ಗೆ ಮಾತನಾಡಿರೋ ಸಲೀಮ್ ಖಾನ್, ‘ಕ್ಷಮೆ ಕೇಳಿದರೆ ತಪ್ಪು ಒಪ್ಪಿಕೊಂಡಂತೆ. ಸಲ್ಮಾನ್ ಖಾನ್ ಯಾವುದೇ ಪ್ರಾಣಿಯನ್ನು ಹತ್ಯೆ ಮಾಡಿಲ್ಲ. ನಾವು ಜಿರಳೆಯನ್ನೂ ಕೊಂದವರಲ್ಲ. ನಾವು ಅದರ ಬಗ್ಗೆ ನಂಬಿಕೆ ಇಟ್ಟಿಲ್ಲ’ ಎಂದಿದ್ದಾರೆ ಸಲೀಮ್ ಖಾನ್.

‘ಸಲ್ಮಾನ್ ಖಾನ್ ಯಾರಲ್ಲಿ ಕ್ಷಮೆಕೇಳಬೇಕು? ನೀವು ಎಷ್ಟು ಜನರಿಗೆ ಕ್ಷಮೆ ಕೇಳಿದ್ದೀರಿ? ನೀವು ಎಷ್ಟು ಪ್ರಾಣಿಗಳ ಜೀವ ಉಳಿಸಿದ್ದೀರಿ? ನನ್ನ ಮಗ ಯಾವ ತಪ್ಪು ಮಾಡಿದ್ದಾನೆ? ನೀನು ಅದನ್ನು ನೋಡಿದ್ದೀಯಾ? ನೀನು ಪ್ರಕರಣದ ಬಗ್ಗೆ ತನಿಖೆ ನಡೆಸಿದ್ದೀಯಾ? ನಾನು ಗನ್ ಕೂಡ ಬಳಸಿಲ್ಲ’ ಎಂದು ಸಲೀಮ್ ಖಾನ್ ಕೇಳಿದ್ದಾರೆ.

ಇದನ್ನೂ ಓದಿ: ಸಲ್ಮಾನ್ ಖಾನ್ ಹಾಗೂ ಲಾರೆನ್ಸ್ ಮುಖಾಮುಖಿ ಆದ ಆ ಕ್ಷಣ ನೆನಪಿದೆಯೇ?

ಸಲ್ಮಾನ್ ಖಾನ್ ಅವರು ಬೆದರಿಕೆ ಮಧ್ಯೆಯೇ ‘ಸಿಖಂದರ್’ ಶೂಟಿಂಗ್ ಆರಂಭಿಸಿದ್ದಾರೆ. ಅವರ ಗೆಳೆಯ ಬಾಬಾ ಸಿದ್ಧಿಕಿಯನ್ನು ಲಾರೆನ್ಸ್ ಗ್ಯಾಂಗ್ ಹತ್ಯೆ ಮಾಡಿದೆ. ಇದರಿಂದ ಸಲ್ಮಾನ್ ಖಾನ್ ಅವರು ಸಾಕಷ್ಟು ವಿಚಲಿತರಾಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.