ರಶ್ಮಿಕಾರನ್ನು ನೋಡಿ ನನ್ನ ಆ ದಿನಗಳು ನೆನಪಾದವು: ಸಲ್ಮಾನ್ ಖಾನ್

|

Updated on: Mar 27, 2025 | 5:35 PM

Rashmika Mandanna: ನಟಿ ರಶ್ಮಿಕಾ ಮಂದಣ್ಣ ಹೋದ ಚಿತ್ರರಂಗದಲ್ಲೆಲ್ಲ ತಮ್ಮ ಪ್ರತಿಭೆ ಮತ್ತು ಶ್ರಮದಿಂದ ಯಶಸ್ಸು ಗಳಿಸುತ್ತಿದ್ದಾರೆ. ಇದೀಗ ಬಾಲಿವುಡ್​ನ ಸ್ಟಾರ್ ನಟ ಸಲ್ಮಾನ್ ಖಾನ್ ಜೊತೆ ನಟಿಸಿರುವ ರಶ್ಮಿಕಾ ಮಂದಣ್ಣ, ಅಲ್ಲಿಯೂ ಹೊಗಳಿಕೆಗಳನ್ನು ಪಡೆದುಕೊಂಡಿದ್ದಾರೆ. ಯಾರನ್ನೂ ಹೊಗಳದ ಸಲ್ಮಾನ್ ಖಾನ್, ರಶ್ಮಿಕಾರನ್ನು ಕೊಂಡಾಡಿದ್ದಾರೆ.

ರಶ್ಮಿಕಾರನ್ನು ನೋಡಿ ನನ್ನ ಆ ದಿನಗಳು ನೆನಪಾದವು: ಸಲ್ಮಾನ್ ಖಾನ್
Salman Khan Rashmika Mandanna
Follow us on

ರಶ್ಮಿಕಾ ಮಂದಣ್ಣ (Rashmika Mandanna) ಹೋದಲೆಲ್ಲ ತಮ್ಮ ವೃತ್ತಿಪರತೆ, ಕಠಿಣ ಪರಿಶ್ರಮದಿಂದ ಹೊಗಳಿಕೆಗಳನ್ನು ಜೊತೆಗೆ ಅದ್ಭುತ ಯಶಸ್ಸನ್ನೂ ಸಹ ಪಡೆಯುತ್ತಿದ್ದಾರೆ. ತೆಲುಗು ಚಿತ್ರರಂಗದಲ್ಲಿ ನಂಬರ್ 1 ನಟಿಯಾಗಿ ಮೆರೆದ ನಟಿ ರಶ್ಮಿಕಾ ಮಂದಣ್ಣ ಈಗ ಬಾಲಿವುಡ್​ನಲ್ಲಿಯೂ ನಂಬರ್ 1 ನಟಿಯಾಗುವತ್ತ ಹೆಜ್ಜೆ ಇಡುತ್ತಿದ್ದಾರೆ. ರಣ್​ಬೀರ್ ಕಪೂರ್ ಅಂಥಹಾ ಸ್ಟಾರ್ ನಟರೊಟ್ಟಿಗೆ ನಟಿಸಿ ದೊಡ್ಡ ಹಿಟ್ ಕೊಟ್ಟ ನಟಿ ಇದೀಗ ಸಲ್ಮಾನ್ ಖಾನ್ ಜೊತೆ ‘ಸಿಖಂಧರ್’ ಸಿನಿಮಾನಲ್ಲಿ ನಟಿಸಿದ್ದಾರೆ. ಸಾಮಾನ್ಯವಾಗಿ ಇತರೆ ನಟರನ್ನು ಹೊಗಳದ ಸಲ್ಮಾನ್ ಖಾನ್, ರಶ್ಮಿಕಾರನ್ನು ಮಾತ್ರ ಕೊಂಡಾಡಿದ್ದಾರೆ.

ಆಮಿರ್ ಖಾನ್, ಸಲ್ಮಾನ್ ಖಾನ್ ಮತ್ತು ‘ಸಿಖಂಧರ್’ ಸಿನಿಮಾ ನಿರ್ದೇಶಕ ಎಆರ್ ಮುರುಗದಾಸ್ ಅವರುಗಳು ಸಿನಿಮಾದ ಪ್ರಚಾರಕ್ಕಾಗಿ ಪ್ರೊಮೋಷನಲ್ ವಿಡಿಯೋ ಒಂದನ್ನು ಮಾಡಿದ್ದು, ಮೂವರು ಕೂತು ಸಿನಿಮಾ ಬಗ್ಗೆ ಮಾತನಾಡಿದ್ದಾರೆ. ಈ ವೇಳೆ ಆಮಿರ್ ಖಾನ್, ‘ಸಿಂಖಧರ್’ ಸಿನಿಮಾದ ನಾಯಕಿ ಯಾರು? ಎಂದು ಕೇಳಿದ್ದಾರೆ. ಆಗ ಮಾತನಾಡಿದ ಸಲ್ಮಾನ್ ಖಾನ್, ‘ರಶ್ಮಿಕಾ ಮಂದಣ್ಣ ನಾಯಕಿ, ಆಕೆ ಬಹಳ ಪರಿಣಾಮಕಾರಿ ಮತ್ತು ಕಠಿಣ ಪರಿಶ್ರಮಿ ನಟಿ’ ಎಂದಿದ್ದಾರೆ.

ಇದನ್ನೂ ಓದಿ:‘ಅನಿಮಲ್ 2’ ಸಿನಿಮಾನಲ್ಲಿ ಇರೋದಿಲ್ಲ ರಶ್ಮಿಕಾ ಮಂದಣ್ಣ, ನಾಯಕಿ ಯಾರು?

ಮುಂದುವರೆದು ಮಾತನಾಡಿದ ಸಲ್ಮಾನ್ ಖಾನ್, ‘ರಶ್ಮಿಕಾ ಮಂದಣ್ಣ ಅದ್ಭುತವಾದ ನಟಿ. ನಾವು ಹೈದರಾಬಾದ್​ನಲ್ಲಿ ಶೂಟಿಂಗ್ ಮಾಡುವಾಗ ಬೆಳಿಗಿನ ಜಾವ ಆರು ಗಂಟೆಗೆ ರೆಡಿಯಾಗಿ ‘ಪುಷ್ಪ 2’ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿ ಆಗುತ್ತಿದ್ದರು. ಆ ಸಿನಿಮಾದ ಚಿತ್ರೀಕರಣ ಮುಗಿಸಿ ಬಳಿಕ ನಮ್ಮ ಜೊತೆ ಚಿತ್ರೀಕರಣದಲ್ಲಿ ಬರುತ್ತಿದ್ದರು. ಆ ನಟಿಗೆ ವಿಶ್ರಾಂತಿಗೆ ಸಿಗುತ್ತಿದ್ದ ಸಮಯ, ಕೇವಲ ಒಂದು ಸೆಟ್​ನಿಂದ ಇನ್ನೊಂದು ಸೆಟ್​ಗೆ ಹೋಗುವ ಪ್ರಯಾಣದ ಸಮಯವಷ್ಟೆ’ ಎಂದಿದ್ದಾರೆ ಸಲ್ಮಾನ್ ಖಾನ್.

‘ಅದೂ ಜ್ವರ ಇದ್ದಾಗಲೂ ಸಹ ಯಾವುದೇ ವಿಶ್ರಾಂತಿ ಇಲ್ಲದೆ ಆ ನಟಿ ಕೆಲಸ ಮಾಡಿದರು. ಆಕೆಯನ್ನು ನೋಡಿದಾಗ ನನಗೆ ನನ್ನ ಹಳೆಯ ದಿನಗಳು ನೆನಪಾದವು. 20-25 ವರ್ಷದ ಹಿಂದೆ ನಾನು, ಆಮಿರ್ ಖಾನ್ ಇನ್ನೂ ಹಲವರು ಹೀಗೆಯೇ ಎರಡು, ಮೂರು ಶಿಫ್ಟ್​ಗಳಲ್ಲಿ ಕೆಲಸ ಮಾಡುತ್ತಿದ್ದೆವು. ರಶ್ಮಿಕಾ ಈಗ ದಿನಕ್ಕೆ ಎರಡು, ಮೂರು ಶಿಫ್ಟ್​ಗಳಲ್ಲಿ ಕೆಲಸ ಮಾಡುತ್ತಿದ್ದಾರೆ’ ಎಂದಿದ್ದಾರೆ ಸಲ್ಮಾನ್ ಖಾನ್.

ಇದನ್ನೂ ಓದಿ:ಸಲ್ಮಾನ್ ಖಾನ್ ಸಿನಿಮಾದಲ್ಲಿ ಕಂತೆ ಕಂತೆ ನಕಲಿ ನೋಟು ಬಳಕೆ; ಇಲ್ಲಿದೆ ಸಾಕ್ಷಿ

‘ಸಿಖಂಧರ್’ ಸಿನಿಮಾನಲ್ಲಿ ರಶ್ಮಿಕಾ ಮತ್ತು ಸಲ್ಮಾನ್ ಖಾನ್ ಒಟ್ಟಿಗೆ ನಟಿಸಿದ್ದು, ಸಿನಿಮಾದ ಮಾರ್ಚ್ 30 ರಂದು ಬಿಡುಗಡೆ ಆಗಲಿದೆ. ಸಿನಿಮಾಕ್ಕೆ ಸಲ್ಮಾನ್ ಖಾನ್​ರ ಆಪ್ತ ಗೆಳೆಯ ಸಾಜಿದ್ ನಾಡಿಯಾವಾಲ ಬಂಡವಾಳ ಹೂಡಿದ್ದಾರೆ. ಸಿನಿಮಾ ನಿರ್ದೇಶನ ಮಾಡಿರುವುದು ತಮಿಳಿನ ಖ್ಯಾತ ನಿರ್ದೇಶಕ ಎಆರ್ ಮುರುಗದಾಸ್. ಸಿನಿಮಾದ ಅಡ್ವಾನ್ಸ್ ಬುಕಿಂಗ್ ಜೋರಾಗಿ ನಡೆಯುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ