ಜೈಲಿನ ದಿನಗಳನ್ನು ನೆನಪಿಸಿಕೊಂಡ ಬಾಲಿವುಡ್ ನಟ ಸಲ್ಮಾನ್ ಖಾನ್

ಸಲ್ಮಾನ್ ಖಾನ್ ಅವರು "ಡಬಂಗ್ ಬಿರಿಯಾನಿ"ಯಲ್ಲಿ ತಮ್ಮ ಜೈಲು ಅನುಭವವನ್ನು ಹಂಚಿಕೊಂಡಿದ್ದಾರೆ. ಜೈಲಿನಲ್ಲಿ ಅವರು ತೀವ್ರ ನಿದ್ದೆಯ ಕೊರತೆಯನ್ನು ಎದುರಿಸಿದರು ಮತ್ತು ಕೆಲಸದ ಒತ್ತಡವನ್ನು ನಿಭಾಯಿಸುವಲ್ಲಿ ತೊಂದರೆ ಅನುಭವಿಸಿದರು. ಕೆಲಸ ಮತ್ತು ವೈಯಕ್ತಿಕ ಜೀವನದ ನಡುವಿನ ಸಮತೋಲನದ ಪ್ರಾಮುಖ್ಯತೆಯನ್ನು ಅವರು ಒತ್ತಿ ಹೇಳಿದ್ದಾರೆ. ಅವರ ಜೈಲು ಶಿಕ್ಷೆ ಮತ್ತು ಅದರ ಪರಿಣಾಮಗಳ ಬಗ್ಗೆಯೂ ಚರ್ಚಿಸಲಾಗಿದೆ.

ಜೈಲಿನ ದಿನಗಳನ್ನು ನೆನಪಿಸಿಕೊಂಡ ಬಾಲಿವುಡ್ ನಟ ಸಲ್ಮಾನ್ ಖಾನ್
ಸಲ್ಮಾನ್

Updated on: Feb 10, 2025 | 9:07 AM

ನಟ ಸಲ್ಮಾನ್ ಖಾನ್ ಮೇಲೆ ಹಲವು ಕೇಸ್​ಗಳು ಇವೆ. ಇವರ ಪೈಕಿ ಕೆಲವು ಕೇಸ್​​ಗಳಲ್ಲಿ ಅವರು ಜೈಲಿಗೆ ಹೋಗಿ ಬಂದಿದ್ದಾರೆ. ಸದಾ ಕೆಲಸದಲ್ಲಿ ಬ್ಯುಸಿ ಇರೋ ಅವರು ಏಕಾ ಏಕಿ ಜೈಲಿನಲ್ಲಿ ಇರಬೇಕಾದ ಪರಿಸ್ಥಿತಿ ಬಂದಾಗ ಅದಕ್ಕೆ ಒಗ್ಗಿಕೊಲ್ಳೋಕೆ ಆಗಲಿಲ್ಲ. ಈ ಬಗ್ಗೆ ಅವರು ‘ದಂಬ್ ಬಿರಿಯಾನಿ’ಯಲ್ಲಿ ಭಾಗಿ ಆಗಿದ್ದಾರೆ. ಅಳಿಯ ಅರ್ಹಾನ್ ಖಾನ್ ಅವರು ಇದನ್ನು ಹೋಸ್ಟ್​ ಮಾಡಿದ್ದಾರೆ.

ಜೈಲಿನಲ್ಲಿ ಯಾವ ರೀತಿಯ ಕ್ಷಣಗಳು ಇದ್ದವು ಎಂದು ಸಲ್ಮಾನ್ ಖಾನ್ ಹೇಳಿದ್ದಾರೆ. ‘ನಾನು ಸುಸ್ತಾಗಿ ಹೋಗುತ್ತಿದ್ದೆ. ಆದರೆ, ಎದ್ದೇಳಿ ಕೆಲಸ ಮಾಡಲೇಬೇಕು ಎಂದು ಎಲ್ಲರೂ ಹೇಳುತ್ತಿದ್ದರು. ಕಷ್ಟಪಟ್ಟು ಕೆಲಸ ಮಾಡಿದರೆ ನಿದ್ದೆ ತಾನಾಗೇ ಬರುತ್ತದೆ ಎನ್ನುತ್ತಿದ್ದರು. ಇದೆಲ್ಲ ನನಗೆ ಅರ್ಥ ಆಗುತ್ತಾ ಇರಲಿಲ್ಲ. ನಾನು ನಿತ್ಯ ಒಂದರಿಂದ ಎರಡು ಗಂಟೆ ನಿದ್ದೆ ಮಾಡುತ್ತಿದ್ದೆ. ತಿಂಗಳಿಗೆ ಒಮ್ಮೆ ಏಳು ಗಂಟೆ ಮಲಗುತ್ತಿದ್ದೆ’ ಎಂದಿದ್ದಾರೆ ಸಲ್ಮಾನ್ ಖಾನ್.

‘ಸಿನಿಮಾ ಶೂಟ್ ಮಧ್ಯೆ ಐದು ನಿಮಿಷ ಗ್ಯಾಪ್ ಪಡೆದುಕೊಳ್ಳುತ್ತಿದ್ದೆ. ನಾನು ಕುರ್ಚಿ ಮೇಲೆ ಮಲಗುತ್ತಿದ್ದೆ. ಇಲ್ಲಿ ನಾನು ಏನು ಬೇಕಾದರೂ ಮಾಡಲು ಸಿದ್ಧನಿದ್ದೆ. ನಾನು ಜೈಲಿನಲ್ಲಿದ್ದಾಗ ಕೇವಲ ನಿದ್ದೆ ಮಾತ್ರ ಮಾಡುತ್ತಿದ್ದೆ ಅದನ್ನು ಬಿಟ್ಟು ಏನನ್ನೂ ಮಾಡಲು ಸಾಧ್ಯವಾಗುತ್ತಿಲ್ಲ. ನಿಮ್ಮ ಕೆಲಸ ಅಥವಾ ಕುಟುಂಬದ ವಿಷಯಕ್ಕೆ ಬಂದಾಗ, ನೀವು ನಿರಂತರವಾಗಿ ಮಾಡಬೇಕಾದ ಪ್ರಯತ್ನಗಳು ಹಲವು ಇರುತ್ತವೆ. ನೀವು ಸ್ನೇಹಿತರು ಮತ್ತು ಕುಟುಂಬ ಮತ್ತು ಕೆಲಸಕ್ಕಾಗಿ ಯಾವಾಗಲೂ ಇರಬೇಕಾಗುತ್ತದೆ’ ಎಂದಿದ್ದಾರೆ ಅವರು.

ಸಲ್ಮಾನ್ ಖಾನ್ ಅವರು 1998ರಲ್ಲಿ ನಡೆದ ಕೃಷ್ಣಮೃಗ ಹತ್ಯೆ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದರು. 2006ರಲ್ಲಿ ಅವರಿಗೆ ಕೆಳಹಂತದ ಕೋರ್ಟ್ ​ ಐದು ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಆ ಬಳಿಕ ಕೆಲವೇ ದಿನಗಳಲ್ಲಿ ಜಾಮೀನು ಪಡೆದು ಅವರು ಹೊರ ಬಂದರು.

ಇದನ್ನೂ ಓದಿ: ಸಲ್ಮಾನ್ ಖಾನ್ ಸಹೋದರಿಗೆ ರಸ್ತೆ ಅಪಘಾತ; ಈಗ ಹೇಗಿದೆ ಪರಿಸ್ಥಿತಿ?

ಸಲ್ಮಾನ್ ಖಾನ್ ಅವರು ಸದ್ಯ ಎಆರ್ ಮುರುಗದಾಸ್ ನಿರ್ದೇಶನದ ‘ಸಿಖಂದರ್’ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಈ ಚಿತ್ರದಲ್ಲಿ ಸಲ್ಮಾನ್ ಖಾನ್​ಗೆ ಜೊತೆಯಾಗಿ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದಾರೆ. ಈ ವರ್ಷ ಈದ್ ಪ್ರಯುಕ್ತ ಸಿನಿಮಾ ರಿಲೀಸ್ ಆಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
Follow Us