Salman Khan: ದುಬಾರಿ ಮೊತ್ತಕ್ಕೆ ಮನೆಯನ್ನು ಬಾಡಿಗೆ ಕೊಟ್ಟ ಸಲ್ಮಾನ್​ ಖಾನ್​

| Updated By: ರಾಜೇಶ್ ದುಗ್ಗುಮನೆ

Updated on: Dec 16, 2021 | 7:46 PM

ಮುಂಬೈನ ಬಾಂದ್ರಾ ವೆಸ್ಟ್​​ನಲ್ಲಿರುವ ಶಿವ್​ ಆಸ್ಥಾನ್​ ಹೈಟ್ಸ್​​ನಲ್ಲಿ ಸಲ್ಮಾನ್​ ಖಾನ್ 14ನೇ ಫ್ಲೋರ್​ನಲ್ಲಿ​ ಫ್ಲ್ಯಾಟ್​ ಹೊಂದಿದ್ದಾರೆ. ಇದು 758 ಚದರ ಅಡಿ ಇದೆ.

Salman Khan: ದುಬಾರಿ ಮೊತ್ತಕ್ಕೆ ಮನೆಯನ್ನು ಬಾಡಿಗೆ ಕೊಟ್ಟ ಸಲ್ಮಾನ್​ ಖಾನ್​
ಸಲ್ಮಾನ್​ ಖಾನ್​
Follow us on

ಸಲ್ಮಾನ್​ ಖಾನ್​ ಚಿತ್ರರಂಗದ ಯಶಸ್ವಿ ನಟ. ಅವರು ಸಿನಿಮಾಗಾಗಿ ದೊಡ್ಡ ಮೊತ್ತದ ಸಂಭಾವನೆ ಪಡೆಯುತ್ತಾರೆ. ‘ಬಿಗ್​ ಬಾಸ್’​ ಕೂಡ ಅವರೇ ನಡೆಸಿಕೊಡುತ್ತಿದ್ದು ಇದಕ್ಕಾಗಿ ಸಲ್ಲು ನೂರಾರು ಕೋಟಿ ಜೇಬಿಗೆ ಇಳಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಸಲ್ಮಾನ್​ ಖಾನ್​ ಆದಾಯ ಇಷ್ಟಕ್ಕೆ ಸೀಮಿತವಾಗಿಲ್ಲ. ಹಲವು ಬ್ರ್ಯಾಂಡ್​ಗಳಿಗೆ ಅವರು ರಾಯಭಾರಿ. ಇನ್ನು, ಸಲ್ಮಾನ್​ ಖಾನ್​ ಹಲವು ವಲಯಗಳಲ್ಲಿ ಹೂಡಿಕೆ ಮಾಡಿದ್ದಾರೆ. ಮುಂಬೈ ಒಂದರಲ್ಲೇ ಸಾಕಷ್ಟು ಮನೆಗಳನ್ನು ಸಲ್ಮಾನ್​ ಖಾನ್​ ಹೊಂದಿದ್ದಾರೆ. ಸಲ್ಲು​ ಸಾಕಷ್ಟು ಮನೆಗಳನ್ನು ಬಾಡಿಗೆ ನೀಡಿದ್ದಾರೆ. ಈಗ ಅವರ ಅಪಾರ್ಟ್​ಮೆಂಟ್​ ಒಂದನ್ನು ಅವರು ಬಾಡಿಗೆ ನೀಡಿದ್ದಾರೆ. ಇದರ ಬಾಡಿಗೆ ಬರೋಬ್ಬರಿ 95 ಸಾವಿರ!

ಮುಂಬೈನ ಬಾಂದ್ರಾ ವೆಸ್ಟ್​​ನಲ್ಲಿರುವ ಶಿವ್​ ಆಸ್ಥಾನ್​ ಹೈಟ್ಸ್​​ನಲ್ಲಿ ಸಲ್ಮಾನ್​ ಖಾನ್ 14ನೇ ಫ್ಲೋರ್​ನಲ್ಲಿ​ ಫ್ಲ್ಯಾಟ್​ ಹೊಂದಿದ್ದಾರೆ. ಇದು 758 ಚದರ ಅಡಿ ಇದೆ. ಸಲ್ಮಾನ್​ ಖಾನ್​ ಬಾಂದ್ರಾದಲ್ಲಿರುವ ಗ್ಯಾಲಾಕ್ಸಿ ಅಪಾರ್ಟ್​ಮೆಂಟ್​ನಲ್ಲಿ ವಾಸವಾಗಿದ್ದಾರೆ. ಇದೆರಡೂ ಅಪಾರ್ಟ್​ಮೆಂಟ್​ಗಳು ತುಂಬಾನೇ ಹತ್ತಿರವಿದೆ.

ಕೆಲ ಮಾಧ್ಯಮಗಳು ವರದಿ ಮಾಡಿದ ಪ್ರಕಾರ ಡಿಸೆಂಬರ್​ 6ರಂದು ಈ ಸಲ್ಮಾನ್​ ಖಾನ್​ ಮನೆ ಬಾಡಿಗೆಗೆ ನೀಡಿದ್ದಾರೆ. ಈ ಒಪ್ಪಂದದ ಅವಧಿ 33 ತಿಂಗಳು ಇದೆ. ಪ್ರತಿ ತಿಂಗಳು 95 ಸಾವಿರ ರೂಪಾಯಿ ಬಾಡಿಗೆ ನೀಡಬೇಕು. 2.85 ಲಕ್ಷ ರೂಪಾಯಿ ಡಿಪಾಸಿಟ್​ ಇಡಬೇಕು. ಪ್ರತಿ ವರ್ಷ ಶೇ.5 ಬಾಡಿಗೆ ಮೊತ್ತವನ್ನು ಹೆಚ್ಚು ಮಾಡುವ ಬಗ್ಗೆ ಇದೆ ಎನ್ನಲಾಗಿದೆ.

ಸಲ್ಮಾನ್​ ಖಾನ್​ ಮುಂಬೈನಲ್ಲಿ ಹಲವು ಮನೆಗಳನ್ನು ಬಾಡಿಗೆ ನೀಡಿದ್ದಾರೆ. ಬಂದ್ರಾದಲ್ಲಿರುವ ಡುಪ್ಲೆಕ್ಸ್​ ಅಪಾರ್ಟ್​ಮೆಂಟ್​ಅನ್ನು 8.25 ಲಕ್ಷ ರೂಪಾಯಿಗೆ ಬಾಡಿಗೆ ನೀಡಿದ್ದಾರೆ. ಈ ಕಟ್ಟಡವನ್ನು ಸಲ್ಮಾನ್​ ಖಾನ್​ ವೆಂಚರ್​ ಪ್ರೈವೇಟ್​ ಲಿಮಿಟೆಡ್ ಅಡಿಯಲ್ಲಿ ರೆಂಟ್​ಗೆ ನೀಡಲಾಗಿದೆ. ಮಕ್ಬಾ ಹೈಟ್ಸ್​ ಅಪಾರ್ಟ್​ಮೆಂಟ್​ನ 17 ಹಾಗೂ 18ನೇ ಅಂತಸ್ತಿನಲ್ಲಿ ಈ ಡುಪ್ಲೆಕ್ಸ್​ ಇದೆ.

ಕತ್ರಿನಾ ಮದುವೆ ಆದ ನಂತರದಲ್ಲಿ ಸಲ್ಮಾನ್​ ಖಾನ್​ ಚರ್ಚೆಯಲ್ಲಿದ್ದಾರೆ. ಸಲ್ಮಾನ್​ ಖಾನ್​ ಅವರನ್ನು ಕತ್ರಿನಾ ಪ್ರೀತಿಸುತ್ತಿದ್ದರು. ಇವರ ಸಂಬಂಧ ಮುರಿದುಬಿದ್ದಿತ್ತು. ಆದರೆ, ಇಬ್ಬರ ನಡುವೆ ಒಳ್ಳೆಯ ಫ್ರೆಂಡ್​ಶಿಪ್​ ಇದೆ. ಅಚ್ಚರಿ ಎಂದರೆ, ಕತ್ರಿನಾಗೆ ಸಲ್ಮಾನ್​ ಕಡೆಯಿಂದ ಉಡುಗೊರೆ ಸಿಕ್ಕಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಸಲ್ಮಾನ್​ ಖಾನ್​ ಅವರು ಕತ್ರಿನಾಗೆ 3 ಕೋಟಿ ರೂಪಾಯಿ ಮೌಲ್ಯದ ರೇಂಜ್​ ರೋವರ್ ಕಾರನ್ನು ನೀಡಿದ್ದಾರೆ ಎಂದು ವರದಿ ಆಗಿದೆ. ಈ ಮೂಲಕ ಸಲ್ಮಾನ್​ ಖಾನ್​ ಅವರು ವಿಕ್ಕಿ ಹಾಗೂ ಕತ್ರಿನಾಗೆ ವಿಶೇಷವಾಗಿ ವಿಶ್​ ಮಾಡಿದ್ದಾರೆ.

ಇದನ್ನೂ ಓದಿ:ಕತ್ರಿನಾ ಕೈಫ್​ಗೆ ಗಿಫ್ಟ್​ ಕೊಡೋಕೆ ಕೋಟಿಕೋಟಿ ಖರ್ಚು ಮಾಡಿದ ಸಲ್ಮಾನ್​, ರಣಬೀರ್​?

 ಸೆಲ್ಫಿ ಗೆದುಕೊಳ್ಳಲು ಬಂದ ಅಭಿಮಾನಿ ಬಗ್ಗೆ ಸಿಟ್ಟಾದ ಸಲ್ಮಾನ್​ ಖಾನ್ ಮಾಡಿದ್ದೇನು ನೋಡಿ