AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಿಟ್ ಆ್ಯಂಡ್ ರನ್​ ಕೇಸ್​ನಿಂದ ಹೊರ ಬರಲು 25 ಕೋಟಿ ರೂ.​ ಖರ್ಚು ಮಾಡಿದ್ದ ಸಲ್ಮಾನ್ ಖಾನ್

2002ರಲ್ಲಿ ಸಲ್ಮಾನ್ ಖಾನ್​ಗೆ ಸೇರಿದ ಕಾರು ಮುಂಬೈನ ಬಾಂದ್ರಾದಲ್ಲಿ ಪಾದಾಚಾರಿ ರಸ್ತೆ ಮೇಲೆ ನುಗ್ಗಿತ್ತು. ಅಲ್ಲಿ ಮಲಗಿದ್ದ ಅನೇಕರು ಮೃತಪಟ್ಟಿದ್ದರು. ಆ ಕಾರನ್ನು ಸಲ್ಮಾನ್ ಖಾನ್ ಕುಡಿದು ಓಡಿಸುತ್ತಿದ್ದರು ಎಂಬ ಆರೋಪ ಇತ್ತು.

ಹಿಟ್ ಆ್ಯಂಡ್ ರನ್​ ಕೇಸ್​ನಿಂದ ಹೊರ ಬರಲು 25 ಕೋಟಿ ರೂ.​ ಖರ್ಚು ಮಾಡಿದ್ದ ಸಲ್ಮಾನ್ ಖಾನ್
ಸಲ್ಮಾನ್
TV9 Web
| Updated By: ರಾಜೇಶ್ ದುಗ್ಗುಮನೆ|

Updated on: Nov 26, 2022 | 1:50 PM

Share

ನಟ ಸಲ್ಮಾನ್ ಖಾನ್ (Salman Khan) ಅವರು ಹಲವು ವಿವಾದಗಳ ಮೂಲಕ ಸುದ್ದಿ ಆಗಿದ್ದಾರೆ. ಅದರಲ್ಲಿ ಹಿಟ್ ಆ್ಯಂಡ್ ರನ್ ಕೇಸ್ ಕೂಡ ಒಂದು. ಈ ಪ್ರಕರಣದಲ್ಲಿ ಅವರು ಸಾಕಷ್ಟು ತೊಂದರೆ ಅನುಭವಿಸಿದ್ದರು. ಸಲ್ಮಾನ್ ಖಾನ್ ಅವರಿಗೆ ಜೈಲು ಶಿಕ್ಷೆ ಕೂಡ ಆಯಿತು. ಆ ಬಳಿಕ ಮುಂಬೈ ಹೈಕೋರ್ಟ್​ನಿಂದ ಅವರಿಗೆ ರಿಲೀಫ್ ಸಿಕ್ಕಿತು. ಸಲ್ಮಾನ್ ಖಾನ್ ಅವರು ಈ ಪ್ರಕರಣದಲ್ಲಿ ಬರೋಬ್ಬರಿ 25 ಕೋಟಿ ರೂಪಾಯಿ ಖರ್ಚು ಮಾಡಿದ್ದರು. ಈ ವಿಚಾರವನ್ನು ಅವರ ತಂದೆ ಸಲಿಮ್ ಖಾನ್ (Salim Khan) ಹೇಳಿಕೊಂಡಿದ್ದರು.

2002ರಲ್ಲಿ ಸಲ್ಮಾನ್ ಖಾನ್​ಗೆ ಸೇರಿದ ಕಾರು ಮುಂಬೈನ ಬಾಂದ್ರಾದಲ್ಲಿ ಪಾದಾಚಾರಿ ರಸ್ತೆ ಮೇಲೆ ನುಗ್ಗಿತ್ತು. ಅಲ್ಲಿ ಮಲಗಿದ್ದ ಅನೇಕರು ಮೃತಪಟ್ಟಿದ್ದರು. ಆ ಕಾರನ್ನು ಸಲ್ಮಾನ್ ಖಾನ್ ಕುಡಿದು ಓಡಿಸುತ್ತಿದ್ದರು ಎಂಬ ಆರೋಪ ಇತ್ತು. ಸೆಷನ್​ ಕೋರ್ಟ್​ 2015ರಲ್ಲಿ ಸಲ್ಮಾನ್ ಖಾನ್​ಗೆ ಐದು ವರ್ಷ ಜೈಲು ಶಿಕ್ಷೆ ಘೋಷಿಸಿತು. ಕೆಲ ದಿನ ಸಲ್ಮಾನ್ ಖಾನ್ ಜೈಲಿನಲ್ಲಿ ಕಳೆದರು. ಆ ಬಳಿಕ ಡಿಸೆಂಬರ್ 2015ರಂದು ಬಾಂಬೆ ಹೈಕೋರ್ಟ್ ಸಲ್ಮಾನ್ ಖಾನ್​ಗೆ ರಿಲೀಫ್ ನೀಡಿತು.

ಈ ವೇಳೆ ಸಲಿಮ್​ ಖಾನ್ ಅವರು ಮಾತನಾಡಿದ್ದರು. ‘ಎಲ್ಲರಿಗೂ ಖುಷಿಯಾಗಿದೆ. ಸಲ್ಮಾನ್ ಖಾನ್​ಗೆ ಕ್ಲೋಸ್ ಆಗಿರುವ ಪ್ರತಿಯೊಬ್ಬರಿಗೂ ಸಂತಸ ಆಗಿದೆ. ಕೆಲ ದಿನ ಸಲ್ಮಾನ್ ಜೈಲಿನಲ್ಲಿದ್ದ. ಅವನು ಈ ಕೇಸ್​ಗಾಗಿ 20-25 ಕೋಟಿ ರೂಪಾಯಿ ಖರ್ಚು ಮಾಡಿದ್ದಾನೆ. ಇದರ ಜತೆ ಬೆಟ್ಟದಷ್ಟು ಒತ್ತಡ ಕೂಡ ಇತ್ತು’ ಎಂದು ಅವರು ಹೇಳಿದ್ದರು.

ಇದನ್ನೂ ಓದಿ: ತೆಲುಗು ಚಿತ್ರರಂಗದಿಂದ ದೂರ ಉಳಿಯಲು ನಿರ್ಧರಿಸಿದ ಸಲ್ಮಾನ್ ಖಾನ್? ಸ್ಟಾರ್ ನಿರ್ದೇಶಕನ ಆಫರ್ ರಿಜೆಕ್ಟ್​

ಸಲ್ಮಾನ್ ಖಾನ್ ಅವರು ಕೃಷ್ಣ ಮೃಗ ಹತ್ಯೆ ಮಾಡಿದ ಪ್ರಕರಣದಲ್ಲೂ ವಿಚಾರಣೆ ಎದುರಿಸುತ್ತಿದ್ದಾರೆ. 1998ರಲ್ಲಿ ‘ಹಮ್ ಸಾಥ್ ಸಾಥ್ ಹೇ’ ಚಿತ್ರದ ಶೂಟಿಂಗ್​ಗಾಗಿ ​ರಾಜಸ್ಥಾನದ ಜೋಧ್‌ಪುರಕ್ಕೆ ತೆರಳಿದ್ದ ವೇಳೆ ಸಲ್ಮಾನ್​ ಖಾನ್ ಅವರು ಸಿನಿಮಾ ತಂಡದ ಕೆಲವರ ಜತೆ ಸಫಾರಿಗೆ ತೆರಳಿದ್ದರು. ಆ ಸಮಯದಲ್ಲಿ ಅವರು ಒಂದು ಕೃಷ್ಣ ಮೃಗವನ್ನು ಬೇಟೆಯಾಡಿದ್ದರು ಎನ್ನಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಸೆಷನ್ಸ್​ ನ್ಯಾಯಾಲಯ ಅವರಿಗೆ ಐದು ವರ್ಷ ಶಿಕ್ಷೆಯನ್ನೂ ವಿಧಿಸಿತ್ತು. ಆ ಬಳಿಕ ಸಲ್ಮಾನ್ ಖಾನ್​ ಅವರು ಈ ಪ್ರಕರಣಲ್ಲಿ ಜಾಮೀನು ಪಡೆದು ಹೊರ ಬಂದಿದ್ದರು. ರಾಜಸ್ಥಾನ ಹೈಕೋರ್ಟ್​ನಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದೆ.

ಇನ್ನಷ್ಟು ಸಿನಿಮಾ ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ