ತೆಲುಗು ಚಿತ್ರರಂಗದಿಂದ ದೂರ ಉಳಿಯಲು ನಿರ್ಧರಿಸಿದ ಸಲ್ಮಾನ್ ಖಾನ್? ಸ್ಟಾರ್ ನಿರ್ದೇಶಕನ ಆಫರ್ ರಿಜೆಕ್ಟ್
ಸಲ್ಮಾನ್ ಖಾನ್ ಅವರು ಬಾಲಿವುಡ್ನಲ್ಲಿ ದೊಡ್ಡ ಮಟ್ಟದ ಯಶಸ್ಸು ಪಡೆದವರು. ಆದರೆ, ಇತ್ತೀಚೆಗೆ ಅವರಿಗೆ ಹೇಳಿಕೊಳ್ಳುವಂತಹ ಗೆಲುವು ಸಿಕ್ಕಿಲ್ಲ. ಈ ವಿಚಾರದಲ್ಲಿ ಅವರಿಗೆ ಬೇಸರ ಇದೆ. ಇದೇ ಸಂದರ್ಭದಲ್ಲಿ ಅವರು ತೆಲುಗು ಚಿತ್ರರಂಗಕ್ಕೆ ಕಾಲಿಟ್ಟಿದ್ದರು.
ನಟ ಸಲ್ಮಾನ್ ಖಾನ್ (Salman Khan) ಅವರು ‘ಗಾಡ್ ಫಾದರ್’ ಚಿತ್ರದ (GodFather Movie) ಮೂಲಕ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟರು. ಈ ಚಿತ್ರದಲ್ಲಿ ಚಿರಂಜೀವಿ ಅವರು ಲೀಡ್ ರೋಲ್ ಮಾಡಿದರೆ ಸಲ್ಮಾನ್ ಖಾನ್ ಅವರು ಪ್ರಮುಖ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡರು. ಆದರೆ, ಈ ಚಿತ್ರ ಹೇಳಿಕೊಳ್ಳುವಂತಹ ಯಶಸ್ಸು ಕಂಡಿಲ್ಲ. ಸಲ್ಮಾನ್ ಖಾನ್ ಅವರು ನಟಿಸಿದ ಹೊರತಾಗಿಯೂ ಈ ಸಿನಿಮಾ ಹಿಂದಿ ಬೆಲ್ಟ್ನಲ್ಲಿ ಕಳಪೆ ಕಲೆಕ್ಷನ್ ಮಾಡಿತು. ಈಗ ಸಲ್ಮಾನ್ ಖಾನ್ ಅವರು ತೆಲುಗು ಚಿತ್ರರಂಗದಿಂದ ದೂರ ಉಳಿಯುವ ಪ್ಲ್ಯಾನ್ನಲ್ಲಿ ಇದ್ದಾರೆ ಎಂದು ವರದಿ ಆಗಿದೆ.
ಸಲ್ಮಾನ್ ಖಾನ್ ಅವರು ಬಾಲಿವುಡ್ನಲ್ಲಿ ದೊಡ್ಡ ಮಟ್ಟದ ಯಶಸ್ಸು ಪಡೆದವರು. ಆದರೆ, ಇತ್ತೀಚೆಗೆ ಅವರಿಗೆ ಹೇಳಿಕೊಳ್ಳುವಂತಹ ಗೆಲುವು ಸಿಕ್ಕಿಲ್ಲ. ಈ ವಿಚಾರದಲ್ಲಿ ಅವರಿಗೆ ಬೇಸರ ಇದೆ. ಇದೇ ಸಂದರ್ಭದಲ್ಲಿ ಅವರು ತೆಲುಗು ಚಿತ್ರರಂಗಕ್ಕೆ ಕಾಲಿಟ್ಟಿದ್ದರು. ಗೆಳೆಯ ಚಿರಂಜೀವಿಗಾಗಿ ‘ಗಾಡ್ಫಾದರ್’ ಚಿತ್ರದಲ್ಲಿ ನಟಿಸಿದ್ದರು. ಈ ಸಿನಿಮಾ ಮಲಯಾಳಂನ ‘ಲೂಸಿಫರ್’ ಚಿತ್ರದ ರಿಮೇಕ್ ಆಗಿತ್ತು. ಮೊದಲ ಎರಡು ದಿನ ಸಿನಿಮಾ ಸದ್ದು ಮಾಡಿದ್ದು ಬಿಟ್ಟರೆ ದೊಡ್ಡ ಕಲೆಕ್ಷನ್ ಮಾಡಲಿಲ್ಲ.
ಸಲ್ಮಾನ್ ಖಾನ್ ಅವರಿಗೆ ಇತ್ತೀಚೆಗೆ ತೆಲುಗು ನಿರ್ದೇಶಕ ಹರೀಶ್ ಶಂಕರ್ ಕಥೆ ಹೇಳಿದ್ದರು. ‘ಗಬ್ಬರ್’, ‘ಡಿಜೆ’ ಮೊದಲಾದ ಸಿನಿಮಾಗಳನ್ನು ನಿರ್ದೇಶನ ಮಾಡಿದ ಖ್ಯಾತಿ ಹರೀಶ್ ಶಂಕರ್ಗೆ ಇದೆ. ಅವರು ಪವನ್ ಕಲ್ಯಾಣ್ ನಟಿಸಲಿರುವ ‘ಭವದೀಯುಡು ಭಗತ್ ಸಿಂಗ್’ ಚಿತ್ರದ ಕೆಲಸಗಳಲ್ಲಿ ಭಾಗಿ ಆಗಬೇಕಿತ್ತು. ಆದರೆ, ಪವನ್ ಕಲ್ಯಾಣ್ ರಾಜಕೀಯದಲ್ಲಿ ಬ್ಯುಸಿ ಆದ್ದರಿಂದ ಬೇರೆ ನಟರ ಜತೆ ಕೆಲಸ ಮಾಡುವುದು ಹರೀಶ್ ಶಂಕರ್ಗೆ ಅನಿವಾರ್ಯವಾಗಿದೆ. ಹೀಗಾಗಿ, ಸಲ್ಲು ಕಾಲ್ಶೀಟ್ ಕೇಳಿದ್ದರು ಹರೀಶ್.
ಇದನ್ನೂ ಓದಿ: ‘ಸಲ್ಮಾನ್ ಖಾನ್, ಶಾರುಖ್ ಮಗ ಡ್ರಗ್ಸ್ ತೆಗೆದುಕೊಳ್ತಾರೆ’; ನೇರವಾಗಿ ಆರೋಪ ಮಾಡಿದ ಬಾಬಾ ರಾಮ್ದೇವ್
ಸಲ್ಮಾನ್ ಖಾನ್ ಕಥೆ ಕೇಳಿದ್ದರು. ಸ್ಕ್ರಿಪ್ಟ್ನ ಇಂಗ್ಲಿಷ್ನಲ್ಲಿ ಕಳುಹಿಸುವಂತೆ ಸಲ್ಲು ಕೇಳಿದ್ದರು. ಹರೀಶ್ ಶಂಕರ್ ಅವರು ಇತ್ತೀಚೆಗೆ ಸ್ಕ್ರಿಪ್ಟ್ನ ಸಲ್ಲುಗೆ ಕಳುಹಿಸಿದ್ದರು. ಆದರೆ, ಇದನ್ನು ರಿಜೆಕ್ಟ್ ಮಾಡಿದ್ದಾರೆ ಸಲ್ಮಾನ್ ಖಾನ್. ಮೂಲಗಳ ಪ್ರಕಾರ ಈ ಚಿತ್ರ ಹಿಂದಿ ಹಾಗೂ ತೆಲುಗಿನಲ್ಲಿ ತರುವ ಪ್ಲ್ಯಾನ್ ಇತ್ತು. ಆದರೆ, ತೆಲುಗಿನಲ್ಲಿ ಸೋಲು ಕಂಡ ಕಾರಣ ಸಲ್ಮಾನ್ ಖಾನ್ ಅವರು ಬಾಲಿವುಡ್ ನಿರ್ದೇಶಕರ ಜತೆ ಮಾತ್ರ ಕೆಲಸ ಮಾಡುವ ಆಲೋಚನೆಯಲ್ಲಿದ್ದಾರೆ ಎನ್ನಲಾಗಿದೆ.