AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

2nd Life Movie: ಮೂರು ಭಾಷೆಗಳಲ್ಲಿ ಬರುತ್ತಿದೆ ‘ಸೆಕೆಂಡ್​ ಲೈಫ್​’; ಇದು ಕರುಳ ಬಳ್ಳಿ ಕಥೆ

‘ಸೆಕೆಂಡ್​ ಲೈಫ್​’ ಚಿತ್ರಕ್ಕೆ ರಾಜು ದೇವಸಂದ್ರ ನಿರ್ದೇಶನ ಮಾಡಿದ್ದಾರೆ. ಜಯಣ್ಣ ಫಿಲ್ಮ್ಸ್ ಮತ್ತು ಶುಕ್ರಾ ಫಿಲ್ಮ್ಸ್​ ಜಂಟಿಯಾಗಿ ಈ ಸಿನಿಮಾವನ್ನು ನಿರ್ಮಿಸಿವೆ.

2nd Life Movie: ಮೂರು ಭಾಷೆಗಳಲ್ಲಿ ಬರುತ್ತಿದೆ ‘ಸೆಕೆಂಡ್​ ಲೈಫ್​’; ಇದು ಕರುಳ ಬಳ್ಳಿ ಕಥೆ
ಸಿಂಧೂ ರಾವ್, ಆದರ್ಶ್ ಗುಂಡುರಾಜ್
TV9 Web
| Updated By: ಮದನ್​ ಕುಮಾರ್​|

Updated on:Nov 18, 2022 | 3:42 PM

Share

ಪ್ರತಿಷ್ಠಿತ ‘ಪಿಆರ್​ಕೆ ಆಡಿಯೋ’ ಮೂಲಕ ‘ಸೆಕೆಂಡ್​ ಲೈಫ್​’ (2nd Life Kannada Movie) ಸಿನಿಮಾದ ಟ್ರೇಲರ್​ ರಿಲೀಸ್​ ಆಗಿದೆ. ಟ್ರೇಲರ್​ ಬಿಡುಗಡೆ ಸಲುವಾಗಿ ಈ ಚಿತ್ರತಂಡ ಸುದ್ದಿಗೋಷ್ಠಿ ಆಯೋಜಿಸಿತ್ತು. ಸಿನಿಮಾ ಬಗ್ಗೆ ಒಂದಷ್ಟು ಮಾಹಿತಿ ಹಂಚಿಕೊಳ್ಳಲಾಗಿದೆ. ‘ಸೆಕೆಂಡ್​ ಲೈಫ್​’ ವಿಶೇಷವಾದ ಕಥಾಹಂದರ ಹೊಂದಿದೆ ಎಂದು ತಂಡ ಹೇಳಿಕೊಂಡಿದೆ. ಈ ಸಿನಿಮಾ ಮೂರು ಭಾಷೆಗಳಲ್ಲಿ ಬಿಡುಗಡೆ ಆಗಲಿದೆ. ಆದರ್ಶ್​ ಗುಂಡುರಾಜ್​ (Adarsh Gunduraj) ಹಾಗೂ ಸಿಂಧೂ ರಾವ್​ (Sindhu Rao) ಅವರು ಈ ಸಿನಿಮಾದಲ್ಲಿ ಪ್ರಮುಖ ಪಾತ್ರಗಳನ್ನು ನಿಭಾಯಿಸಿದ್ದಾರೆ. ಮಗು ಜನಿಸಿದಾಗ ಇರುವ ಹೊಕ್ಕುಳು ಬಳ್ಳಿ ಕುರಿತಾದ ಕಥೆ ‘ಸೆಕೆಂಡ್​ ಲೈಫ್​’ ಸಿನಿಮಾದಲ್ಲಿ ಇದೆ. ಆ ಕಾರಣದಿಂದ ಈ ಚಿತ್ರ ಕುತೂಹಲ ಸೃಷ್ಟಿ ಮಾಡಿದೆ.

ಮಗು ಜನಿಸಿದ ನಂತರ ಹೊಕ್ಕಳು ಬಳ್ಳಿಯನ್ನು ಎಸೆಯಲಾಗುತ್ತದೆ. ಆದರೆ ಅದನ್ನು ಕ್ಯಾನ್ಸರ್‌ ರೋಗಿಗಳ ಚಿಕಿತ್ಸೆಗೆ ಬಳಸಿಕೊಳ್ಳಲಾಗುತ್ತದೆ ಎಂಬುದು ಬಹುತೇಕರಿಗೆ ತಿಳಿದಿಲ್ಲ. ಹಲವು ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಇದು ಔಷಧಿಯ ರೂಪದಲ್ಲಿ ಬಳಕೆ ಆಗುತ್ತದೆ. ಹೊಕ್ಕಳ ಬಳ್ಳಿಯಲ್ಲಿ ಹೇರಳವಾಗಿರುವ ಜೀವಕಣಗಳನ್ನು ಪ್ರಯೋಗಾಲಯದಲ್ಲಿ ಪ್ರತ್ಯೇಕಿಸಿ, ರೋಗಿಗೆ ನೀಡಿದರೆ ಹಲವಾರು ರೋಗಗಳ ನಿವಾರಣೆಗೆ ಸಹಕಾರಿ ಆಗುತ್ತದೆ. ಕ್ಯಾನ್ಸರ್​, ರಕ್ತ ಹೀನತೆ ಸೇರಿದಂತೆ ಅನೇಕ ರೋಗಗಳ ಚಿಕಿತ್ಸೆಯಲ್ಲಿ ಇದು ಬಳಕೆ ಆಗುತ್ತದೆ. ಕರ್ನಾಕಟದಲ್ಲೂ ಎಷ್ಟೋ ಸಾವಿರ ಮಂದಿ ಕ್ಯಾನ್ಸರ್​ ರೋಗಿಗಳು ಇದ್ದಾರೆ. ಕರುಳಬಳ್ಳಿಯನ್ನು ಶೇಖರಿಸಿಡುವ ಕಾರ್ಯದಿಂದ ಅನೇಕರಿಂದ ಸೆಕೆಂಡ್​ ಲೈಫ್​ ಸಿಗುತ್ತದೆ. ಈ ವಿಚಾರವನ್ನೇ ಇಟ್ಟುಕೊಂಡು ಸಿನಿಮಾ ಮಾಡಲಾಗಿದೆ.

‘ಸೆಕೆಂಡ್​ ಲೈಫ್​’ ಚಿತ್ರಕ್ಕೆ ರಾಜು ದೇವಸಂದ್ರ ನಿರ್ದೇಶನ ಮಾಡಿದ್ದಾರೆ. ‘ಜೀವನದಲ್ಲಿ ಯಾವುದೋ ದೊಡ್ಡ ಅನಾಹುತ ನಡೆದು ಅದರಿಂದ ಪಾರಾದಾಗ ಹೊಸ ಜೀವನ ಆರಂಭವಾಗಿದೆ ಅಂತ ಎಲ್ಲರೂ ಹೇಳ್ತಾರೆ. ಈ ರೀತಿಯ ಘಟನೆ ನಮ್ಮ ಚಿತ್ರದಲ್ಲಿ ನಡೆಯುವುದರಿಂದ ‘2nd ಲೈಫ್’ ಅಂತ ಶೀರ್ಷಿಕೆ ಇಡಲಾಗಿದೆ. ಈಗ ಟ್ರೇಲರ್ ಅನಾವರಣ ಆಗಿದೆ. ಶೀಘ್ರದಲ್ಲೇ ಚಿತ್ರ ತೆರೆಗೆ ಬರಲಿದೆ’ ಎಂದು ನಿರ್ದೇಶಕರು ಮಾಹಿತಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ
Image
Kantara 50 Days: ಯಶಸ್ವಿಯಾಗಿ 50 ದಿನ ಪೂರೈಸಿದ ‘ಕಾಂತಾರ’; ಇನ್ನೂ ನಿಂತಿಲ್ಲ ಅಬ್ಬರ
Image
Ashika Ranganath: ಕುಡಿದು ಕಿರಿಕ್​ ಮಾಡಿಕೊಂಡ್ರಾ ಆಶಿಕಾ ರಂಗನಾಥ್​? ವಿಡಿಯೋ ವೈರಲ್​
Image
‘ನಾನು ತೆಲುಗು ನಟರ ಹಿಂದೆ ಹೋಗಿಲ್ಲ, ಅವರೇ ನನ್ನ ಹುಡುಕಿ ಬಂದರು’; ಪ್ರಶಾಂತ್ ನೀಲ್
Image
ಬೀದಿಗೆ ಬಿತ್ತು ಪೋಷಕ ಕಲಾವಿದರ ಸಂಘದ ಗಲಾಟೆ; ನಟಿ ರಾಣಿ ಮಾಡಿದ ಆರೋಪಗಳು ಒಂದೆರಡಲ್ಲ

ಈ ಮೊದಲು ‘ಸ್ವಾರ್ಥ ರತ್ನ’ ಚಿತ್ರದಲ್ಲಿ ‌ನಟಿಸಿದ್ದ ಆದರ್ಶ ಗುಂಡುರಾಜ್ ಅವರು ಈಗ ‘ಸೆಕೆಂಡ್​ ಲೈಫ್’ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. ಅವರು ಮೂಲತಃ ಆಡಿಟರ್. ಆದರ್ಶ ಗುಂಡುರಾಜ್ ಅವರಿಗೆ ಜೋಡಿಯಾಗಿ ಸಿಂಧೂ ರಾವ್ ನಟಿಸಿದ್ದು, ಅಂಧೆಯ ಪಾತ್ರಕ್ಕೆ ಅವರು ಬಣ್ಣ ಹಚ್ಚಿದ್ದಾರೆ. ರಮೇಶ್​ ಕೊಯಿರಾ ಛಾಯಾಗ್ರಹಣ, ಆರವ್​ ರಿಷಿಕ್​ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ. ರುದ್ರಮುನಿ ಸಹ-ನಿರ್ಮಾಪಕರಾಗಿದ್ದಾರೆ. ಜಯಣ್ಣ ಫಿಲ್ಮ್ಸ್ ಮತ್ತು ಶುಕ್ರಾ ಫಿಲ್ಮ್ಸ್​ ಜಂಟಿಯಾಗಿ ಈ ಸಿನಿಮಾವನ್ನು ನಿರ್ಮಿಸಿವೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 3:42 pm, Fri, 18 November 22

ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ