ಬಹಳ ಜನ ಹಿಂದೆ ಬಿದ್ದಿದ್ದಾರೆ, ಆದರೆ…: ಸಲ್ಮಾನ್ ಹೊಸ ಸಿನಿಮಾ ಟೀಸರ್ ರಿಲೀಸ್

|

Updated on: Dec 28, 2024 | 6:41 PM

Sikandar movie teaser: ಸಲ್ಮಾನ್ ಖಾನ್ ನಟನೆಯ ‘ಸಿಖಂಧರ್’ ಸಿನಿಮಾದ ಟೀಸರ್ ಇಂದು (ಡಿಸೆಂಬರ್ 28) ಬಿಡುಗಡೆ ಆಗಿದೆ. ಮನಮೋಹನ್ ಸಿಂಗ್ ನಿಧನದ ಕಾರಣದಿಂದ ಟೀಸರ್ ಬಿಡುಗಡೆ ಮುಂದೂಡಲಾಗಿತ್ತು. ಈಗ ಬಿಡುಗಡೆ ಆಗಿರುವ 1:41 ನಿಮಿಷದ ಟೀಸರ್​ನಲ್ಲಿ ಸಲ್ಲು ಭಾಯ್ ಮಿಂಚಿದ್ದಾರೆ. ಸಿನಿಮಾ ಮುಂದಿನ ವರ್ಷ ಈದ್​ ಹಬ್ಬಕ್ಕೆ ಬಿಡುಗಡೆ ಆಗಲಿದೆ.

ಬಹಳ ಜನ ಹಿಂದೆ ಬಿದ್ದಿದ್ದಾರೆ, ಆದರೆ...: ಸಲ್ಮಾನ್ ಹೊಸ ಸಿನಿಮಾ ಟೀಸರ್ ರಿಲೀಸ್
Sallu
Follow us on

‘ಬಹಳಷ್ಟು ಜನ ನನ್ನ ಹಿಂದೆ ಬಿದ್ದಿದ್ದಾರೆ ಎಂದು ಕೇಳಿದ್ದೇನೆ, ಆದರೆ ನಾನು ತಿರುಗಿ ಬೀಳುವವರೆಗೆ ಮಾತ್ರ’ ಇದು ಸಲ್ಮಾನ್ ಖಾನ್ ನಟನೆಯ ‘ಸಿಖಂಧರ್’ ಸಿನಿಮಾದ ಟೀಸರ್​ನ ಹೈಲೈಟ್ ಡೈಲಾಗ್. ಸಲ್ಮಾನ್ ಖಾನ್ ಜೀವ ತೆಗೆಯಲು ದೊಡ್ಡ ದೊಡ್ಡ ಮಾಫಿಯಾ ಗ್ಯಾಂಗ್​ಗಳು ಹಿಂದೆ ಬಿದ್ದಿವೆ ಆ ಗ್ಯಾಂಗ್​ಗಳಿಗೆ ಟಾಂಗ್ ಕೊಡುವ ರೀತಿಯಲ್ಲಿ ಟೀಸರ್​ನ ಡೈಲಾಗ್ ಇದೆ. ‘ಸಿಖಂಧರ್’ ಸಿನಿಮಾದ ಟೀಸರ್​ ಇಂದು ಬಿಡುಗಡೆ ಆಗಿದ್ದು, 1:41 ನಿಮಿಷದ ಟೀಸರ್​ನಲ್ಲಿ ಸಲ್ಲು ಭಾಯ್ ಮಿಂಚಿದ್ದಾರೆ.

ಟೀಸರ್​ನಲ್ಲಿ ಸಣ್ಣ ಆಕ್ಷನ್ ದೃಶ್ಯವೊಂದನ್ನು ತೋರಿಸಲಾಗಿದೆ. ಸಲ್ಮಾನ್ ಖಾನ್ ಎಂದಿನ ಖದರ್​ನಲ್ಲಿ ಟೀಸರ್​ನಲ್ಲಿ ಕಾಣಿಸಿಕೊಂಡಿದ್ದಾರೆ. ‘ಸಿಂಖಧರ್’ ಸಿನಿಮಾವನ್ನು ತಮಿಳಿನ ಖ್ಯಾತ ನಿರ್ದೇಶಕ ಎಆರ್ ಮುರುಗದಾಸ್ ನಿರ್ದೇಶನ ಮಾಡಿದ್ದು, ಸಲ್ಮಾನ್ ಖಾನ್​ರ ಗೆಳೆಯ ಸಾಜಿದ್ ನಾಡಿಯಾವಾಲ ನಿರ್ಮಾಣ ಮಾಡಿದ್ದಾರೆ. ಸಿನಿಮಾದಲ್ಲಿ ನಾಯಕಿಯಾಗಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಆದರೆ ಟೀಸರ್​ನಲ್ಲಿ ಸಲ್ಮಾನ್ ಖಾನ್ ಹೊರತಾಗಿ ಇನ್ಯಾವ ನಟ ಅಥವಾ ನಟಿಯರ ದರ್ಶನವನ್ನೂ ಮಾಡಿಸಿಲ್ಲ ನಿರ್ದೇಶಕರು.

‘ಸಿಖಂಧರ್’ ಸಿನಿಮಾ ಪಕ್ಕಾ ಆಕ್ಷನ್ ಥ್ರಿಲ್ಲರ್ ಸಿನಿಮಾ ಆಗಿರಲಿದೆ ಎಂಬುದನ್ನು ಟೀಸರ್​ನಲ್ಲಿಯೇ ತೋರಿಸಿದ್ದಾರೆ. ಟೀಸರ್​ನಲ್ಲಿ ಹಲವು ಬಂದೂಕುಗಳು, ದುಷ್ಟರ ಕೂಟಗಳು ನೋಡ ಸಿಗುತ್ತವೆ. ಮುರುಗದಾಸ್ ಈ ಹಿಂದೆ, ‘ಗಜಿನಿ’, ‘ಏಳವಂ ಅರಿವು’, ‘ಸ್ಟಾಲಿನ್’, ‘ತುಪ್ಪಾಕಿ’, ‘ಕತ್ತಿ’,‘ಸ್ಪೈಡರ್’ ಇನ್ನೂ ಕೆಲವು ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಹಿಂದಿಯಲ್ಲಿ ಆಮಿರ್ ಖಾನ್ ಜೊತೆಗೆ ‘ಗಜಿನಿ’, ಅಕ್ಷಯ್ ಕುಮಾರ್ ಜೊತೆಗೆ ‘ಹಾಲಿಡೆ’, ಸೋನಾಕ್ಷಿ ಸಿನ್ಹಾ ನಟನೆಯ ‘ಅಕಿರ’, ಸಲ್ಮಾನ್ ಖಾನ್ ನಟನೆಯ ‘ಜೈ ಹೋ’ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ‘ಸಿಖಂಧರ್’ ಸಿನಿಮಾ ಸಲ್ಮಾನ್ ಖಾನ್ ಜೊತೆಗೆ ಮುರುಗದಾಸ್​ಗೆ ಎರಡನೇ ಸಿನಿಮಾ.

ಇದನ್ನೂ ಓದಿ:ಮನಮೋಹನ್ ಸಿಂಗ್ ನಿಧನದ ಬಳಿಕ ಪ್ರಮುಖ ನಿರ್ಧಾರ ತೆಗೆದುಕೊಂಡ ಸಲ್ಮಾನ್ ಖಾನ್

ಇನ್ನು ಸಲ್ಮಾನ್ ಖಾನ್, ಸತತ ಸೋಲಿನಿಂದ ಕಂಗೆಟ್ಟಿದ್ದಾರೆ. ಸಲ್ಮಾನ್ ಖಾನ್ ನಟನೆಯ ‘ರಾಧೆ’, ‘ಅಂತಿಮ್’, ‘ಕಿಸಿ ಕಾ ಭಾಯ್ ಕಿಸಿ ಕಿ ಜಾನ್’, ‘ಟೈಗರ್ 3’ ಸಿನಿಮಾಗಳು ಅಷ್ಟೇನು ಒಳ್ಳೆಯ ಪ್ರದರ್ಶನ ಕಂಡಿಲ್ಲ. ಹಾಗಾಗಿ ‘ಸಿಖಂಧರ್’ ಸಿನಿಮಾ ಮೇಲೆ ಅವರಿಗೆ ಹೆಚ್ಚಿನ ನಿರೀಕ್ಷೆ ಇದೆ. ಟೀಸರ್​ನಲ್ಲಿಯೇ ಹೇಳಿರುವಂತೆ ಈ ಸಿನಿಮಾ 2025ರ ಈದ್​ ಹಬ್ಬಕ್ಕೆ ತೆರೆಗೆ ಬರಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:34 pm, Sat, 28 December 24