ಮಾಡಿದ್ದು ಬೆರಳೆಣಿಕೆ ಸಿನಿಮಾ ಆದರೂ 1500 ಕೋಟಿ ರೂಪಾಯಿ ಒಡೆಯ ಈ ಹೀರೋ

Zayed Khan: ಚಿತ್ರರಂಗದಲ್ಲಿ ವರ್ಷಗಳ ಕಾಲ ಕೆಲಸ ಮಾಡಿದರೂ ಸ್ವಂತಕ್ಕೆ ಆಸ್ತಿ ಮಾಡಿಕೊಳ್ಳಲಾಗದೆ ಕೊನೆಗಾಲದಲ್ಲಿ ಸರ್ಕಾರದ ಅಥವಾ ಸ್ಟಾರ್ ನಟರ ಸಹಾಯ ಕೇಳುವ ನಟರು ಹಲವರಿದ್ದಾರೆ. ಆದರೆ ಇಲ್ಲೊಬ್ಬ ನಟರಿದ್ದಾರೆ. ಈ ನಟ ನಟಿಸಿದ್ದು ಕೆಲವೇ ಸಿನಿಮಾಗಳಲ್ಲಿ ಆದರೆ ಸಾವಿರಾರು ಕೋಟಿ ಆಸ್ತಿಯ ಒಡೆಯ.

ಮಾಡಿದ್ದು ಬೆರಳೆಣಿಕೆ ಸಿನಿಮಾ ಆದರೂ 1500 ಕೋಟಿ ರೂಪಾಯಿ ಒಡೆಯ ಈ ಹೀರೋ
Zayed Khan
Follow us
 ಶ್ರೀಲಕ್ಷ್ಮೀ ಎಚ್
| Updated By: ಮಂಜುನಾಥ ಸಿ.

Updated on: Dec 29, 2024 | 3:39 PM

ಚಿತ್ರರಂಗದಲ್ಲಿ ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ ಬಳಿಕ ದೊಡ್ಡ ಮಟ್ಟದಲ್ಲಿ ಹೂಡಿಕೆ ಮಾಡಿ ನೂರಾರು ಕೋಟಿ ರೂಪಾಯಿ ಆಸ್ತಿ ಮಾಡಿದ ಅನೇಕರು ಇದ್ದಾರೆ. ಆದರೆ, ಮಾಡಿದ್ದು ಕೆಲವೇ ಸಿನಿಮಾ. ಆದಾಗ್ಯೂ ದೊಡ್ಡ ಮಟ್ಟದಲ್ಲಿ ಆಸ್ತಿ ಮಾಡಿದ ಹೀರೋ ಒಬ್ಬರಿದ್ದಾರೆ. ಅವರೇ ಝಾಯೇದ್ ಖಾನ್. ‘ಮೇ ಹೂ ನಾ’ ಸಿನಿಮಾದಲ್ಲಿ ಶಾರುಖ್ ಖಾನ್ ಜೊತೆ ನಟಿಸಿದ ಇವರು ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಅವರು ಉದ್ಯಮದಲ್ಲಿ ಯಶಸ್ಸು ಕಂಡಿದ್ದಾರೆ. ಅವರ ನೆಟ್ವರ್ತ್ ಅಲ್ಲು ಅರ್ಜುನ್, ಪ್ರಭಾಸ್​ಗಿಂತಲೂ ಹೆಚ್ಚಿದೆ.

ಝಾಯೇದ್ ಖಾನ್ ಅವರ ಆಸ್ತಿ 1500 ಕೋಟಿ ರೂಪಾಯಿಗೂ ಹೆಚ್ಚಿದೆ. ಅವರು ನಟ ಸಂಜಯ್ ಖಾನ್ ಅವರ ಮಗ. ಝಾಯೇದ್ ಅವರು 22ನೇ ವಯಸ್ಸಿಗೆ ಬಾಲಿವುಡ್​ಗೆ ಬಂದರು. ‘ಮೇ ಹೂ ನಾ’, ‘ದಸ್’ ಸಿನಿಮಾ ಮೂಲಕ ಫೇಮಸ್ ಆದರು.

ಝಾಯೇದ್ ಖಾನ್ ಅವರು ನಟನೆಯಲ್ಲಿ ಯಶಸ್ಸು ಕಾಣಲಿಲ್ಲ. ಆ ಬಳಿಕ ಉದ್ಯಮಕ್ಕೆ ಇಳಿದರು. ಇದು ಅವರ ಕೈ ಹಿಡಿಯಿತು. ಝಾಯೇದ್ ಖಾನ್ ಅವರು ಈ ಹೇಳಿಕೆಯನ್ನು ಒಪ್ಪಿಯೂ ಇಲ್ಲ, ತ್ಯಜಿಸಿಯೂ ಇಲ್ಲ. ಇದು ನಿಜವೇ ಆದಲ್ಲಿ ಅವರು ರಣಬೀರ್ ಕಪೂರ್ (550 ಕೋಟಿ ರೂಪಾಯಿ), ಪ್ರಭಾಸ್ (400 ಕೋಟಿ ರೂಪಾಯಿ), ಅಲ್ಲು ಅರ್ಜುನ್ (350 ಕೋಟಿ ರೂಪಾಯಿ) ಹಾಗೂ ರಾಮ್ ಚರಣ್ (1300 ಕೋಟಿ ರೂಪಾಯಿ) ಹಿಂದಿಕ್ಕಿಂದಂತೆ ಆಗಲಿದೆ.

ಇದನ್ನೂ ಓದಿ:ಕ್ರಿಸ್​ಮಸ್​ ಖುಷಿಯಲ್ಲಿ ಬಾಲಿವುಡ್​ ಸುಂದರಿ ಜಾನ್ವಿ ಕಪೂರ್​

ಝಾಯೇದ್ ಅವರು ತಮ್ಮ ಗೆಲುವಿನ ಹಿಂದಿನ ವಿಚಾರ ಏನು ಎಂಬುದನ್ನು ರಿವೀಲ್ ಮಾಡಿದ್ದಾರೆ. ‘ನಿಮ್ಮ ಮಿತಿಗಳಲ್ಲಿ ಬದುಕಿ. ನೀವು ಫೆರಾರಿ ತೆಗೆದುಕೊಳ್ಳಲು ಅರ್ಹರು ಎಂದರೆ ಮರ್ಸೀಡಿಸ್ ಬೆಂಜ್ ಖರೀದಿಸಿ. ಬೆಂಜ್ ಖರೀದಿಸೋ ಅರ್ಹತೆ ಇದ್ದರೆ ಫಿಯಟ್ ಖರೀದಿಸಿ’ ಎಂದಿದ್ದಾರೆ ಅವರು.

ಝಾಯೇದ್ ಖಾನ್ ಅವರು 2003ರಲ್ಲಿ ‘ಚುರಾ ಲಿಯಾ ಹೇ ತುಮ್ನೆ’ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ‘ಮೇ ಹೂ ನಾ’ ಸಿನಿಮಾ ಅವರಿಗೆ ಯಶಸ್ಸು ನೀಡಿತು. ಅವರು ‘ದಸ್’, ‘ಶಾದಿ ನಂಬರ್ 1’, ‘ಬ್ಲ್ಯೂ’ ಚಿತ್ರಗಳಲ್ಲಿ ನಟಿಸಿದರು. ಇತ್ತೀಚೆಗೆ ಅವರು ಹೆಚ್ಚಾಗಿ ಕಾಣಿಸಿಕೊಂಡಿಲ್ಲ. ಝಾಯೇದ್ ಖಾನ್ ಅವರು 2005ರಲ್ಲಿ ಮದುವೆ ಆದರು. ಮಲೈಕಾ ಪಾರೇಖ್ ಅವರನ್ನು ವಿವಾಹ ಆದರು. ಇಬ್ಬರೂ ಬಾಲ್ಯದ ಗೆಳೆಯರು. ಈ ದಂಪತಿಗೆ ಇಬ್ಬರು ಮಕ್ಕಳು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ