ಸಲ್ಮಾನ್ ಖಾನ್​ಗೆ ಬಂದಿರಲಿಲ್ಲ ಆಫರ್; ಜೀವನ ಬದಲಾಯಿಸಿದ ವ್ಯಕ್ತಿ ಇವರು

| Updated By: ಮಂಜುನಾಥ ಸಿ.

Updated on: Dec 27, 2024 | 9:44 AM

Salman Khan Birthday: ಸಲ್ಮಾನ್ ಖಾನ್ ತಮ್ಮ ಆರಂಭಿಕ ವೃತ್ತಿಜೀವನದಲ್ಲಿ ಹಲವು ಸವಾಲುಗಳನ್ನು ಎದುರಿಸಿದ್ದರು. "ಮೇನೆ ಪ್ಯಾರ್ ಕಿಯಾ" ಚಿತ್ರಕ್ಕೂ ಮೊದಲು ಆರ್ಥಿಕ ಸಂಕಷ್ಟದಲ್ಲಿದ್ದಾಗ ರಮೇಶ್ ತೌರಾನಿ ಅವರು ಅವರಿಗೆ ಸಹಾಯ ಮಾಡಿದ್ದರು. ತೌರಾನಿ ಅವರ ಸಹಾಯದಿಂದ "ಪತ್ತರ್ ಕೆ ಫೂಲ್" ಚಿತ್ರದಲ್ಲಿ ಅವಕಾಶ ಪಡೆದರು ಮತ್ತು ನಂತರ ಯಶಸ್ವಿಯಾದರು.

ಸಲ್ಮಾನ್ ಖಾನ್​ಗೆ ಬಂದಿರಲಿಲ್ಲ ಆಫರ್; ಜೀವನ ಬದಲಾಯಿಸಿದ ವ್ಯಕ್ತಿ ಇವರು
Salman Khan
Follow us on

ಸಲ್ಮಾನ್ ಖಾನ್ ಅವರು ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಪಡೆದಿದ್ದಾರೆ. ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಅವರು ಬಾಲಿವುಡ್ನ ಪ್ರಭಾವಿ ವ್ಯಕ್ತಿಗಳಲ್ಲಿ ಒಬ್ಬರು. ಸಲ್ಮಾನ್ ಖಾನ್ ಅವರು ಚಿತ್ರರಂಗದ ಆರಂಭದಲ್ಲಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸಿದರು. ಆ ಬಗ್ಗೆ ಅವರು ಹೇಳಿಕೊಂಡಿದ್ದರು. ‘ಟೈಗರ್ 3’ ರಿಲೀಸ್ ಸಂದರ್ಭದಲ್ಲಿ ಅವರು ಈ ಬಗ್ಗೆ ಮಾಹಿತಿ ರಿವೀಲ್ ಮಾಡಿದ್ದರು. ಸಲ್ಮಾನ್ ಎಷ್ಟು ಕಷ್ಟದಿಂದ ಬಂದಿದ್ದಾಗಿ ಹೇಳಿದ್ದರು. ಅಲ್ಲದೆ, ತಮ್ಮ ಸಹಾಯಕ್ಕೆ ಬಂದ ವ್ಯಕ್ತಿಯನ್ನು ಅವರು ನೆನಪಿಸಿಕೊಂಡಿದ್ದರು.

‘ನಾನು ಆರಂಭದಲ್ಲಿ ಸಾಕಷ್ಟು ಕಷ್ಟಪಟ್ಟೆ. ‘ಮೇ ನೆ ಪ್ಯಾರ್ ಕಿಯಾ’, ‘ಬಿವಿ ಹೋತೋ ಏಸಿ’ ಸಿನಿಮಾಗಳ ಆರಂಭಕ್ಕೂ ಮೊದಲು ನಾನು ಸಾಕಷ್ಟು ಕಷ್ಟ ಎದುರಿಸಿದೆ. ಮೊದಲ ನರೇಷನ್ನಲ್ಲೇ ಸಿನಿಮಾನ ಇಷ್ಟಪಡಬೇಕಿತ್ತು. ನನಗೆ ತುಂಬಾನೇ ಕಷ್ಟ ಆಗುತ್ತಿತ್ತು’ ಎಂದಿದ್ದಾರೆ ಅವರು. ಒಂದೊಮ್ಮೆ ಅವರಿಗೆ ಸಿನಿಮಾ ಇಷ್ಟ ಆಗಿಲ್ಲ ಅಂದರೆ ಅದು ಬೇರೆಯವರ ಕೈ ಸೇರುತ್ತಿತ್ತು.

‘ಮೇನೆ ಪ್ಯಾರ್ ಕಿಯಾ ಸಿನಿಮಾಗೂ ಮೊದಲು ಸಾಕಷ್ಟು ಸಮಸ್ಯೆ ಎದುರಿಸಿದೆ. ಆ ಸಂದರ್ಭದಲ್ಲಿ ಸಾಕಷ್ಟು ಆರ್ಥಿಕ ಸಮಸ್ಯೆ ಎದುರಾಗಿತ್ತು. ಆಗ ನಿರ್ಮಾಪಕ ರಮೇಶ್ ತೌರಾಣಿ ಸಹಾಯಕ್ಕೆ ಬಂದರು. ಅವರು ದೇವತಾ ಮನುಷ್ಯ ಎಂಬುದು ಸಲ್ಮಾನ್ ಖಾನ್ ಮಾತು.

ಇದನ್ನೂ ಓದಿ:ಸಲ್ಮಾನ್ ಖಾನ್ ಸೂಪರ್ ಹಿಟ್ ಚಿತ್ರಗಳ ಪಟ್ಟಿ ನೋಡಿ; ಈ ಸಿನಿಮಾಗಳನ್ನು ನೋಡಿದೀರಾ?

‘ಮೇನೆ ಪ್ಯಾರ್ ಕಿಯಾ’ ಯಶಸ್ಸಿನ ನಂತರ ಭಾಗ್ಯಶ್ರೀ ಮದುವೆಗಾಗಿ ಉದ್ಯಮದಿಂದ ದೂರವಿರಲು ನಿರ್ಧರಿಸಿದರು. ಈ ಚಿತ್ರದ ಸಂಪೂರ್ಣ ಕ್ರೆಡಿಟ್ ಅವರಿಗೆ ಸಿಕ್ಕಿತ್ತು. ಸಿನಿಮಾ ಇಲ್ಲದೆ ಸಲ್ಮಾನ್ ಖಾನ್ 6 ತಿಂಗಳ ವಿರಾಮಪಡೆಯುವಂತೆ ಆಯಿತು.

ತೌರಾನಿ ಅವರ ಮಧ್ಯಸ್ಥಿಕೆಯು 1991 ರಲ್ಲಿ ಸಲ್ಮಾನ್ ಅವರಿಗೆ ‘ಪತ್ತರ್ ಕೆ ಫೂಲ್’ ಎಂಬ ಹೊಸ ಸಿನಿಮಾ ಸಿಕ್ಕಿತು. ಸಲ್ಮಾನ್ ಅವರ ವೃತ್ತಿಜೀವನದ ಈ ಪ್ರಮುಖ ಕ್ಷಣಕ್ಕಾಗಿ ಹೃತ್ಪೂರ್ವಕ ಧನ್ಯವಾದಗಳನ್ನು ವ್ಯಕ್ತಪಡಿಸಿದ್ದರು. ಆ ಬಳಿಕ ಸಲ್ಮಾನ್ ಖಾನ್ ಹಿಟ್ ಚಿತ್ರಗಳನ್ನು ನೀಡುತ್ತಾ ಸಾಗಿದರು.

ಸದ್ಯ ಸಲ್ಮಾನ್ ಖಾನ್ ಅವರು ‘ಸಿಖಂದರ್’ ಸಿನಿಮಾ ಶೂಟ್ನಲ್ಲಿ ಬ್ಯುಸಿ ಇದ್ದಾರೆ. ತಮಿಳಿನ ಎಆರ್ ಮುರುಗದಾಸ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದು, ಕನ್ನಡದ ರಶ್ಮಿಕಾ ಈ ಚಿತ್ರಕ್ಕೆ ನಾಯಕಿ ಅನ್ನೋದು ವಿಶೇಷ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ