ಸಂಜಯ್ ದತ್ ಮೆಚ್ಚುಗೆ ಪಡೆದ 21 ವರ್ಷದ ‘ಹನುಮಾನ್ ಅಂಶ್’ ನಿರ್ಮಾಪಕಿ

ಯಾವುದೇ ನಿರೀಕ್ಷೆ ಇಲ್ಲದೆಯೇ ‘ಹನುಮಾನ್ ಅಂಶ್’ ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಯಿತು. 2026ರ ಸಾಲಿನಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾಗಳ ಸಾಲಿನಲ್ಲಿ ಇದು ಮುಂಚೂಣಿಯಲ್ಲಿದೆ. ಈ ಸಿನಿಮಾದ ನಿರ್ಮಾಪಕಿ ಅನುಪ್ರಿಯಾ ನಗರ್ ಅವರಿಗೆ ಈಗಿನ್ನೂ 21 ವರ್ಷ ವಯಸ್ಸು. ಅವರ ಸಾಧನೆಗೆ ನಟ ಸಂಜಯ್ ದತ್ ಭೇಷ್ ಎಂದಿದ್ದಾರೆ.

ಸಂಜಯ್ ದತ್ ಮೆಚ್ಚುಗೆ ಪಡೆದ 21 ವರ್ಷದ ‘ಹನುಮಾನ್ ಅಂಶ್’ ನಿರ್ಮಾಪಕಿ
Anupriya Nagar, Sanjay Dutt

Updated on: Oct 12, 2026 | 8:28 PM

ಬಾಲಿವುಡ್‌ನ ಖ್ಯಾತ ನಟ ಸಂಜಯ್ ದತ್ ಅವರು 21 ವರ್ಷದ ಯುವ ನಿರ್ಮಾಪಕಿ ಅನುಪ್ರಿಯಾ ನಗರ್ ಅವರನ್ನು ಮುಕ್ತಕಂಠದಿಂದ ಕೊಂಡಾಡಿದ್ದಾರೆ. ಕಡಿಮೆ ಬಜೆಟ್‌ನಲ್ಲಿ ನಿರ್ಮಾಣವಾಗಿ ಬಾಕ್ಸ್ ಆಫೀಸ್‌ನಲ್ಲಿ ನೂರಾರು ಕೋಟಿ ರೂಪಾಯಿ ಗಳಿಸಿದ ‘ಹನುಮಾನ್ ಅಂಶ್’ ಸಿನಿಮಾದ ಯಶಸ್ಸಿಗೆ ಕಾರಣವಾಗಿರುವ ಅನುಪ್ರಿಯಾ ಅವರನ್ನು ಸಂಜಯ್ ದತ್ ಅವರು ಇನ್‌ಸ್ಟಾಗ್ರಾಮ್ ಮೂಲಕ ಪ್ರಶಂಸಿಸಿದ್ದು, ಮುಂದಿನ ಎಲ್ಲಾ ಪ್ರಾಜೆಕ್ಟ್‌ಗಳಿಗೂ ಸಂಪೂರ್ಣ ಬೆಂಬಲ ನೀಡುವುದಾಗಿ ಭರವಸೆ ನೀಡಿದ್ದಾರೆ.

ಅನುಪ್ರಿಯಾ ನಗರ್ ಜೊತೆಗಿನ ಫೋಟೋ ಹಂಚಿಕೊಂಡಿರುವ ಸಂಜಯ್ ದತ್, ‘ನಾನು ಹಲವಾರು ಸಿನಿಮಾಗಳು ಬರುವುದನ್ನು ಮತ್ತು ಇತಿಹಾಸ ನಿರ್ಮಿಸುವುದನ್ನು ನೋಡಿದ್ದೇನೆ. ಆದರೆ, ಕೇವಲ 21ನೇ ವಯಸ್ಸಿನಲ್ಲಿ ನೀವು ಹನುಮಾನ್ ಅಂಶ್ ಸಿನಿಮಾ ಮೂಲಕ ಸಾಧಿಸಿರುವುದು ನಿಜಕ್ಕೂ ಅದ್ಭುತ!’ ಎಂದು ಬರೆದುಕೊಂಡಿದ್ದಾರೆ.

ಅಲ್ಲದೆ, ಸಣ್ಣ ಸಿನಿಮಾವನ್ನು ದೊಡ್ಡ ಮಟ್ಟಕ್ಕೆ ಕೊಂಡೊಯ್ಯುವಲ್ಲಿ ಅವರ ಪ್ಯಾಶನ್ ಮತ್ತು ಎಲ್ಲರನ್ನು ಒಗ್ಗೂಡಿಸುವ ಕೌಶಲವನ್ನು ಕೊಂಡಾಡಿದ್ದಾರೆ. ‘ದೇವರು ನಿಮ್ಮನ್ನು ಆಶೀರ್ವದಿಸಲಿ. ನಿಮ್ಮ ಬಗ್ಗೆ ನನಗೆ ಹೆಮ್ಮೆ ಇದೆ. ನಿಮ್ಮ ಮುಂದಿನ ಎಲ್ಲಾ ಪ್ರಾಜೆಕ್ಟ್‌ಗಳಲ್ಲೂ ನಾನು ನಿಮ್ಮೊಂದಿಗೆ ನಿಲ್ಲುತ್ತೇನೆ. ನಿಮ್ಮ ಯಶಸ್ಸಿನ ಕಥೆ ಈಗಷ್ಟೇ ಆರಂಭವಾಗಿದೆ’ ಎಂದು ಸಂಜಯ್ ದತ್ ಹಾರೈಸಿದ್ದಾರೆ.

ವಿಶಾಲ್ ಚತುರ್ವೇದಿ ನಿರ್ದೇಶಿಸಿರುವ ‘ಹನುಮಾನ್ ಅಂಶ್’ ಸಿನಿಮಾವು ಆಧ್ಯಾತ್ಮಿಕ ಗುರು ಹಾಗೂ ಹನುಮಂತನ ಭಕ್ತರಾದ ನೀಮ್ ಕರೋಲಿ ಬಾಬಾ ಅವರ ಬದುಕಿನ ಕಥೆಯನ್ನು ಹೇಳುತ್ತದೆ. ಚಿತ್ರದಲ್ಲಿ ಶೋಭಿನಾವ್ ಸತ್ಯಾ ಮುಖ್ಯ ಪಾತ್ರದಲ್ಲಿ ನಟಿಸಿದ್ದು, ಅವರ ಅಭಿನಯ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ. ಯಾವುದೇ ಅತಿರೇಕದ ಮ್ಯಾನರಿಸಮ್‌ಗಳಿಲ್ಲದೆ, ಅತ್ಯಂತ ಸರಳ ಹಾಗೂ ಮಣ್ಣಿನ ಸೊಗಡಿನ ನಟನೆಯ ಮೂಲಕ ಅವರು ಗಮನ ಸೆಳೆದಿದ್ದಾರೆ.

ಇದನ್ನೂ ಓದಿ: ‘ಹನುಮಾನ್ ಅಂಶ್’ ಸೀಕ್ವೆಲ್‌ನಲ್ಲಿ ಅಕ್ಷಯ್ ಕುಮಾರ್? ಸ್ಪಷ್ಟನೆ ನೀಡಿದ ನಿರ್ಮಾಪಕಿ

ಆಗಸ್ಟ್ 7ರಂದು ಬಿಡುಗಡೆಯಾದ ‘ಹನುಮಾನ್ ಅಂಶ್’ ಆರಂಭಿಕ ದಿನಗಳಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿರಲಿಲ್ಲ. ಸುಮಾರು 2 ಕೋಟಿ ರೂ. ಬಜೆಟ್‌ನಲ್ಲಿ ತಯಾರಾದ ಈ ಭಕ್ತಿಪ್ರಧಾನ ಸಿನಿಮಾ ಮೊದಲ ದಿನ ಕೇವಲ 10 ಲಕ್ಷ ರೂ. ಗಳಿಸಿತ್ತು. ಮೊದಲ ಎರಡು ವಾರಗಳ ಬಳಿಕ ಕೇವಲ 1.5 ಕೋಟಿ ರೂ. ಗಳಿಸಿದ್ದರಿಂದ ಈ ಚಿತ್ರದ ಈ ಮಟ್ಟದ ಯಶಸ್ಸನ್ನು ಯಾರೂ ಊಹಿಸಿರಲಿಲ್ಲ. ಆದರೆ, ಮೂರನೇ ವಾರದಿಂದ ಜನರನ್ನು ಆಕರ್ಷಿಸುವಂತೆ ಮಾಡಿತು. ಅಕ್ಟೋಬರ್ ಮಧ್ಯದ ವೇಳೆಗೆ ಈ ಸಿನಿಮಾ ಭಾರತದಲ್ಲೇ ಸುಮಾರು 395.83 ಕೋಟಿ ರೂಪಾಯಿಗಳಿಗೂ ಅಧಿಕ ಕಲೆಕ್ಷನ್ ಮಾಡಿದ್ದು, ಪ್ರಸ್ತುತ ಜಾಗತಿಕ ಮಟ್ಟದಲ್ಲಿ 435 ಕೋಟಿ ರೂ. ಗಡಿ ದಾಟಿ ಮುನ್ನಡೆಯುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us