ನಟಿ ಸಾರಾ ಅಲಿ ಖಾನ್ (Sara Ali Khan) ಅವರು ಬಾಲಿವುಡ್ನಲ್ಲಿ (Bollywood) ನೆಲೆ ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಅವರು ಸ್ಟಾರ್ ಕಿಡ್ ಎಂಬ ಕಾರಣಕ್ಕೆ ಸುಲಭವಾಗಿ ಚಿತ್ರರಂಗದಲ್ಲಿ ಅವಕಾಶಗಳು ಸಿಕ್ಕವು. ಆದರೆ, ಯಾವ ಚಿತ್ರಗಳೂ ಗೆಲುವು ಕಾಣುತ್ತಿಲ್ಲ. ಈಗ ಸಾರಾ ಅವರು ಮುಖ ಮುಚ್ಚಿಕೊಂಡು ಓಡಾಡುತ್ತಿದ್ದಾರೆ. ಈ ಬಗ್ಗೆ ಅಭಿಮಾನಿಗಳಿಗೆ ಅನುಮಾನ ಮೂಡಿದೆ. ಸಾರಾ ಈ ರೀತಿ ಮಾಡುತ್ತಿರುವುದೇಕೆ ಎಂದು ಅಭಿಮಾನಿಗಳು ಪ್ರಶ್ನೆ ಮಾಡುತ್ತಿದ್ದಾರೆ.
ಸಾರಾ ಅಲಿ ಖಾನ್ ಅವರು ಸೌಮ್ಯ ಸ್ವಭಾವದವರು. ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡಾಗ ಪಾಪರಾಜಿಗಳು ಮುತ್ತಿಕೊಳ್ಳುತ್ತಾರೆ. ಇದಕ್ಕೆ ಸಾರಾ ಅಲಿ ಖಾನ್ ಎಂದಿಗೂ ಬೇಸರ ಮಾಡಿಕೊಂಡವರಲ್ಲ. ನಮಸ್ತೆ ಎಂದು ತಮ್ಮದೇ ಸ್ಟೈಲ್ನಲ್ಲಿ ವಿಶ್ ಮಾಡುತ್ತಿದ್ದರು. ಎಲ್ಲರನ್ನೂ ಪ್ರೀತಿಯಿಂದ ಮಾತನಾಡಿಸಿ ಕೆಲ ಹೊತ್ತು ಪೋಸ್ ನೀಡಿ ಕಾರಿನ ಒಳಗೆ ತೆರಳುತ್ತಿದ್ದರು. ಆದರೆ, ಈ ಬಾರಿ ಆರೀತಿ ಆಗಿಲ್ಲ. ಸಾರಾ ಮುಖ ಮುಚ್ಚಿಕೊಂಡು ತೆರಳಿದ್ದಾರೆ.
ಮುಂಬೈನಲ್ಲಿ ಸಾರಾ ಅವರು ಫಿಟ್ನೆಸ್ ಸೆಷನ್ಗೆ ತೆರಳಿದ್ದರು. ಅದನ್ನು ಮುಗಿಸಿ ಮರಳಿ ಬಂದಿದ್ದಾರೆ. ಸಾರಾಗಾಗಿ ಅನೇಕ ಪಾಪರಾಜಿಗಳು ಕಾದು ಕೂತಿದ್ದರು. ಆದರೆ ಸಾರಾ ನಮಸ್ತೆಯನ್ನೂ ಮಾಡಿಲ್ಲ, ಕ್ಯಾಮೆರಾ ಕಡೆ ಮುಖವನ್ನೂ ತಿರುಗಿಸಿಲ್ಲ. ಬದಲಿಗೆ ನೇರವಾಗಿ ಹೋಗಿ ಕಾರು ಏರಿದ್ದಾರೆ. ಕಾರು ಏರಿದ ನಂತರವೂ ಮುಖ ಮುಚ್ಚಿಕೊಂಡು ಕುಳಿತಿದ್ದಾರೆ.
ಸಾರಾ ಮುಖಕ್ಕೆ ಅಲರ್ಜಿ ಆಗಿದೆಯೇ? ಇದಕ್ಕಾಗಿ ಅವರು ಮುಖ ಮುಚ್ಚಿಕೊಂಡು ಹೋದರೇ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ. ಸಾರಾ ಅಲಿ ಖಾನ್ ಅವರ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಇದನ್ನೂ ಓದಿ: ಸಲ್ಮಾನ್ ಖಾನ್ಗೆ ಅಂಕಲ್ ಎಂದು ಕರೆದ ಸಾರಾ ಅಲಿ ಖಾನ್; ನಟನ ರಿಯಾಕ್ಷನ್ ಹೇಗಿತ್ತು?
2018ರಲ್ಲಿ ತೆರೆಗೆ ಬಂದ ‘ಕೇದಾರ್ನಾಥ್’ ಚಿತ್ರದ ಮೂಲಕ ಬಣ್ಣದ ಬದುಕು ಆರಂಭಿಸಿದರು ಸಾರಾ ಅಲಿ ಖಾನ್. ಸುಶಾಂತ್ ಸಿಂಗ್ ರಜಪೂತ್ ಅವರು ಸಾರಾಗೆ ಜತೆಯಾಗಿದ್ದರು. ಅದೇ ವರ್ಷ ರಣವೀರ್ ಸಿಂಗ್ ನಟನೆಯ ‘ಸಿಂಬಾ’ ರಿಲೀಸ್ ಆಯಿತು. ಎರಡೂ ಚಿತ್ರಗಳು ಸಾರಾಗೆ ಜನಪ್ರಿಯತೆ ತಂದುಕೊಟ್ಟವು. ನಂತರ ತೆರೆಗೆ ಬಂದ ‘ಲವ್ ಆಜ್ ಕಲ್’, ‘ಕೂಲಿ ನಂ 1’, ‘ಅತ್ರಂಗಿ ರೇ’ ಚಿತ್ರಗಳು ಜಯದ ನಗೆ ಬೀರಿಲ್ಲ. ಸದ್ಯ ಎರಡು ಚಿತ್ರಗಳಲ್ಲಿ ಅವರು ಬ್ಯುಸಿ ಇದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:21 am, Sat, 26 November 22