Sara Ali Khan: ಅದು ಅವರು ಕೈಗೊಂಡ ಅತ್ಯುತ್ತಮ ನಿರ್ಧಾರ; ಸೈಫ್- ಅಮೃತಾ ವಿಚ್ಛೇದನ ಕುರಿತು ಪುತ್ರಿ ಸಾರಾ ಮಾತು

Saif Ali Khan: ಸೈಫ್ ಅಲಿ ಖಾನ್ ಹಾಗೂ ಅಮೃತಾ ಸಿಂಗ್ ಪುತ್ರಿ ಸಾರಾ ಅಲಿ ಖಾನ್ ತಮ್ಮ ಪೋಷಕರ ವಿಚ್ಛೇದನದ ಕುರಿತು ಮಾತನಾಡಿದ್ದಾರೆ. ಅದು ಅವರು ಕೈಗೊಂಡ ಅತ್ಯುತ್ತಮ ನಿರ್ಧಾರಗಳಲ್ಲಿ ಒಂದು ಎಂದು ಸಾರಾ ನುಡಿದಿದ್ದಾರೆ.

Sara Ali Khan: ಅದು ಅವರು ಕೈಗೊಂಡ ಅತ್ಯುತ್ತಮ ನಿರ್ಧಾರ; ಸೈಫ್- ಅಮೃತಾ ವಿಚ್ಛೇದನ ಕುರಿತು ಪುತ್ರಿ ಸಾರಾ ಮಾತು
ತಾಯಿ ಅಮೃತಾ ಸಿಂಗ್ ಹಾಗೂ ಸೈಫ್ ಅಲಿ ಖಾನ್ ಜೊತೆಯಲ್ಲಿ ಸಾರಾ ಅಲಿ ಖಾನ್
Follow us
TV9 Web
| Updated By: shivaprasad.hs

Updated on: Nov 02, 2021 | 4:02 PM

ಸಾರಾ ಅಲಿ ಖಾನ್ ಪ್ರಸ್ತುತ ಬಾಲಿವುಡ್​ನಲ್ಲಿ ನಿಧಾನವಾಗಿ ನೆಲೆಯೂರುತ್ತಿದ್ದಾರೆ. ನಟ ಸೈಫ್ ಅಲಿ ಖಾನ್ ಹಾಗೂ ಅಮೃತಾ ಸಿಂಗ್ ಅವರ ಪುತ್ರಿಯಾಗಿರುವ ಸಾರಾ, ತಮ್ಮ ತಂದೆ- ತಾಯಿಗಳು ವಿಚ್ಛೇದನ ಪಡೆಯುವ ಸಂದರ್ಭವನ್ನು ನೆನಪಿಸಿಕೊಂಡಿದ್ದಾರೆ. ಸೈಫ್ ಹಾಗೂ ಅಮೃತಾ ವಿಚ್ಛೇದನ ಪಡೆಯುವಾಗ ಸಾರಾಗೆ ಕೇವಲ ಒಂಬತ್ತು ವರ್ಷ. ಆದರೂ ಅಂದಿನ ದಿನಗಳು ತನಗಿನ್ನೂ ನೆನಪಿವೆ ಎಂದು ಸಾರಾ ನುಡಿದಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ತಂದೆ- ತಾಯಿ ಬೇರೆಯಾಗಿದ್ದ ಸಂದರ್ಭವನ್ನು ಒಪ್ಪಿಕೊಳ್ಳಲು ಬಹಳ ಕಷ್ಟಕರವಾಗಲಿಲ್ಲ ಎಂದಿದ್ದಾರೆ. ಕಾರಣ, ಅವರೀರ್ವರೂ ಜೊತೆಯಿದ್ದಾಗ ಏನೇನೂ ಸಂತಸವಾಗಿರಲಿಲ್ಲ. ಆದ್ದರಿಂದಲೇ ಅವರ ಬೇರ್ಪಡುವಿಕೆ ಒಂದರ್ಥದಲ್ಲಿ ಇಬ್ಬರಿಗೂ ಒಳ್ಳೆಯದೇ ಆಯಿತು ಎಂದು ಸಾರಾ ನುಡಿದಿದ್ದಾರೆ.

ಸೈಫ್ ಹಾಗೂ ಅಮೃತಾ 1991ರಲ್ಲಿ ದಾಂಪತ್ಯಕ್ಕೆ ಕಾಲಿರಿಸಿದ್ದರು. 2004ರಲ್ಲಿ ವಿಚ್ಛೇದನ ಪಡೆದಿದ್ದದರು. ಈ ಜೋಡಿಗೆ ಸಾರಾ ಅಲಿ ಖಾನ್ ಹಾಗೂ ಇಬ್ರಾಹಿಂ ಅಲಿ ಖಾನ್ ಎಂಬ ಮಕ್ಕಳಿದ್ದಾರೆ. ತಮ್ಮ ತಂದೆ- ತಾಯಿಯ ವಿಚ್ಛೇದನದ ಸಂದರ್ಭವನ್ನು ನೆನಪಿಸಿಕೊಂಡಿರುವ ಸಾರಾ ಮಾತನಾಡುತ್ತಾ ಹಲವಾರು ಅಚ್ಚರಿಯ ಸಂಗತಿಗಳನ್ನು ತೆರೆದಿಟ್ಟಿದ್ದಾರೆ. ‘‘ನನಗೆ ನನ್ನ ಓರಗೆಯ ಇತರರಿಗಿಂತ ಅರ್ಥ ಮಾಡಿಕೊಳ್ಳುವ ಶಕ್ತಿ ಜಾಸ್ತಿ ಇತ್ತು. ಆದ್ದರಿಂದಲೇ ನನಗಾಗ 9 ವರ್ಷವಿದ್ದರೂ ಕೂಡ ಒಂದೇ ಮನೆಯಲ್ಲಿ ವಾಸಿಸುತ್ತಿದ್ದ ತಂದೆ- ತಾಯಿ ಅಸಂತೋಷದಲ್ಲಿರುತ್ತಿದ್ದುದು ಅರ್ಥವಾಗಿತ್ತು. ಆದರೆ ಯಾವಾಗ ಈರ್ವರೂ ಪ್ರತ್ಯೇಕ ಮನೆಗಳಲ್ಲಿ ವಾಸಿಸಲು ಆರಂಭಿಸಿದರೋ ಆಗ ಇಬ್ಬರ ಮೊಗದಲ್ಲೂ ಸಂತಸವಿತ್ತು. ಉದಾಹರಣೆಗೆ ನನ್ನ ತಾಯಿ 10 ವರ್ಷಗಳಲ್ಲಿ ನಗುವಿನಿಂದ ದೂರವಿದ್ದರು, ಇದ್ದಕ್ಕಿದ್ದಂತೆ ಸಂತಸದಿಂದ, ಆನಂದದಿಂದ ನಗುನಗುತ್ತಾ ಇರತೊಡಗಿದರು. ಇದು ಅವರಿಗೆ ಬೇಕಾಗಿತ್ತು’’ ಎಂದು ನುಡಿದಿದ್ದಾರೆ.

‘‘ನನ್ನ ಇಬ್ಬರೂ ಪೋಷಕರು ಪ್ರತ್ಯೇಕವಾಗಿ ವಾಸಿಸುವಾಗ ಸಂತಸದಿಂದ ಇರುತ್ತಾರೆ ಎಂದಾದರೆ ನಾನೇಕೆ ದುಃಖಪಟ್ಟುಕೊಳ್ಳಲಿ? ಹಾಗಾಗಿ ನನಗೆ ತಂದೆ- ತಾಯಿ ಇಬ್ಬರೂ ಪ್ರತ್ಯೇಕವಾಗಿದ್ದು ಕಷ್ಟ ಎನ್ನಿಸಲೇ ಇಲ್ಲ’’ ಎಂದು ಸಾರಾ ನುಡಿದಿದ್ದಾರೆ. ‘‘ನನ್ನಮ್ಮ ತಮಾಷೆ ಮಾಡುತ್ತಾ, ಸಿಲ್ಲಿಯಾಗಿ ಇರುತ್ತಾ, ನಗುನಗುತ್ತಾ ಕಾಲ ಕಳೆಯುತ್ತಿದ್ದಾರೆ. ಅವರಿರಬೇಕಾಗಿದ್ದೇ ಹಾಗೆ. ಆದ್ದರಿಂದ ನನ್ನ ತಂದೆ ತಾಯಿಗಳು ಈಗ ಹೇಗಿದ್ದಾರೋ ಅದೇ ಸ್ಥಳ ಈರ್ವರಿಗೂ ಉತ್ತಮವಾಗಿದೆ’’ ಎಂದು ಸಾರಾ ಹೇಳಿದ್ದಾರೆ. ಇದಕ್ಕೂ ಮೊದಲಿನ ಸಂದರ್ಶನದಲ್ಲಿ ಸಾರಾ ಮಾತನಾಡುತ್ತಾ, ಸೈಫ್ ಹಾಗೂ ಅಮೃತಾ ಅವರ ವಿಚ್ಛೇದನದ ನಿರ್ಧಾರ ಅವರ ಜೀವನದ ಉತ್ತಮ ನಿರ್ಧಾರಗಳಲ್ಲಿ ಒಂದು ಎಂದಿದ್ದರು. ತನ್ನ ತಾಯಿ ತನ್ನ ಉತ್ತಮ ಸ್ನೇಹಿತೆ, ತಂದೆ ಎಂದಿಗೂ ಲಭ್ಯರಿರುತ್ತಾರೆ ಎಂದು ಸಾರಾ ತಿಳಿಸಿದ್ದರು.

ಸೈಫ್ ನಂತರ ಕರೀನಾ ಅವರನ್ನು ವಿವಾಹವಾಗಿದ್ದು, ಇಬ್ಬರು ಪುತ್ರರನ್ನು ಹೊಂದಿದ್ದಾರೆ. ಸಾರಾ ಹಾಗೂ ಇಬ್ರಾಹಿಂ ಸೈಫ್ ಹಾಗೂ ಕರೀನಾ ಕುಟುಂಬದೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದಾರೆ. ಚಿತ್ರಗಳ ವಿಷಯಕ್ಕೆ ಬಂದರೆ ಸಾರಾ ಕೊನೆಯದಾಗಿ ‘ಕೂಲಿ ನಂಬರ್ 1’ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಅವರ ಬತ್ತಳಿಕೆಯಲ್ಲಿ ಕೆಲವು ಚಿತ್ರಗಳಿವೆ.

ಇದನ್ನೂ ಓದಿ:

Puneeth Rajkumar: ಪುನೀತ್​ ಆಸ್ಪತ್ರೆಗೆ ಹೊರಟಾಗ ಮನೆಯಲ್ಲಿ ಮೂಡಿತ್ತು ಆತಂಕದ ವಾತಾವರಣ; ಇಲ್ಲಿದೆ ಸಿಸಿಟಿವಿ ದೃಶ್ಯಾವಳಿ

Shah Rukh Khan Birthday: ಶಾರುಖ್​ಗೆ ಸೊಕ್ಕು ಹೆಚ್ಚಾಯಿತು ಎನ್ನಿಸಿದಾಗ ಎಲ್ಲಿ ತೆರಳಾತ್ತರಂತೆ?; ಇಲ್ಲಿದೆ ನಟನ ಕುರಿತ ಮಜವಾದ ಸಂಗತಿಗಳು

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ