ಬಾಲಿವುಡ್ ನಟಿ ಸಾರಾ ಅಲಿ ಖಾನ್ ಅವರು ಸದಾ ಚಿಲ್ ಆಗಿ ಇರುತ್ತಾರೆ. ಅವರು ಯಾವಾಗಲೂ ಒಂದಲ್ಲಾ ಒಂದು ರೀತಿಯ ಹೇಳಿಕೆ ನೀಡುತ್ತಾ ಇರುತ್ತಾರೆ. ಬಾಯ್ಫ್ರೆಂಡ್ ವಿಚಾರಕ್ಕೆ ಆಗಾಗ ಸುದ್ದಿ ಆಗುತ್ತಾರೆ. ಬಾಲಿವುಡ್ನಲ್ಲಿ ಅನೇಕರ ಜೊತೆ ಅವರು ಸುತ್ತಾಡಿದ್ದಾರೆ. ಅವರಿಗೆ ರಣಬೀರ್ ಕಪೂರ್ ಜೊತೆ ವಿವಾಹ ಆಗಬೇಕೆಂದಿತ್ತು. ಆದರೆ, ಈ ಆಸೆಯನ್ನು ಆಲಿಯಾ ಭಟ್ ಅವರು ಹಾಳು ಮಾಡಿದರು.
ತಂದೆ ಸೈಫ್ ಅಲಿ ಖಾನ್ ಜೊತೆ ಸಾರಾ ಅಲಿ ಖಾನ್ ಅವರು ‘ಕಾಫಿ ವಿತ್ ಕರಣ್’ ಶೋಗೆ ಬಂದಿದ್ದರು. ಈ ವೇಳೆ ಯಾರನ್ನು ಮದುವೆ ಆಗ್ತೀರಿ? ಯಾರ ಜೊತೆ ಡೇಟ್ ಮಾಡ್ತೀರಿ ಎಂದು ಕೇಳಲಾಯಿತು. ಈ ವೇಳೆ ಮಾತನಾಡಿದ್ದ ಸಾರಾ ಅವರು, ‘ನಾನು ರಣಬೀರ್ ಕಪೂರ್ ಜೊತೆ ಮದುವೆ ಆಗುತ್ತೇನೆ, ಕಾರ್ತಿಕ್ ಆರ್ಯನ್ ಜೊತೆ ಡೇಟ್ ಮಾಡುತ್ತೇನೆ’ ಎಂದಿದ್ದರು. ಅವರು ಹೇಳಿದಂತೆ ಕಾರ್ತಿಕ್ ಜೊತೆ ಸುತ್ತಾಡಿದ್ದರು. ಆದರೆ, ರಣಬೀರ್ನ ಮದುವೆ ಆಗಲು ಸಾಧ್ಯವಾಗಿಲ್ಲ.
ರಣಬೀರ್ ಹಾಗೂ ಆಲಿಯಾ ಪ್ರೀತಿ ವಿಚಾರ ರಿವೀಲ್ ಆದ ಬಳಿಕ ಸಾರಾ ನಿರ್ಧಾರ ಬದಲಿಸಿದ್ದರು. ‘ನಾನು ರಣಬೀರ್ನ ಮದುವೆ ಆಗಬೇಕು ಎಂದು ಹೇಳಿದ್ದೆ. ಆದರೆ, ಈಗ ಹಾಗಿಲ್ಲ’ ಎಂದು ಅವರು ಹೇಳಿದ್ದರು. ‘ಹಾಗಾದರೆ ಆಲಿಯಾ ಜೊತೆಗಿನ ಫ್ರೆಂಡಿಶಿಪ್?’ ಈ ವಿಚಾರವಾಗಿ ಮಾತನಾಡಿದ್ದ ಸಾರಾ, ‘ಆಲಿಯಾ ಜೊತೆಗಿನ ಫ್ರೆಂಡ್ಶಿಪ್ ಹಾಗೆಯೇ ಇರುತ್ತದೆ’ ಎಂದಿದ್ದರು.
ಸಾರಾ ಅಲಿ ಖಾನ್ ಅವರು ಈ ಮೊದಲು ಕಾರ್ತಿಕ್ ಆರ್ಯನ್ ಜೊತೆ ಡೇಟ್ ಮಾಡಿ ಸುದ್ದಿ ಆಗಿದ್ದರು. ನಂತರ ಇವರ ಬ್ರೇಕಪ್ ಆಯಿತು. ಸುಶಾಂತ್ ಸಿಂಗ್ ಜೊತೆಯೂ ಸಾರಾ ಅಲಿ ಖಾನ್ ಅವರು ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಈ ಮೊದಲು ಹರಿದಾಡಿತ್ತು. ಆದರೆ ಇದನ್ನು ಅವರು ಒಪ್ಪಿಕೊಂಡಿಲ್ಲ.
ಇದನ್ನೂ ಓದಿ: ಸಾರಾ ಅಲಿ ಖಾನ್ ಯಾರನ್ನು ಮದುವೆ ಆಗ್ಬೇಕು? ಫ್ಯಾನ್ಸ್ಗೆ ಇದೆ ಒಂದು ಆಸೆ
ಸಾರಾ ಅಲಿ ಖಾನ್ಗೆ ಇತ್ತೀಚೆಗೆ ಯಾವುದೇ ದೊಡ್ಡ ಯಶಸ್ಸು ಸಿಕ್ಕಿಲ್ಲ. ಆ ಬಗ್ಗೆ ಅವರಿಗೆ ಬೇಸರ ಇದೆ. ಅವರು ಬ್ಯಾಕ್ ಟು ಬ್ಯಾಕ್ ಸಿನಿಮಾ ಮಾಡುತ್ತಿದ್ದಾರೆ. ಅವರ ಬಾಯ್ಫ್ರೆಂಡ್ ಯಾರು ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 8:02 am, Sat, 5 October 24