
ಮಾಜಿ ಕ್ರಿಕೆಟರ್ ಸಚಿನ್ ತೆಂಡೂಲ್ಕರ್ ಮಗಳು ಸಾರಾ ತೆಂಡೂಲ್ಕರ್ (Sara Tendulkar) ಅವರು ಆಗಾಗ ಚರ್ಚೆಯ ಕೇಂದ್ರ ಬಿಂದು ಆಗುತ್ತಾರೆ. ಸಾರ್ವಜನಿಕವಾಗಿ ಅವರು ಕಾಣಿಸಿಕೊಳ್ಳೋ ಫೋಟೋ ಹಾಗೂ ವಿಡಿಯೋಗಳು ವೈರಲ್ ಆಗುತ್ತವೆ. ಎಲ್ಲಕ್ಕಿಂತ ಹೆಚ್ಚಾಗಿ ಸಾರಾ ಡೇಟಿಂಗ್ ವಿಚಾರ ಸಾಕಷ್ಟು ಚರ್ಚೆ ಆಗುತ್ತದೆ. ಸಾರಾ ತೆಂಡೂಲ್ಕರ್ ಅವರು ಈ ಮೊದಲು ಕ್ರಿಕೆಟರ್ ಶುಭ್ಮನ್ ಗಿಲ್ ಜೊತೆ ಡೇಟಿಂಗ್ ಮಾಡುತ್ತಿದ್ದರು ಎನ್ನಲಾಗಿತ್ತು. ಈಗ ಅವರ ಹೆಸರು ಸ್ಟಾರ್ ಹೀರೋ ಜೊತೆ ತಳುಕು ಹಾಕಿಕೊಂಡಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗಳು ನಡೆಯುತ್ತಿವೆ. ಹಾಗಾದರೆ ಯಾರು ಆ ಸ್ಟಾರ್ ನಟ? ಸಿದ್ದಾಂತ್ ಚತುರ್ವೇದಿ.
ಸಿದ್ದಾಂತ್ ವೃತ್ತಿ ಜೀವನ ಈಗಷ್ಟೇ ವೇಗ ಪಡೆದುಕೊಳ್ಳುತ್ತಿದೆ. 2019ರ ‘ಗಲ್ಲಿ ಬಾಯ್’ ಚಿತ್ರದ ಮೂಲಕ ಸಿದ್ದಾಂತ್ ಜನಪ್ರಿಯತೆ ಪಡೆದರು. ಅದಕ್ಕೂ ಮೊದಲು ‘ಇನ್ಸೈಡ್ ಎಡ್ಜ್’ ಹೆಸರಿನ ವೆಬ್ ಸೀರಿಸ್ನಲ್ಲಿ ಅವರು ನಟಿಸಿದ್ದರು. 2022ರಲ್ಲಿ ಅವರು ನಟಿಸಿದ ‘ಗೆಹರಾಯಿಯಾ’ ಸಿನಿಮಾ ರಿಲೀಸ್ ಆಗಿ ಸಾಕಷ್ಟು ಚರ್ಚೆಗಳನ್ನು ಹುಟ್ಟುಹಾಕಿತ್ತು. ಈಗ ‘ಧಡಕ್ 2’ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ನಟನ ಜೊತೆ ಸಾರಾ ಡೇಟಿಂಗ್ ಶುರು ಹಚ್ಚಿಕೊಂಡಿದ್ದಾರೆ ಎನ್ನಲಾಗುತ್ತಿದೆ.
ಸಾರಾ ಹಾಗೂ ಸಿದ್ದಾಂತ್ ಕೆಲವು ಕಡೆಗಳಲ್ಲಿ ಸುತ್ತಾಟ ನಡೆಸಿದ್ದಾರೆ ಎನ್ನಲಾಗುತ್ತಿದೆ. ಇವರ ಮಧ್ಯೆ ಪ್ರೀತಿ ಮೂಡಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ. ಆದರೆ, ಅದು ಎಷ್ಟು ಆಳಕ್ಕೆ ಹೋಗಿದೆ ಎಂಬ ಬಗ್ಗೆ ಇನ್ನೂ ಸ್ಪಷ್ಟನೆ ಇಲ್ಲ. ಈ ವಿಚಾರದಲ್ಲಿ ಸಾರಾ ಆಗಲಿ, ಸಿದ್ದಾಂತ್ ಆಗಲಿ ಬಾಯ್ಬಿಟ್ಟಿಲ್ಲ. ಈ ವಿಚಾರದಲ್ಲಿ ಅವರು ಮೌನ ತಾಳಿದ್ದಾರೆ.
ಇದನ್ನೂ ಓದಿ: ನಾನು 3 ವರ್ಷಗಳಿಂದ..; ಸಾರಾ ಜೊತೆಗಿನ ಬ್ರೇಕ್ ಅಪ್ ವದಂತಿಯ ನಡುವೆ ಮೌನ ಮುರಿದ ಶುಭ್ಮನ್ ಗಿಲ್
ಸಾರಾ ಅವರು ಈ ಮೊದಲು ಶುಭ್ಮನ್ ಗಿಲ್ ಜೊತೆ ಡೇಟಿಂಗ್ ಮಾಡಿದ್ದ ವಿಚಾರ ಸಾಕಷ್ಟು ಸುದ್ದಿ ಆಗಿತ್ತು. ಆದರೆ, ಇದನ್ನು ಯಾರೂ ಒಪ್ಪಿಕೊಂಡಿಲ್ಲ. ಕೆಲವೇ ತಿಂಗಳ ಹಿಂದೆ ಇವರ ಬ್ರೇಕಪ್ ಸುದ್ದಿ ಹೊರ ಬಿದ್ದಿತ್ತು. ಹೀಗಿರುವಾಗಲೇ ಸಾರಾ ಹೆಸರು ನಟನ ಜೊತೆ ತಳುಕು ಹಾಕಿಕೊಂಡಿದೆ. ಇನ್ನು ಸಿದ್ಧಾಂತ್ ಹೆಸರು ಕೂಡ ಚರ್ಚೆಯಲ್ಲಿ ಇತ್ತು. ಅಮಿತಾಭ್ ಬಚ್ಚನ್ ಮೊಮ್ಮಗಳು ನಂದಾ ನವೇಲಿ ಜೊತೆ ಅವರು ಸುತ್ತಾಟ ನಡೆಸುತ್ತಿದ್ದರು ಎನ್ನುವ ಗಾಸಿಪ್ ಬಾಲಿವುಡ್ ಅಂಗಳದಲ್ಲಿ ಇತ್ತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:04 am, Mon, 5 May 25