ಟಿವಿ ಶೋಗಳಲ್ಲಿ ನಟಿಸಿದ್ದ ಶಾರುಖ್ ಖಾನ್; ಅವುಗಳು ಯಾವವು?

ಶಾರುಖ್ ಖಾನ್ ಅವರು ಬೆಳ್ಳಿ ಪರದೆಗೆ ಕಾಲಿಟ್ಟಿದ್ದು 1992ರಲ್ಲಿ. ಅವರು ನಟಿಸಿದ ಮೊದಲ ಚಿತ್ರ ‘ದೀವಾನ’. ಬೆಳ್ಳಿ ಪರದೆಗೆ ಅವರು ಪರಿಚಯ ಆಗಿದ್ದು ಆಗ. ಆದರೆ, ಅದಕ್ಕೂ ಮೊದಲೇ ಅವರು ಬಣ್ಣದ ಲೋಕದ ಜೊತೆ ನಂಟು ಬೆಳೆಸಿಕೊಂಡಿದ್ದರು. ಅದೂ ಕಿರುತೆರೆ ಮೂಲಕ ಅನ್ನೋದು ವಿಶೇಷ.

ಟಿವಿ ಶೋಗಳಲ್ಲಿ ನಟಿಸಿದ್ದ ಶಾರುಖ್ ಖಾನ್; ಅವುಗಳು ಯಾವವು?
ಶಾರುಖ್
Edited By:

Updated on: Nov 03, 2024 | 7:22 AM

ಶಾರುಖ್ ಖಾನ್ ಅವರಿಗೆ ಈಗ ಬಾಲಿವುಡ್​ನಲ್ಲಿ ಸಖತ್ ಬೇಡಿಕೆ ಇದೆ. ಇಂದು (ನವೆಂಬರ್ 2) ಅವರಿಗೆ 59ನೇ ವರ್ಷದ ಜನ್ಮದಿನ. ಅವರು ಬಾಲಿವುಡ್​ನಲ್ಲಿ ಮಾಡಿರುವ ಹೆಸರು ತುಂಬಾನೇ ದೊಡ್ಡದು. ಶಾರುಖ್ ಖಾನ್ ಅವರು ಸಿನಿಮಾ ರಂಗಕ್ಕೆ ಬರುವುದಕ್ಕೂ ಮೊದಲು ಕಿರುತೆರೆಯಲ್ಲಿ ಮಿಂಚಿದ್ದರು. ಈ ವಿಚಾರ ಅನೇಕರಿಗೆ ಗೊತ್ತಿಲ್ಲ. ಅವರು ನಟಿಸಿದ ಕಿರುತೆರೆ ಧಾರಾವಾಹಿಗಳ ಬಗ್ಗೆ ಇಲ್ಲಿದೆ ಮಾಹಿತಿ.

ಶಾರುಖ್ ಖಾನ್ ಅವರು ಬೆಳ್ಳಿ ಪರದೆಗೆ ಕಾಲಿಟ್ಟಿದ್ದು 1992ರಲ್ಲಿ. ಅವರು ನಟಿಸಿದ ಮೊದಲ ಚಿತ್ರ ‘ದೀವಾನ’. ಬೆಳ್ಳಿ ಪರದೆಗೆ ಅವರು ಪರಿಚಯ ಆಗಿದ್ದು ಆಗ. ಆದರೆ, ಅದಕ್ಕೂ ಮೊದಲೇ ಅವರು ಬಣ್ಣದ ಲೋಕದ ಜೊತೆ ನಂಟು ಬೆಳೆಸಿಕೊಂಡಿದ್ದರು. ಅದೂ ಕಿರುತೆರೆ ಮೂಲಕ ಅನ್ನೋದು ವಿಶೇಷ.

‘ದಿಲ್ ದರಿಯಾ’ ಧಾರಾವಾಹಿ ಮೂಲಕ ಶಾರುಖ್ ಖಾನ್ ಅವರು ಬಣ್ಣದ ಲೋಕಕ್ಕೆ ಕಾಲಿಟ್ಟರು. ಇದನ್ನು ಲೇಖಾ ಟಂಡನ್ ನಿರ್ದೇಶನ ಮಾಡಿದ್ದರು. ಅವರಿಗೆ ಶಾರುಖ್ ಖಾನ್ ಬಗ್ಗೆ ನಿರೀಕ್ಷೆ ಇತ್ತು. ‘ದೂಸ್ರಾ ಕೇವಲ್’ ಹೆಸರಿನ ಧಾರಾವಾಹಿಯಲ್ಲಿ ಶಾರುಖ್ ಖಾನ್ ನಟಿಸಿದ್ದರು. ಇದು ಲೇಖಾ ಟಂಡನ್ ನಿರ್ದೇಶನ ಮಾಡಿದ ಧಾರಾವಾಹಿಗಳಲ್ಲಿ ಒಂದು.

‘ಉಮೀದ್’ ಅನ್ನೋದು ಟೆಲಿಫಿಲ್ಮ್​. ಈ ಚಿತ್ರದಲ್ಲಿ ದೀಪ್ತಿ ನವಾಲ್ ಹಾಗೂ ಜಾಯ್ ಮುಖರ್ಜೀ ಜೊತೆ ಅವರು ನಟಿಸಿದ್ದರು. ಅವರು ಬ್ಯಾಂಕರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಸಿಟಿಯಲ್ಲಿ ಬ್ಯಾಂಕರ್ ಆಗಿರುವ ವ್ಯಕ್ತಿಯನ್ನು ನಂತರ ಗ್ರಾಮೀಣ ಭಾಗಕ್ಕೆ ಕಳುಹಿಸಲಾಗುತ್ತದೆ. ಇದನ್ನು ಅನೇಕರು ‘ಪಂಚಾಯತ್’ ಸೀರಿಸ್​ಗೆ ಹೋಲಿಕೆ ಮಾಡಿದ್ದಾರೆ.

ಇದನ್ನೂ ಓದಿ: ಶಾರುಖ್ ಖಾನ್​ಗೆ ವೀಕೆಂಡ್​ನಲ್ಲಿ ಡಬಲ್ ಸೆಲೆಬ್ರೇಷನ್; ಬೆಳಕಿನಿಂದ ಅಲಂಕೃತಗೊಂಡ ಮನ್ನತ್

ಇದಲ್ಲದೆ, 1989ರಲ್ಲಿ ರಿಲೀಸ್ ಆದ ‘ಅಹ್ಮಾಖ್’ನಲ್ಲಿ ಶಾರುಖ್ ಖಾನ್ ಅವರು ನಟಿಸಿದ್ದರು. ‘ಫೌಜಿ’ ಹೆಸರಿನ ಧಾರಾವಾಹಿಯಲ್ಲಿ ಶಾರುಖ್ ಖಾನ್ ಬಣ್ಣ ಹಚ್ಚಿದ್ದರು. ಈ ಧಾರಾವಾಹಿಯ ಮೂಲಕ ಅವರು ಮನೆ ಮಾತಾದರು. ‘ವಾಗ್ಲೆ ಕಿ ದುನಿಯಾ’ ಹೆಸರಿನ ಧಾರಾವಾಹಿಯಲ್ಲಿ ನಟಿಸಿದ್ದರು ಅವರು. ಈ ಧಾರಾವಾಹಿಯಲ್ಲಿ ಆರ್​ಕೆ ಲಕ್ಷ್ಮಣ್ ನಟಿಸಿದ್ದರು. ‘ಸರ್ಕಸ್’ ಹೆಸರಿನ ಧಾರಾವಾಹಿಯಲ್ಲೂ ಶಾರುಖ್ ಖಾನ್ ಬಣ್ಣ ಹಚ್ಚಿದ್ದರು. ಶಾರುಖ್ ಖಾನ್ ಅವರು ಸದ್ಯ ‘ಕಿಂಗ್’ ಹೆಸರಿನ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 10:00 am, Sat, 2 November 24