‘ಭೂಲ್​ ಭುಲಯ್ಯ 3’ vs ‘ಸಿಂಗಂ ಅಗೇನ್’; ಎರಡೂ ಚಿತ್ರಕ್ಕೆ ಮೊದಲ ದಿನ ಅಬ್ಬರದ ಗಳಿಕೆ

ದೀಪಾವಳಿ ಪ್ರಯುಕ್ತ ಈ ವಾರ ಹಲವು ಸಿನಿಮಾಗಳು ರಿಲೀಸ್ ಆಗುತ್ತಿವೆ. ಆ ಪೈಕಿ ಹಿಂದಿ ಸಿನಿಮಾಗಳ ಮಧ್ಯೆ ದೊಡ್ಡ ಮಟ್ಟದಲ್ಲಿ ಕ್ಲ್ಯಾಶ್ ಏರ್ಪಟ್ಟಿದೆ. ‘ಭೂಲ್ ಭುಲಯ್ಯ 3’ ಹಾಗೂ ‘ಸಿಂಗಂ ಅಗೇನ್’ ಚಿತ್ರಗಳು ರಿಲೀಸ್ ಆಗಿವೆ. ಈ ಚಿತ್ರಗಳ ಕಲೆಕ್ಷನ್ ಬಗ್ಗೆ ಇಲ್ಲಿದೆ ವಿವರ.

‘ಭೂಲ್​ ಭುಲಯ್ಯ 3’ vs ‘ಸಿಂಗಂ ಅಗೇನ್’; ಎರಡೂ ಚಿತ್ರಕ್ಕೆ ಮೊದಲ ದಿನ ಅಬ್ಬರದ ಗಳಿಕೆ
ಸಿಂಗಂ ಅಗೇನ್-ಭೂಲ್ ಭುಲಯ್ಯ
Follow us
| Updated By: ರಾಜೇಶ್ ದುಗ್ಗುಮನೆ

Updated on: Nov 02, 2024 | 11:30 AM

‘ಭೂಲ್ ಭುಲಯ್ಯ 3’ ಸಿನಿಮಾ ಹಾಗೂ ‘ಸಿಂಗಂ ಅಗೇನ್’ ಸಿನಿಮಾಗಳು ನವೆಂಬರ್ 1ರಂದು ತೆರೆಗೆ ಬಂದವು. ಈ ಎರಡೂ ಚಿತ್ರಗಳು ಬಾಕ್ಸ್ ಆಫೀಸ್​ನಲ್ಲಿ ದೊಡ್ಡ ಮೊತ್ತದ ಕಲೆಕ್ಷನ್ ಮಾಡುವ ನಿರೀಕ್ಷೆ ಇತ್ತು. ಆ ನಿರೀಕ್ಷೆ ನಿಜವೇ ಆಗಿದೆ. ದೀಪಾವಳಿ ಪ್ರಯುಕ್ತ ರಿಲೀಸ್ ಆದ ಚಿತ್ರಗಳ ಕಲೆಕ್ಷನ್ ಭರ್ಜರಿ ಆಗಿದೆ. ಬಾಕ್ಸ್ ಆಫೀಸ್​ ಕ್ಲ್ಯಾಶ್​ನಿಂದ ಎರಡೂ ಚಿತ್ರಕ್ಕೆ ಸರಿ ಸಮನವಾದ ಕಲೆಕ್ಷನ್ ಆಗಿದೆ ಎಂದೇ ಹೇಳಬಹುದು. ಸಿನಿಮಾಗಳ ಗಳಿಕೆ ಬಗ್ಗೆ ನಾವಿಲ್ಲಿ ನೋಡೋಣ.

‘ಸಿಂಗಂ ಅಗೇನ್’ ಚಿತ್ರಕ್ಕೆ ರೋಹಿತ್ ಶೆಟ್ಟಿ ಅವರ ನಿರ್ದೇಶನ ಇದೆ. ಅಜಯ್ ದೇವಗನ್, ಕರೀನಾ ಕಪೂರ್ ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅರ್ಜುನ್ ಕಪೂರ್ ವಿಲನ್ ಪಾತ್ರ ಮಾಡಿದ್ದಾರೆ. ಅಕ್ಷಯ್ ಕುಮಾರ್, ದೀಪಿಕಾ ಪಡುಕೋಣೆ, ರಣವೀರ್ ಸಿಂಗ್, ಟೈಗರ್ ಶ್ರಾಫ್ ಮೊದಲಾದವರು ನಟಿಸಿದ್ದಾರೆ.

ರೋಹಿತ್ ಶೆಟ್ಟಿ ನಿರ್ದೇಶನದ ಸಿನಿಮಾಗಳಲ್ಲಿ ಅಬ್ಬರ ಜಾಸ್ತಿ. ‘ಸಿಂಗಂ ಅಗೇನ್’ ಕೂಡ ಅಬ್ಬರದ ದೃಶ್ಯಗಳನ್ನು ಹೊಂದಿದೆ. ಈ ಚಿತ್ರ ಮೊದಲ ದಿನ 43 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಇದು ಚಿತ್ರತಂಡದ ಖುಷಿಯನ್ನು ಹೆಚ್ಚಿಸಿದೆ. ಅನಾಯಾಸವಾಗಿ ಈ ಚಿತ್ರ 200 ಕೋಟಿ ಕ್ಲಬ್ ಸೇರಬಹುದು. ಸಿನಿಮಾಗೆ ರೇಟಿಂಗ್ ಅಷ್ಟೇನು ಉತ್ತಮವಾಗಿಲ್ಲ. ಈ ಚಿತ್ರ ಬುಕ್ ಮೈ ಶೋನಲ್ಲಿ ಕೇವಲ 7.1 ರೇಟಿಂಗ್ ಪಡೆದಿದೆ. ಮುಂದೆ ರೇಟಿಂಗ್ ಮತ್ತಷ್ಟು ತಗ್ಗಬಹುದು. ಈ ಚಿತ್ರಕ್ಕೆ ಅಜಯ್ ದೇವಗನ್, ಜ್ಯೋತಿ ದೇಶಪಾಂಡೆ, ರೋಹಿತ್ ಶೆಟ್ಟಿ, ಜಿಯೋ ಸ್ಟುಡಿಯೋ, ರಿಲಾಯನ್ಸ್​ ಎಂಟರ್​ಟೇನ್​ಮೆಂಟ್, ಸಿನೆರ್ಜಿ ಬಂಡವಾಳ ಹೂಡಿದೆ.

ಇದನ್ನೂ ಓದಿ: ‘ಭೂಲ್ ಭುಲಯ್ಯ 2’ ಚಿತ್ರ ಗೆಲ್ಲಿಸಿದ ಕಾರ್ತಿಕ್ ಆರ್ಯನ್​ಗೆ ನಾಲ್ಕು ಕೋಟಿ ರೂಪಾಯಿ ಕಾರ್ ಗಿಫ್ಟ್​

‘ಭೂಲ್ ಭುಲಯ್ಯ 3’ ಚಿತ್ರ ಮಿಶ್ರ ಪ್ರತಿಕ್ರಿಯೆ ಪಡೆದರೂ ಕಲೆಕ್ಷನ್ ಜೋರಾಗಿಯೇ ಆಗಿದೆ ಎಂದು ಹೇಳಬಹುದು. ಈ ಸಿನಿಮಾ ಮೊದಲ ದಿನ ಅಂದಾಜು 35 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆಯಂತೆ. ಕಾರ್ತಿಕ್ ಆರ್ಯನ್, ತೃಪ್ತಿ ದಿಮ್ರಿ, ವಿದ್ಯಾ ಬಾಲನ್, ವಿಜಯ್ ರಾಜ್, ಮಾಧುರಿ ದೀಕ್ಷಿತ್, ರಾಜ್​ಪಾಲ್ ಯಾದವ್ ಮೊದಲಾದವರು ನಟಿಸುತ್ತಿದ್ದಾರೆ. ಅನೀಸ್​ ಬಾಜ್ಮಿ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಈ ಚಿತ್ರಕ್ಕೆ ಭೂಷಣ್ ಕುಮಾರ್, ಕೃಷ್ಣ ಕುಮಾರ್, ಮುರದ್ ಖೇತಾನಿ ಬಂಡವಾಳ ಹೂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಸಿಎಂ ಸೂಚನೆಯಂತೆ ನೋಟೀಸ್, ಜಮೀರ್ ಹೇಳಿದ ವಿಡಿಯೋ ತೋರಿಸಿದ ಬಿಜೆಪಿ ನಾಯಕ
ಸಿಎಂ ಸೂಚನೆಯಂತೆ ನೋಟೀಸ್, ಜಮೀರ್ ಹೇಳಿದ ವಿಡಿಯೋ ತೋರಿಸಿದ ಬಿಜೆಪಿ ನಾಯಕ
Hasanamba Darshan Live: ಹಾಸನಾಂಬೆ ದರ್ಶನಕ್ಕೆ ಇಂದು ಕೊನೆಯ ದಿನ​
Hasanamba Darshan Live: ಹಾಸನಾಂಬೆ ದರ್ಶನಕ್ಕೆ ಇಂದು ಕೊನೆಯ ದಿನ​
ತೀರ್ಥಕ್ಷೇತ್ರಗಳಲ್ಲಿ ಕಲ್ಲುಗಳನ್ನು ಜೋಡಿಸುವುದರ ಹಿಂದಿನ ರಹಸ್ಯ ತಿಳಿಯಿರಿ
ತೀರ್ಥಕ್ಷೇತ್ರಗಳಲ್ಲಿ ಕಲ್ಲುಗಳನ್ನು ಜೋಡಿಸುವುದರ ಹಿಂದಿನ ರಹಸ್ಯ ತಿಳಿಯಿರಿ
Nithya Bhavishya: ಈ ರಾಶಿಯವರಿಗೆ ಇಂದು ಏಳು ಗ್ರಹಗಳ ಶುಭ ಫಲವಿದೆ
Nithya Bhavishya: ಈ ರಾಶಿಯವರಿಗೆ ಇಂದು ಏಳು ಗ್ರಹಗಳ ಶುಭ ಫಲವಿದೆ
ತಾತನನ್ನು ಪಿಎಂ, ಅಪ್ಪನನ್ನು ಸಿಎಂ ಮಾಡಿದ್ದು ಷಡ್ಯಂತ್ರ ಅನಿಸಿರಬಹುದು: ಸಚಿವ
ತಾತನನ್ನು ಪಿಎಂ, ಅಪ್ಪನನ್ನು ಸಿಎಂ ಮಾಡಿದ್ದು ಷಡ್ಯಂತ್ರ ಅನಿಸಿರಬಹುದು: ಸಚಿವ
ಶಿವರಾಜ್​ಕುಮಾರ್ ಮನೆಯಲ್ಲಿ ಭೈರತಿ ರಣಗಲ್ ಸುದ್ದಿಗೋಷ್ಠಿ; ಇಲ್ಲಿದೆ ಲೈವ್
ಶಿವರಾಜ್​ಕುಮಾರ್ ಮನೆಯಲ್ಲಿ ಭೈರತಿ ರಣಗಲ್ ಸುದ್ದಿಗೋಷ್ಠಿ; ಇಲ್ಲಿದೆ ಲೈವ್
ಸಿದ್ದರಾಮಯ್ಯ ಕೆಳಗಿಳಿಸುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಅನ್ಯಾಯ: ವಾಟಾಳ್
ಸಿದ್ದರಾಮಯ್ಯ ಕೆಳಗಿಳಿಸುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಅನ್ಯಾಯ: ವಾಟಾಳ್
ತಂದೆ-ತಾಯಿ ಇಲ್ಲದ ಐಶ್ವರ್ಯಾಗೆ ಬಿಗ್​ಬಾಸ್​ನಿಂದ ಭರವಸೆಯ ಪತ್ರ
ತಂದೆ-ತಾಯಿ ಇಲ್ಲದ ಐಶ್ವರ್ಯಾಗೆ ಬಿಗ್​ಬಾಸ್​ನಿಂದ ಭರವಸೆಯ ಪತ್ರ
ಜಾಮೀನು ಸಿಕ್ಕಿರೋದು 6 ವಾರ ಮಾತ್ರ, ಅಷ್ಟರೊಳಗೆ ಚಿಕಿತ್ಸೆ ಪೂರ್ಣಗೊಳ್ಳಬೇಕು
ಜಾಮೀನು ಸಿಕ್ಕಿರೋದು 6 ವಾರ ಮಾತ್ರ, ಅಷ್ಟರೊಳಗೆ ಚಿಕಿತ್ಸೆ ಪೂರ್ಣಗೊಳ್ಳಬೇಕು
ಹಿಂದೂ-ಮುಸ್ಲಿಂ ಮಾಡೋದು ಬಿಟ್ರೆ ಯತ್ನಾಳ್​ಗೆ ಬೇರೇನು ಗೊತ್ತಿದೆ: ಲಕ್ಷ್ಮಿ
ಹಿಂದೂ-ಮುಸ್ಲಿಂ ಮಾಡೋದು ಬಿಟ್ರೆ ಯತ್ನಾಳ್​ಗೆ ಬೇರೇನು ಗೊತ್ತಿದೆ: ಲಕ್ಷ್ಮಿ