‘ಪಠಾಣ್​’ ಗೆಲುವಿನ ಬಳಿಕ 10 ಕೋಟಿ ರೂ. ಕಾರು ಖರೀದಿಸಿದ ಶಾರುಖ್ ಖಾನ್; ನಂಬರ್​ ಪ್ಲೇಟ್ ಹೇಗಿದೆ ನೋಡಿ

ಶಾರುಖ್ ಖಾನ್ ಅವರು ‘ಪಠಾಣ್​’ ಸಿನಿಮಾ ಗೆದ್ದ ಬಳಿಕ ಐದು ಕೋಟಿ ರೂಪಾಯಿ ವಾಚ್ ಖರೀದಿ ಮಾಡಿದ್ದರು. ಇದನ್ನು ಧರಿಸಿ ಅವರು ಕಾಣಿಸಿಕೊಂಡಿದ್ದರು.

‘ಪಠಾಣ್​’ ಗೆಲುವಿನ ಬಳಿಕ 10 ಕೋಟಿ ರೂ. ಕಾರು ಖರೀದಿಸಿದ ಶಾರುಖ್ ಖಾನ್; ನಂಬರ್​ ಪ್ಲೇಟ್ ಹೇಗಿದೆ ನೋಡಿ
ಶಾರುಖ್ ಖಾನ್

Updated on: Mar 28, 2023 | 9:11 AM

ಮುಖ್ಯಾಂಶಗಳು

  • ರೋಲ್ಸ್ ರಾಯ್ಸ್ ಕಲಿನನ್ ಬ್ಲಾಕ್ ಬ್ಯಾಡ್ಜ್ ಮಾಡೆಲ್​ ಕಾರು ಖರೀದಿಸಿದ ​ ಶಾರುಖ್ ಖಾನ್
  • ವೈರಲ್ ಆಯ್ತು ಶಾರುಖ್ ಖಾನ್ ಅವರ ಹೊಸ ಕಾರಿನ ವಿಡಿಯೋ
  • 10 ಕೋಟಿ ರೂಪಾಯಿ ಕೊಟ್ಟು ಕಾರು ಖರೀದಿಸಿರೋ ಶಾರುಖ್

ಶಾರುಖ್ ಖಾನ್ (Shah Rukh Khan) ಅವರು ‘ಪಠಾಣ್​’ ಸಿನಿಮಾ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ. ಅವರಿಗೆ ಒಂದೊಳ್ಳೆಯ ಕಂಬ್ಯಾಕ್ ಕೊಟ್ಟ ಸಿನಿಮಾ ಇದು. ಸತತ ಸೋಲಿನಿಂದ ಕಂಗೆಟ್ಟ ಶಾರುಖ್ ಅವರಿಗೆ ಈ ಚಿತ್ರದ ಮೂಲಕ ಗೆಲುವಿನ ಸಿಹಿ ಸಿಕ್ಕಿದೆ. ಶಾರುಖ್ ಈ ಗೆಲುವನ್ನು ಸಂಭ್ರಮಿಸುತ್ತಿದ್ದಾರೆ. ಈ ಚಿತ್ರದ ಲಾಭದ ಹಣದಲ್ಲಿ ಅವರಿಗೂ ಪಾಲಿದೆ ಎನ್ನಲಾಗಿದೆ. ಈ ಕಾರಣಕ್ಕೆ ಶಾರುಖ್ ಖಾನ್ ಅವರು ಬರೋಬ್ಬರಿ 10 ಕೋಟಿ ರೂಪಾಯಿ ಕೊಟ್ಟು ರೋಲ್ಸ್ ರಾಯ್ಸ್ (Rolls Royce) ಎಸ್​ಯುವಿ ಖರೀದಿ ಮಾಡಿದ್ದಾರೆ. ಮನ್ನತ್ ನಿವಾಸದ ಒಳಗೆ ಈ ಎಸ್​ಯುವಿ ತೆರಳುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಭಿಮಾನಿಗಳು ಶಾರುಖ್​ಗೆ ಶುಭಾಶಯ ತಿಳಿಸುತ್ತಿದ್ದಾರೆ.

ರೋಲ್ಸ್ ರಾಯ್ಸ್​ ಕಂಪನಿಯ ಕಲಿನನ್ ಬ್ಲಾಕ್ ಬ್ಯಾಡ್ಜ್ ಮಾಡೆಲ್​ ಕಾರನ್ನು​ ಶಾರುಖ್ ಖಾನ್ ಖರೀದಿ ಮಾಡಿದ್ದಾರೆ. ಇದರ ಬೆಲೆ ಸುಮಾರು 10 ಕೋಟಿ ರೂಪಾಯಿ ಎನ್ನಲಾಗಿದೆ. ಈ ಎಸ್​ಯುವಿ ನಂಬರ್​ಪ್ಲೇಟ್​ 555 ಎಂದಿದೆ. ಶಾರುಖ್ ಅವರ ಫೇವರಿಟ್ ಸಂಖ್ಯೆ ಇದಾಗಿದೆ. ಶಾರುಖ್ ಖಾನ್​ ಅವರ ಹಲವು ವಾಹನಗಳಿಗೆ ಈ ನಂಬರ್​ಪ್ಲೇಟ್ ಇದೆ. ಇದಕ್ಕೂ ಶಾರುಖ್ ದೊಡ್ಡ ಮೊತ್ತ ಪಾವತಿ ಮಾಡಿದ್ದಾರೆ. ರೋಲ್ಸ್ ರಾಯ್ಸ್ ಕಾರು ಮನೆ ಒಳಗೆ ಎಂಟ್ರಿ ಆಗುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಶಾರುಖ್ ಖಾನ್ ಅವರು ‘ಪಠಾಣ್​’ ಸಿನಿಮಾ ಗೆದ್ದ ಬಳಿಕ ಐದು ಕೋಟಿ ರೂಪಾಯಿ ವಾಚ್ ಖರೀದಿ ಮಾಡಿದ್ದರು. ಇದನ್ನು ಧರಿಸಿ ಅವರು ಕಾಣಿಸಿಕೊಂಡಿದ್ದರು. ಈ ವಾಚ್ ಎಲ್ಲರ ಗಮನ ಸೆಳೆದಿತ್ತು. ಶಾರುಖ್ ಖಾನ್ ಅವರು ಈಗ ಮತ್ತೊಂದು ದುಬಾರಿ ವಸ್ತುವನ್ನು ಖರೀದಿ ಮಾಡಿದ್ದಾರೆ.

ಇದನ್ನೂ ಓದಿ: Suhana Khan: ಹಾಟ್ ಅವತಾರ ತಾಳಿದ ಶಾರುಖ್ ಖಾನ್ ಮಗಳು; ಫೋಟೋ ವೈರಲ್

‘ಪಠಾಣ್’ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ 1000 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಈ ಚಿತ್ರಕ್ಕೆ ಸಂಭಾವನೆ ತೆಗೆದುಕೊಳ್ಳುವುದರ ಜೊತೆಗೆ, ಬಾಕ್ಸ್ ಆಫೀಸ್ ಕಲೆಕ್ಷನ್​ನಲ್ಲಿ ಶಾರುಖ್​​ ಖಾನ್​ಗೂ ಪಾಲಿದೆ. ಈ ಎಲ್ಲಾ ಕಾರಣದಿಂದ ಶಾರುಖ್​ಗೆ ಈ ಚಿತ್ರದಿಂದ ದೊಡ್ಡ ಮೊತ್ತದ ಸಂಭಾವನೆ ಸಿಕ್ಕಿದೆ. ಈ ಕಾರಣಕ್ಕೆ ಅವರು ಬ್ಯಾಕ್​ ಟು ಬ್ಯಾಕ್ ವಸ್ತುಗಳನ್ನು ಖರೀದಿ ಮಾಡುತ್ತಿದ್ದಾರೆ.

ಇದನ್ನೂ ಓದಿ: Jawan: ಶಾರುಖ್​ ಖಾನ್​-ಸಂಜಯ್​ ದತ್​ ಮುಖಾಮುಖಿ; ‘ಜವಾನ್​’ ಚಿತ್ರದಲ್ಲಿ ಭರ್ಜರಿ ಫೈಟ್​

ಶಾರುಖ್ ಖಾನ್ ಅವರು ಅಟ್ಲೀ ನಿರ್ದೇಶನದ ‘ಜವಾನ್​’ ಹಾಗೂ ರಾಜ್​ಕುಮಾರ್ ಹಿರಾನಿ ನಿರ್ದೇಶನದ ‘ಡಂಕಿ’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಎರಡೂ ಸಿನಿಮಾಗಳ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ. ಎರಡೂ ಸಿನಿಮಾ ಗೆಲ್ಲಲಿದೆ ಅನ್ನೋದು ಅಭಿಮಾನಿಗಳ ನಂಬಿಕೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us