ಶಾರುಖ್ ಖಾನ್ (Shah Rukh Khan) ಅವರು ಸದ್ಯ ‘ಜವಾನ್’ ಸಿನಿಮಾ (Jawan Movie) ಸಕ್ಸಸ್ನಲ್ಲಿ ತೇಲುತ್ತಿದ್ದಾರೆ. ಈ ಸಿನಿಮಾ ವಿಶ್ವ ಬಾಕ್ಸ್ ಆಫೀಸ್ನಲ್ಲಿ 1000 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈ ಚಿತ್ರದ ಮೂಲಕ ಶಾರುಖ್ ಖಾನ್ ಅವರು ಈ ವರ್ಷದ ಎರಡನೇ ಗೆಲುವು ಕಂಡಿದ್ದಾರೆ. ಶಾರುಖ್ ಖಾನ್ ಅವರನ್ನು ಕಂಡರೆ ಇಷ್ಟಪಡುವವರು ಅನೇಕರಿದ್ದಾರೆ. ಆದರೆ, ಅವರನ್ನು ಸುಖಾಸುಮ್ಮನೆ ಟೀಕಿಸುವ ಕೆಲಸವನ್ನು ಯಾರೂ ಮಾಡುವುದಿಲ್ಲ. ಆದರೆ, ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ (Vivek Agnihotri) ಅವರು ಶಾರುಖ್ ಖಾನ್ ಅವರನ್ನು ಟೀಕಿಸಿದ್ದಾರೆ. ಅವರ ಬಗ್ಗೆ ಬೇರೆಯದೇ ಆದ ಅಭಿಪ್ರಾಯ ಅವರಿಗೆ ಇದೆ.
ಶಾರುಖ್ ಖಾನ್ ಅವರು ಬಾಲಿವುಡ್ನ ಬೇಡಿಕೆಯ ನಟ. ಹಲವು ರೀತಿಯ ಪಾತ್ರಗಳನ್ನು ಅವರು ಮಾಡಿದ್ದಾರೆ. ವಯಸ್ಸು 60 ಸಮೀಪಿಸಿದರೂ ಸಿಕ್ಸ್ ಪ್ಯಾಕ್ ಮೂಲಕ ಅವರು ಗಮನ ಸೆಳೆಯುತ್ತಾರೆ. ಈಗ ವಿವೇಕ್ ಅಗ್ನಿಹೋತ್ರಿ ಅವರು ಶಾರುಖ್ ಬಗ್ಗೆ ಮಾಡಿದ್ದಾರೆ. ‘ಅವರ ಇತ್ತೀಚಿನ ಸಿನಿಮಾ ಸೂಪರ್ ಸ್ಪೆಷಲ್ ಆಗಿತ್ತು. ಆದರೆ ಅವರು ಇದಕ್ಕಿಂತ ಚೆನ್ನಾಗಿ ನಟನೆ ಮಾಡುವ ತಾಕತ್ತನ್ನು ಹೊಂದಿದ್ದಾರೆ’ ಎಂದಿದ್ದಾರೆ ವಿವೇಕ್ ಅಗ್ನಿಹೋತ್ರಿ. ಇನ್ನು, ಸಿನಿಮಾದ ಯಶಸ್ಸನ್ನು ಅಳೆಯುವ ಮಾನದಂಡ ಸರಿ ಇಲ್ಲ ಎಂಬುದು ಅವರ ಅಭಿಪ್ರಾಯ.
ಇದನ್ನೂ ಓದಿ: ‘ಜವಾನ್’ ಕಲೆಕ್ಷನ್ ಫೇಕ್ ಎಂದವನಿಗೆ ಗದರಿದ ಶಾರುಖ್ ಖಾನ್
ಶಾರುಖ್ ಖಾನ್ ಅವರನ್ನು ವಿವೇಕ್ ಅಗ್ನಿಹೋತ್ರಿ ಅವರು ಟೀಕೆ ಮಾಡಿದ್ದರು. ‘ಜವಾನ್’ ಸಿನಿಮಾ ಗೆಲುವಿನ ಬಳಿಕ ವಿವೇಕ್ ಅಗ್ನಿಹೋತ್ರಿ ಅವರನ್ನು ಟೀಕಿಸುವ ಕೆಲಸವನ್ನು ಶಾರುಖ್ ಖಾನ್ ಫ್ಯಾನ್ಸ್ ಮಾಡುತ್ತಿದ್ದಾರಂತೆ. ‘ದಿ ವ್ಯಾಕ್ಸಿನ್ ವಾರ್’ ಸೋತ ಬಳಿಕವಂತೂ ವಿವೇಕ್ ಅವರನ್ನು ಟೀಕಿಸಲು ಶಾರುಖ್ ಖಾನ್ ಅಭಿಮಾನಿಗಳಿಗೆ ಹೊಸ ಬಲ ಸಿಕ್ಕಂತೆ ಆಗಿದೆ.
ಇದನ್ನೂ ಓದಿ: ರಾಜ್ ಕಪೂರ್ ದಾಖಲೆ ಸರಿಗಟ್ಟಿದ ಶಾರುಖ್ ಖಾನ್: ಏನದು ದಾಖಲೆ?
‘ದಿ ವ್ಯಾಕ್ಸಿನ್ ವಾರ್’ ಸಿನಿಮಾ ಅಂದುಕೊಂಡ ಮಟ್ಟದಲ್ಲಿ ಕಮಾಯಿ ಮಾಡುತ್ತಿಲ್ಲ. ಈ ಚಿತ್ರದಲ್ಲಿ ನಾನಾ ಪಾಟೇಕರ್, ಅನುಪಮ್ ಖೇರ್, ಸಪ್ತಮಿ ಗೌಡ, ಪಲ್ಲವಿ ಜೋಶಿ ಮೊದಲಾದವರು ನಟಿಸಿದ್ದಾರೆ. ಈ ಸಿನಿಮಾ ನಾಲ್ಕು ದಿನಕ್ಕೆ ಕೇವಲ ಐದು ಕೋಟಿ ರೂಪಾಯಿ ಗಳಿಕೆ ಮಾಡಿದೆ. ವಿವೇಕ್ ಅಗ್ನಿಹೋತ್ರಿ ಅವರ ಈ ಹಿಂದಿನ ಸಿನಿಮಾ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರಕ್ಕೆ ತುಲನೆ ಮಾಡಿ ‘ದಿ ವ್ಯಾಕ್ಸಿನ್ ವಾರ್’ ಸಿನಿಮಾ ನೋಡಲಾಗುತ್ತಿದೆ. ‘ದಿ ವ್ಯಾಕ್ಸಿನ್ ವಾರ್’ಗೆ ಹಿನ್ನಡೆ ಆಗಲು ಇದು ಕೂಡ ಕಾರಣ ಎಂದು ಹೇಳಲಾಗುತ್ತಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.