2024ರಲ್ಲೂ ಶಾರುಖ್​ ಖಾನ್​ ಹ್ಯಾಟ್ರಿಕ್​? ಶೀಘ್ರದಲ್ಲೇ 3 ಸಿನಿಮಾ ಅನೌನ್ಸ್​

|

Updated on: Jan 17, 2024 | 6:31 PM

2024ರ ವರ್ಷ ಹೇಗಿರಬೇಕು ಎಂದು ಶಾರುಖ್​ ಖಾನ್ ಪ್ಲ್ಯಾನ್​ ಮಾಡಿದ್ದಾರೆ. ಯಾವ ಪ್ರಕಾರದ ಸಿನಿಮಾಗಳನ್ನು ಮಾಡಬೇಕು ಎಂಬ ಬಗ್ಗೆಯೂ ಅವರು ಪಕ್ಕಾ ನಿರ್ಧಾರ ತೆಗೆದುಕೊಂಡಿದ್ದಾರೆ. ಮುಂಬರುವ ಸಿನಿಮಾಗಳ ಮೂಲಕ ಶಾರುಖ್​ ಖಾನ್​ ಅವರು ತಮ್ಮ ಅಭಿಮಾನಿಗಳಿಗೆ ಅಚ್ಚರಿ ನೀಡಲಿದ್ದಾರೆ.

2024ರಲ್ಲೂ ಶಾರುಖ್​ ಖಾನ್​ ಹ್ಯಾಟ್ರಿಕ್​? ಶೀಘ್ರದಲ್ಲೇ 3 ಸಿನಿಮಾ ಅನೌನ್ಸ್​
ಶಾರುಖ್​ ಖಾನ್​
Follow us on

ನಟ ಶಾರುಖ್​ ಖಾನ್​ (Shah Rukh Khan) ಅವರು ಹೊಸ ವರ್ಷದ ಖುಷಿಯನ್ನು ಸವಿಯಲು ವಿದೇಶಕ್ಕೆ ತೆರಳಿದ್ದಾರೆ. ಸಿನಿಮಾ ಕೆಲಸಗಳಿಂದ ಬ್ರೇಕ್​ ಪಡೆದಿರುವ ಅವರು ಕುಟುಂಬದವರ ಜೊತೆ ಲಂಡನ್​ನಲ್ಲಿ ಎಂಜಾಯ್​ ಮಾಡುತ್ತಿದ್ದಾರೆ. ಅವರ ಹೊಸ ಸಿನಿಮಾ (Shah Rukh Khan New Movie) ಯಾವುದು ಎಂಬ ಬಗ್ಗೆ ಇನ್ನೂ ಮಾಹಿತಿ ಸಿಕ್ಕಿಲ್ಲ. ಆದಷ್ಟು ಬೇಗ ಈ ಬಗ್ಗೆ ಅನೌನ್ಸ್​ಮೆಂಟ್​ ಆಗಲಿ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. ಈ ನಡುವೆ ಒಂದು ಇಂಟರೆಸ್ಟಿಂಗ್​ ಗಾಸಿಪ್​ ಕೇಳಿಬಂದಿದೆ. ಶೀಘ್ರದಲ್ಲೇ ಶಾರುಖ್​ ಖಾನ್(SRK) ಅವರು ಮೂರು ಸಿನಿಮಾಗಳನ್ನು ಘೋಷಿಸಲಿದ್ದಾರೆ ಎನ್ನಲಾಗುತ್ತಿದೆ.

ಶಾರುಖ್​ ಖಾನ್​ ಅವರ ಪಾಲಿಗೆ 2023ರ ವರ್ಷ ತುಂಬ ಲಾಭದಾಯಕವಾಗಿತ್ತು. ಅವರು ನಟಿಸಿದ ಮೂರು ಸಿನಿಮಾಗಳು ಹಿಟ್​ ಆದವು. ವರ್ಷದ ಆರಂಭದಲ್ಲಿ ಬಂದ ‘ಪಠಾಣ್​’ ಸಿನಿಮಾ ಸಾವಿರಾರು ಕೋಟಿ ರೂಪಾಯಿ ಗಳಿಸಿತು. ನಂತರ ಬಂದ ‘ಜವಾನ್​’ ಸಿನಿಮಾ ಕೂಡ ಬ್ಲಾಕ್​ ಬಸ್ಟರ್​ ಹಿಟ್​ ಆಯಿತು. ವರ್ಷದ ಕೊನೆಯಲ್ಲಿ ತೆರೆಕಂಡ ‘ಡಂಕಿ’ ಸಹ ನೂರಾರು ಕೋಟಿ ರೂಪಾಯಿ ಕಮಾಯಿ ಮಾಡಿತು. ಆ ಮೂಲಕ ಶಾರುಖ್​ ಖಾನ್​ ಹ್ಯಾಟ್ರಿಕ್​ ಗೆಲುವು ಪಡೆದವು.

ಇದನ್ನೂ ಓದಿ: ‘ನಾನು ಕೆಟ್ಟ ವ್ಯಕ್ತಿಯ ಪಾತ್ರ ಮಾಡಿದರೆ…’; ‘ಅನಿಮಲ್​’ ಚಿತ್ರಕ್ಕೆ ಕುಟುಕಿದ್ರಾ ಶಾರುಖ್​ ಖಾನ್​?

2024ರ ವರ್ಷ ಹೇಗಿರಬೇಕು ಎಂದು ಶಾರುಖ್​ ಖಾನ್ ಪ್ಲ್ಯಾನ್​ ಮಾಡಿದ್ದಾರೆ. ಯಾವ ಪ್ರಕಾರದ ಸಿನಿಮಾಗಳನ್ನು ಮಾಡಬೇಕು ಎಂಬ ಬಗ್ಗೆಯೂ ಅವರು ಪಕ್ಕಾ ನಿರ್ಧಾರ ತೆಗೆದುಕೊಂಡಿದ್ದಾರೆ. ಮುಂಬರುವ ಸಿನಿಮಾಗಳ ಮೂಲಕ ಶಾರುಖ್​ ಖಾನ್​ ಅವರು ತಮ್ಮ ಅಭಿಮಾನಿಗಳಿಗೆ ಅಚ್ಚರಿ ನೀಡಲಿದ್ದಾರೆ. ವರ್ಷದ ಆರಂಭದಲ್ಲೇ 3 ಸಿನಿಮಾಗಳು ಘೋಷಣೆ ಆಗುವ ಸಾಧ್ಯತೆ ಇದೆ ಎಂದು ವರದಿ ಆಗಿದೆ.

ಇದನ್ನೂ ಓದಿ: ‘ಗುಂಟೂರು ಖಾರಂ’ ಸಿನಿಮಾ ನೋಡಲಿರುವ ಶಾರುಖ್​ ಖಾನ್​; ಮಹೇಶ್​ ಬಾಬು ಫ್ಯಾನ್ಸ್​ಗೆ ಖುಷಿ

ಒಂದಷ್ಟು ವರ್ಷಗಳ ಕಾಲ ಶಾರುಖ್​ ಖಾನ್​ ಅವರು ಸಾಲು ಸಾಲು ಸೋಲು ಕಂಡಿದ್ದರು. ಮಾಡಿದ ಯಾವ ಚಿತ್ರವೂ ಅವರ ಕೈ ಹಿಡಿಯುತ್ತಿರಲಿಲ್ಲ. ಆದರೆ ಈಗ ಅವರಿಗೆ ಅದೃಷ್ಟ ಕೈ ಹಿಡಿದಿದೆ. ಮಾಡಿದ ಪ್ರಯತ್ನಕ್ಕೆ ಸೂಕ್ತ ಫಲ ಸಿಗುತ್ತಿದೆ. ಹಾಗಾಗಿ ಶಾರುಖ್​ ಖಾನ್​ ಅವರು ತುಂಬಾ ಕಾನ್ಫಿಡೆಂಟ್​ ಆಗಿದ್ದಾರೆ. ತಮ್ಮ ವಯಸ್ಸಿಗೆ ತಕ್ಕಂತಹ ಪಾತ್ರ ಮಾಡುವುದಾಗಿಯೂ ಅವರು ಈ ಹಿಂದಿನ ಸಂದರ್ಶನವೊಂದರಲ್ಲಿ ಸುಳಿವು ನೀಡಿದ್ದರು. ಆ ಕಾರಣದಿಂದಲೂ ಅಭಿಮಾನಿಗಳಿಗೆ ನಿರೀಕ್ಷೆ ಮೂಡಿದೆ. ಘಟಾನುಘಟಿ ನಿರ್ದೇಶಕರ ಜೊತೆ ಶಾರುಖ್​ ಖಾನ್​ ಕೈ ಜೋಡಿಸುವ ಸಾಧ್ಯತೆ ದಟ್ಟವಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ