ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಅವರ ಡ್ರಗ್ಸ್ ಪ್ರಕರಣ ದಿನಕ್ಕೊಂದು ಸ್ವರೂಪ ಪಡೆದುಕೊಳ್ಳುತ್ತಿದೆ. ಸದ್ಯ ಆರ್ಯನ್ ಖಾನ್ ಜಾಮೀನು ಪಡೆದು ಮನೆಯಲ್ಲಿದ್ದಾರೆ. ಎನ್ಸಿಬಿ ಅಧಿಕಾರಿಗಳ ತನಿಖೆ ಮುಂದುವರಿದಿದೆ. ಅ.2ರಂದು ಆರ್ಯನ್ ಖಾನ್ ಸಿಕ್ಕಿ ಬಿದ್ದರು. ಅಲ್ಲಿಂದ ಇಲ್ಲಿಯವರೆಗೂ ಈ ವಿಚಾರದ ಬಗ್ಗೆ ಶಾರುಖ್ ಖಾನ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅವರ ತಂಡದವರು ಕೂಡ ಹೇಳಿಕೆ ಬಿಡುಗಡೆ ಮಾಡಿಲ್ಲ. ಆದರೆ ಈಗ ಶಾರುಖ್ ಖಾನ್ ಮೌನ ಮುರಿಯವ ಸಂದರ್ಭ ಬಂದಿದೆ ಎಂಬ ಸುದ್ದಿ ಹಬ್ಬಿದೆ.
ಮಗನಿಗೆ ಜಾಮೀನು ಕೊಡಿಸಲು ಶಾರುಖ್ ಖಾನ್ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಸಮಾಜದಲ್ಲಿ ಪ್ರತಿಷ್ಠಿತ ವ್ಯಕ್ತಿಯಾಗಿ ಬದುಕುತ್ತಿದ್ದ ಅವರು ಹೀಗೆ ತಿಂಗಳುಗಟ್ಟಲೆ ಮೌನವಾಗಿರುವ ಪರಿಸ್ಥಿತಿ ಬರುತ್ತದೆ ಎಂದು ಅವರು ಊಹಿಸಿರಲಿಲ್ಲ. ಆದರೆ ಈ ಡ್ರಗ್ಸ್ ಕೇಸ್ ಹಿಂದೆ ಕೆಲವರ ಹುನ್ನಾರ ಇದೆ ಎಂದು ಕೂಡ ಹೇಳಲಾಗುತ್ತಿದೆ. ಆ ಬಗ್ಗೆ ಶಾರುಖ್ ಯಾವಾಗ ಮಾತನಾಡುತ್ತಾರೆ ಎಂಬ ಕೌತುಕ ಮನೆ ಮಾಡಿದೆ. ಮೂಲಗಳ ಪ್ರಕಾರ ಅದಕ್ಕಾಗಿ ವಿದೇಶಿ ಮಾಧ್ಯಮಗಳು ದೊಡ್ಡ ಪ್ಲ್ಯಾನ್ ಮಾಡಿಕೊಂಡಿವೆ.
ಶಾರುಖ್ ಖಾನ್ ಅವರಿಗೆ ವಿಶ್ವಾದ್ಯಂತ ಅಭಿಮಾನಿಗಳಿದ್ದಾರೆ. ಅವರ ಮಗನ ಡ್ರಗ್ಸ್ ಪ್ರಕರಣ ಕೂಡ ಜಾಗತಿಕ ಮಟ್ಟದಲ್ಲಿ ಸುದ್ದಿ ಆಗಿದೆ. ಹಾಗಾಗಿ ಶಾರುಖ್ ಕಡೆಯಿಂದ ಪ್ರತಿಕ್ರಿಯೆ ತಿಳಿಯಲು ಎಲ್ಲರೂ ಕಾದಿದ್ದಾರೆ. ಅದಕ್ಕಾಗಿ ಕೆಲವು ವಿದೇಶಿ ಸುದ್ದಿವಾಹಿನಿಗಳು ಶಾರುಖ್ ಅವರ ಸಂದರ್ಶನ ಪಡೆಯಲು ಪ್ರಯತ್ನಿಸುತ್ತಿವೆ ಎನ್ನಲಾಗಿದೆ. ಈ ಸಂಬಂಧ ಈಗಾಗಲೇ ಶಾರುಖ್ ಮ್ಯಾನೇಜರ್ಗೆ ಕರೆ ಕೂಡ ಬಂದಿದೆಯಂತೆ. ಆದರೆ ಸದ್ಯಕ್ಕೆ ವಿದೇಶಿ ಸುದ್ದಿವಾಹಿನಿಗಳ ಮನವಿಯನ್ನು ಅವರು ಹೋಲ್ಡ್ನಲ್ಲಿ ಇರಿಸಿದ್ದಾರೆ ಎನ್ನಲಾಗುತ್ತಿದೆ. ಒಂದು ವೇಳೆ ಅವರು ಸಂದರ್ಶನ ನೀಡಿದ್ದೇ ಹೌದಾದರೆ ಈ ಡ್ರಗ್ಸ್ ಕೇಸ್ ಹಿಂದಿನ ಎಲ್ಲ ಹುನ್ನಾರವನ್ನೂ ಬಿಚ್ಚಿಡಲಿದ್ದಾರೆ ಎಂಬ ನಿರೀಕ್ಷೆ ಇದೆ.
ಆರ್ಯನ್ ಖಾನ್ ಡ್ರಗ್ಸ್ ಕೇಸ್ನಲ್ಲಿ ಸಿಕ್ಕಿಬಿದ್ದ ಬಳಿಕ ಶಾರುಖ್ ಖಾನ್ ಅವರ ಪ್ರತಿಷ್ಠೆಗೆ ಧಕ್ಕೆ ಆಗಿದೆ. ಅವರ ಬ್ಯುಸಿನೆಸ್ ಮೇಲೂ ಹೊಡೆತ ಬಿದ್ದಿದೆ. ಅನೇಕ ಕಂಪನಿಗಳು ಅವರ ಜೊತೆಗಿನ ಒಪ್ಪಂದವನ್ನು ಮುರಿದುಕೊಂಡಿವೆ. ಈ ಎಲ್ಲ ಕಾರಣಗಳಿಂದಾಗಿ ಶಾರುಖ್ ಕುದಿಯುತ್ತಿದ್ದಾರೆ. ಆದರೂ ಕೂಡ ಅವರು ಮೌನ ವಹಿಸಿರುವುದು ಅಚ್ಚರಿ ಮೂಡಿಸಿದೆ.
ಇದನ್ನೂ ಓದಿ:
Aryan Khan: 22 ದಿನ ಜೈಲಿನಲ್ಲಿದ್ದ ಆರ್ಯನ್ ಖಾನ್ಗೆ ಈಗ ಮನೆಯವರಿಂದಲೇ ಬ್ಲಡ್ ಟೆಸ್ಟ್; ಕಾರಣ ಏನು?
Mohit Kamboj: ಆರ್ಯನ್ ಖಾನ್ ಕೇಸ್ಗೆ ಹೊಸ ಟ್ವಿಸ್ಟ್; ಬಿಜೆಪಿ ಮುಖಂಡ ಮೋಹಿತ್ ಕಡೆಯಿಂದ ಗಂಭೀರ ಆರೋಪ