ಶಾರುಖ್​​ ಖಾನ್​ಗೆ ಆದ ಪೆಟ್ಟುಗಳಿಗೆ ಲೆಕ್ಕವೇ ಇಲ್ಲ; ಇಲ್ಲಿದೆ ಅವರ ಮೆಡಿಕಲ್ ಹಿಸ್ಟರಿ

| Updated By: ರಾಜೇಶ್ ದುಗ್ಗುಮನೆ

Updated on: May 23, 2024 | 8:08 AM

ಶಾರುಖ್ ಖಾನ್ ಅವರಿಗೆ ಈಗ 58 ವರ್ಷ. ಈಗಲೂ ಅವರು ಆರೋಗ್ಯವಾಗಿದ್ದಾರೆ. ಅವರು ಫಿಟ್ನೆಸ್​ಗೆ ಹೆಚ್ಚು ಒತ್ತು ನೀಡುತ್ತಾರೆ. ಅವರು ಹಲವು ಬಾರಿ ಗಾಯಗೊಂಡ ಉದಾಹರಣೆ ಇದೆ. ಆ ಬಗ್ಗೆ ಇಲ್ಲಿದೆ ವಿವಿರ.  

ಶಾರುಖ್​​ ಖಾನ್​ಗೆ ಆದ ಪೆಟ್ಟುಗಳಿಗೆ ಲೆಕ್ಕವೇ ಇಲ್ಲ; ಇಲ್ಲಿದೆ ಅವರ ಮೆಡಿಕಲ್ ಹಿಸ್ಟರಿ
ಶಾರುಖ್
Follow us on

ಹೀರೋಗಳು ಸ್ಟಂಟ್ ಮಾಡುವಾಗ ಇಂಜುರಿಗೆ ಒಳಗಾಗೋದು ಕಾಮನ್. ಎಷ್ಟೇ ಮುನ್ನೆಚ್ಚರಿಕೆ ತೆಗೆದುಕೊಂಡರೂ ಸಮಸ್ಯೆಗಳು ಉಂಟಾಗುತ್ತವೆ. ನಟ ಶಾರುಖ್ ಖಾನ್ (Shah Rukh Khan) ಅವರಿಗೂ ಹಾಗೆಯೇ ಆಗಿದೆ. ಅವರು ಹಲವು ಬಾರಿ ಗಾಯಕ್ಕೆ ಒಳಗಾಗಿದ್ದರು. ಆ ಬಳಿಕ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿದ್ದರು. ಈಗ ಅವರು ಸನ್​ಸ್ಟ್ರೋಕ್ ಹಾಗೂ ನಿರ್ಜಲೀಕರಣದಿಂದ ಬಳಲುತ್ತಿದ್ದಾರೆ. ಅವರನ್ನು ಅಹಮದಾಬಾದ್​ನ ಕೆಡಿ ಆಸ್ಪತ್ರೆಗೆ ದಾಖಲಾಗಿದೆ. ಅವರ ಮೆಡಿಕಲ್ ಹಿಸ್ಟರಿ ಬಗ್ಗೆ ಇಲ್ಲಿದೆ ವಿವರ.

ಶಾರುಖ್ ಖಾನ್ ಅವರಿಗೆ ಈಗ 58 ವರ್ಷ. ಈಗಲೂ ಅವರು ಆರೋಗ್ಯವಾಗಿದ್ದಾರೆ. ಅವರು ಫಿಟ್ನೆಸ್​ಗೆ ಹೆಚ್ಚು ಒತ್ತು ನೀಡುತ್ತಾರೆ. ಅವರು ಹಲವು ಬಾರಿ ಗಾಯಗೊಂಡ ಉದಾಹರಣೆ ಇದೆ. ಆ ಬಗ್ಗೆ ಇಲ್ಲಿದೆ ವಿವಿರ.

ಭುಜಕ್ಕೆ ಗಾಯ

‘ರಾ ಒನ್’ ಹಾಗೂ ‘ಚೆನ್ನೈ ಎಕ್ಸ್​ಪ್ರೆಸ್’ ಸಿನಿಮಾ ಶೂಟಿಂಗ್ ಸಂದರ್ಭದಲ್ಲಿ ಶಾರುಖ್ ಖಾನ್ ಅವರು ಭುಜದ ಗಾಯಕ್ಕೆ ಒಳಗಾಗಿದ್ದರು. ಆ ಬಳಿಕ ಅವರು ಸರ್ಜರಿಗೆ ಒಳಗಾಗಿದ್ದರು. ನಂತರ ಅವರು ವಿಶ್ರಾಂತಿ ಪಡೆದಿದ್ದರು.

ಮೊಣಕಾಲಿಗೆ ಗಾಯ

ಶಾರುಖ್ ಖಾನ್ ನಟನೆಯ ‘ಹ್ಯಾಪಿ ನ್ಯೂ ಇಯರ್’ ಚಿತ್ರ ಮಿಶ್ರ ಪ್ರತಿಕ್ರಿಯೆ ಪಡೆದರೂ ಬಾಕ್ಸ್ ಆಫೀಸ್​ನಲ್ಲಿ ಉತ್ತಮ ಗಳಿಕೆ ಮಾಡಿತ್ತು. ಈ ಚಿತ್ರದ ಶೂಟಿಂಗ್ ವೇಳೆ ಅವರ ಮೊಣಕಾಲಿಗೆ ಗಾಯ ಆಗಿತ್ತು. ಮುಂಬೈನ 5 ಸ್ಟಾರ್ ಹೋಟೆಲ್​ನಲ್ಲಿ ಈ ಚಿತ್ರದ ಶೂಟ್ ನಡೆಯುತ್ತಿತ್ತು. ಡ್ಯಾನ್ಸ್ ಮಾಡುವಾಗ ಅವರು ಬಿದ್ದು ಗಾಯ ಮಾಡಿಕೊಂಡಿದ್ದರು.

ಮೊಣಕಾಲು ಮುರಿತ

ಶಾರುಖ್ ಖಾನ್ ನಟನೆಯ ‘ಫ್ಯಾನ್’ ಸಿನಿಮಾ ಅಟ್ಟರ್ ಫ್ಲಾಪ್ ಎನಿಸಿಕೊಂಡಿತ್ತು. ಈ ಸಿನಿಮಾದ ಶೂಟ್ ವೇಳೆ ಅವರಿಗೆ ಮೊಣಕಾಲ ಮುರಿತ ಉಂಟಾಗಿತ್ತು. ಆ ಬಳಿಕ ಅವರು ವಿಶ್ರಾಂತಿ ಪಡೆದಿದ್ದರು.

ಭುಜಕ್ಕೆ ಸರ್ಜರಿ

2009ರಲ್ಲಿ ಶಾರುಖ್ ಖಾನ್ ಅವರು ಎಡಭಾಗದ ಭುಜದ ಸರ್ಜರಿಗೆ ಒಳಗಾಗಿದ್ದರು. ‘ಮೈ ನೇಮ್ ಈಸ್ ಖಾನ್’ ಸಿನಿಮಾದ ರಿಲೀಸ್​ಗೂ ಮೊದಲೇ ಈ ಸರ್ಜರಿ ನಡೆದಿತ್ತು.

ಬೆನ್ನಿನ ಸರ್ಜರಿ

‘ಕಲ್​ ಹೋ ನಹೋ’ ಸಿನಿಮಾದ ಶೂಟಿಂಗ್ ಸಂದರ್ಭದಲ್ಲಿ ಶಾರುಖ್ ಖಾನ್ ಅವರು ಬೆನ್ನಿನ ಸರ್ಜರಿಗೆ ಒಳಗಾಗಿದ್ದರು. ಅದೂ ದೂರದ ಜರ್ಮನಿಯಲ್ಲಿ. ಆ ಬಳಿಕ ಅವರು ರೆಸ್ಟ್ ಮಾಡಬೇಕಿತ್ತು. ಹೀಗಾಗಿ, ಸಿನಿಮಾದಿಂದ ಅವರನ್ನು ಕೈ ಬಿಡಬೇಕಾಗಿ ಬಂದಿತ್ತು. ಆದರೆ, ನಿರ್ಮಾಪಕರು ಕಾದು ಸಿನಿಮಾದ ಶೂಟ್ ಮಾಡಿದರು.

ಇದನ್ನೂ ಓದಿ: ಶಾರುಖ್ ಖಾನ್ ಆರೋಗ್ಯ ಹೇಗಿದೆ? ಅಪ್​ಡೇಟ್ ಕೊಟ್ಟ ಜೂಹಿ ಚಾವ್ಲಾ

‘ಡರ್’

‘ಡರ್’ ಸಿನಿಮಾದ ಶೂಟ್ ಸಂದರ್ಭದಲ್ಲಿ ಶಾರುಖ್ ಖಾನ್ ಅವರ ಎದೆ ಭಾಗದ ಮೂಳೆ ಫ್ರ್ಯಾಕ್ಚರ್ ಆಗಿತ್ತು. ಇದರಿಂದ ಅವರು ರೆಸ್ಟ್ ಮಾಡಬೇಕಾಯಿತು.

‘ಕೊಯ್ಲಾ’

ಶಾರುಖ್ ಖಾನ್ ನಟನೆಯ, ರಾಕೇಶ್ ರೋಷನ್ ನಿರ್ದೇಶನ ‘ಕೊಯ್ಲಾ’ ಸಿನಿಮಾದ ಶೂಟ್ ವೇಳೆ ಅವಘಡ ಆಗಿತ್ತು. ಈ ವೇಳೆ ಶಾರುಖ್ ಖಾನ್ ಮೊಣಕಾಲಿನಲ್ಲಿ ಸಣ್ಣದಾದ ಗಾಯ ಆಗಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.