ಎಲ್ಲಾ ಸೆಲೆಬ್ರಿಟಿಗಳ ಮನಸ್ಥಿತಿ ಒಂದೇ ರೀತಿ ಇಲ್ಲ. ಆ ರೀತಿ ಇರಬೇಕು ಎಂದರೂ ಅದು ತಪ್ಪಾಗುತ್ತದೆ. ಕೆಲವು ಹೀರೋಗಳು ಬೆರಳೆಣಿಕೆ ಸಿನಿಮಾ ಮಾಡಿ ಧಿಮಾಕು ತೋರಿಸಿದ ಉದಾಹರಣೆ ಇದೆ. ಇನ್ನೂ ಕೆಲವರು ಹಾಗಲ್ಲ. ನೂರಾರು ಸಿನಿಮಾ ಮಾಡಿ, ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದರೂ ಅವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವಾಗ ಅಹಂ ತೋರಿಸುವುದಿಲ್ಲ. ಈ ಸಾಲಿನಲ್ಲಿ ಶಾರುಖ್ ಖಾನ್ (Shah Rukh Khan), ರಜನಿಕಾಂತ್ ಸೇರಿ ಅನೇಕ ಹೀರೋಗಳು ಇದ್ದಾರೆ. ಆ ಬಗ್ಗೆ ಇಲ್ಲಿದೆ ಮಾಹಿತಿ.
ದಕ್ಷಿಣ ಭಾರತದ ನಟ ರಜನಿಕಾಂತ್ ಅವರನ್ನು ಸೂಪರ್ ಸ್ಟಾರ್ ಎಂದು ಕರೆಯಲಾಗುತ್ತದೆ. ಅವರು ಇತ್ತೀಚೆಗೆ ಶೂಟಿಂಗ್ಗಾಗಿ ಮುಂಬೈಗೆ ತೆರಳಿದ್ದರು. ಅವರು ವಿಮಾನ ನಿಲ್ದಾಣದಲ್ಲಿ ತಮ್ಮ ಬ್ಯಾಗ್ನ ತಾವೇ ತೆಗೆದುಕೊಂಡು ಹೋಗಿದ್ದಾರೆ. ಈ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅವರು ಮನಸ್ಸು ಮಾಡಿದ್ದರೆ ಬ್ಯಾಗ್ ಹಿಡಿದು ಓಡಾಡಲು ಒಬ್ಬರನ್ನು ಇಟ್ಟುಕೊಳ್ಳಬಹುದಿತ್ತು. ಆದರೆ, ಆ ರೀತಿ ಮಾಡಿಲ್ಲ. ಅವರು ಕಷ್ಟದ ಜೀವನ ನೋಡಿದ್ದರಿಂದ ತಮ್ಮ ಕೆಲಸ ತಾವೇ ಮಾಡಿಕೊಳ್ಳುತ್ತಿರಬಹುದು ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.
ವಿದ್ಯಾ ಬಾಲನ್ ಅವರು ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಅವರ ನಡವಳಿಕೆ ಬಗ್ಗೆ ಅನೇಕರು ಮೆಚ್ಚುಗೆ ಸೂಚಿಸಿದ್ದಾರೆ. ವಿದ್ಯಾ ಬಾಲನ್ ಸೆಟ್ನಲ್ಲಿ ಎಲ್ಲರ ಜೊತೆಯೂ ಕೂಲ್ ಆಗಿ ನಡೆದುಕೊಳ್ಳುತ್ತಾರೆ.
ಬಾಲಿವುಡ್ ಸೂಪರ್ ಸ್ಟಾರ್ ಆಮಿರ್ ಖಾನ್ ಅವರು ಹಲವು ಸೂಪರ್ ಹಿಟ್ ಚಿತ್ರ ನೀಡಿದ್ದಾರೆ. ಅವರು ತಮ್ಮ ಸ್ಟಾಫ್ನ ಕುಟುಂಬದವರಂತೆ ನೋಡಿಕೊಳ್ಳುತ್ತಾರೆ. ಸೆಟ್ನಲ್ಲಿಯೂ ಅವರು ಎಲ್ಲರ ಜೊತೆ ಫ್ರೆಂಡ್ಲಿ ಆಗಿರುತ್ತಾರೆ. ಸಾರ್ವಜನಿಕವಾಗಿ ಕಾಣಿಸಿಕೊಂಡಾಗ ಫ್ಯಾನ್ಸ್ ಸೆಲ್ಫಿ ಕೇಳಿದರೆ ಆಮಿರ್ ಖಾನ್ ಎಂದಿಗೂ ನೋ ಎಂದವರಲ್ಲ.
ಸುಷ್ಮಿತಾ ಸೇನ್ ಅವರು ಡೌನ್ ಟು ಅರ್ತ್ ನಡೆಯಿಂದ ಅನೇಕರಿಗೆ ಇಷ್ಟವಾಗುತ್ತಾರೆ. ಅಭಿಮಾನಿಗಳು ಸೆಲ್ಫಿ ಕೇಳಿದಾಗ ಖುಷಿಯಿಂದ ಸೆಲ್ಫಿ ಕೊಡುತ್ತಾರೆ.
ಶಾರುಖ್ ಖಾನ್ ಅವರ ಬಗ್ಗೆ ಮತ್ತೆ ಹೊಸದಾಗಿ ಹೇಳಬೇಕಿಲ್ಲ. ಅವರು ಅಭಿಮಾನಿಗಳನ್ನು ತುಂಬಾನೇ ಪ್ರೀತಿಸುತ್ತಾರೆ. ಇದರ ಜೊತೆ ಸಹಕಲಾವಿದರನ್ನು ಅವರು ಸಾಕಷ್ಟು ಗೌರವಿಸುತ್ತಾರೆ. ಅವರ ನಿವಾಸಕ್ಕೆ ಯಾರಾದರೂ ಹೋದರೆ ಶಾರುಖ್ ಯಾವ ರೀತಿಯಲ್ಲಿ ನೋಡಿಕೊಳ್ಳುತ್ತಾರೆ ಎಂಬುದನ್ನು ಅನೇಕರು ಹೇಳಿಕೊಂಡಿದ್ದರು. ಯಾರಾದರೂ ಅತಿಥಿಗಳು ಬಂದರೆ ಕಾರಿನವರೆಗೂ ಶಾರುಖ್ ತೆರಳುತ್ತಾರೆ. ಕಾರಿನ ಬಾಗಿಲು ತೆಗೆದು ಅವರನ್ನು ಕಳುಹಿಸಿಕೊಡುತ್ತಾರೆ. ಅವರು ನವೆಂಬರ್ 2ರಂದು ಬರ್ತ್ಡೇ ಆಚರಿಸಿಕೊಂಡಿದ್ದಾರೆ.
ಅಕ್ಷಯ್ ಕುಮಾರ್ ಅವರು ಸೂಪರ್ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ. ಅವರು ತುಂಬಾನೇ ಸೌಮ್ಯ ವ್ಯಕ್ತಿ. ಅವರು ಎಲ್ಲರನ್ನೂ ಗೌರವಿಸುತ್ತಾರೆ. ಅವರಿಗೆ ಸಾಲು ಸಾಲು ಸೋಲುಗಳು ಎದುರಾಗುತ್ತಿವೆ.
ಇದನ್ನೂ ಓದಿ: ಅಕ್ಷಯ್ ಕುಮಾರ್ ಸಿನಿಮಾಕ್ಕೆ ಮತ್ತೆ ಸಂಕಷ್ಟ: ಒಟಿಟಿ ಆವೃತ್ತಿಗೂ ಕತ್ತರಿ, ಬಿಡುಗಡೆ ಮುಂದೂಡಿಕೆ
ಸೋನು ಸೂದ್ ಅವರು ವಿಲನ್ ಪಾತ್ರಗಳ ಮೂಲಕ ಫೇಮಸ್ ಆದವರು. ಆದರೆ, ನಿಜ ಜೀವನದಲ್ಲಿ ಅವರು ಹೀರೋ. ಅವರು ತುಂಬಾನೇ ಒಳ್ಳೆಯ ಮನಸ್ಸು ಹೊಂದಿದ್ದಾರೆ. ಅನೇಕರಿಗೆ ಅವರು ಸಹಾಯ ಮಾಡಿದ್ದಾರೆ. ಅವರು ವಿಲನ್ ಪಾತ್ರ ಬಿಟ್ಟು ಹೀರೋ ಪಾತ್ರಗಳನ್ನು ಮಾತ್ರ ಒಪ್ಪಿಕೊಳ್ಳುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:06 am, Fri, 3 November 23