ಶಾರುಖ್​ ಖಾನ್​ಗೆ ಹೆಚ್ಚಿದ ಸಂಕಷ್ಟ; ಡ್ರಗ್ಸ್​ ಕೇಸ್​ನಲ್ಲಿ ಆರ್ಯನ್​ ಖಾನ್​ ಅರೆಸ್ಟ್​​

| Updated By: ರಾಜೇಶ್ ದುಗ್ಗುಮನೆ

Updated on: Oct 03, 2021 | 4:31 PM

ಆರ್ಯನ್​ ಅವರನ್ನು ವಶಕ್ಕೆ ಪಡೆದು ವಿಚಾರಣೆ ಮಾಡುತ್ತಿದ್ದ ಎನ್​ಸಿಬಿ ಅಧಿಕಾರಿಗಳು ಈಗ ಅವರನ್ನು ಅರೆಸ್ಟ್​ ಮಾಡಿದ್ದಾರೆ. ಇದರಿಂದ ಶಾರುಖ್​ ಖಾನ್​ಗೆ ಸಂಕಷ್ಟ ಹೆಚ್ಚಿದೆ. 

ಶಾರುಖ್​ ಖಾನ್​ಗೆ ಹೆಚ್ಚಿದ ಸಂಕಷ್ಟ; ಡ್ರಗ್ಸ್​ ಕೇಸ್​ನಲ್ಲಿ ಆರ್ಯನ್​ ಖಾನ್​ ಅರೆಸ್ಟ್​​
ಆರ್ಯನ್ ಖಾನ್
Follow us on

ಡ್ರಗ್ಸ್​​ ಪಾರ್ಟಿಗೆ ತೆರಳಿದವರಲ್ಲಿ ನಟ ಶಾರುಖ್​ ಖಾನ್​ ಮಗ ಆರ್ಯನ್​ ಖಾನ್​ ಕೂಡ ಇದ್ದರು ಎನ್ನುವ ವಿಚಾರ ಸಾಕಷ್ಟು ಚರ್ಚೆ ಆಗುತ್ತಿದೆ. ಆರ್ಯನ್​ ಅವರನ್ನು ವಶಕ್ಕೆ ಪಡೆದು ವಿಚಾರಣೆ ಮಾಡುತ್ತಿದ್ದ ಎನ್​ಸಿಬಿ ಅಧಿಕಾರಿಗಳು ಈಗ ಅವರನ್ನು ಅರೆಸ್ಟ್​ ಮಾಡಿದ್ದಾರೆ. ಇದರಿಂದ ಶಾರುಖ್​ ಖಾನ್​ಗೆ ಸಂಕಷ್ಟ ಹೆಚ್ಚಿದೆ.

ಮುಂಬೈನ ಸಮುದ್ರ ತೀರದ ಐಷಾರಾಮಿ ಹಡಗಿನಲ್ಲಿ ಶನಿವಾರ (ಅ.2) ರಾತ್ರಿ ನಡೆಯುತ್ತಿದ್ದ ರೇವ್​ ಪಾರ್ಟಿಯಲ್ಲಿ ಆರ್ಯನ್​ ಕೂಡ ಇದ್ದರು. ಮಾದಕ ವಸ್ತು ನಿಯಂತ್ರಣ ಮಂಡಳಿ (ಎನ್​ಸಿಬಿ) ಆರ್ಯನ್​ ಅವರನ್ನು ವಶಕ್ಕೆ ಪಡೆದಿದೆ. ಅಲ್ಲಿಂದ ಅವರನ್ನು ಎನ್​ಸಿಬಿ ಕಚೇರಿಗೆ ಕರೆದುಕೊಂಡು ಬರಲಾಯಿತು. ಎನ್​ಸಿಬಿ ಕಚೇರಿ ಒಳಗೆ ಆರ್ಯನ್​ ಅವರಿಗೆ ನಾನಾ ರೀತಿಯ ಪ್ರಶ್ನೆಯನ್ನು ಮಾಡಲಾಯಿತು. ಈಗ ಅವರನ್ನು ಅರೆಸ್ಟ್​ ಮಾಡಲಾಗಿದೆ.  ಇದರಿಂದ ಶಾರುಖ್ ವಿಚಲಿತರಾಗಿದ್ದಾರೆ.

ಪಾರ್ಟಿ ನಡೆದ ಸ್ಥಳದಲ್ಲಿ ಮಾದಕ ವಸ್ತುಗಳು ಕೂಡ ಪತ್ತೆ ಆಗಿವೆ. ಆದರೆ ಎಷ್ಟು ಪ್ರಮಾಣದ ಡ್ರಗ್ಸ್​ ಸಿಕ್ಕಿದೆ ಎಂಬ ಮಾಹಿತಿಯನ್ನು ಅಧಿಕಾರಿಗಳು ಬಿಟ್ಟುಕೊಟ್ಟಿಲ್ಲ. ವಶಕ್ಕೆ ಪಡೆದವರನ್ನು ಅಧಿಕಾರಿಗಳು ತನಿಖೆಗೆ ಒಳಪಡಿಸಿದ್ದಾರೆ. ಬಾಲಿವುಡ್​ನಲ್ಲಿ ಹರಡಿರುವ ಡ್ರಗ್ಸ್​ ಜಾಲವನ್ನು ಭೇದಿಸಲು ಈ ದಾಳಿ ಹೆಚ್ಚು ಸಹಕಾರಿ ಆಗಲಿದೆ.

ಆರ್ಯನ್​ ಖಾನ್​ಗೆ ನಟನಾಗುವ ಆಸಕ್ತಿ ಇಲ್ಲವಂತೆ. ಅದನ್ನು ಈ ಹಿಂದೆ ಶಾರುಖ್​ ಹೇಳಿಕೊಂಡಿದ್ದರು. ಹಾಗಂತ ಅವರು ಸಿನಿಮಾ ಕ್ಷೇತ್ರದಿಂದ ದೂರ ಉಳಿದುಕೊಳ್ಳುತ್ತಾರೆ ಎಂದರ್ಥವಲ್ಲ. ನಿರ್ದೇಶನದಲ್ಲಿ ತೊಡಗಿಕೊಳ್ಳುವ ಆಸಕ್ತಿ ಅವರಿಗೆ ಇದೆ. ಲಂಡನ್​ನ ‘ಸೆವೆನ್​ ಓಕ್ಸ್​ ಹೈಸ್ಕೂಲ್​’ನಲ್ಲಿ ಆರ್ಯನ್​ ಪದವಿ ಶಿಕ್ಷಣ ಪಡೆದಿದ್ದಾರೆ. ಕಳೆದ ವರ್ಷ, ಅಂದರೆ 2020ರಲ್ಲಿ ಫೈನ್​ ಆರ್ಟ್ಸ್​, ಸಿನಿಮ್ಯಾಟಿಕ್​ ಆರ್ಟ್ಸ್​, ಫಿಲ್ಮ್​ ಮತ್ತು ಟೆಲಿವಿಷನ್​ ಪ್ರೊಡಕ್ಷನ್​ ವಿಷಯಗಳಲ್ಲಿ ಅವರು ಪದವಿ ಪಡೆದಿದ್ದಾರೆ.

‘ದಿ ಲಯನ್​ ಕಿಂಗ್​’ ಸಿನಿಮಾದ ಹಿಂದಿ ಅವತರಣಿಕೆಗೆ ಆರ್ಯನ್​ ಖಾನ್​ ಡಬ್ಬಿಂಗ್​ ಮಾಡಿದ್ದರು. ಅಲ್ಲದೆ ಚಿಕ್ಕ ವಯಸ್ಸಿನಲ್ಲಿದ್ದಾಗ ಕೆಲವು ಸಿನಿಮಾಗಳಲ್ಲೂ ಅವರು ಕಾಣಿಸಿಕೊಂಡಿದ್ದರು. ಶಾರುಖ್​ ನಟನೆಯ ‘ಕಭಿ ಅಲ್ವಿದಾ ನಾ ಕೆಹನಾ’, ‘ಕಭಿ ಖುಷಿ ಕಭಿ ಗಮ್​’ ಸಿನಿಮಾದ ಸಣ್ಣ-ಪುಟ್ಟ ದೃಶ್ಯಗಳಲ್ಲಿ ಅವರು ಬಂದುಹೋಗಿದ್ದರು. ‘ಧೂಮ್​’ ಸರಣಿಯ ಮುಂಬರುವ ಚಿತ್ರಕ್ಕೆ ಆರ್ಯನ್​ ಖಾನ್​ ಹೀರೋ ಆಗುತ್ತಾರೆ ಎಂಬ ಗಾಸಿಪ್​ ಬಹಳ ಹಿಂದೆಯೇ ಕೇಳಿಬಂದಿತ್ತು. ಆದರೆ ಅದಿನ್ನೂ ನಿಜವಾಗಿಲ್ಲ. ಹೀಗಿರುವಾಗಲೇ ಅವರ ಬಂಧನವಾಗಿದೆ. ಅವರನ್ನು ವೈದ್ಯಕೀಯ ಪರೀಕ್ಷೆಗೆ ಕರೆದೊಯ್ಯಲಾಗಿದೆ.

ಡ್ರಗ್​ ಕೇಸ್​ನಲ್ಲಿ ಸಿಕ್ಕಿ ಬಿದ್ದ ಮಗ ಆರ್ಯನ್​​ಗಾಗಿ ಮಹತ್ವದ ನಿರ್ಧಾರ ತೆಗೆದುಕೊಂಡ ಶಾರುಖ್​ ಖಾನ್​

Published On - 4:13 pm, Sun, 3 October 21