Pathaan: ಬಾಂಗ್ಲಾದೇಶದಲ್ಲಿ ರಿಲೀಸ್​ ಆಗಲಿದೆ ‘ಪಠಾಣ್​’; 8 ವರ್ಷಗಳ ಬಳಿಕ ಭಾರತದ ಸಿನಿಮಾ ಪ್ರದರ್ಶನಕ್ಕೆ ಅವಕಾಶ

|

Updated on: Feb 21, 2023 | 1:27 PM

Pathaan release in Bangladesh: ಬಾಂಗ್ಲಾದೇಶದಲ್ಲಿ ಸಿನಿಮಾಗೆ ಸಂಬಂಧಿಸಿದ 19 ಸಂಘಟನೆಗಳು ಒಮ್ಮತದ ನಿರ್ಧಾರಕ್ಕೆ ಬಂದಿವೆ. ಭಾರತದ​ ಚಿತ್ರಗಳನ್ನು ಬಿಡುಗಡೆ ಮಾಡಲು ತೀರ್ಮಾನ ತೆಗೆದುಕೊಳ್ಳಲಾಗಿದೆ. ಅದರ ಅನ್ವಯ ‘ಪಠಾಣ್​’ ಸಿನಿಮಾ ಅಲ್ಲಿ ರಿಲೀಸ್​ ಆಗಲಿದೆ.

Pathaan: ಬಾಂಗ್ಲಾದೇಶದಲ್ಲಿ ರಿಲೀಸ್​ ಆಗಲಿದೆ ‘ಪಠಾಣ್​’; 8 ವರ್ಷಗಳ ಬಳಿಕ ಭಾರತದ ಸಿನಿಮಾ ಪ್ರದರ್ಶನಕ್ಕೆ ಅವಕಾಶ
ಶಾರುಖ್ ಖಾನ್
Follow us on

ನಟ ಶಾರುಖ್​ ಖಾನ್​ (Shah Rukh Khan) ಅವರಿಗೆ ಭಾರತದಲ್ಲಿ ಮಾತ್ರವಲ್ಲದೇ ವಿಶ್ವಾದ್ಯಂತ ಅಭಿಮಾನಿಗಳು ಇದ್ದಾರೆ. ಅವರ ಸಿನಿಮಾಗಳು ಹಲವು ದೇಶಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತವೆ. ಬಾಂಗ್ಲಾದೇಶದಲ್ಲೂ ಅವರನ್ನು ಇಷ್ಟಪಡುವ ಜನರು ಇದ್ದಾರೆ. ಆದರೆ ಅಲ್ಲಿ ‘ಪಠಾಣ್​’ ಚಿತ್ರ (Pathaan Movie) ಬಿಡುಗಡೆ ಆಗಿರಲಿಲ್ಲ. ಅದಕ್ಕಾಗಿ ಕೆಲವರು ಭಾರತಕ್ಕೆ ಬಂದು ಈ ಸಿನಿಮಾ ನೋಡಿಕೊಂಡು ಹೋಗಿದ್ದರು. ವಿಶೇಷ ಏನೆಂದರೆ, ಈಗ ಬಾಂಗ್ಲಾದೇಶದಲ್ಲಿ ‘ಪಠಾಣ್​’ ರಿಲೀಸ್​ ಮಾಡಲು ಅವಕಾಶ ಸಿಕ್ಕಿದೆ. ಫೆಬ್ರವರಿ 24ರಂದು ಈ ಚಿತ್ರ ಅಲ್ಲಿ ತೆರೆ ಕಾಣಲಿದೆ. ಸುಮಾರು 8 ವರ್ಷಗಳ ಬಳಿಕ ಬಾಂಗ್ಲಾದೇಶದಲ್ಲಿ (Bangladesh) ರಿಲೀಸ್​ ಆಗುತ್ತಿರುವ ಭಾರತದ ಮೊದಲ ಸಿನಿಮಾ ‘ಪಠಾಣ್​’. ಇದರಿಂದ ಚಿತ್ರದ ಟೋಟಲ್​ ಕಲೆಕ್ಷನ್​ ಹೆಚ್ಚಲಿದೆ.

ಹಲವು ದಶಕಗಳಿಂದಲೂ ಭಾರತದ ಸಿನಿಮಾಗಳನ್ನು ಬಾಂಗ್ಲಾದೇಶದಲ್ಲಿ ಬ್ಯಾನ್​ ಮಾಡಲಾಗಿತ್ತು. ಆದರೆ 2015ರಲ್ಲಿ ಸಲ್ಮಾನ್​ ಖಾನ್​ ಅವರು ‘ವಾಂಟೆಡ್​’ ಚಿತ್ರವನ್ನು ಅಲ್ಲಿ ಬಿಡುಗಡೆ ಮಾಡಲಾಗಿತ್ತು. ಆದರೆ ಅಲ್ಲಿನ ಸಿನಿಮಾ ಹೀರೋಗಳು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಬಾಲಿವುಡ್​ ಚಿತ್ರಗಳು ರಿಲೀಸ್​ ಆದರೆ ಸ್ಥಳೀಯ ಬಾಂಗ್ಲಾದೇಶಿ ಸಿನಿಮಾಗಳ ವ್ಯವಹಾರಕ್ಕೆ ಪೆಟ್ಟು ಬೀಳಲಿದೆ ಎಂದು ಪ್ರತಿಭಟನೆಗಳು ಕೂಡ ನಡೆದಿದ್ದವು. ಹಾಗಾಗಿ ಭಾರತದ ಸಿನಿಮಾಗಳನ್ನು ಮತ್ತೆ ಬ್ಯಾನ್​ ಮಾಡಲಾಗಿತ್ತು.

ಇದನ್ನೂ ಓದಿ: Pathaan Collection: 1000 ಕೋಟಿ ಕ್ಲಬ್​ ಸನಿಹದಲ್ಲಿ ‘ಪಠಾಣ್​’ ಚಿತ್ರ; ಈಗ ಟಿಕೆಟ್​​ ಬೆಲೆ ಕೇವಲ 110 ರೂಪಾಯಿ

ಇದನ್ನೂ ಓದಿ
Siddharth Anand: ಬಾಲಿವುಡ್​ಗೆ 2023ರ ಮೊದಲ ಬ್ಲಾಕ್​ ಬಸ್ಟರ್​​ ನೀಡಿದ ‘ಪಠಾಣ್​’ ನಿರ್ದೇಶಕ ಸಿದ್ದಾರ್ಥ್​ ಆನಂದ್​
Kangana Ranaut: ‘ಪಠಾಣ್​’ ಸೂಪರ್​ ಹಿಟ್​; ‘ಚಿತ್ರರಂಗ ಇರೋದು ಹಣ ಮಾಡೋಕಲ್ಲ’ ಅಂತ ಕೊಂಕು ನುಡಿದ ಕಂಗನಾ
Pathaan Review: ದೇಶಭಕ್ತಿಯಲ್ಲಿ ಮಿಂದೆದ್ದ ‘ಪಠಾಣ್​’; ಶಾರುಖ್​ ಫ್ಯಾನ್ಸ್​ಗೆ ಹಬ್ಬ, ಆ್ಯಕ್ಷನ್ ಪ್ರಿಯರಿಗೆ ಮಸ್ತ್ ಮನರಂಜನೆ
Pathaan Movie Twitter Review: ‘ಹೈ ವೋಲ್ಟೇಜ್ ಆ್ಯಕ್ಷನ್ ಸಿನಿಮಾ’; ‘ಪಠಾಣ್​’ ನೋಡಿ ವಿಮರ್ಶೆ ತಿಳಿಸಿದ ನೆಟ್ಟಿಗರು

ಆದರೆ ಈಗ ಕಾಲ ಬದಲಾಗಿದೆ. ಬಾಂಗ್ಲಾದೇಶದಲ್ಲಿ ಸಿನಿಮಾ ವ್ಯವಹಾರಕ್ಕೆ ಸಂಬಂಧಿಸಿದ ಸುಮಾರು 19 ಸಂಘಟನೆಗಳು ಈ ವಿಚಾರದಲ್ಲಿ ಒಮ್ಮತದ ನಿರ್ಧಾರಕ್ಕೆ ಬಂದಿವೆ ಎಂದು ವರದಿ ಆಗಿದೆ. ಬಾಲಿವುಡ್​ ಸಿನಿಮಾಗಳನ್ನು ಬಿಡುಗಡೆ ಮಾಡಲು ತೀರ್ಮಾನ ತೆಗೆದುಕೊಳ್ಳಲಾಗಿದೆ. ಇದರಿಂದ ಬಾಂಗ್ಲಾದೇಶದಲ್ಲಿ ಹೊಸ ಚರ್ಚೆ ಹುಟ್ಟಿಕೊಂಡಿದೆ. ಈ ನಿರ್ಧಾರದಿಂದ ಚಿತ್ರಮಂದಿರಗಳ ವ್ಯವಹಾರ ಸುಧಾರಿಸಲಿದೆ. ಕೊವಿಡ್​ ನಂತರ ಕಂಗೆಟ್ಟಿದ್ದ ಪ್ರದರ್ಶಕರ ವಲಯಕ್ಕೆ ಅನುಕೂಲ ಆಗಲಿದೆ.

ಇದನ್ನೂ ಓದಿ: Karan Johar: ‘ಪಠಾಣ್​’ ಗೆದ್ದಿದ್ದಕ್ಕೆ ಬಾಲಿವುಡ್​ ಮಂದಿಗೆ ಬಂತು ಧೈರ್ಯ; ದೊಡ್ಡ ಓಪನಿಂಗ್​ಗಾಗಿ​ ನಡೆದಿದೆ ಪ್ಲ್ಯಾನ್​

ಹಾಲಿವುಡ್​ ಸಿನಿಮಾಗಳು ಮೊದಲಿನಿಂದಲೂ ಬಾಂಗ್ಲಾದೇಶದಲ್ಲಿ ತೆರೆಕಾಣುತ್ತಲೇ ಬಂದಿವೆ. ಹಾಗಿರುವಾಗ ಬಾಲಿವುಡ್​ ಚಿತ್ರಗಳನ್ನು ಬ್ಯಾನ್​ ಮಾಡುವುದರಲ್ಲಿ ಅರ್ಥವಿಲ್ಲ ಎಂದು ಅಲ್ಲಿನ ಕೆಲವರು ವಾದ ಮಂಡಿಸಿದ್ದಾರೆ. ಭಾರತದ ಸಿನಿಮಾಗಳನ್ನು ತೆರೆಕಾಣಿಸುವ ಬಗ್ಗೆ ಒಂದಷ್ಟು ನಿಯಮಗಳನ್ನು ಹಾಕಿಕೊಳ್ಳಲಾಗಿದೆ. ವರ್ಷಕ್ಕೆ ಕೇವಲ 10 ಸಿನಿಮಾಗಳಿಗೆ ಮಾತ್ರ ಬಿಡುಗಡೆಗೆ ಅವಕಾಶ ನೀಡಬೇಕು ಎಂಬ ನಿಯಮ ಹೇರಲಾಗಿದೆ.

ಇದನ್ನೂ ಓದಿ: Pathaan Movie: ‘ಶ್ರೀನಗರದಲ್ಲಿ ದಶಕಗಳ ಬಳಿಕ ಹೌಸ್​ಫುಲ್​ ಆಗಿದೆ’: ‘ಪಠಾಣ್​’ ಗೆಲುವಿನ ಬಳಿಕ ಸಂಸತ್ತಿನಲ್ಲಿ ಮೋದಿ ಭಾಷಣ

ಹಿಂದಿ ಚಿತ್ರಗಳಿಗೆ ಬಾಂಗ್ಲಾದೇಶದಲ್ಲಿ ಸಖತ್​ ಬೇಡಿಕೆ ಇದೆ. ಈ ಮೊದಲು ‘3 ಈಡಿಯಟ್ಸ್​’, ‘ಮೈ ನೇಮ್​ ಈಸ್​ ಖಾನ್​’ ಮುಂತಾದ ಸಿನಿಮಾಗಳ ಪೈರಸಿ ವರ್ಷನ್​ಗಳನ್ನು ಅಲ್ಲಿನ ಜನರು ನೋಡಿದ್ದರು. ಈಗ ಅಧಿಕೃತವಾಗಿ ಹಿಂದಿ ಚಿತ್ರಗಳು ರಿಲೀಸ್​ ಆಗುತ್ತಿರುವುದು ಬಾಂಗ್ಲಾದೇಶದಲ್ಲಿನ ಬಾಲಿವುಡ್​ ಸಿನಿಪ್ರಿಯರಿಗೆ ಖುಷಿ ನೀಡಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 1:27 pm, Tue, 21 February 23