AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Pathaan Collection: 1000 ಕೋಟಿ ಕ್ಲಬ್​ ಸನಿಹದಲ್ಲಿ ‘ಪಠಾಣ್​’ ಚಿತ್ರ; ಈಗ ಟಿಕೆಟ್​​ ಬೆಲೆ ಕೇವಲ 110 ರೂಪಾಯಿ

Shah Rukh Khan | Pathaan Movie Total Collection: ‘ಪಠಾಣ್​’ ಚಿತ್ರ ಯಶಸ್ವಿಯಾಗಿ 25 ದಿನಗಳನ್ನು ಪೂರೈಸಿದೆ. ಶಾರುಖ್​ ಖಾನ್​ ಅವರಿಗೆ ದೊಡ್ಡ ಗೆಲುವು ಸಿಕ್ಕಿದೆ. ಶೀಘ್ರದಲ್ಲೇ ಈ ಚಿತ್ರ ಸಾವಿರ ಕೋಟಿ ರೂಪಾಯಿ ಗಡಿ ಮುಟ್ಟಲಿದೆ.

Pathaan Collection: 1000 ಕೋಟಿ ಕ್ಲಬ್​ ಸನಿಹದಲ್ಲಿ ‘ಪಠಾಣ್​’ ಚಿತ್ರ; ಈಗ ಟಿಕೆಟ್​​ ಬೆಲೆ ಕೇವಲ 110 ರೂಪಾಯಿ
ಪಠಾಣ್ ಸಿನಿಮಾ ಪೋಸ್ಟರ್
ಮದನ್​ ಕುಮಾರ್​
| Edited By: |

Updated on:Feb 20, 2023 | 6:42 AM

Share

ಶಾರುಖ್​ ಖಾನ್​ ಅವರ ‘ಪಠಾಣ್​’ ಸಿನಿಮಾ (Pathaan Movie) ಜಯಭೇರಿ ಬಾರಿಸಿದೆ. ವಿರೋಧಿಸುವವರು ಎಷ್ಟೇ ಅಪಪ್ರಚಾರ ಮಾಡಿದರೂ ಈ ಸಿನಿಮಾದ ಕಲೆಕ್ಷನ್​ಗೆ ಧಕ್ಕೆ ಆಗಿಲ್ಲ. ಸಿನಿಪ್ರಿಯರು ‘ಪಠಾಣ್​’ ಸಿನಿಮಾವನ್ನು ಮುಗಿಬಿದ್ದು ನೋಡಿದ್ದಾರೆ. ಅದರ ಪರಿಣಾಮವಾಗಿ ವಿಶ್ವಾದ್ಯಂತ ಈ ಚಿತ್ರಕ್ಕೆ 988 ಕೋಟಿ ರೂಪಾಯಿ ಕಲೆಕ್ಷನ್​ ಆಗಿದೆ. ಇದರಿಂದಾಗಿ ಶಾರುಖ್​ ಖಾನ್​ (Shah Rukh Khan) ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ಖುಷಿ ಆಗಿದೆ. ಸಾವಿರ ಕೋಟಿ ರೂಪಾಯಿ ಕ್ಲಬ್​ ಸೇರಲು ಇನ್ನು 12 ಕೋಟಿ ರೂಪಾಯಿ ಮಾತ್ರ ಬಾಕಿ ಇದೆ. ಈ ಸಂದರ್ಭದಲ್ಲಿ ಪ್ರೇಕ್ಷಕರನ್ನು ಸೆಳೆಯಲು ಹೊಸ ಪ್ಲ್ಯಾನ್​ ಮಾಡಲಾಗಿದೆ. ‘ಪಠಾಣ್’ ಚಿತ್ರದ ಟಿಕೆಟ್​ ಬೆಲೆಯನ್ನು (Pathaan Movie Ticket Price) ಕೇವಲ 110 ರೂಪಾಯಿಗೆ ಇಳಿಸಲಾಗಿದೆ.

ಜನವರಿ 25ರಂದು ‘ಪಠಾಣ್​’ ಚಿತ್ರ ತೆರೆಕಂಡಾಗ ಟಿಕೆಟ್​ ಬೆಲೆ ದುಬಾರಿ ಆಗಿತ್ತು. ಆದರೂ ಜನರು ಮುಗಿಬಿದ್ದು ಈ ಸಿನಿಮಾ ನೋಡಿದರು. ಪರಿಣಾಮವಾಗಿ ಚಿತ್ರಕ್ಕೆ ಉತ್ತಮ ಓಪನಿಂಗ್ ಸಿಕ್ಕಿತು. ಇನ್ನು ಕೆಲವೇ ದಿನಗಳ ಕಾಲ ಚಿತ್ರಮಂದಿರದಲ್ಲಿ ‘ಪಠಾಣ್​’ ಪ್ರದರ್ಶನ ಕಾಣಲಿದೆ. ಅದಕ್ಕಾಗಿ ಟಿಕೆಟ್​ ಬೆಲೆ ತಗ್ಗಿಸಲಾಗಿದೆ. ಸೋಮವಾರದಿಂದ (ಫೆ.20) ಶುಕ್ರವಾರದವರೆಗೆ (ಫೆ.24) ಬಹುತೇಕ ಮಲ್ಟಿಪ್ಲೆಕ್ಸ್​ಗಳಲ್ಲಿ ಕೇವಲ 110 ರೂಪಾಯಿಗೆ ಈ ಚಿತ್ರದ ಟಿಕೆಟ್​ ಮಾರಾಟ ಮಾಡಲು ನಿರ್ಧರಿಸಲಾಗಿದೆ.

ಇದನ್ನೂ ಓದಿ
Image
Siddharth Anand: ಬಾಲಿವುಡ್​ಗೆ 2023ರ ಮೊದಲ ಬ್ಲಾಕ್​ ಬಸ್ಟರ್​​ ನೀಡಿದ ‘ಪಠಾಣ್​’ ನಿರ್ದೇಶಕ ಸಿದ್ದಾರ್ಥ್​ ಆನಂದ್​
Image
Kangana Ranaut: ‘ಪಠಾಣ್​’ ಸೂಪರ್​ ಹಿಟ್​; ‘ಚಿತ್ರರಂಗ ಇರೋದು ಹಣ ಮಾಡೋಕಲ್ಲ’ ಅಂತ ಕೊಂಕು ನುಡಿದ ಕಂಗನಾ
Image
Pathaan Review: ದೇಶಭಕ್ತಿಯಲ್ಲಿ ಮಿಂದೆದ್ದ ‘ಪಠಾಣ್​’; ಶಾರುಖ್​ ಫ್ಯಾನ್ಸ್​ಗೆ ಹಬ್ಬ, ಆ್ಯಕ್ಷನ್ ಪ್ರಿಯರಿಗೆ ಮಸ್ತ್ ಮನರಂಜನೆ
Image
Pathaan Movie Twitter Review: ‘ಹೈ ವೋಲ್ಟೇಜ್ ಆ್ಯಕ್ಷನ್ ಸಿನಿಮಾ’; ‘ಪಠಾಣ್​’ ನೋಡಿ ವಿಮರ್ಶೆ ತಿಳಿಸಿದ ನೆಟ್ಟಿಗರು

ಇದನ್ನೂ ಓದಿ: Pathaan Review: ದೇಶಭಕ್ತಿಯಲ್ಲಿ ಮಿಂದೆದ್ದ ‘ಪಠಾಣ್​’; ಶಾರುಖ್​ ಫ್ಯಾನ್ಸ್​ಗೆ ಹಬ್ಬ, ಆ್ಯಕ್ಷನ್ ಪ್ರಿಯರಿಗೆ ಮಸ್ತ್ ಮನರಂಜನೆ

ಹಿಂದಿ, ತೆಲುಗು, ತಮಿಳು ವರ್ಷನ್​ ಸೇರಿ ಭಾರತದಲ್ಲಿ ‘ಪಠಾಣ್​’ ಸಿನಿಮಾ 25 ದಿನಕ್ಕೆ 511 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿದೆ. ಅಲ್ಲೊಂದು ಇಲ್ಲೊಂದು ಚಿತ್ರಮಂದಿರಗಳಲ್ಲಿ ಈಗಲೂ ಉತ್ತಮ ಪ್ರದರ್ಶನ ಕಾಣುತ್ತಿದೆ. ಈ ಸಂದರ್ಭದಲ್ಲಿ ಟಿಕೆಟ್​ ಬೆಲೆ ತಗ್ಗಿಸಿದರೆ ಖಂಡಿತವಾಗಿಯೂ ಇನ್ನೂ ಒಂದಷ್ಟು ದಿನಗಳ ಕಾಲ ‘ಪಠಾಣ್​’ ಆಟ ಯಶಸ್ವಿಯಾಗಿ ಮುಂದುವರಿಯಲಿದೆ ಎಂಬುದು ನಿರ್ಮಾಪಕರ ಆಲೋಚನೆ. ಅದಕ್ಕಾಗಿ ವಾರದ ದಿನಗಳಲ್ಲಿ ಟಿಕೆಟ್​ ಬೆಲೆಯನ್ನು 110 ರೂಪಾಯಿಗೆ ಇಳಿಸಲಾಗಿದೆ.

ಇದನ್ನೂ ಓದಿ: Pathaan Movie: ‘ಶ್ರೀನಗರದಲ್ಲಿ ದಶಕಗಳ ಬಳಿಕ ಹೌಸ್​ಫುಲ್​ ಆಗಿದೆ’: ‘ಪಠಾಣ್​’ ಗೆಲುವಿನ ಬಳಿಕ ಸಂಸತ್ತಿನಲ್ಲಿ ಮೋದಿ ಭಾಷಣ

‘ಪಠಾಣ್​’ ಚಿತ್ರಕ್ಕೆ ಸಿದ್ದಾರ್ಥ್​ ಆನಂದ್​ ಅವರು ನಿರ್ದೇಶನ ಮಾಡಿದ್ದಾರೆ. ಈ ಚಿತ್ರದ ಗೆಲುವಿನಿಂದಾಗಿ ಅವರ ಡಿಮ್ಯಾಂಡ್​ ಹೆಚ್ಚಾಗಿದೆ. ಬಾಲಿವುಡ್​ನಲ್ಲಿ ತಾವು ಭರವಸೆಯ ನಿರ್ದೇಶಕ ಎಂಬುದನ್ನು ಅವರು ಸಾಬೀತುಪಡಿಸಿದ್ದಾರೆ. ಈ ಹಿಂದೆ ಸಿದ್ದಾರ್ಥ್​ ಆನಂದ್​ ನಿರ್ದೇಶಿಸಿದ್ದ ‘ವಾರ್​’ ಸಿನಿಮಾ ಕೂಡ ಸೂಪರ್​ ಹಿಟ್​ ಆಗಿತ್ತು.

ಶಾರುಖ್​ ಖಾನ್​ ಅವರಿಗೆ ನಿರೀಕ್ಷೆಗೂ ಮೀರಿದ ಗೆಲುವು ಸಿಕ್ಕಿದೆ. ನಾಲ್ಕು ವರ್ಷದ ಬಳಿಕ ಕಮ್​ಬ್ಯಾಕ್​ ಮಾಡಿದ ಅವರನ್ನು ಜನರು ಒಪ್ಪಿಕೊಂಡಿದ್ದಾರೆ. ಇದರಿಂದ ಶಾರುಖ್​ ವೃತ್ತಿಜೀವನಕ್ಕೆ ಮತ್ತೆ ಕಳೆ ಬಂದಿದೆ. ಅವರ ಮುಂಬರುವ ಸಿನಿಮಾಗಳಿಗಾಗಿ ಪ್ರೇಕ್ಷಕರು ಕಾತರದಿಂದ ಕಾಯುವಂತಾಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 6:00 am, Mon, 20 February 23

Follow Us
Madan Kumar
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More