ಮಗನ ಬಟ್ಟೆ ಬ್ರ್ಯಾಂಡ್ ಪ್ರಚಾರ ಮಾಡಲು ಶರ್ಟ್​ಲೆಸ್ ಆಗಿ ಬಂದ ಶಾರುಖ್ ಖಾನ್

ಶಾರುಖ್ ಮಗ ಆರ್ಯನ್ ಖಾನ್ ಡ್ರಗ್​ ಕೇಸ್​ನಲ್ಲಿ ಸಿಕ್ಕಿ ಬಿದ್ದಿದ್ದರು. ಇದಾದ ಬಳಿಕ ಅವರ ಹೆಸರು ಸಾಕಷ್ಟು ಚರ್ಚೆ ಆಗಿತ್ತು. ಆ ಬಳಿಕ ಆರ್ಯನ್ ಖಾನ್ ಸ್ವಲ್ಪ ಡಲ್ ಆದರು. ಈಗ ಅವರು ಆ್ಯಕ್ಟೀವ್ ಆಗಿದ್ದಾರೆ. ತಮ್ಮದೇ ಬಟ್ಟೆ ಬ್ರ್ಯಾಂಡ್ ಆರಂಭಿಸಿದ್ದಾರೆ ಆರ್ಯನ್ ಖಾನ್. ಇದರ ಪ್ರಚಾರವನ್ನು ಶಾರುಖ್ ಮಾಡುತ್ತಿದ್ದಾರೆ.

ಮಗನ ಬಟ್ಟೆ ಬ್ರ್ಯಾಂಡ್ ಪ್ರಚಾರ ಮಾಡಲು ಶರ್ಟ್​ಲೆಸ್ ಆಗಿ ಬಂದ ಶಾರುಖ್ ಖಾನ್
ಆರ್ಯನ್-ಶಾರುಖ್

Updated on: Feb 26, 2024 | 7:04 AM

ನಟ ಶಾರುಖ್ ಖಾನ್ (Shah Rukh Khan) ಅವರಿಗೆ ಸಖತ್ ಬೇಡಿಕೆ ಇದೆ. ಅವರು ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಕಳೆದ ವರ್ಷ ಅವರು ಬ್ಯಾಕ್ ಟು ಬ್ಯಾಕ್ ಮೂರು ಗೆಲುವು ಕಂಡಿದ್ದಾರೆ. ಇದರ ಜೊತೆಗೆ ಅವರು ಹಲವು ಬ್ರ್ಯಾಂಡ್​ಗಳ ಪ್ರಚಾರ ಮಾಡುತ್ತಿದ್ದಾರೆ. ಇದಕ್ಕೆಲ್ಲ ಅವರು ದೊಡ್ಡ ಮೊತ್ತದ ಸಂಭಾವನೆ ಪಡೆಯುತ್ತಾರೆ. ಇದರ ಜೊತೆಗೆ ಮಗ ಆರ್ಯನ್​ ಖಾನ್ ಒಡೆತನದ ಬಟ್ಟೆ ಬ್ರ್ಯಾಂಡ್ ಕೂಡ ಪ್ರಚಾರ ಮಾಡುತ್ತಿದ್ದಾರೆ. ಇದಕ್ಕೆ ಅವರು ಯಾವುದೇ ಹಣ ಪಡೆಯುತ್ತಿಲ್ಲ. ಈಗ ಅವರು ಮಗನಿಗಾಗಿ ಶರ್ಟ್​ಲೆಸ್ ಅವತಾರ ತಾಳಿದ್ದಾರೆ. ಈ ಫೋಟೋ ವೈರಲ್ ಆಗಿದೆ.

ಶಾರುಖ್ ಖಾನ್ ಮಗ ಆರ್ಯನ್ ಖಾನ್ ಅವರು ಡ್ರಗ್​ ಕೇಸ್​ನಲ್ಲಿ ಸಿಕ್ಕಿ ಬಿದ್ದರು. ಇದಾದ ಬಳಿಕ ಅವರ ಹೆಸರು ಸಾಕಷ್ಟು ಚರ್ಚೆ ಆಯಿತು. ಆ ಬಳಿಕ ಆರ್ಯನ್ ಖಾನ್ ಅವರು ಸ್ವಲ್ಪ ಡಲ್ ಆದರು. ಈಗ ಅವರು ಆ್ಯಕ್ಟೀವ್ ಆಗಿದ್ದಾರೆ. ತಮ್ಮದೇ ಬಟ್ಟೆ ಬ್ರ್ಯಾಂಡ್ ಆರಂಭಿಸಿರೋ ಆರ್ಯನ್ ಖಾನ್, ಇದರ ಪ್ರಚಾರಕ್ಕೆ ತಂದೆಯನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ.

ಶಾರುಖ್ ಖಾನ್ ಅವರು ಇನ್​ಸ್ಟಾಗ್ರಾಮ್​ನಲ್ಲಿ ಹೊಸ ಪೋಸ್ಟ್ ಒಂದನ್ನು ಹಾಕಿದ್ದಾರೆ. ಈ ಪೋಸ್ಟ್​ನಲ್ಲಿ ಅವರು ಶರ್ಟ್​ಲೆಸ್ ಆಗಿ ಕಾಣಿಸಿಕೊಂಡಿದ್ದಾರೆ. ಇದಕ್ಕೆ ಅವರು ತಮ್ಮ ಮಗನ ಬಟ್ಟೆ ಬ್ರ್ಯಾಂಡ್​ನ ಟ್ಯಾಗ್ ಮಾಡಿದ್ದಾರೆ. ಈ ಫೋಟೋ 20 ಲಕ್ಷಕ್ಕೂ ಅಧಿಕ ಲೈಕ್ಸ್ ಸಿಕ್ಕಿದೆ. ತಂದೆಯ ಬೆಂಬಲ ನೋಡಿ ಆರ್ಯನ್ ಖುಷಿಪಟ್ಟಿದ್ದಾರೆ.

ಆರ್ಯನ್ ಖಾನ್ ಬಟ್ಟೆ ಬ್ರ್ಯಾಂಡ್ ಸಖತ್ ದುಬಾರಿ. ಈ ಬಗ್ಗೆ ಅನೇಕರು ತಕರಾರು ತೆಗೆದಿದ್ದಾರೆ. ‘Ask SRK’ ವೇಳೆ ಶಾರುಖ್ ಖಾನ್ ಅವರಿಗೂ ಈ ಬಗ್ಗೆ ದೂರು ನೀಡಲಾಗಿತ್ತು. ‘ಆರ್ಯನ್​ ನನಗೂ ಡಿಸ್ಕೌಂಟ್ ನೀಡುವುದಿಲ್ಲ’ ಎಂದು ಹೇಳುವ ಮೂಲಕ ಶಾರುಖ್ ಖಾನ್ ಎಲ್ಲರ ಬಾಯಿ ಮುಚ್ಚಿಸಿದ್ದರು. ಒಂದು ಜಾಕೆಟ್​ಗೆ ಲಕ್ಷಾಂತರ ರೂಪಾಯಿ ಪಾವತಿಸಬೇಕಿದೆ.

ಇದನ್ನೂ ಓದಿ: ಆರ್ಯನ್ ಖಾನ್ ಡ್ರಗ್ಸ್ ಪ್ರಕರಣ ; ಸಮೀರ್ ವಾಂಖೆಡೆ ವಿರುದ್ಧ ಮತ್ತೊಂದು ಕೇಸ್

ಆರ್ಯನ್ ಖಾನ್ ಹೀರೋ ಆಗದೇ ನಿರ್ದೇಶಕನಾಗುವ ಕನಸು ಕಂಡಿದ್ದಾರೆ. ಅವರು ಹೊಸ ವೆಬ್ ಸೀರಿಸ್ ನಿರ್ಮಾಣ ಮಾಡುತ್ತಿದ್ದಾರೆ. ಇದಕ್ಕೆ ಶಾರುಖ್ ಖಾನ್ ಒಡೆತನದ ‘ರೆಡ್ ಚಿಲ್ಲೀಸ್ ಎಂಟರ್​ಟೇನ್​ಮೆಂಟ್’ ಬಂಡವಾಳ ಹೂಡುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us